AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೋಹನ್ ಲಾಲ್, ಮಮ್ಮುಟಿಗಳ ದಾಖಲೆಗಳ ಮುರಿದ ಹುಡುಗರು ‘ಮಂಜ್ಞುಮಲ್ ಬಾಯ್ಸ್’

Manjummel Boys: ಕೇವಲ 10 ಕೋಟಿ ಬಜೆಟ್ ನಲ್ಲಿ ನಿರ್ಮಾಣಗೊಂಡು 100 ಕೋಟಿ ಗಳಿಸಿರುವ 'ಮಂಜ್ಞುಮಲ್ ಬಾಯ್ಸ್' ಸಿನಿಮಾ ಇದೀಗ ಮತ್ತೊಂದು ದಾಖಲೆ ಬರೆಯಲು ಸಜ್ಜಾಗಿದೆ.

ಮೋಹನ್ ಲಾಲ್, ಮಮ್ಮುಟಿಗಳ ದಾಖಲೆಗಳ ಮುರಿದ ಹುಡುಗರು 'ಮಂಜ್ಞುಮಲ್ ಬಾಯ್ಸ್'
ಮಂಜುನಾಥ ಸಿ.
|

Updated on: Mar 10, 2024 | 8:07 AM

Share

ಮಲಯಾಳಂ (Malayalam) ಚಿತ್ರರಂಗದ ಮಾರುಕಟ್ಟೆ ವ್ಯಾಪ್ತಿ ಚಿಕ್ಕದು, ಆದರೆ ಅವರ ಕಂಟೆಂಟ್ ದೇಶದ ಇತರೆ ಚಿತ್ರರಂಗಗಳಿಗೆ ಹೋಲಿಸಿದರೆ ಅತ್ಯುತ್ತಮ. ಈಗಾಗಲೇ ಹಲವು ಅತ್ಯುತ್ತಮ, ಭಿನ್ನ ಸಿನಿಮಾಗಳನ್ನು ಮಲಯಾಳಂ ಚಿತ್ರರಂಗ ನೀಡಿದೆ, ನೀಡುತ್ತಿದೆ. ಎಷ್ಟೆ ಒಳ್ಳೆಯ ಸಿನಿಮಾ ಮಾಡಿದರೂ ಮಾರುಕಟ್ಟೆ ಕಾರಣಕ್ಕೆ ದೊಡ್ಡ ಬಾಕ್ಸ್ ಆಫೋಸ್ ಕಲೆಕ್ಷನ್ ಎಂಬುದು ಮಲಯಾಳಂ ಚಿತ್ರರಂಗಕ್ಕೆ ಮರೀಚಿಕೆಯಾಗಿಯೇ ಇತ್ತು. ಆದರೆ ಇತ್ತೀಚೆಗೆ ಮಲಯಾಳಂ ಚಿತ್ರಗಳು ಮಾರುಕಟ್ಟೆ ಹಿಗ್ಗಿಸಿಕೊಂಡಿದ್ದು ಉತ್ತಮ ಕಲೆಕ್ಷನ್ ಮಾಡುತ್ತಿದೆ.

ಇತ್ತೀಚೆಗೆ ಬಿಡುಗಡೆ ಆಗಿರುವ ಮಲಯಾಳಂ ಸಿನಿಮಾ ಒಂದು ಗಳಿಕೆಯಲ್ಲಿ ಹೊಸ ದಾಖಲೆ ಬರೆಯುತ್ತಿದೆ. ಮಲಯಾಳಂ ಸ್ಟಾರ್ ನಟರ ಬಿಗ್ ಬಜೆಟ್ ಸಿನಿಮಾಗಳ ಕಲೆಕ್ಷನ್ ದಾಖಲೆಗಳನ್ನು ಮೀರಿ ಹೊಸ ದಾಖಲೆ ನಿರ್ಮಿಸುತ್ತಿದೆ. ದಾಖಲೆ ಬರೆಯಲು ಸಜ್ಜಾಗಿರುವ ಸಿನಿಮಾ ‘ಮಂಜ್ಞುಮಲ್ ಬಾಯ್ಸ್’. ಕೆಲವು ದಿನಗಳ‌ ಹಿಂದಷ್ಟೆ ಬಿಡುಗಡೆ ಆದ, ನಿಜ ಘಟನೆ ಆಧರಿಸಿದ ಥ್ರಿಲ್ಲರ್ ಸಿನಿಮಾ ‘ಮಂಜ್ಞುಮಲ್ ಬಾಯ್ಸ್’ ಗಳಿಕೆಯಲ್ಲಿ ಹೊಸ ದಾಖಲೆ ಬರೆಯುತ್ತಿದೆ. ಈಗಾಗಲೆ ನೂರು ಕೋಟಿ ಕಲೆಕ್ಷನ್ ದಾಟಿರುವ ಸಿನಿಮಾ, ಇದೀಗ ಮಲಯಾಳಂ‌ ಚಿತ್ರರಂಗದ ಈವರೆಗಿನ ಅತಿ ಹೆಚ್ಚು ಹಣ ಗಳಿಸಿದ ಸಿನಿಮಾ ಎಂಬ ಖ್ಯಾತಿ ಗಳಿಸುವತ್ತ ದಾಪುಗಾಲು ಹಾಕುತ್ತಿದೆ.

ಇದನ್ನೂ ಓದಿ:ಮಲಯಾಳಂ ಸಿನಿಮಾ ನಿರ್ಮಾಣಕ್ಕೆ ಮುಂದಾದ ಕನ್ನಡದ ‘ಕೆಆರ್​ಜಿ ಸ್ಟುಡಿಯೋಸ್’

ಮೋಹನ್ ಲಾಲ್ ನಟನೆಯ ‘ಪುಲಿಮುರುಗನ್‘, ಆ ನಂತರ ‘ಲುಸಿಫರ್’ ಸಿನಿಮಾಗಳು ಮಲಯಾಳಂ ಚಿತ್ರರಂಗದಲ್ಲೇ ಅತಿಹೆಚ್ಚು ಗಳಿಕೆ ಮಾಡಿದ ಸಿನಿಮಾ ಎಂಬ ಖ್ಯಾತಿ ಗಳಿಸಿತ್ತು. ಆ ದಾಖಲೆಯನ್ನು ಅಳಿಸೊ ಹಾಕಿದ್ದು ‘2018’ ಸಿನಿಮಾ. ಇದು ವಿಶ್ವದಾದ್ಯಂತ 177 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ಇದೀಗ ‘ಮಂಜ್ಞುಮಲ್ ಬಾಯ್ಸ್’ ಈಗಾಗಲೆ 130 ಕೋಟಿ ಗಳಿಕೆ ಮಾಡಿದ್ದು ಕೆಲವೇ ದಿನಗಳಲ್ಲಿ ‘2018’ ಸಿನಿಮಾದ ದಾಖಲೆ ಮುರಿದು, ಮೊದಲ ಸ್ಥಾನಕ್ಕೇರಲಿದೆ ಎಂದು ಬಾಕ್ಸ್ ಆಫೀಸ್ ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ.

‘ಮಂಜ್ಞುಮಲ್ ಬಾಯ್ಸ್’ ನಿಜ ಘಟನೆ ಆಧರಿಸಿದ ಸಿನಿಮಾ. ಗೆಳೆಯರ ಗುಂಪೊಂದು ಕೊಡೈಕೆನ್ನಲ್ ಗೆ ಹೋಗಿ ಅಲ್ಲಿ ತಮಿಳಿನ ‘ಗುಣ’ ಸಿನಿಮಾ ಚಿತ್ರೀಕರಣ ಮಾಡಿದ ದುರ್ಗಮ ಗುಹೆಗೆ ಹೋದಾಗ, ಆ ಗೆಳೆಯರ ಗುಂಪಿನ ಒಬ್ಬ ಯುವಕ ದುರ್ಗಮ ಪ್ರಪಾತಕ್ಕೆ ಬೀಳುತ್ತಾನೆ. ಆ ಯುವಕನನ್ನು ಆತನ ಗೆಳೆಯರು ಹೇಗೆ ಕಾಪಾಡುತ್ತಾರೆ ಎಂಬುದೇ ಸಿನಿಮಾದ ಕತೆ. ಸುಮಾರು 10 ಕೋಟಿ ಬಜೆಟ್ ನಲ್ಲಿ ನಿರ್ಮಾಣವಾದ ಈ ಸಿನಿಮಾ 100 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಾಧ್ಯಮದ ಕ್ಯಾಮೆರಾ​​​ ನೋಡುತ್ತಿದ್ದಂತೆ ಮುಖ ಮುಚ್ಚಿಕೊಂಡ ಯುವತಿ
ಮಾಧ್ಯಮದ ಕ್ಯಾಮೆರಾ​​​ ನೋಡುತ್ತಿದ್ದಂತೆ ಮುಖ ಮುಚ್ಚಿಕೊಂಡ ಯುವತಿ
New Year 2026 Live: ನ್ಯೂ ಇಯರ್; ರಾಜ್ಯದ ಉದ್ದಗಲಕ್ಕೂ ಸಂಭ್ರಮ ಜೋರು
New Year 2026 Live: ನ್ಯೂ ಇಯರ್; ರಾಜ್ಯದ ಉದ್ದಗಲಕ್ಕೂ ಸಂಭ್ರಮ ಜೋರು
ಪುಟಿನ್ ನಿವಾಸದ ಮೇಲೆ ದಾಳಿ ಮಾಡಿದ ಉಕ್ರೇನ್; ರಷ್ಯಾದಿಂದ ವಿಡಿಯೋ ಬಿಡುಗಡೆ
ಪುಟಿನ್ ನಿವಾಸದ ಮೇಲೆ ದಾಳಿ ಮಾಡಿದ ಉಕ್ರೇನ್; ರಷ್ಯಾದಿಂದ ವಿಡಿಯೋ ಬಿಡುಗಡೆ
ಕನ್ಯಾಕುಮಾರಿಯಲ್ಲಿ 2025ರ ಕೊನೆಯ ಸೂರ್ಯಾಸ್ತದ ನೋಡಲು ಆಗಮಿಸಿದ ಜನಸಾಗರ
ಕನ್ಯಾಕುಮಾರಿಯಲ್ಲಿ 2025ರ ಕೊನೆಯ ಸೂರ್ಯಾಸ್ತದ ನೋಡಲು ಆಗಮಿಸಿದ ಜನಸಾಗರ
ನ್ಯೂಇಯರ್ ಸೆಲೆಬ್ರೇಷನ್​​​ ಮುನ್ನ ಮಳೆ ಎಂಟ್ರಿ: ಪಾರ್ಟಿ ಪ್ರಿಯರಿಗೆ ಶಾಕ್!​
ನ್ಯೂಇಯರ್ ಸೆಲೆಬ್ರೇಷನ್​​​ ಮುನ್ನ ಮಳೆ ಎಂಟ್ರಿ: ಪಾರ್ಟಿ ಪ್ರಿಯರಿಗೆ ಶಾಕ್!​
ಕಳೆದು ಹೋಗಿದ್ದ ಬಾಲಕಿಯನ್ನು ಮರಳಿ ತಾಯಿ ಮಡಿಲಿಗೆ ಸೇರಿಸಿದ ಪೊಲೀಸರು
ಕಳೆದು ಹೋಗಿದ್ದ ಬಾಲಕಿಯನ್ನು ಮರಳಿ ತಾಯಿ ಮಡಿಲಿಗೆ ಸೇರಿಸಿದ ಪೊಲೀಸರು
ಸ್ಟ್ರೋಕ್ ಗೆ ಒಳಗಾದವರನ್ನು ಎಷ್ಟು ಸಮಯದೊಳಗೆ ಆಸ್ಪತ್ರೆಗೆ ದಾಖಲಿಸಬೇಕು?
ಸ್ಟ್ರೋಕ್ ಗೆ ಒಳಗಾದವರನ್ನು ಎಷ್ಟು ಸಮಯದೊಳಗೆ ಆಸ್ಪತ್ರೆಗೆ ದಾಖಲಿಸಬೇಕು?
ಇಂದೋರ್‌ನಲ್ಲಿ ಕಲುಷಿತ ನೀರು ಕುಡಿದು 7 ಜನ ಸಾವು; ಆಸ್ಪತ್ರೆಗೆ ಸಿಎಂ ಭೇಟಿ
ಇಂದೋರ್‌ನಲ್ಲಿ ಕಲುಷಿತ ನೀರು ಕುಡಿದು 7 ಜನ ಸಾವು; ಆಸ್ಪತ್ರೆಗೆ ಸಿಎಂ ಭೇಟಿ
ಬಸ್ಸಿನಲ್ಲಿ ನಿದ್ದೆಗೆ ಜಾರಿದ್ದ ವೇಳೆ ಯುವತಿಯ ಎದೆ ಮೇಲೆ ಕೈ ಇಟ್ಟ ಯುವಕ
ಬಸ್ಸಿನಲ್ಲಿ ನಿದ್ದೆಗೆ ಜಾರಿದ್ದ ವೇಳೆ ಯುವತಿಯ ಎದೆ ಮೇಲೆ ಕೈ ಇಟ್ಟ ಯುವಕ
ಪುರಿ ಜಗನ್ನಾಥ ದೇವಸ್ಥಾನದಲ್ಲಿ ಈ ವರ್ಷದ ಕೊನೆಯ ಸೂರ್ಯಾಸ್ತ ಕಂಡಿದ್ದು ಹೀಗೆ
ಪುರಿ ಜಗನ್ನಾಥ ದೇವಸ್ಥಾನದಲ್ಲಿ ಈ ವರ್ಷದ ಕೊನೆಯ ಸೂರ್ಯಾಸ್ತ ಕಂಡಿದ್ದು ಹೀಗೆ