ಮಲಯಾಳಂ ಸಿನಿಮಾ ನಿರ್ಮಾಣಕ್ಕೆ ಮುಂದಾದ ಕನ್ನಡದ ‘ಕೆಆರ್​ಜಿ ಸ್ಟುಡಿಯೋಸ್’

ಮಲಯಾಲಂನಲ್ಲಿ ‘ಫ್ರೈಡೇ ಫಿಲ್ಮ್​ ಹೌಸ್’ ಸಾಕಷ್ಟು ಹೆಸರು ಮಾಡಿದೆ. ‘ಸೂಫಿಯುಂ ಸುಜಾತಯುಂ’, ‘‌ಹೋಮ್’ ಅಂಥ ಚಿತ್ರಗಳನ್ನು ಅವರು ನೀಡಿದ್ದಾರೆ. ಈಗ ಈ ನಿರ್ಮಾಣ ಸಂಸ್ಥೆ ಜೊತೆ ‘ಕೆಆರ್​ಜಿ’ ಸ್ಟುಡಿಯೋ ಸಹಯೋಗ ಬೆಳೆಸಿ ಮಲಯಾಳಂ ಸಿನಿಮಾ ನಿರ್ಮಾಣ ಮಾಡುತ್ತಿದೆ. ಈ ಸಿನಿಮಾಗೆ ಮನು ಸ್ವರಾಜ್ ನಿರ್ದೇಶನ ಇರಲಿದೆ.

ಮಲಯಾಳಂ ಸಿನಿಮಾ ನಿರ್ಮಾಣಕ್ಕೆ ಮುಂದಾದ ಕನ್ನಡದ ‘ಕೆಆರ್​ಜಿ ಸ್ಟುಡಿಯೋಸ್’
ಕೆಆರ್​ಜಿ
Follow us
|

Updated on: Mar 02, 2024 | 10:54 AM

ಕನ್ನಡದ ನಿರ್ಮಾಣ ಸಂಸ್ಥೆಗಳು ಪರಭಾಷೆಗೆ ಲಗ್ಗೆ ಇಟ್ಟು ಮೆಚ್ಚುಗೆಗೆ ಪಾತ್ರವಾಗುವಂಥ ಸಿನಿಮಾಗಳನ್ನು ಮಾಡುತ್ತಿವೆ. ‘ಹೊಂಬಾಳೆ ಫಿಲ್ಮ್ಸ್’ ಈಗಾಗಲೇ ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ಸಿನಿಮಾ ನಿರ್ಮಿಸುತ್ತಿದೆ. ಅದೇ ರೀತಿ ಕಾರ್ತಿಕ್‍ ಗೌಡ ಮತ್ತು ಯೋಗಿ ಜಿ. ರಾಜ್‍ ಒಡೆತನದ ಕೆಆರ್​ಜಿ ಸ್ಟುಡಿಯೋಸ್‍ ಕೂಡ ಕನ್ನಡದ ಜೊತೆ ಪರಭಾಷೆಯಲ್ಲೂ ಸಿನಿಮಾ ನಿರ್ಮಾಣ ಮಾಡುತ್ತಿವೆ. ಇತ್ತೀಚೆಗೆ ತಮಿಳಿನಲ್ಲಿ ಅವರು ಸಿನಿಮಾ ನಿರ್ಮಾಣ ಮಾಡಲಿದ್ದಾರೆ ಎನ್ನುವ ಸುದ್ದಿ ಹರಿದಾಡಿತ್ತು. ಈಗ ಮಲಯಾಳಂ ಚಿತ್ರರಂಗಕ್ಕೆ ಅವರು ಕಾಲಿಟ್ಟಿದ್ದಾರೆ.

ಮಲಯಾಲಂನಲ್ಲಿ ‘ಫ್ರೈಡೇ ಫಿಲ್ಮ್​ ಹೌಸ್’ ಸಾಕಷ್ಟು ಹೆಸರು ಮಾಡಿದೆ. ‘ಸೂಫಿಯುಂ ಸುಜಾತಯುಂ’, ‘‌ಹೋಮ್’ ಅಂಥ ಚಿತ್ರಗಳನ್ನು ಅವರು ನೀಡಿದ್ದಾರೆ. ಈಗ ಈ ನಿರ್ಮಾಣ ಸಂಸ್ಥೆ ಜೊತೆ ‘ಕೆಆರ್​ಜಿ’ ಸ್ಟುಡಿಯೋ ಸಹಯೋಗ ಬೆಳೆಸಿ ಮಲಯಾಳಂ ಸಿನಿಮಾ ನಿರ್ಮಾಣ ಮಾಡುತ್ತಿದೆ. ಈ ಸಿನಿಮಾಗೆ ಮನು ಸ್ವರಾಜ್ ನಿರ್ದೇಶನ ಇರಲಿದೆ.

ಕೆಆರ್​ಜಿ ಸ್ಟುಡಿಯೋಸ್ 2017ರಲ್ಲಿ ಹಂಚಿಕೆ ಆರಂಭಿಸಿತು. ಆ ಬಳಿಕ ಹಲವು ಸೂಪರ್ ಹಿಟ್ ಚಿತ್ರಗಳನ್ನು ಅವರು ಹಂಚಿಕೆ ಮಾಡಿದ್ದಾರೆ. 2021ರಲ್ಲಿ ಇವರು ನಿರ್ಮಾಣಕ್ಕೆ ಇಳಿದರು. ‘ರತ್ನನ್ ಪ್ರಪಂಚ’ ಚಿತ್ರದ ಮೂಲಕ ಇವರು ನಿರ್ಮಾಣ ಆರಂಭಿಸಿದರು. ನಂತರ ‘ಗುರುದೇವ ಹೊಯ್ಸಳ’ ಸಿನಿಮಾ ನಿರ್ಮಾಣ ಮಾಡಿದರು. ಈಗ ಕೆಲವು ಸಿನಿಮಾಗಳನ್ನು ಅವರು ನಿರ್ಮಾಣ ಮಾಡುತ್ತಿದ್ದಾರೆ.

ಇದನ್ನೂ ಓದಿ: ತಮಿಳು, ಮಲಯಾಳಂ ಚಿತ್ರರಂಗಗಳಿಗೆ ಕೆಆರ್​ಜಿ ಸ್ಟುಡಿಯೋಸ್ ಪಾದಾರ್ಪಣೆ

ಈ ಮೊದಲು ‘ಕೆಆರ್​ಜಿ ಸ್ಟುಡಿಯೋಸ್’ ಮಲಯಾಳಂ ಸಿನಿಮಾ ‘ವಾಲಟಿ’ಯನ್ನು ಕನ್ನಡಕ್ಕೆ ಡಬ್ ಮಾಡಿ ಹಂಚಿಕೆ ಹಕ್ಕನ್ನು ಪಡೆದಿತ್ತು. ಈಗ ಮಲಯಾಳಂನಲ್ಲಿ ಸಿನಿಮಾ ನಿರ್ಮಾಣ ಮಾಡಿ ಅಲ್ಲಿನ ಚಿತ್ರರಂಗದಲ್ಲಿ ಸಂಪೂರ್ಣವಾಗಿ ತೊಡಗಿಕೊಂಡಂತೆ ಆಗಿದೆ. 2023ರಲ್ಲಿ ‘ಕೆಆರ್​ಜಿ ಸ್ಟುಡಿಯೋಸ್’ ಹಲವು ಸಿನಿಮಾಗಳನ್ನು ಹಂಚಿಕೆ ಮಾಡಿದೆ. ಕನ್ನಡದಲ್ಲಿ ‘ಪೌಡರ್’, ‘ಕಿರಿಕೆಟ್ 11’, ‘ಉತ್ತರಕಾಂಡ’ ಚಿತ್ರಗಳನ್ನು ನಿರ್ಮಾಣ ಮಾಡುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ