ಪೇಪರ್ ಕಪ್​​​​ನಲ್ಲಿ ಟೀ ಕುಡಿಯುವುದು ಬಂಜೆತನಕ್ಕೆ ಕಾರಣವಾಗಬಹುದೇ? ತಜ್ಞರು ಹೇಳುವುದೇನು?

ಆರೋಗ್ಯ ತಜ್ಞ ಡಾ.ಅಂಶುಮನ್ ಕುಮಾರ್ ಅವರ ಪ್ರಕಾರ ಪೇಪರ್ ಕಪ್‌ಗಳ ತಯಾರಿಕೆಯಲ್ಲಿ ಬಿಸ್ಫೆನಾಲ್ ಎ ರಾಸಾಯನಿಕ ಮತ್ತು ಥಾಲೇಟ್‌ಗಳನ್ನು ಬಳಸಲಾಗುತ್ತದೆ. ಈ ರಾಸಾಯನಿಕಗಳು ದೇಹದ ಅನೇಕ ಹಾರ್ಮೋನುಗಳ ಅಸಮತೋಲನಕ್ಕೆ ಕಾರಣವಾಗುತ್ತದೆ.

ಪೇಪರ್ ಕಪ್​​​​ನಲ್ಲಿ ಟೀ ಕುಡಿಯುವುದು ಬಂಜೆತನಕ್ಕೆ ಕಾರಣವಾಗಬಹುದೇ? ತಜ್ಞರು ಹೇಳುವುದೇನು?
Paper cup and infertilityImage Credit source: Freepik
Follow us
ಅಕ್ಷತಾ ವರ್ಕಾಡಿ
|

Updated on: Aug 04, 2023 | 1:38 PM

ಕಳೆದ ಕೆಲವು ವರ್ಷಗಳಿಂದ ಬಂಜೆತನದ(Infertility) ಸಮಸ್ಯೆ ನಿರಂತರವಾಗಿ ಹೆಚ್ಚುತ್ತಿದೆ. ಇದು ಸುಖ ದಾಂಪತ್ಯದಲ್ಲಿ ಅಸಮಾಧಾನಕ್ಕೆ ಕಾರಣವಾಗುವುದು ಮಾತ್ರವಲ್ಲದೇ ಮಾನಸಿಕವಾಗಿಯೂ ಕುಗ್ಗಿಸುತ್ತಾ ಹೋಗುತ್ತದೆ. ಕಳಪೆ ಆಹಾರ ಕ್ರಮ ಹಾಗೂ ಒತ್ತಡದ ಜೀವನಶೈಲಿಗೆ ಬಂಜೆತನಕ್ಕೆ ಮುಖ್ಯ. ಆದರೆ ಪೇಪರ್ ಕಪ್‌ (Paper cup) ನಲ್ಲಿನ ಚಹಾ, ಕಾಫಿ ಸೇವನೆ ಬಂಜೆತನಕ್ಕೆ ಕಾರಣವಾಗುತ್ತದೆ ಎಂದು ನಿಮಗೆ ತಿಳಿದಿದೆಯೇ? ಪೇಪರ್ ಕಪ್‌ನ ನಿರಂತರ ಬಳಕೆಯು ಹಾರ್ಮೋನುಗಳ ಮೇಲೂ ಪರಿಣಾಮ ಬೀರುತ್ತದೆ ಎಂದು ತಜ್ಞರು ಎಚ್ಚರಿಸುತ್ತಾರೆ.

ಪೇಪರ್ ಕಪ್ ಮತ್ತು ಬಂಜೆತನ:

ಮನೆಯಲ್ಲಿ ಗಾಜು ಅಥವಾ ಸ್ಟೀಲ್​​​​​​ ಗ್ಲಾಸುಗಳನ್ನು ಹೆಚ್ಚಾಗಿ ಬಳಸಲಾಗುತ್ತದೆ. ಆದರೆ ಹೊರಗಡೆ ಟೀ ಕಾಫಿ ಅಂಗಡಿಗಳಲ್ಲಿ ಪ್ಲಾಸ್ಟಿಕ್​​​ ಹಾಗೂ ಪೇಪರ್​​​​ ಕಪ್​ಗಳಲ್ಲಿ ಕಾಫಿ, ಟೀ ನೀಡುತ್ತಾರೆ. ಇದು ಸಾಮಾನ್ಯವಾಗಿ ಕಂಡರೂ ಕೂಡ ನಿಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮವನ್ನುಂಟು ಮಾಡುತ್ತದೆ. ಐಐಟಿ ಖರಗ್‌ಪುರದ ಅಧ್ಯಯನವೊಂದರ ಪ್ರಕಾರ ಪೇಪರ್ ಕಪ್‌ಗಳನ್ನು ಹೈಡ್ರೋಫೋಬಿಕ್ ಪ್ಲಾಸ್ಟಿಕ್‌ನಿಂದ ತಯಾರಿಸಲಾಗುತ್ತದೆ ಎಂದು ಸೂಚಿಸುತ್ತದೆ. ಈ ಪ್ಲಾಸ್ಟಿಕ್ ನಲ್ಲಿ ಹಲವು ಬಗೆಯ ರಾಸಾಯನಿಕಗಳಿವೆ. ಅವು ಚಹಾದೊಂದಿಗೆ ದೇಹಕ್ಕೆ ಹೋಗಿ ರೋಗಗಳನ್ನು ಉಂಟುಮಾಡುತ್ತವೆ. ಆದರೆ ಅಚ್ಚರಿಯ ವಿಷಯವೆಂದರೆ ಬಳಸಿ ಬಿಸಾಡುವ ಪೇಪರ್ ಕಪ್(Use and Throw) ಗಳಲ್ಲಿ ಟೀ ಕುಡಿಯುವುದರಿಂದ ಬಂಜೆತನವೂ ಉಂಟಾಗುತ್ತದೆ ಎಂದು ಅಧ್ಯಯನ ಬಹಿರಂಗ ಪಡಿಸಿದೆ.

ಇದನ್ನೂ ಓದಿ: ನಿಮ್ಮ ಈ ಕೆಟ್ಟ ಅಭ್ಯಾಸ ಅನಾರೋಗ್ಯಕ್ಕೆ ಕಾರಣವಾಗಬಹುದು; ಅಧ್ಯಯನ

ಟಿವಿ9 ಜೊತೆಗಿನ ಸಂದರ್ಶನ ಒಂದರಲ್ಲಿ ಮಾತನಾಡಿದ ಆರೋಗ್ಯ ತಜ್ಞ ಡಾ.ಅಂಶುಮನ್ ಕುಮಾರ್ ಅವರ ಪ್ರಕಾರ ಪೇಪರ್ ಕಪ್‌ಗಳ ತಯಾರಿಕೆಯಲ್ಲಿ ಬಿಸ್ಫೆನಾಲ್ ಎ ರಾಸಾಯನಿಕ ಮತ್ತು ಥಾಲೇಟ್‌ಗಳನ್ನು ಬಳಸಲಾಗುತ್ತದೆ. ಇವೆರಡೂ ರಾಸಾಯನಿಕಗಳು ಒಬ್ಬ ವ್ಯಕ್ತಿಯು ಅದರಲ್ಲಿ ಚಹಾವನ್ನು ಕುಡಿಯುವಾಗ, ಬಿಸಿ ಚಹಾದಿಂದಾಗಿ, ಈ ರಾಸಾಯನಿಕಗಳು ಕಪ್ನಿಂದ ಬಿಡುಗಡೆಯಾಗುತ್ತವೆ ಮತ್ತು ಚಹಾವನ್ನು ಕುಡಿಯುವಾಗ ದೇಹಕ್ಕೆ ಹೋಗುತ್ತವೆ. ಈ ರಾಸಾಯನಿಕಗಳು ದೇಹದ ಅಂತಃಸ್ರಾವಕ ವ್ಯವಸ್ಥೆಯ ಕಾರ್ಯವನ್ನು ಸಹ ಪರಿಣಾಮ ಬೀರುತ್ತವೆ. ಈ ಕಾರಣದಿಂದಾಗಿ, ದೇಹದ ಅನೇಕ ಹಾರ್ಮೋನುಗಳ ಸಮತೋಲನವು ಹದಗೆಡುತ್ತದೆ.

ಹಾರ್ಮೋನುಗಳ ಸಮತೋಲನವು ಹದಗೆಟ್ಟಾಗ, ಇದು ಫಲವತ್ತತೆಯ ಮೇಲೂ ಪರಿಣಾಮ ಬೀರುತ್ತದೆ. ಒಬ್ಬ ವ್ಯಕ್ತಿಯು ಅನೇಕ ವರ್ಷಗಳಿಂದ ಪೇಪರ್ ಕಪ್‌ನಲ್ಲಿ ಚಹಾವನ್ನು ಕುಡಿಯುತ್ತಿದ್ದರೆ, ಅವನು ಬಂಜೆತನ ಸಮಸ್ಯೆಯನ್ನು ಎದುರಿಸಬಹುದು. ಇಂದಿನ ದಿನಗಳಲ್ಲಿ ಆಫೀಸ್ ಗಳಲ್ಲೂ ಪೇಪರ್ ಕಪ್ ನಲ್ಲಿ ಟೀ ಕುಡಿಯುವ ಟ್ರೆಂಡ್ ಹೆಚ್ಚುತ್ತಿದೆ. ಆದ್ದರಿಂದ ಆದಷ್ಟು ಗಾಜು,ತಾಮ್ರ  ಅಥವಾ ಸ್ಟೀಲ್​​​​ ಲೋಟಗಳನ್ನು ಬಳಸಿ ಎಂದು ತಜ್ಞರು ಎಚ್ಚರಿಸುತ್ತಾರೆ.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​​ ಮಾಡಿ: 

ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ