Nose Picking: ನಿಮ್ಮ ಈ ಕೆಟ್ಟ ಅಭ್ಯಾಸ ಅನಾರೋಗ್ಯಕ್ಕೆ ಕಾರಣವಾಗಬಹುದು; ಅಧ್ಯಯನ
ಇತ್ತೀಚಿನ ಅಧ್ಯಯನದ ಪ್ರಕಾರ, ಆಗಾಗ ಮೂಗಿನೊಳಗೆ ಕೈ ಹಾಕುವ ಕೆಟ್ಟ ಅಭ್ಯಾಸಗಳು ಕೋವಿಡ್ಗೆ ವೇಗವಾಗಿ ತುತ್ತಾಗುವಂತೆ ಮಾಡುತ್ತದೆ ಎಂದು ತಿಳಿದುಬಂದಿದೆ.
ಸಾಕಷ್ಟು ಜನರು ಆಗಾಗ ಮೂಗಿನೊಳಗೆ ಕೈ ಹಾಕುವ ಅಭ್ಯಾಸ(Nose Picking) ವನ್ನು ಹೊಂದಿರುತ್ತಾರೆ. ಹೊಸ ಅಧ್ಯಯನದ ಪ್ರಕಾರ, ಈ ಅಭ್ಯಾಸವು ನಿಮಗೆ ಕರೋನವೈರಸ್ ಅಪಾಯವನ್ನುಂಟುಮಾಡುತ್ತದೆ ಎಂದು ಬಹಿರಂಗಪಡಿಸಿದೆ. ನೆದರ್ಲೆಂಡ್ಸ್‌ನ ವಿಜ್ಞಾನಿಗಳ ತಂಡವು ಈ ಕುರಿತು ಅಧ್ಯಯನವನ್ನು ಕೈಗೊಂಡಿದ್ದು, ಇದು ಕೋವಿಡ್ (Covid) ರೋಗಿಗಳೊಂದಿಗೆ ನಿಕಟ ಸಂಪರ್ಕ ಹೊಂದಿರುವ ಆರೋಗ್ಯ ಸಿಬ್ಬಂದಿ ಸಹ ಸೋಂಕಿಗೆ ಬಲಿಯಾಗುವ ಸಾಧ್ಯತೆಯಿದೆ ಎಂದು ತೋರಿಸಿದೆ.
ಈ ಅಧ್ಯಯನಕ್ಕಾಗಿ ಆಮ್‌ಸ್ಟರ್‌ಡ್ಯಾಮ್ ವಿಶ್ವವಿದ್ಯಾಲಯದ ವೈದ್ಯಕೀಯ ಕೇಂದ್ರಗಳಲ್ಲಿನ 219 ಉದ್ಯೋಗಿಗಳ ಡೇಟಾವನ್ನು ವೃತ್ತಿಪರರು ಸಂಗ್ರಹಿಸಿ ಮತ್ತು ಸಂಪೂರ್ಣವಾಗಿ ಮೌಲ್ಯಮಾಪನ ಮಾಡಿದ್ದಾರೆ. ಅಧ್ಯಯನದ ಆವಿಷ್ಕಾರಗಳ ಪ್ರಕಾರ, ಒಟ್ಟಾರೆಯಾಗಿ, 219 ಆರೋಗ್ಯ ಕಾರ್ಯಕರ್ತರು ಸಮೀಕ್ಷೆಯನ್ನು ಪೂರ್ಣಗೊಳಿಸಿದ್ದಾರೆ. ಈ ಅಧ್ಯಯನದ ಪ್ರಕಾರ ಸಾಕಷ್ಟು ಜನರು ಮೂಗಿನೊಳಗೆ ಕೈ ಹಾಕುವ ಕೆಟ್ಟ ಅಭ್ಯಾಸದಿಂದಲೇ ಅನಾರೋಗ್ಯಕ್ಕೀಡಾಗುತ್ತಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ನೀವು ಸೇವಿಸುವ ಕೆಲವು ಆಹಾರಗಳು ಒತ್ತಡ ಹೆಚ್ಚಾಗಲು ಕಾರಣವಾಗಬಹುದು: ಅವುಗಳು ಯಾವುವು ಎಂಬ ಮಾಹಿತಿ ಇಲ್ಲಿದೆ
ಇದಲ್ಲದೇ ಮೂಗಿನೊಳಗೆ ಸಂಗ್ರಹವಾಗಿರುವ ಲೋಳೆಯನ್ನು ತಿನ್ನುವ ಅಭ್ಯಾಸವನ್ನು ಕೆಲವರು ಹೊಂದಿರುತ್ತಾರೆ, ವಿಶೇಷವಾಗಿ ಮಕ್ಕಳು. ಇದು ನಿಮ್ಮ ಮಕ್ಕಳ ಆರೋಗ್ಯದ ಮೇಲೆ ನೇರವಾಗಿ ಕೆಟ್ಟ ಪರಿಣಾಮವನ್ನುಂಟು ಮಾಡುತ್ತದೆ. ಆದ್ದರಿಂದ ಪೋಷಕರು ಆದಷ್ಟು ಮಕ್ಕಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಅಗತ್ಯವಿದೆ ಎಂದು ಸಂಶೋಧಕರು ಎಚ್ಚರಿಸುತ್ತಾರೆ.
ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: