ಕೋವಿಡ್ ಸಾಂಕ್ರಾಮಿಕವು ಮಕ್ಕಳು ಮತ್ತು ಗರ್ಭಿಣಿಯರಲ್ಲಿ ಮಧುಮೇಹ ಹೆಚ್ಚಿಸಿದೆ: ಅಧ್ಯಯನ

ಕೋವಿಡ್-19 ಸಾಂಕ್ರಾಮಿಕ ರೋಗ ಪ್ರಾರಂಭವಾದ ನಂತರದ ವರ್ಷದಲ್ಲಿ ಟೈಪ್-2 ಮಧುಮೇಹದಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆ ಹೆಚ್ಚುತ್ತಲೇ ಇದೆ ಎಂದು ಸಂಶೋಧನೆಯೊಂದು ತಿಳಿಸಿದೆ.

ಕೋವಿಡ್ ಸಾಂಕ್ರಾಮಿಕವು ಮಕ್ಕಳು ಮತ್ತು ಗರ್ಭಿಣಿಯರಲ್ಲಿ ಮಧುಮೇಹ ಹೆಚ್ಚಿಸಿದೆ: ಅಧ್ಯಯನ
ಮಕ್ಕಳು ಮತ್ತು ಗರ್ಭಿಣಿಯರಲ್ಲಿ ಮಧುಮೇಹ
Follow us
ಅಕ್ಷತಾ ವರ್ಕಾಡಿ
|

Updated on: Jun 17, 2023 | 1:02 PM

ನ್ಯೂಯಾರ್ಕ್: ಕೋವಿಡ್-19 ಸಾಂಕ್ರಾಮಿಕ ರೋಗ ಪ್ರಾರಂಭವಾದ ನಂತರದ ವರ್ಷದಲ್ಲಿ ಟೈಪ್-2 ಮಧುಮೇಹದಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆ ಹೆಚ್ಚುತ್ತಲೇ ಇದೆ ಎಂದು ಸಂಶೋಧನೆಯೊಂದು ತಿಳಿಸಿದೆ. ಅಮೆರಿಕಾದ ಇಲಿನಾಯ್ಸ್‌ನಲ್ಲಿ ನಡೆದ ಎಂಡೋಕ್ರೈನ್ ಸೊಸೈಟಿಯ ವಾರ್ಷಿಕ ಸಭೆಯಲ್ಲಿ ಹಿಂದಿನ ಎರಡು ವರ್ಷಗಳಿಗಿಂತ ಹೆಚ್ಚು ಗರ್ಭಿಣಿಯರು ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ಗರ್ಭಾವಸ್ಥೆಯ ಮಧುಮೇಹವನ್ನು ಹೆಚ್ಚು ಅಭಿವೃದ್ಧಿಪಡಿಸಿದ್ದಾರೆ ಎಂದು ತೋರಿಸಿದೆ.

ಮೊದಲ ಅಧ್ಯಯನದಲ್ಲಿ, ಓಹಿಯೋದ ಕೊಲಂಬಸ್‌ನಲ್ಲಿರುವ ನೇಷನ್‌ವೈಡ್ ಚಿಲ್ಡ್ರನ್ಸ್ ಆಸ್ಪತ್ರೆಯ ಸಂಶೋಧಕರು, ಕೋವಿಡ್-19 ಸಾಂಕ್ರಾಮಿಕದ ಮೊದಲ ವರ್ಷದಲ್ಲಿ, ಮನೆಯಲ್ಲಿಯೇ ಉಳಿದುಕೊಂಡಿದ್ದರಿಂದ, ಜೊತೆಗೆ ಅನೇಕ ಅಂಶಗಳು ಮಕ್ಕಳು ಹೆಚ್ಚು ತಿನ್ನಲು ಹಾಗೂ ಅನಾರೋಗ್ಯಕರ ಆಹಾರಗಳತ್ತ ಮುಖಮಾಡಿರುವುದೇ ತೂಕ ಹೆಚ್ಚಾಗಲು ಕಾರಣವಾಗಿದೆ. ಇದು ಟೈಪ್-2 ಮಧುಮೇಹದ ಹೆಚ್ಚಿನ ಪ್ರಕರಣಗಳಿಗೆ ಕಾರಣವಾಯಿತು ಎಂದು ಸಂಶೋಧನೆ ತಿಳಿಸಿವೆ.

ಇದನ್ನೂ ಓದಿ: ಮೊಳಕೆಯೊಡೆದ ಬೆಳ್ಳುಳ್ಳಿಯನ್ನು ಲಘುವಾಗಿ ಪರಿಗಣಿಸಬೇಡಿ, ಈ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಅದು ದಿವ್ಯ ಔಷಧ

ಎರಡನೇ ಅಧ್ಯಯನ ಆಸ್ಟ್ರೇಲಿಯಾದ ಸಿಡ್ನಿ ವಿಶ್ವವಿದ್ಯಾಲಯದ ತಂಡವು ಕೋವಿಡ್ -19 ರ ಹಿಂದಿನ ಎರಡು ವರ್ಷಗಳಲ್ಲಿ ನಡೆದ 14,663 ಗರ್ಭಧಾರಣೆಗಳಲ್ಲಿ ಮಧುಮೇಹ ಪತ್ತೆಯಾಗಿದೆ. ಅದರಲ್ಲಿ 6,890 ಮಹಿಳೆಯರು ಮೊದಲ ವರ್ಷದಲ್ಲಿ ಮತ್ತು 6,654 ಮಹಿಳೆಯರು ಎರಡನೇ ವರ್ಷದಲ್ಲಿ ಎಂದು ತಿಳಿದುಬಂದಿದೆ.

“ಜನಸಂಖ್ಯೆಯಲ್ಲಿನ ಬದಲಾವಣೆಗಳು ಮತ್ತು ಸಾಂಕ್ರಾಮಿಕ ರೋಗಕ್ಕೆ ಸಂಬಂಧಿಸಿದ ಬದಲಾವಣೆಗಳಿಂದಾಗಿ ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ಗರ್ಭಾವಸ್ಥೆಯ ಮಧುಮೇಹವು ಹೆಚ್ಚು ಸಾಮಾನ್ಯವಾಗಿದೆ ಎಂದು ತೋರುತ್ತದೆ, ಇದು ವಿಶ್ವಾದ್ಯಂತ ತಾಯಂದಿರು ಮತ್ತು ಅವರ ಮಕ್ಕಳಿಗೆ ಗಮನಾರ್ಹವಾದ ಅಲ್ಪಾವಧಿಯ ಮತ್ತು ದೀರ್ಘಕಾಲೀನ ಪರಿಣಾಮವನ್ನು ಬೀರುತ್ತದೆ” ಎಂದು ಸಂಶೋಧಕರು ತಿಳಿಸಿದ್ದಾರೆ.

ಆರೋಗ್ಯಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​​ ಮಾಡಿ: