AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Fitness Challenge: ಫಿಟ್​ನೆಸ್ ಚಾಲೆಂಚ್ ಗೆಲ್ಲಲು ಪ್ರತಿನಿತ್ಯ 4 ಲೀ. ನೀರು ಕುಡಿದು ಆಸ್ಪತ್ರೆಗೆ ದಾಖಲಾದ ಮಹಿಳೆ!

75 ಹಾರ್ಡ್ ಎಂಬ ಫಿಟ್​ನೆಸ್ ಚಾಲೆಂಜ್ ಸ್ವೀಕರಿಸಿ ಪ್ರತಿನಿತ್ಯ ನಾಲ್ಕು ಲೀಟರ್ ನೀರು ಕುಡಿದ ಮಹಿಳೆಯೊಬ್ಬರು ಇದೀಗ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಲ್ಲದೆ, ತಪಾಸಣೆ ವೇಳೆ ಆಕೆ ಸೋಡಿಯಂ ಕೊರತೆಯಿಂದ ಬಳಲುತ್ತಿರುವುದನ್ನು ವೈದ್ಯರು ಕಂಡುಕೊಂಡಿದ್ದಾರೆ.

Fitness Challenge: ಫಿಟ್​ನೆಸ್ ಚಾಲೆಂಚ್ ಗೆಲ್ಲಲು ಪ್ರತಿನಿತ್ಯ 4 ಲೀ. ನೀರು ಕುಡಿದು ಆಸ್ಪತ್ರೆಗೆ ದಾಖಲಾದ ಮಹಿಳೆ!
ಫಿಟ್​ನೆಸ್ ಚಾಲೆಂಚ್ ಗೆಲ್ಲಲು ಪ್ರತಿನಿತ್ಯ 4 ಲೀ. ನೀರು ಕುಡಿದು ಆಸ್ಪತ್ರೆಗೆ ದಾಖಲಾದ ಕೆನಡಾದ ಮಹಿಳೆ
Rakesh Nayak Manchi
|

Updated on: Aug 03, 2023 | 10:21 PM

Share

ಅತಿಯಾದರೆ ಅಮೃತವೂ ವಿಷ ಎಂಬುದಕ್ಕೆ ಈ ಮಹಿಳೆ ತಾಜಾ ಉದಾಹರಣೆಯಾಗಿದ್ದಾರೆ. 75 ಹಾರ್ಡ್ (75 Hard) ಎಂದು ಕರೆಯಲ್ಪಡುವ ಫಿಟ್‌ನೆಸ್ ಚಾಲೆಂಜ್‌ಗಾಗಿ (Fitness Challenge) ಕೆನಡಾದ ಟಿಕ್​ಟಾಕರ್, 12 ದಿನಗಳ ಕಾಲ ಪ್ರತಿದಿನ ನಾಲ್ಕು ಲೀಟರ್ ನೀರು ಕುಡಿದ ನಂತರ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಆಂಡಿ ಫ್ರಿಸೆಲ್ಲಾ ಆರಂಭಿಸಿದ ಈ ಚಾಲೆಂಜ್‌ನಲ್ಲಿ ಭಾಗವಹಿಸುವವರು 75 ದಿನಗಳವರೆಗೆ ಪ್ರತಿನಿತ್ಯ ನಾಲ್ಕು ಲೀಟರ್ ನೀರನ್ನು ಕುಡಿಯಬೇಕು ಮತ್ತು ಆಲ್ಕೋಹಾಲ್ ಮತ್ತು ಚೀಟ್ ಮೀಲ್ಸ್ ಸೇವನೆ ಮಾಡಬಾರದು, ದಿನಕ್ಕೆ ಎರಡು 45 ನಿಮಿಷಗಳ ವರ್ಕ್‌ಔಟ್‌ ಮಾಡಬೇಕು, 10 ಪುಟಗಳನ್ನು ಓದಬೇಕು ಮತ್ತು ಇವುಗಳ ಫೋಟೋ ಹಂಚಿಕೊಳ್ಳಬೇಕು.

ಇದೊಂದು ಫಿಟ್ನೆಸ್ ಚಾಲೆಂಜ್ ಆಗಿರುವುದರಿಂದ ಅನೇಕ ಯುವಕ ಯುವತಿಯರು ಇದರಲ್ಲಿ ಪಾಲ್ಗೊಳ್ಳಲು ಆರಂಭಿಸಿದ್ದಾರೆ. ಈ ಪೈಕಿ ಕೆನಡಾದ ಟಿಕ್​ಟಾಕರ್ ಮಿಚೆಲ್ ಫೇರ್‌ಬರ್ನ್ ಕೂಡ ಒಬ್ಬರು. ಇವರು ಚಾಲೆಂಜ್ ಸ್ವೀಕರಿಸಿದ 12 ದಿನಕ್ಕೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಬಗ್ಗೆ ಸ್ವತಃ ಅವರೇ ಟಿಕ್​ಟಾಕ್​ನಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: Video Viral: 210 ಕೆಜಿ ಭಾರ ಎತ್ತುವ ಸಾಹಸ ಮಾಡಿ ಕುತ್ತಿಗೆ ಮುರಿತಕ್ಕೊಳಗಾಗಿ ಸಾವನ್ನಪ್ಪಿದ ಜಿಮ್​​ ಟ್ರೈನರ್

“ಇದು ಕಡಿಮೆ ಸಮಯದಲ್ಲಿ ನಾಲ್ಕು ಲೀಟರ್‌ಗಿಂತ ಹೆಚ್ಚು ನೀರು ಕುಡಿದ ನಂತರ ಸಂಭವಿಸುವ ಸ್ಥಿತಿಯಾಗಿದೆ” ಎಂದು ಮಿಚೆಲ್ ಫೇರ್‌ಬರ್ನ್ ಹೇಳಿದ್ದಾರೆ. ಸವಾಲಿನ 12 ನೇ ದಿನದಂದು ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದೆ. ದುರ್ಬಲ, ವಾಕರಿಕೆ ಜೊತೆಗೆ ಅವರಿಗೆ ಆಹಾರ ಸೇವಿಸಲು ಕಷ್ಟಸಾಧ್ಯವಾಗುತ್ತಿತ್ತು. ಹೀಗಾಗಿ ಅವರು ಆಸ್ಪತ್ರೆಗೆ ದಾಖಲಾಗಿ ತಪಾಸಣೆ ನಡೆಸಿದಾಗ ಸೋಡಿಯಂ ಕೊರತೆ ಎದುರಿಸುತ್ತಿರುವುದನ್ನು ವೈದ್ಯರು ಪತ್ತೆಹಚ್ಚಿದ್ದಾರೆ. ಅಲ್ಲದೆ, ದಿನಕ್ಕೆ ಅರ್ಧ ಲೀಟರ್‌ಗಿಂತ ಹೆಚ್ಚು ನೀರನ್ನು ಕುಡಿಯದಂತೆ ಸಲಹೆ ನೀಡಿದ್ದಾರೆ.

ತೀವ್ರವಾದ ಸೋಡಿಯಂ ಕೊರತೆಯಿಂದ ಬಳಲುತ್ತಿದ್ದರೆ ಸೂಕ್ತ ಚಿಕಿತ್ಸೆ ಪಡೆದುಕೊಳ್ಳುವುದು ಅಗತ್ಯ. ಇಲ್ಲವಾದರೆ ಜೀವಕ್ಕೆ ಅಪಾಯ. ಮಾನವನ ದೇಹದ ನರ ಮತ್ತು ಸ್ನಾಯುಗಳ ಕಾರ್ಯ ಮತ್ತು ರಕ್ತದೊತ್ತಡ ನಿಯಂತ್ರಣಕ್ಕೆ ಸೋಡಿಯಂ ಅಗತ್ಯವಾಗಿದೆ.

ಅಧಿಕ ಜಲಸಂಚಯನದ ಅಡ್ಡಪರಿಣಾಮಗಳೇನು?

ಒಬ್ಬ ವ್ಯಕ್ತಿ ದಿನಕ್ಕೆ 2-3 ಲೀಟರ್​ನಷ್ಟು ನೀರು ಸೇವಿಸಬಹುದು. ಆದರೆ ಇದಕ್ಕೂ ಹೆಚ್ಚಿನ ಪ್ರಮಾಣದಲ್ಲಿ ನೀರು ಸೇವನೆ ಮಾಡಿದರೆ ಆರೋಗ್ಯ ಸಮಸ್ಯೆ ಕಾಡುತ್ತದೆ. ಅವುಗಳೆಂದರೆ: ವಾಕರಿಕೆ, ವಾಂತಿ, ಸ್ನಾಯು ದೌರ್ಬಲ್ಯ, ಸೆಳೆತ, ತಲೆನೋವು, ರೋಗಗ್ರಸ್ತವಾಗುವಿಕೆಗಳು, ಕೋಮಾ, ಗೊಂದಲ, ಪ್ರಜ್ಞಾಹೀನತೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ