AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಂಜೆತನ ಸಮಸ್ಯೆ ನಿವಾರಣೆಗೆ ಮೆಂತ್ಯ ಬೀಜ ಪರಿಣಾಮಕಾರಿ, ಇತರೆ ಪ್ರಯೋಜನಗಳು ಹೀಗಿವೆ

ಮೆಂತ್ಯ ಬೀಜಗಳ ಪ್ರಯೋಜನಗಳು: ಇತ್ತೀಚಿನ ದಿನಗಳಲ್ಲಿ ಅನೇಕರು ಲೈಂಗಿಕ ಮತ್ತು ಬಂಜೆತನ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಇದಕ್ಕೆ ಬದಲಾದ ಜೀವನಶೈಲಿ ಮತ್ತು ಆಹಾರ ಪದ್ಧತಿಯೇ ಪ್ರಮುಖ ಕಾರಣ ಎನ್ನಲಾಗುತ್ತಿದೆ. ಇಂತಹ ಸಮಸ್ಯೆಗಳನ್ನು ನಿವಾರಿಸಲು ಮೆಂತ್ಯ ಬೀಜ ಪರಿಣಾಮಕಾರಿ ಎಂಬುದು ಗೊತ್ತೇ?

ಬಂಜೆತನ ಸಮಸ್ಯೆ ನಿವಾರಣೆಗೆ ಮೆಂತ್ಯ ಬೀಜ ಪರಿಣಾಮಕಾರಿ, ಇತರೆ ಪ್ರಯೋಜನಗಳು ಹೀಗಿವೆ
ಮೆಂತ್ಯ ಬೀಜಗಳ ಪ್ರಯೋಜನಗಳು
Rakesh Nayak Manchi
|

Updated on: Apr 22, 2023 | 7:00 AM

Share

ಇತ್ತೀಚಿನ ದಿನಗಳಲ್ಲಿ ಅನೇಕರು ಲೈಂಗಿಕ ಮತ್ತು ಬಂಜೆತನ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಇದಕ್ಕೆ ಬದಲಾದ ಜೀವನಶೈಲಿ ಮತ್ತು ಆಹಾರ ಪದ್ಧತಿಯೇ ಪ್ರಮುಖ ಕಾರಣ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಇಂತಹ ಸಮಸ್ಯೆಗಳನ್ನು ನಿವಾರಿಸಲು ಮೆಂತ್ಯ ಬೀಜ (Fenugreek seeds) ಪರಿಣಾಮಕಾರಿ ಎಂಬುದು ಗೊತ್ತೇ? ಹೌದು, ಮೆಂತ್ಯದಲ್ಲಿರುವ ಪೋಷಕಾಂಶಗಳು ಪುರುಷರಲ್ಲಿ ಲೈಂಗಿಕ ಶಕ್ತಿಯನ್ನು ಹೆಚ್ಚಿಸಿ ಸಮಯಕ್ಕೆ ಸರಿಯಾಗಿ ಮಕ್ಕಳಾಗುವಂತೆ ಮಾಡುತ್ತದೆ. ಅಲ್ಲದೆ, ಮೆಂತ್ಯದಲ್ಲಿರುವ ಫ್ಯೂರೋಸ್ಟಾನೊಲಿಕ್ ಸಪೋನಿನ್ ಎಂಬ ಸಂಯುಕ್ತವು ಪುರುಷರಲ್ಲಿ ಲೈಂಗಿಕ ಬಯಕೆಯನ್ನು ಉತ್ತೇಜಿಸುವ ಟೆಸ್ಟೋಸ್ಟೆರಾನ್ ಎಂಬ ಹಾರ್ಮೋನ್ ಉತ್ಪಾದನೆಗೆ ಸಹಾಯ ಮಾಡುತ್ತದೆ ಎಂದು ಅನೇಕ ಅಧ್ಯಯನಗಳು ತೋರಿಸುತ್ತವೆ. ಇದು ಪುರುಷರಲ್ಲಿ ಲೈಂಗಿಕ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಸಹ ಸಹಾಯ ಮಾಡುತ್ತದೆ. ಆದ್ದರಿಂದ, ಲೈಂಗಿಕ ಮತ್ತು ಬಂಜೆತನ ಸಮಸ್ಯೆಗಳಿಂದ ಬಳಲುತ್ತಿರುವವರು ತಮ್ಮ ಆಹಾರದಲ್ಲಿ ಮೆಂತ್ಯವನ್ನು ಸೇರಿಸಿಕೊಳ್ಳಬೇಕು ಎಂದು ತಜ್ಞರು ಸಲಹೆ ನೀಡುತ್ತಾರೆ.

ಮೆಂತ್ಯವು ಬಂಜೆತನ ಮತ್ತು ಲೈಂಗಿಕ ಸಮಸ್ಯೆಗಳನ್ನು ತಡೆಗಟ್ಟಲು ಮಾತ್ರವಲ್ಲದೆ ಇತರ ಆರೋಗ್ಯ ಪ್ರಯೋಜನಗಳಿಗೂ ಉಪಯುಕ್ತವಾಗಿದೆ ಎಂದು ತಜ್ಞರು ಹೇಳುತ್ತಾರೆ. ಪೋಷಕಾಂಶಗಳಾದ ಫೈಬರ್, ವಿಟಮಿನ್ ಬಿ6, ವಿಟಮಿನ್ ಸಿ, ತಾಮ್ರ, ಪೊಟ್ಯಾಸಿಯಮ್, ಸತು, ಮ್ಯಾಂಗನೀಸ್, ಕಬ್ಬಿಣ, ಮೆಗ್ನೀಸಿಯಮ್, ಕ್ಯಾಲ್ಸಿಯಂ ಮತ್ತು ಇತರ ಔಷಧೀಯ ಗುಣಗಳು ನಮ್ಮ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ. ಅಲ್ಲದೆ ಇವುಗಳನ್ನು ತಿನ್ನುವುದರಿಂದ ದೇಹಕ್ಕೆ ಬೇಕಾದ ಪೋಷಕಾಂಶಗಳು ಸಿಗುವುದಲ್ಲದೆ ಚರ್ಮ, ಕೂದಲು, ಹೃದಯದ ಸಮಸ್ಯೆಗಳೂ ದೂರವಾಗುತ್ತವೆ. ಇವುಗಳ ಹೊರತಾಗಿ ಮೆಂತ್ಯ ಸೇವನೆಯಿಂದ ಆಗುವ ಇತರ ಪ್ರಯೋಜನಗಳೇನು ಎಂಬುದನ್ನು ತಿಳಿಯೋಣ.

ಇದನ್ನೂ ಓದಿ: ‘ಲೈಂಗಿಕ ಕ್ರಿಯೆಗೂ ಸೋಮಾರಿತನ’ ಹೊಸತಲೆಮಾರಿನ ವಿರುದ್ಧ ಖ್ಯಾತ ನಟಿ ತಗಾದೆ

ಮೆಂತ್ಯ ಬೀಜಗಳ ಪ್ರಯೋಜನಗಳು

ತೂಕ ಇಳಿಕೆ: ನೀವು ತೂಕ ಇಳಿಸಿಕೊಳ್ಳಲು ಬಯಸಿದರೆ ವ್ಯಾಯಾಮದ ಜೊತೆಗೆ ಹುರಿದ ಮೆಂತ್ಯವನ್ನು ಸೇವಿಸಬಹುದು. ವಾಸ್ತವವಾಗಿ ಮೆಂತ್ಯ ಬೀಜಗಳಲ್ಲಿರುವ ಫೈಬರ್ ಮತ್ತು ಇತರ ಪೋಷಕಾಂಶಗಳು ತೂಕವನ್ನು ಕಳೆದುಕೊಳ್ಳಲು ಮತ್ತು ಚಯಾಪಚಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಪ್ರತಿದಿನ ಬೆಳಿಗ್ಗೆ ಹುರಿದ ಮೆಂತ್ಯವನ್ನು ತಿನ್ನುವುದರಿಂದ ನಿಮ್ಮ ತೂಕವನ್ನು ವೇಗವಾಗಿ ಕಳೆದುಕೊಳ್ಳಲು ಸಹಾಯ ಮಾಡುತ್ತದೆ.

ಉರಿಯೂತ, ಕೀಲು ನೋವು: ಮೆಂತ್ಯದಲ್ಲಿರುವ ಉರಿಯೂತ ನಿವಾರಕ ಮತ್ತು ಕ್ಯಾನ್ಸರ್ ವಿರೋಧಿ ಗುಣಗಳು ದೇಹದ ಭಾಗಗಳ ಮೇಲಿನ ಗಾಯಗಳ ಉರಿಯೂತವನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ.

ಸ್ತನ್ಯಪಾನ: ಮೆಂತ್ಯ ಬೀಜಗಳನ್ನು ತಿನ್ನುವುದರಿಂದ ಹಾಲುಣಿಸುವ ತಾಯಂದಿರಲ್ಲಿ ಹಾಲಿನ ಉತ್ಪಾದನೆಯನ್ನು ಹೆಚ್ಚಿಸಬಹುದು. ಮೆಂತ್ಯದಲ್ಲಿರುವ ಗ್ಯಾಲಕ್ಟಾಗೋಗ್ ಸಂಯುಕ್ತವು ಈ ನಿಟ್ಟಿನಲ್ಲಿ ತಾಯಂದಿರಿಗೆ ಪ್ರಯೋಜನಕಾರಿಯಾಗಿದೆ.

ಮಧುಮೇಹ : ಮೆಂತ್ಯವು ರಕ್ತದಲ್ಲಿನ ಕಾರ್ಬೋಹೈಡ್ರೇಟ್‌ಗಳನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಇನ್ಸುಲಿನ್ ಅನ್ನು ಉತ್ಪಾದಿಸುತ್ತದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ. ಮೆಂತ್ಯವು ಟೈಪ್ 2 ಮಧುಮೇಹಕ್ಕೆ ಪರಿಣಾಮಕಾರಿ ಪರಿಹಾರವಾಗಿದೆ.

ಚರ್ಮದ ಆರೈಕೆ: ಹುರಿದ ಮೆಂತ್ಯವನ್ನು ಸೇವಿಸುವುದರಿಂದ ಚರ್ಮದ ಸಮಸ್ಯೆಗಳನ್ನು ತಡೆಯಬಹುದು. ನೀವು ಮೊಡವೆಗಳನ್ನು ಹೋಗಲಾಡಿಸಬಹುದು ಮತ್ತು ಹೊಳೆಯುವ ಚರ್ಮವನ್ನು ಪಡೆಯಬಹುದು.

ಕೂದಲು: ಮೆಂತ್ಯ ಕಾಳು ಕೂಡ ಕೂದಲಿಗೆ ಒಳ್ಳೆಯದು. ಮೆಂತ್ಯ ಅಥವಾ ಮೆಂತ್ಯದಲ್ಲಿರುವ ವಿಟಮಿನ್‌ಗಳು ಮತ್ತು ಪ್ರೋಟೀನ್‌ಗಳು ಕೂದಲನ್ನು ಆರೋಗ್ಯಕರವಾಗಿ ಮತ್ತು ಉದ್ದವಾಗಿಸಲು ಸಹಾಯ ಮಾಡುತ್ತದೆ. ಇದಲ್ಲದೆ, ಮೆಂತ್ಯ ಬೀಜಗಳಲ್ಲಿ ಕಬ್ಬಿಣದ ಅಂಶವು ತಲೆಗೆ ರಕ್ತ ಪರಿಚಲನೆ ಸುಧಾರಿಸುತ್ತದೆ. ಇದರಿಂದ ಕೂದಲು ಒಳಗಿನಿಂದ ಸ್ಟ್ರಾಂಗ್ ಆಗುತ್ತದೆ ಮತ್ತು ತಲೆಹೊಟ್ಟು ನಿವಾರಣೆಯಾಗುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?