AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಏನಿದು ರೇಂಬೋ ಡಯೆಟ್?; ತೂಕ ಕಡಿಮೆ ಮಾಡಿಕೊಳ್ಳಲು ಇಲ್ಲಿದೆ ಹೊಸ ವಿಧಾನ

ವರ್ಣರಂಜಿತವಾಗಿರುವ ಹಣ್ಣುಗಳು ಮತ್ತು ತರಕಾರಿಗಳು ಕಡಿಮೆ ಕ್ಯಾಲೋರಿ ಮತ್ತು ಹೆಚ್ಚಿನ ಫೈಬರ್ ಅನ್ನು ಹೊಂದಿರುತ್ತವೆ. ಇದನ್ನು ಸೇವಿಸಿದಾಗ ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಲು ಸಹಾಯಕವಾಗುತ್ತದೆ.

ಏನಿದು ರೇಂಬೋ ಡಯೆಟ್?; ತೂಕ ಕಡಿಮೆ ಮಾಡಿಕೊಳ್ಳಲು ಇಲ್ಲಿದೆ ಹೊಸ ವಿಧಾನ
ಸಾಂದರ್ಭಿಕ ಚಿತ್ರImage Credit source: pinterest
Follow us
ಸುಷ್ಮಾ ಚಕ್ರೆ
|

Updated on: Sep 04, 2023 | 3:28 PM

ತೂಕ ಇಳಿಸಿಕೊಳ್ಳಬೇಕೆಂದು ನಾನಾ ರೀತಿಯ ಸರ್ಕಸ್​ಗಳನ್ನು ಮಾಡುವವರನ್ನು, ಏನೇನೋ ಹೊಸ ಬಗೆಯ ಡಯೆಟ್ ಮಾಡುವವರನ್ನು ನೋಡಿದ್ದೇವೆ. ಅದಕ್ಕೆ ಹೊಸ ಸೇರ್ಪಡೆ ಕಾಮನಬಿಲ್ಲಿನ ಡಯೆಟ್ (Rainbow Diet). ನಾನಾ ಬಣ್ಣದ ಹಣ್ಣು ಮತ್ತು ತರಕಾರಿಗಳನ್ನು ಹೊಂದಿರುವ ಈ ಡಯೆಟ್​ (Diet) ಇದೀಗ ಹೆಚ್ಚು ಜನಪ್ರಿಯವಾಗುತ್ತಿದೆ. ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು, ನಮ್ಮ ದೇಹಕ್ಕೆ ಅಗತ್ಯವಾದ ಪೌಷ್ಟಿಕಾಂಶಗಳನ್ನು ನೀಡಬೇಕಾಗುತ್ತದೆ. ನಮ್ಮನ್ನು ನಾವು ಪೋಷಿಸಿಕೊಳ್ಳಲು ನಾವು ಜೀವಸತ್ವಗಳು ಮತ್ತು ಪೋಷಕಾಂಶಗಳು ಸಮೃದ್ಧವಾಗಿರುವ ಆಹಾರವನ್ನು ಸೇವಿಸಬೇಕು.

ಹಾಗಾದರೆ, ರೇಂಬೋ ಡಯಟ್ (ಕಾಮನಬಿಲ್ಲು ಡಯೆಟ್) ಎಂದರೇನು ಮತ್ತು ಅದರ ಪ್ರಯೋಜನಗಳೇನು?

ಹಣ್ಣುಗಳು ಮತ್ತು ತರಕಾರಿಗಳು ವಿವಿಧ ಬಣ್ಣಗಳಲ್ಲಿರುತ್ತವೆ. ಪ್ರತಿಯೊಂದೂ ವಿಭಿನ್ನ ಪೌಷ್ಟಿಕಾಂಶವನ್ನು ಸೂಚಿಸುತ್ತದೆ. ವಿವಿಧ ಬಣ್ಣದ ತರಕಾರಿ,ಹಣ್ಣುಗಳನ್ನು ಸೇವಿಸುವ ಮೂಲಕ ನೀವು  ಪ್ರಮುಖ ಪೋಷಕಾಂಶಗಳನ್ನು ಪಡೆಯಬಹುದು. ವರ್ಣರಂಜಿತವಾಗಿರುವ ಹಣ್ಣುಗಳು ಮತ್ತು ತರಕಾರಿಗಳು ಕಡಿಮೆ ಕ್ಯಾಲೋರಿ ಮತ್ತು ಹೆಚ್ಚಿನ ಫೈಬರ್ ಅನ್ನು ಹೊಂದಿರುತ್ತವೆ. ಇದನ್ನು ಸೇವಿಸಿದಾಗ ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಲು ಸಹಾಯಕವಾಗುತ್ತದೆ. ಈ ತರಕಾರಿ, ಹಣ್ಣುಗಳನ್ನು ತಿಂದರೆ ಹಸಿವು ಹೆಚ್ಚಾಗುವುದಿಲ್ಲ.

ಇದನ್ನೂ ಓದಿ: Viral Video: ಬ್ಯಾಲೆನ್ಸಡ್​ ಡಯೆಟ್ ಎಂದರೆ ಇದೇ ನೋಡಿ! ಇನ್ನು ನಿಶ್ಚಿಂತೆಯಿಂದಿದ್ದುಬಿಡಿ

ಬಣ್ಣಬಣ್ಣದ ತರಕಾರಿ, ಹಣ್ಣುಗಳಲ್ಲಿ ಫೈಬರ್ ಅಂಶ ಅಧಿಕವಾಗಿರುವುದರಿಂದ ಈ ಆಹಾರಗಳು ಆರೋಗ್ಯಕರ ಕರುಳಿನ ಮೈಕ್ರೋಬಯೋಟಾವನ್ನು ಉತ್ತೇಜಿಸುತ್ತದೆ. ಇದು ಜೀರ್ಣಕ್ರಿಯೆಯನ್ನು ಚುರುಕುಗೊಳಿಸುತ್ತದೆ. ಪಾಲಕ್, ಕ್ಯಾರೆಟ್ ಮತ್ತು ಸ್ಟ್ರಾಬೆರಿಗಳನ್ನು ಒಳಗೊಂಡಿರುವ ಕಾಮನಬಿಲ್ಲಿನ ಬಣ್ಣದ ಆಹಾರವನ್ನು ಸೇವಿಸುವುದರಿಂದ ನಮ್ಮ ಆರೋಗ್ಯವು ಸುಧಾರಿಸುತ್ತದೆ.

ಪೊಟ್ಯಾಸಿಯಮ್, ವಿಟಮಿನ್ ಸಿ, ಮತ್ತು ಫ್ಲೇವನಾಯ್ಡ್​ಗಳು ಹೃದಯರಕ್ತನಾಳದ ಆರೋಗ್ಯವನ್ನು ಹೆಚ್ಚಿಸುತ್ತದೆ. ಆದ್ದರಿಂದ, ವರ್ಣರಂಜಿತ ಆಹಾರವನ್ನು ಸೇವಿಸುವುದರಿಂದ ನಿಮ್ಮ ಹೃದಯದ ಕಾಯಿಲೆಯ ಅಪಾಯವನ್ನು ಕಡಿಮೆ ಮಾಡಬಹುದು. ಹಲವಾರು ವರ್ಣರಂಜಿತ ಹಣ್ಣುಗಳು ಮತ್ತು ತರಕಾರಿಗಳು ಕಡಿಮೆ ಕ್ಯಾಲೋರಿಯನ್ನು ಹೊಂದಿರುತ್ತವೆ. ಆದರೆ, ಇವುಗಳಲ್ಲಿ ನೀರಿನ ಅಂಶ ಮತ್ತು ಫೈಬರ್ ಹೇರಳವಾಗಿರುತ್ತದೆ. ಇದರಿಂದ ಹೊಟ್ಟೆ ಬೇಗ ತುಂಬುತ್ತದೆ, ದೇಹದಲ್ಲಿ ಕೊಬ್ಬು ಕೂಡ ಸಂಗ್ರಹವಾಗುವುದಿಲ್ಲ.

ಕಾಮನಬಿಲ್ಲಿನ ಡಯಟ್‌ನ ಆಹಾರಗಳು ಯಾವುವು?: ಕೆಂಪು: ಕೆಂಪು ಬಣ್ಣದ ಟೊಮ್ಯಾಟೊಗಳು, ಸ್ಟ್ರಾಬೆರಿಗಳು ಮತ್ತು ಕಲ್ಲಂಗಡಿಗಳಂತಹ ಆಹಾರವನ್ನು ತಿನ್ನಲು ಮರೆಯದಿರಿ. ಇದು ಮೂತ್ರ ವ್ಯವಸ್ಥೆ ಮತ್ತು ಹೃದಯದ ಆರೋಗ್ಯವನ್ನು ಕಾಪಾಡಲು ಸಹಕಾರಿಯಾಗಿದೆ.

ಇದನ್ನೂ ಓದಿ: ತೂಕ ಇಳಿಸಬೇಕಾ?; ಅತಿಯಾಗಿ ತಿನ್ನುವುದನ್ನು ತಪ್ಪಿಸಲು ಇಲ್ಲಿವೆ 7 ಉಪಾಯ

ಕಿತ್ತಳೆ: ನಿಮ್ಮ ಆಹಾರದಲ್ಲಿ ಕ್ಯಾರೆಟ್, ಕಿತ್ತಳೆ, ಗೆಣಸು ಮತ್ತು ಏಪ್ರಿಕಾಟ್​ಗಳ ಪ್ರಮಾಣವನ್ನು ಹೆಚ್ಚಿಸಬಹುದು. ಇವು ದೇಹದ ಉರಿಯೂತವನ್ನು ಕಡಿಮೆ ಮಾಡುತ್ತವೆ.

ಹಳದಿ: ಈ ಆಹಾರಗಳು ದೃಷ್ಟಿ ಸುಧಾರಣೆ ಮತ್ತು ಕ್ಯಾನ್ಸರ್ ತಡೆಗಟ್ಟುವಿಕೆಗೆ ಸಹಾಯ ಮಾಡುತ್ತದೆ. ನಿಂಬೆಹಣ್ಣು, ಅನಾನಸ್, ಬಾಳೆಹಣ್ಣು, ಹಳದಿ ಬೆಲ್ ಪೆಪರ್ ಮತ್ತು ಇತರ ಹಳದಿ ಹಣ್ಣುಗಳು ಮತ್ತು ತರಕಾರಿಗಳನ್ನು ಹೆಚ್ಚು ಸೇವಿಸಿ.

ಹಸಿರು: ಪಾಲಕ್, ಕೋಸುಗಡ್ಡೆ, ಅವಕಾಡೊಗಳು, ಕಿವಿ ಮತ್ತು ಇತರ ಹಸಿರು ಎಲೆಗಳ ಆಹಾರಗಳಿಂದ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನವಿದೆ. ಅದರಲ್ಲೂ ಗರ್ಭಿಣಿಯರಿಗೆ ಮತ್ತು ಬಾಣಂತಿಯರಿಗೆ ಈ ಹಸಿರು ತರಕಾರಿ ಬಹಳ ಮುಖ್ಯ.

ನೀಲಿ ಮತ್ತು ನೇರಳೆ: ಈ ಎರಡು ಬಣ್ಣಗಳ ಹಣ್ಣುಗಳು ಮತ್ತು ತರಕಾರಿಗಳಲ್ಲಿ ಉತ್ಕರ್ಷಣ ನಿರೋಧಕಗಳಿವೆ. ಇದು ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ. ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ನೀವು ಬೆರಿ ಹಣ್ಣುಗಳು, ನೇರಳೆ ಹಣ್ಣು, ಕಪ್ಪು ದ್ರಾಕ್ಷಿಗಳು, ಬಿಳಿ ಬದನೆ ಮತ್ತು ನೇರಳೆ ಬಣ್ಣದ ಎಲೆಕೋಸುಗಳನ್ನು ಆಹಾರದಲ್ಲಿ ಸೇರಿಸಿಕೊಳ್ಳಬಹುದು.

ಬಿಳಿ: ನಿಮ್ಮ ಆಹಾರದಲ್ಲಿ ಬಿಳಿ ಆಹಾರಗಳನ್ನು ಸೇರಿಸುವುದರಿಂದ ನಿಮ್ಮ ಮೂಳೆಗಳು ಮತ್ತು ಹಲ್ಲುಗಳ ಆರೋಗ್ಯ ಚೆನ್ನಾಗಿರುತ್ತದೆ. ಇದು ಕೊಲೆಸ್ಟ್ರಾಲ್ ಮಟ್ಟವನ್ನು ಸ್ಥಿರವಾಗಿರಿಸುತ್ತದೆ. ಹೀಗಾಗಿ, ಆಹಾರದಲ್ಲಿ ಹೂಕೋಸು, ಮೂಲಂಗಿ, ಈರುಳ್ಳಿ, ಬೆಳ್ಳುಳ್ಳಿ ಮತ್ತು ಅಣಬೆಗಳನ್ನು ಸೇರಿಸಿಕೊಳ್ಳಿ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ