AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೇಹಕ್ಕೆ ಬೇಕಾದ ಪ್ರೋಟೀನ್​ ಅಂಶಗಳನ್ನು ಪೂರೈಸಲು ಡಯೆಟ್​ ಪಟ್ಟಿಯಲ್ಲಿ ಈ ಆಹಾರಗಳಿರಲಿ

ದೇಹದ ಆರೋಗ್ಯ ಉತ್ತಮವಾಗಿರಲು ಪ್ರೊಟೀನ್ ​ ಅತ್ಯಗತ್ಯವಾಗಿದೆ. ಮೂಳೆಗಳನ್ನು ಬಲಪಡಿಸಲು, ಸ್ನಾಯುಗಳನ್ನು ಆರೋಗ್ಯವಾಗಿಡಲು ಪ್ರೊಟೀನ್​ ಯುಕ್ತ​ ಆಹಾರಗಳನ್ನು ಸೇವನೆಯಾಗಬೇಕು.

ದೇಹಕ್ಕೆ ಬೇಕಾದ ಪ್ರೋಟೀನ್​ ಅಂಶಗಳನ್ನು ಪೂರೈಸಲು ಡಯೆಟ್​ ಪಟ್ಟಿಯಲ್ಲಿ ಈ ಆಹಾರಗಳಿರಲಿ
ಸಾಂಕೇತಿಕ ಚಿತ್ರ
TV9 Web
| Edited By: |

Updated on:Feb 09, 2022 | 11:36 AM

Share

ದೇಹದ ಆರೋಗ್ಯ ಉತ್ತಮವಾಗಿರಲು ಪ್ರೊಟೀನ್ (Protein)​ ಅತ್ಯಗತ್ಯವಾಗಿದೆ. ಮೂಳೆಗಳನ್ನು ಬಲಪಡಿಸಲು, ಸ್ನಾಯುಗಳನ್ನು (Muscles) ಆರೋಗ್ಯವಾಗಿಡಲು ಪ್ರೊಟೀನ್​ ಯುಕ್ತ​ ಆಹಾರಗಳನ್ನು ಸೇವನೆಯಾಗಬೇಕು. ಯೋಗ, ವ್ಯಯಾಮಗಳ ಜೊತೆಗೆ ಸೇವಿಸುವ ಆಹಾರ, ಅಹಾರ ಪದ್ಧತಿ, ಜೀವನಶೈಲಿ ಎಲ್ಲವೂ ಮುಖ್ಯವಾಗಿರುತ್ತದೆ. ಹೀಗಾಗಿ ದೇಹವನ್ನು ಸುಸ್ಥಿತಿಯಲ್ಲಿಡಲು ಪ್ರೊಟೀನ್​ಗಳ ಪೂರೈಕೆ ಪ್ರಧಾನ ಅಂಶವಾಗಬೇಕು. ಆಗ ಮಾತ್ರ ದೇಹದ ಸರ್ವಾಂಗೀಣ ಬೆಳವಣಿಗೆಯ ಜೊತೆಗೆ ಆರೋಗ್ಯಯುತ ದಿನ ನಿಮ್ಮದಾಗುತ್ತದೆ. ಹಾಗಾದರೆ ಪ್ರೊಟೀನ್​​ ಯುಕ್ತ ಆಹಾರ (Food) ಸೇವಿಸಬೇಕು ಎಂದರೆ ಯಾವೆಲ್ಲಾ ಆಹಾರ ಸೇವಿಸಬೇಕು ಎನ್ನುತ್ತೀರಾ? ಇಲ್ಲಿದೆ ನೋಡಿ ಕಂಪ್ಲೀಟ್​ ಡೀಟೆಲ್ಸ್​​

ಮೊಸರು: ಬೆಳಗ್ಗಿನ ಉಪಹಾರದಿಂದ ಹಿಡಿದು ರಾತ್ರಿಯ ಊಟದ ತನಕ ಮೊಸರಿನ ಸೇವನೆ ಇರಲಿ. ಮೊಸರು ದೇಹಕ್ಕೆ ಪ್ರೊಟೀನ್​ ಅನ್ನು ಮಾತ್ರ ನೀಡುವುದಲ್ಲಿದೆ ದೇಹದಲ್ಲಿನ ಕೊಬ್ಬನ್ನೂ ಕಡಿಮೆ ಮಾಡುತ್ತದೆ.  ಅದರಲ್ಲೂ ಗ್ರೀಕ್​ ಮೊಸರು  ಹೆಚ್ಚು ಉಪಯುಕ್ತವಾಗಿದೆ ಎನ್ನಲಾಗಿದೆ. ಗ್ರೀಕ್​ ಮೊಸರು ಎಂದರೆ ಅದು ನೈಸರ್ಗಿಕ ಮೊಸರಾಗಿದೆ.

ಮಾಂಸ: ಮಾಂಸ ದೇಹಕ್ಕೆ ಸಾಕಷ್ಟು ಪ್ರಮಾಣದ ಪ್ರೊಟೀನ್​ ಅನ್ನು ಪೂರೈಸುತ್ತದೆ. ಹಂದಿ ಮಾಂಸ, ಕುರಿ ಮಾಂಸಗಳಲ್ಲಿ ಹೆಚ್ಚು ಪ್ರೊಟೀನ್ ಅಂಶಗಳು ಇರುತ್ತವೆ ಎಂದು ಹೇಳಲಾಗುತ್ತದೆ. ಆದರೆ ಮಾಂಸವನ್ನು ಸೇವಿಸುವ ಮುನ್ನ ಎಚ್ಚರಿಕೆ, ಇದು ನಿಮ್ಮ ದೇಹಕ್ಕೆ ಅನಗತ್ಯ ಕೊಬ್ಬನ್ನು ನೀಡಿ ತೂಕವನ್ನು ಹೆಚ್ಚಿಸಬಹುದು. ಹೀಗಾಗಿ ತಿನ್ನುವ ಮುನ್ನ ಎಚ್ಚರಿಕೆ ವಹಿಸಿ.

ಆರೋಗ್ಯಕರ ನೂಡಲ್ಸ್​: ನೂಡಲ್ಸ್​ ಕೂಡ ನಿಮ್ಮ ದೇಹಕ್ಕೆ ಪ್ರೊಟೀನ್​ ಅನ್ನು ನೀಡುತ್ತದೆ. ಗೋದಿಯಿಂದ ತಯಾರಿಸಿದ ನೂಡಲ್ಸ್​ಅಥವಾ ಸೋಬಾ ನೂಡಲ್ಸ್​ಗಳನ್ನು ಸೇವಿಸುವುದರಿಂದ ದೇಹಕ್ಕೆ ಬೇಕಾದ ಪ್ರೊಟೀನ್​ ಅನ್ನು ಪೂರೈಸುತ್ತದೆ.

ಚಾಕೋಲೆಟ್​: ಚಾಕೋಲೆಟ್​ಗಳು ಒತ್ತಡ, ಆಯಾಸವನ್ನೂ ನಿವಾರಿಸಿ ದೇಹಕ್ಕೆ ಬೇಕಾದ ಪ್ರೊಟೀನ್​ ಅಂಶಗಳನ್ನು ನೀಡುತ್ತದೆ. ಕ್ಯಾರಮೆಲ್​, ನಟ್ಸ್​ಗಳಿರುವ ಚಾಕಲೇಟ್​ಗಳು ಹೆಚ್ಚು ಆರೋಗ್ಯದಾಯಕವಾಗಿರುತ್ತದೆ ಎನ್ನುತ್ತಾರೆ ತಜ್ಞರು. ಹೀಗಾಗಿ ಪ್ರತಿದಿನ ಕೆಲವು ಗ್ರಾಂಗಳಷ್ಟಾದರೂ ಡಾರ್ಕ್​ ಅಥವಾ ವೈಟ್​ ಚಾಕಲೋಲೆಟ್​​ ಸೇವನೆಯ ಅಭ್ಯಾಸ ಉತ್ತಮವಾಗಿದೆ.

ಹುರಿದ ಬೀಜಗಳು: ಹಸಿವೆಯಾದಾಗ ಕುರುಕಲು ತಿಂಡಿಗಳನ್ನು ಕಂಡಾಗ ಬಾಯಲ್ಲಿ ನೀರೂರುವುದು ಸಹಜ. ಹಾಗೆಂದು ಪ್ಯಾಕೆಟ್ನಲ್ಲಿರುವ ಚಿಪ್ಸ್​ ಅನ್ನು ಬಿಡುವಿಲ್ಲದೆ ತಿನ್ನುತ್ತಿದ್ದರೆ ಆರೋಗ್ಯ ಹದಗೆಡವುದರಲ್ಲಿ ಅನುಮಾನವಿಲ್ಲ. ಹೀಗಾಗಿ ಅಂತಹ ತಿನ್ನಲೇ ಬೇಕೆಂದ ಸಂದರ್ಭಗಳಲ್ಲಿ ಶೇಂಗಾ ಅಥವಾ ಇನ್ನಿತರ ಆರೋಗ್ಯಕರ ಬೀಜಗಳನ್ನು ಹುರಿದಿಟ್ಟುಕೊಳ್ಳಿ. ಬಾದಾಮಿ, ಶೇಂಗಾ, ಪಿಸ್ತಾಗಳನ್ನು ತಿನ್ನಿರಿ. ಇವು ನಿಮ್ಮ ದೇಹಕ್ಕೆ ಸಾಕಷ್ಟು ಪ್ರಮಾಣದ ಪ್ರೊಟೀನ್​ಅನ್ನು ನೀಡಿ ದೇಹದ ಸ್ವಾಸ್ಥ್ಯವನ್ನು ಕಾಪಾಡುತ್ತದೆ.

ಇದನ್ನೂ ಓದಿ:

Paracetamol: ದಿನವೂ ಪ್ಯಾರಾಸಿಟಮಾಲ್ ತಿನ್ನುವುದರಿಂದ ಹೃದಯಾಘಾತ, ಬಿಪಿ ಅಪಾಯ ಹೆಚ್ಚು!

Published On - 11:35 am, Wed, 9 February 22

Follow Us
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಬಿಎಸ್​ವೈ ಅಭಿಮಾನೋತ್ಸವದಲ್ಲಿ ಮಾಜಿ ಸಿಎಂಗೆ ಅದೃಷ್ಟ ತಂದ ಕಾರಿನ ಪ್ರದರ್ಶನ
ಬಿಎಸ್​ವೈ ಅಭಿಮಾನೋತ್ಸವದಲ್ಲಿ ಮಾಜಿ ಸಿಎಂಗೆ ಅದೃಷ್ಟ ತಂದ ಕಾರಿನ ಪ್ರದರ್ಶನ