Tampon Safety Tips: ಮುಟ್ಟಿನ ದಿನಗಳಲ್ಲಿ ಟಾಂಪೂನ್ಗಳ ಬಳಕೆಯ ಮುನ್ನ ಈ ಅಂಶಗಳನ್ನು ಗಮನಿಸಿ
ಟಾಂಪೂನ್ಗಳನ್ನು ಬಳಸುವ ಮುನ್ನ ಕೈಗಳನ್ನು ಸ್ವಚ್ಛವಾಗಿ ತೊಳೆದುಕೊಳ್ಳಿ. ಕೈಗಳು ಸ್ವಚ್ಛವಾಗಿದ್ದರೆ ಟಾಂಪೂನ್ಗಳನ್ನು ಬಳಸಿ. ಒಂದು ವೇಳೆ ಟಾಂಪೂನ್ಗಳು ನೆಲಕ್ಕೆ ಬಿದ್ದರೆ ಅದನ್ನು ಬಳಸಬೇಡಿ.
ಮಹಿಳೆಯರ ಮಾಸಿಕ ದಿನಗಳ (Periods) ಸುರಕ್ಷತೆಗೆ ಈಗಾಗಲೇ ಸಾಕಷ್ಟು ಹೊಸ ರೀತಿಯ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಲಾಗಿದೆ. ನ್ಯಾಪ್ಕಿನ್ಗಳ ಅಭಿವೃದ್ಧಿಯ ಬಳಿಕ ಮುಟ್ಟಿನ ಕಪ್ಗಳನ್ನು ಪರಿಚಯಿಸಲಾಗಿತ್ತು. ಇದೀಗ ಟಾಂಪೂನ್ಗಳು (Tampon)ಮಹಿಳೆಯರ ಮಾಸಿಕ ದಿನಗಳಿಗೆ ಸಂಗಾತಿಯಾಗುತ್ತಿದೆ. ಮುಟ್ಟಿನ ದಿನಗಳಲ್ಲಿ ಮಹಿಳೆಯರಿಗೆ ಸ್ವಚ್ಛತೆ ಮೊದಲ ಆದ್ಯತೆಯಾಗಿರುತ್ತದೆ. ಇಲ್ಲವಾದರೆ ಹಲವು ರೀತಿಯ ಸೋಂಕುಗಳು ಹರಡುವ ಸಾಧ್ಯತೆ ಇರುತ್ತದೆ. ಹೀಗಾಗಿ ನ್ಯಾಪ್ಕಿನ್, ಮೆನ್ಸ್ಟುವಲ್ ಕಪ್ (Menstruval Cup) ಅಥವಾ ಟಾಂಫೂನ್ಗಳಾಗಿರಲಿ ಯಾವುದನ್ನೇ ಬಳಸುವಾಗಲೂ ಸುರಕ್ಷತೆಯಿಂದ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದು ಅತ್ಯಗತ್ಯ. ನೀವು ಮೊದಲ ಬಾರಿಗೆ ಟಾಂಪೂನ್ಗಳನ್ನು ಬಳಸುತ್ತಿದ್ದರೆ ಹೆಚ್ಚು ಮುಂಜಾಗ್ರತ ಕ್ರಮ ತೆಗೆದುಕೊಳ್ಳುವುದು ಮುಖ್ಯವಾಗಿದೆ. ಟಾಂಪೂನ್ಗಳನ್ನು ಮೆನ್ಸ್ಟುವಲ್ ಕಪ್ಗಳ ರೀತಿಯಲ್ಲಿಯೇ ಬಳಸಲಾಗುತ್ತದೆ. ಆದರೆ ಮೆನ್ಸ್ಟುವಲ್ ಕಪ್ಗಳನ್ನು ಮರುಬಳಕೆ ಮಾಡಬಹುದು, ಟಾಂಪೂನ್ಗಳನ್ನು ಒಂದು ಬಾರಿ ಮಾತ್ರ ಬಳಸಬಹುದಾಗಿದೆ. ಹೀಗಾಗಿ ಹೆಚ್ಚು ಜಾಗೃತರಾಗಿರುವುದು ಉತ್ತಮ. ಹೀಗಾಗಿ ಈ ಮುಂಜಾಗೃತ ಕ್ರಮಗಳನ್ನು ಅನುಸರಿಸಿ ಟಾಂಪೂನ್ಗಳನ್ನು ಬಳಸಿ
ಬಳಸುವ ಮುನ್ನ ಕೈಗಳನ್ನು ಸ್ವಚ್ಛವಾಗಿರಿಸಿಕೊಳ್ಳಿ: ಟಾಂಪೂನ್ಗಳನ್ನು ಬಳಸುವ ಮುನ್ನ ಕೈಗಳನ್ನು ಸ್ವಚ್ಛವಾಗಿ ತೊಳೆದುಕೊಳ್ಳಿ. ಕೈಗಳು ಸ್ವಚ್ಛವಾಗಿದ್ದರೆ ಟಾಂಪೂನ್ಗಳನ್ನು ಬಳಸಿ . ಒಂದು ವೇಳೆ ಟಾಂಪೂನ್ಗಳು ನೆಲಕ್ಕೆ ಬಿದ್ದರೆ, ಅದನ್ನು ಬಳಸಬೇಡಿ, ಬದಲಾಗಿ ಎಸೆದುಬಿಡಿ. ಒಂದು ಸಣ್ಣ ಮಲೀನತೆಯೂ ದೊಡ್ಡ ಅಪಾಯವನ್ನು ತಂದೊಡ್ಡಬಹುದು.
4-6 ಗಂಟೆಗಳಿಗೊಮ್ಮೆ ಬದಲಾಯಿಸಿ: ಟಾಂಪೂನ್ಗಳನ್ನು ಹೆಚ್ಚು ಕಾಲ ಬಳಸಬೇಡಿ. ಕನಿಷ್ಠ 4 ಗಂಟೆಗಳಿಗೊಮ್ಮೆಯಾದರೂ ಬದಲಾಯಿಸಿ. 8 ಗಂಟೆಗಳಿಗಿಂತ ಹೆಚ್ಚು ಕಾಲ ಯೋನಿಯಲ್ಲಿ ಟಾಂಪೂನ್ಗಳನ್ನು ಇಟ್ಟುಕೊಳ್ಳುವುದರಿಂದ ಅತಿಯಾದ ನೋವು ಕಾಣಿಸಿಕೊಳ್ಳಬಹುದು. ಜತೆಗೆ ಸೋಂಕು ಹರಡುವ ಸಾಧ್ಯತರ ಇರುತ್ತದೆ. ಹೀಗಾಗಿ 4 ರಿಂದ 6 ಗಂಟೆಗಳಿಗೊಮ್ಮೆ ಬದಲಾಯಿಸಿ.
ಮುಟ್ಟಿನ ದಿನಗಳಲ್ಲಿ ಮಾತ್ರ ಬಳಸಿ: ಟಾಂಪೂನ್ಗಳು ಚರ್ಮ ಮಾಯ್ಚಿರೈಸ್ ಆದಾಗ ಮಾತ್ರ ಸರಿಯಾಗಿ ಬಳಕೆಯಾಗುತ್ತದೆ. ಹೀಗಾಗಿ ರಕ್ತಸ್ರವಾವವಾಗುವ ವೇಳೆ ಮಾತ್ರ ಬಳಸಿ. ಇಲ್ಲವಾದರೆ ನೋವು ಕಾಣಿಸಿಕೊಳ್ಳಬಹುದು. ಹೀಗಾಗಿ ಮಾಸಿಕ ದಿನಗಳಿಗಿಂತ ಮೊದಲು ಅಥವಾ ನಂತರ ಬಳಕೆ ಬೇಡ.
ಸರಿಯಾಗಿ ಅಳವಡಿಸಿಕೊಳ್ಳಿ: ಟಾಂಪೂನ್ ಯೋನಿಯೊಳಗೆ ಸರಿಯಾದ ರೀತಿಯಲ್ಲಿ ಅಳವಡಿಕೆಯಾದರೆ ನಿಮಗೆ ಯಾವುದೇ ರೀತಿಯ ಅಹಿತಕರ ಅನುಭವವಾಗುವುದಿಲ್ಲ. ಟಾಂಪೂನ್ ಸರಿಯಾಗಿ ಕೂರದಿದ್ದರೆ ನೀವು ನಡೆಯುವಾಗ, ಕುಳಿತುಕೊಳ್ಳುವಾಗ ತೀವ್ರವಾದ ನೋವು ಕಾಣಿಸಿಕೊಳ್ಳುತ್ತದೆ. ಒಂದು ವೇಳೆ ಸರಿಯಾಗಿ ಅಳವಡಿಕೆಯಾಗದಿದ್ದರೆ ಅದನ್ನು ತೆಗೆದು ಬೇರೆಯದನ್ನು ಹಾಕಿಕೊಳ್ಳಿ.
ಕಡಿಮೆ ಹೀರಿಕೊಳ್ಳುವ ಟಾಂಪೂನ್ ಆಯ್ಕೆ ಮಾಡಿಕೊಳ್ಳಿ: ದೀರ್ಘಕಾಲ ಟಾಂಪೂನ್ಗಳನ್ನು ಹಾಕಿಕೊಳ್ಳುವುದರಿಂದ ಸಮಸ್ಯೆ ಉಂಟಾಗಬಹುದು. ಅಲ್ಲದೆ ಯೋನಿಯಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಹೀಗಾಗಿ ಆಯ್ಕೆ ಮಾಡಿಕೊಳ್ಳುವಾಗಲೇ ಕಡಿಮೆ ಹೀರಿಕೊಳ್ಳುವ ಸಾಮರ್ಥ್ಯವನ್ನು ಹೊಂದಿರುವ ಟಾಂಪೂನ್ಗಳನ್ನು ಖರೀದಿಸಿ. ಇದರಿಂದ ಸರಿಯಾದ ಸಮಯಕ್ಕೆ ಅದನ್ನು ಬದಲಾಯಿಸಬಹುದು.
(ಇಲ್ಲಿರುವ ಸಲಹೆಗಳು ಟಿವಿ9 ಡಿಜಿಟಲ್ನ ಅಭಿಪ್ರಾಯವಾಗಿರುವುದಿಲ್ಲ. ಬಳಕೆಯ ಮುನ್ನ ತಜ್ಞರ ಸಲಹೆ ಪಡೆದುಕೊಳ್ಳಿ)
ಇದನ್ನೂ ಓದಿ:
ದೇಹಕ್ಕೆ ಬೇಕಾದ ಪ್ರೋಟೀನ್ ಅಂಶಗಳನ್ನು ಪೂರೈಸಲು ಡಯೆಟ್ ಪಟ್ಟಿಯಲ್ಲಿ ಈ ಆಹಾರಗಳಿರಲಿ
Published On - 1:05 pm, Wed, 9 February 22