AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Paracetamol: ದಿನವೂ ಪ್ಯಾರಾಸಿಟಮಾಲ್ ತಿನ್ನುವುದರಿಂದ ಹೃದಯಾಘಾತ, ಬಿಪಿ ಅಪಾಯ ಹೆಚ್ಚು!

Health Tips: ತಲೆನೋವು ಅಥವಾ ಜ್ವರಕ್ಕೆ ಪ್ಯಾರಾಸಿಟಮಾಲ್​ನ ಅಲ್ಪಾವಧಿಯ ಬಳಕೆಯಿಂದ ಸಮಸ್ಯೆಯಿಲ್ಲ. ಆದರೆ, ದೀರ್ಘಕಾಲದವರೆಗೆ ನಿಯಮಿತವಾಗಿ ಪ್ಯಾರಾಸಿಟಮಾಲ್ ಸೇವಿಸುವುದು ಆರೋಗ್ಯಕ್ಕೆ ಬಹಳ ಅಪಾಯಕಾರಿ

Paracetamol: ದಿನವೂ ಪ್ಯಾರಾಸಿಟಮಾಲ್ ತಿನ್ನುವುದರಿಂದ ಹೃದಯಾಘಾತ, ಬಿಪಿ ಅಪಾಯ ಹೆಚ್ಚು!
ಮಾತ್ರೆ
TV9 Web
| Edited By: |

Updated on: Feb 09, 2022 | 8:01 AM

Share

ಈಗೀಗ ಚಳಿ, ಜ್ವರ, ಕೆಮ್ಮು, ಮೈ-ಕೈ ನೋವು ಏನೇ ಬಂದರೂ ಮಾತ್ರೆಗಳನ್ನು ತಿನ್ನುವ ಅಭ್ಯಾಸ ಶುರುವಾಗಿದೆ. ಆದರೆ, ನಿಯಮಿತವಾಗಿ ಮಾತ್ರೆಗಳನ್ನು ತಿನ್ನುವುದರಿಂದ ಆರೋಗ್ಯದ ಮೇಲೆ ಬಹಳ ಕೆಟ್ಟ ಪರಿಣಾಮ ಬೀರುತ್ತದೆ. ಇತ್ತೀಚೆಗೆ ಸಂಶೋಧಕರು ನಡೆಸಿದ ಅಧ್ಯಯನದ ಪ್ರಕಾರ, ದಿನವೂ ಪ್ಯಾರಾಸಿಟಮಲ್​ (Paracetamol) ಮಾತ್ರೆಯನ್ನು ಸೇವಿಸುವುದರಿಂದ ರಕ್ತದೊತ್ತಡ ಹೆಚ್ಚಾಗುತ್ತದೆ, ಹೃದಯಾಘಾತ (Heart Attack) ಮತ್ತು ಪಾರ್ಶ್ವವಾಯು ಅಪಾಯ ಕೂಡ ಹೆಚ್ಚಾಗುತ್ತದೆ. ಮುಖ್ಯವಾಗಿ ಹೃದಯಾಘಾತ ಮತ್ತು ಪಾರ್ಶ್ವವಾಯು ಅಪಾಯದಲ್ಲಿರುವ ಜನರು ಪ್ಯಾರಾಸಿಟಮಲ್ ಮಾತ್ರೆಯನ್ನು ತಿನ್ನುವ ಮೊದಲು ಎಚ್ಚರಿಕೆಯಿಂದಿರಿ ಎಂದು ಸಂಶೋಧಕರು ಹೇಳಿದ್ದಾರೆ.

ಎಡಿನ್‌ಬರ್ಗ್ ವಿಶ್ವವಿದ್ಯಾನಿಲಯದ ತಜ್ಞರು ಅಧಿಕ ರಕ್ತದೊತ್ತಡದ ಸಮಸ್ಯೆಯನ್ನು ಹೊಂದಿರುವ 110 ರೋಗಿಗಳ ಮೇಲೆ ಅಧ್ಯಯನವನ್ನು ನಡೆಸಿದ್ದಾರೆ. “ಒಂದು ಗ್ರಾಂ ಪ್ಯಾರಾಸಿಟಮಲ್ ಮಾತ್ರೆಯನ್ನು ದಿನಕ್ಕೆ ನಾಲ್ಕು ಬಾರಿ ಅಥವಾ ಎರಡು ವಾರಗಳ ಕಾಲ ಪ್ಲಸೀಬೊವನ್ನು ಸೇವಿಸುವಂತೆ ಅವರಿಗೆ ಸೂಚಿಸಲಾಯಿತು” ಎಂದು ದಿ ಟೆಲಿಗ್ರಾಫ್ ಯುಕೆ ವರದಿ ಮಾಡಿದೆ.

ಇದಾದ 4 ದಿನಗಳಲ್ಲಿ ಪ್ಯಾರಾಸಿಟಮಲ್‌ ಸೇವಿಸಿದ ಗುಂಪಿನಲ್ಲಿದ್ದ ಜನರಲ್ಲಿ ರಕ್ತದೊತ್ತಡವು ಗಮನಾರ್ಹವಾಗಿ ಹೆಚ್ಚಾಯಿತು. ಹೃದಯಾಘಾತ ಅಥವಾ ಪಾರ್ಶ್ವವಾಯು ಸಾಧ್ಯತೆ ಕೂಡ ಶೇ.20ರಷ್ಟು ಹೆಚ್ಚಾಯಿತು. ಇಂಗ್ಲೆಂಡ್​​ನಲ್ಲಿ ಸುಮಾರು 10 ಜನರಲ್ಲಿ ಒಬ್ಬರಿಗೆ ದೀರ್ಘಕಾಲದ ನೋವಿಗೆ ಪ್ರತಿದಿನ ಪ್ಯಾರಸಿಟಮಾಲ್ ಅನ್ನು ಸೂಚಿಸಲಾಗುತ್ತದೆ. ಇಂಗ್ಲೆಂಡ್​ನಲ್ಲಿ ಮೂರು ವಯಸ್ಕರಲ್ಲಿ ಒಬ್ಬರು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದಾರೆ.

ಎಡಿನ್‌ಬರ್ಗ್ ವಿಶ್ವವಿದ್ಯಾನಿಲಯದ ಚಿಕಿತ್ಸಕ ಮತ್ತು ಕ್ಲಿನಿಕಲ್ ಫಾರ್ಮಕಾಲಜಿಯ ಅಧ್ಯಕ್ಷ ಪ್ರೊಫೆಸರ್ ಡೇವಿಡ್ ವೆಬ್ ಪ್ರಕಾರ, “ರಕ್ತದೊತ್ತಡವನ್ನು ಹೆಚ್ಚಿಸಲು ತಿಳಿದಿರುವ ಐಬುಪ್ರೊಫೇನ್‌ನಂತಹ ಔಷಧಿಗಳನ್ನು ಬಳಸುವುದನ್ನು ನಿಲ್ಲಿಸಲು ರೋಗಿಗಳಿಗೆ ಸಲಹೆ ನೀಡುವುದಾದರೆ ಮೊದಲು ಅವರಿಗೆ ಪ್ಯಾರಸಿಟಮಾಲ್ ಮಾತ್ರ ಸೇವಿಸುವುದನ್ನು ನಿಲ್ಲಿಸಲು ಹೇಳಬೇಕು. ಹೃದಯಾಘಾತ ಅಥವಾ ಪಾರ್ಶ್ವವಾಯು ಸಮಸ್ಯೆ ಇರುವ ರೋಗಿಗಳಲ್ಲಿ ಪ್ಯಾರಸಿಟಮಾಲ್ ಬಳಸುವುದನ್ನು ನಿಲ್ಲಿಸುವಂತೆ ವೈದ್ಯರು ಸೂಚಿಸಬೇಕು.

ದೀರ್ಘಕಾಲದ ನೋವಿಗೆ ಪ್ಯಾರಸಿಟಮಾಲ್ ಬಳಸುವವರು ತಮ್ಮ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಲು ಪ್ರತ್ಯೇಕ ಔಷಧಗಳನ್ನು ಬಳಸಬೇಕು ಎಂದು ಸಂಶೋಧಕರು ಹೇಳಿದ್ದಾರೆ. ಅಧಿಕ ರಕ್ತದೊತ್ತಡ ತುಂಬಾ ಸಾಮಾನ್ಯವಾಗಿದೆ. ವಯಸ್ಕರಲ್ಲಿ ಮೂವರಲ್ಲಿ ಒಬ್ಬರು ಅಧಿಕ ರಕ್ತದೊತ್ತಡವನ್ನು ಹೊಂದಿರುತ್ತಾರೆ ಮತ್ತು ಅದು ವಯಸ್ಸಾದಂತೆ ಹೆಚ್ಚಾಗುತ್ತದೆ. ಈಗೀಗ ಪ್ಯಾರೆಸಿಟಮಾಲ್ ತೆಗೆದುಕೊಳ್ಳುವುದು ತುಂಬಾ ಸಾಮಾನ್ಯವಾಗಿದೆ ಎಂದು ನಮಗೆ ತಿಳಿದಿದೆ. ಅಧಿಕ ರಕ್ತದೊತ್ತಡ ಹೊಂದಿರುವ ಬಹಳಷ್ಟು ರೋಗಿಗಳು ಪ್ಯಾರೆಸಿಟಮಾಲ್ ಮಾತ್ರೆಯನ್ನು ತೆಗೆದುಕೊಳ್ಳುತ್ತಿದ್ದಾರೆ. ಆದ್ದರಿಂದ ಈ ಪ್ಯಾರೆಸಿಟಮಾಲ್ ರೋಗಿಗಳ ಮೇಲೆ ದೊಡ್ಡ ಪರಿಣಾಮವನ್ನು ಬೀರಬಹುದು ಎಂದಿದ್ದಾರೆ.

ಆಗಾಗ ಪ್ಯಾರಾಸಿಟಮಲ್ ತೆಗೆದುಕೊಳ್ಳುವ ಜನರು ಚಿಂತಿಸಬೇಕಾಗಿಲ್ಲ ಎಂದು NHS ಲೋಥಿಯನ್‌ನಲ್ಲಿ ಕ್ಲಿನಿಕಲ್ ಫಾರ್ಮಾಕಾಲಜಿ ಮತ್ತು ನೆಫ್ರಾಲಜಿಯ ಸಲಹೆಗಾರರಾಗಿರುವ ಡಾ. ಇಯಾನ್ ಮ್ಯಾಕ್‌ಇಂಟೈರ್ ಹೇಳಿದ್ದಾರೆ. ತಲೆನೋವು ಅಥವಾ ಜ್ವರಕ್ಕೆ ಪ್ಯಾರಸಿಟಮಾಲ್​ನ ಅಲ್ಪಾವಧಿಯ ಬಳಕೆಯಿಂದ ಸಮಸ್ಯೆಯಿಲ್ಲ. ಆದರೆ ದೀರ್ಘಕಾಲದವರೆಗೆ ನಿಯಮಿತವಾಗಿ ಪ್ಯಾರಾಸಿಟಮಲ್ ಸೇವಿಸುವುದು ಆರೋಗ್ಯಕ್ಕೆ ಬಹಳ ಅಪಾಯಕಾರಿ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Health Tips: ಸಣ್ಣ-ಪುಟ್ಟ ಆರೋಗ್ಯ ಸಮಸ್ಯೆಗೆಲ್ಲ ಮಾತ್ರೆ ನುಂಗುತ್ತೀರಾ?; ಈ 5 ಅಪಾಯಗಳ ಬಗ್ಗೆ ಎಚ್ಚರ!

Weight Loss: ಗಟ್ಟಿ ಆಹಾರದ ಬದಲು ಜ್ಯೂಸ್​ ಕುಡಿಯೋದ್ರಿಂದ ತೂಕ ಕಡಿಮೆಯಾಗುತ್ತಾ?

Follow Us
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಜಿನ್‌ಪಿಂಗ್
ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಜಿನ್‌ಪಿಂಗ್