ಬೆಂಗಳೂರಿನಲ್ಲೊಂದು ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್ ಸವಾರ ಪಾರು
ಬೆಂಗಳೂರಿನ ಈಜಿಪುರ ರಸ್ತೆಯಲ್ಲಿ ಸಂಭವಿಸಿದ ಭೀಕರ ಬೈಕ್ ಅಪಘಾತದ ದೃಶ್ಯವನ್ನು ಕಾರಿನ ಡ್ಯಾಶ್‌ಕ್ಯಾಮ್ ಸೆರೆಹಿಡಿದಿದೆ. ಎರಡು ಬೈಕ್‌ಗಳು ಘರ್ಷಿಸಿದ್ದು, ಒಬ್ಬ ಬೈಕ್ ಸವಾರ ಹೆಲ್ಮೆಟ್ ಧರಿಸಿದ್ದರಿಂದ ಅವರ ಜೀವ ಉಳಿದಿದೆ. ಅಪಘಾತದ ತೀವ್ರತೆ ಮತ್ತು ಹೆಲ್ಮೆಟ್‌ನ ಪ್ರಾಮುಖ್ಯತೆಯನ್ನು ಈ ಘಟನೆ ಎತ್ತಿ ತೋರಿಸುತ್ತದೆ.
ಬೆಂಗಳೂರಿನ ನಗರದ ಈಜಿಪುರ ರಸ್ತೆಯಲ್ಲಿ ಡೆಡ್ಲಿ ಆಕ್ಸಿಡೆಂಟ್ ಸಂಭವಿಸಿದೆ. ಓರ್ವ ಬೈಕ್ ಸವಾರ ಎಡಭಾಗದಿಂದ ವೇಗವಾಗಿ ಬಲಭಾಗಕ್ಕೆ ಬಂದಿದ್ದಾನೆ, ಇದೇ ವೇಳೆ ಮತ್ತೊಂದು ಬೈಕ್ ಸವಾರ ಬಲಭಾಗದಲ್ಲಿ ಹೋಗುತ್ತಿದ್ದನು. ಈ ವೇಳೆ ಎರಡು ಬೈಕ್ಗಳ ನಡುವೆ ಅಪಘಾತ ಸಂಭವಿಸಿದೆ. ಓರ್ವ ಬೈಕ್ ಸವಾರ ಕೂದಲೆಳೆ ಅಂತರದಲ್ಲಿ ಪಾರಾಗಿದ್ದು, ಮತ್ತೋರ್ವ ಬಿದ್ದು ಮೂರು ಪಲ್ಟಿ ಹೊಡೆದಿದ್ದಾನೆ. ಬೈಕ್ ಸುಮಾರು ಐದಾರು ಮೀಟರ್ ದೂರ ಎಳೆದೊಯ್ದಿದೆ. ಇದೇ ವೇಳೆ ಕಾರು ಬೈಕ್ ಹಿಂದೆಯೇ ಇತ್ತು. ಈ ವೇಳೆ ಸಮಯ ಪ್ರಜ್ಞೆ ಮೆರೆದು ಚಾಲಕ ಕಾರು ನಿಲ್ಲಿಸಿದ್ದಾನೆ. ಹೆಲ್ಮೆಟ್ ಹಾಕಿದ್ದರಿಂದ ಬೈಕ್ ಸವಾರ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಪಘಾತದ ದೃಶ್ಯ ಕಾರಿನ ಡ್ಯಾಶ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.
Latest Videos