ದರೋಡೆಕೋರರ ಬಗ್ಗೆ ನಿಖರವಾದ ಮಾಹಿತಿ ಲಭ್ಯವಾಗಿದೆ, ಶೀಘ್ರದಲ್ಲಿ ಬಂಧಿಸಲಿದ್ದೇವೆ: ಜಿ ಪರಮೇಶ್ವರ್

ದರೋಡೆಕೋರರ ಬಗ್ಗೆ ನಿಖರವಾದ ಮಾಹಿತಿ ಲಭ್ಯವಾಗಿದೆ, ಶೀಘ್ರದಲ್ಲಿ ಬಂಧಿಸಲಿದ್ದೇವೆ: ಜಿ ಪರಮೇಶ್ವರ್

ಅರುಣ್​ ಕುಮಾರ್​ ಬೆಳ್ಳಿ
|

Updated on: Jan 20, 2025 | 12:03 PM

ಸೆಕ್ಯೂರಿಟಿಗೆ ಸಂಬಂಧಿಸಿದಂತೆ ಗೃಹ ಇಲಾಖೆಯು ಬ್ಯಾಂಕ್ ಗಳಿಗೆ ಸೂಚನೆಗಳನ್ನು ರವಾನಿಸುತ್ತಿರುತ್ತದೆ, ದುರದೃಷ್ಟಕರ ಸಂಗತಿಯೆಂದರೆ ಎಟಿಎಂಗಳಿಗೆ ಕ್ಯಾಶ್ ತುಂಬುವ ಏಜೆನ್ಸಿ ಮತ್ತು ಮಂಗಳೂರು ಬ್ಯಾಂಕ್​ನವರು ಸಶಸ್ತ್ರಧಾರಿ ಗಾರ್ಡ್​​ಗಳನ್ನು ನೇಮಕ ಮಾಡಿಕೊಂಡಿಲ್ಲ, ದರೋಡೆಕೋರರು ಮತ್ತು ಕಳ್ಳರು ಇಂಥ ಅವಕಾಶಗಳಿಗಾಗಿ ಕಾಯುತ್ತಿರುತ್ತಾರೆ ಎಂದು ಗೃಹ ಸಚಿವ ಹೇಳಿದರು.

ಬೆಂಗಳೂರು: ಮಂಗಳೂರು ಕೋಟೆಕಾರ್ ಬ್ಯಾಂಕ್ ದರೋಡೆ ಮತ್ತು ಬೀದರ್​ನಲ್ಲಿ ಎಟಿಎಂಗೆ ಕ್ಯಾಶ್ ತುಂಬುವ ವ್ಯಾನ್ ದರೋಡೆ ಮತ್ತು ಇಬ್ಬರು ಗಾರ್ಡ್​ಗಳ ಕೊಲೆಗೆ ಸಂಬಂಧಿಸಿದಂತೆ ಖಚಿತವಾದ ಮಾಹಿತಿ ಲಭ್ಯವಾಗಿದೆ, ಅದನ್ನು ಮಾಧ್ಯಮಗಳ ಜೊತೆ ಶೇರ್ ಮಾಡಲಾಗಲ್ಲ, ಆದಷ್ಟು ಬೇಗ ಅಪರಾಧಿಗಳನ್ನು ವಶಕ್ಕೆ ಪಡೆಯುತ್ತೇವೆ ಎಂದು ಗೃಹ ಸಚಿವ ಜಿ ಪರಮೇಶ್ವರ್ ಹೇಳಿದರು. ದರೋಡೆಕೋರರು ಬೇರೆ ರಾಜ್ಯದವರು ಎಂಬ ಪೂರ್ವಭಾವಿ ಮಾಹಿತಿ ಇದೆ, ಅಪರಾಧಿಗಳನ್ನು ಬಂಧಿಸಲು ಎರಡೂ ತಂಡಗಳ ಹಿಂದೆ 4-6 ಪೊಲೀಸ್ ತಂಡಗಳು ತೆರಳಿವೆ ಎಂದು ಪರಮೇಶ್ವರ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಮಂಗಳೂರು: ಜಿಲ್ಲೆಗೆ ಸಿಎಂ ಭೇಟಿ ಮತ್ತು ಶುಕ್ರವಾರದ ನಮಾಜ್ ಗಮನದಲ್ಲಿಟ್ಟುಕೊಂಡೇ ಬ್ಯಾಂಕ್ ದರೋಡೆ!