Sign In

By signing in or creating an account, you agree with Associated Broadcasting Company's Terms & Conditions and Privacy Policy.

Period fatigue: ಮುಟ್ಟಿನ ಸಮಯದಲ್ಲಾಗುವ ಆಯಾಸ ನಿವಾರಿಸಲು ಇಲ್ಲಿವೆ 5 ಸರಳ ಮಾರ್ಗಗಳು

ಯುಎಸ್ ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್ ಪ್ರಕಟಿಸಿದ 2019ರ ಅಧ್ಯಯನದ ಪ್ರಕಾರ, ಮುಟ್ಟಿನ ಸಮಯದಲ್ಲಾಗುವ ದಣಿವು ಶೇಕಡಾ 90 ರಷ್ಟು ಮಹಿಳೆಯರ ಮೇಲೆ ಪರಿಣಾಮ ಬೀರುತ್ತದೆ. ಋತುಚಕ್ರವು ನಿಮ್ಮ ದೇಹ ಮತ್ತು ಮನಸ್ಸಿಗೆ ಒತ್ತಡವನ್ನುಂಟು ಮಾಡಲು ಕೆಲವು ಕಾರಣಗಳಿವೆ. ಏನದು? ಋತುಚಕ್ರದ ಸಮಯದಲ್ಲಾಗುವ ಆಯಾಸ ನಿವಾರಿಸಲು ಇಲ್ಲಿವೆ 5 ಮಾರ್ಗಗಳು.

Period fatigue: ಮುಟ್ಟಿನ ಸಮಯದಲ್ಲಾಗುವ ಆಯಾಸ ನಿವಾರಿಸಲು ಇಲ್ಲಿವೆ 5 ಸರಳ ಮಾರ್ಗಗಳು
ಸಾಂದರ್ಭಿಕ ಚಿತ್ರ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on: Sep 06, 2023 | 6:40 PM

ಋತುಚಕ್ರದ ಸಮಯದಲ್ಲಿ ನೀವು ದಣಿವು ಅನುಭವಿಸಿದರೆ ಆ ಭಾವನೆಯನ್ನು ಮುಟ್ಟಿನ ಆಯಾಸ ಎಂದು ಕರೆಯಲಾಗುತ್ತದೆ. ಯುಎಸ್ ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್ ಪ್ರಕಟಿಸಿದ 2019 ರ ಅಧ್ಯಯನದ ಪ್ರಕಾರ, ಇದು ಶೇಕಡಾ 90 ರಷ್ಟು ಮಹಿಳೆಯರ ಮೇಲೆ ಪರಿಣಾಮ ಬೀರುತ್ತದೆ. ಋತುಚಕ್ರವು ನಿಮ್ಮ ದೇಹ ಮತ್ತು ಮನಸ್ಸಿಗೆ ಒತ್ತಡವನ್ನುಂಟು ಮಾಡಲು ಕೆಲವು ಕಾರಣಗಳಿವೆ. ಏನದು? ಋತುಚಕ್ರದ ಸಮಯದಲ್ಲಾಗುವ ಆಯಾಸ ನಿವಾರಿಸಲು ಇಲ್ಲಿವೆ 5 ಮಾರ್ಗಗಳು.

ಋತುಚಕ್ರದ ಆಯಾಸಕ್ಕೆ ಕಾರಣಗಳು

ನಾವು ಸಾಮಾನ್ಯ ಮುಟ್ಟಿನ ರೋಗಲಕ್ಷಣಗಳ ಬಗ್ಗೆ ಮಾತನಾಡಿದರೆ, ಅವುಗಳಲ್ಲಿ ಮುಟ್ಟಿನ ಸೆಳೆತ, ಹೊಟ್ಟೆ ಉಬ್ಬರ, ಮನಸ್ಥಿತಿಯ ಬದಲಾವಣೆಗಳು ಮತ್ತು ತಲೆನೋವು ಸೇರಿವೆ. ಆದರೆ ಕೆಲವು ಮಹಿಳೆಯರು ಋತುಚಕ್ರದ ಸಮಯದಲ್ಲಿ ತಮ್ಮ ಶಕ್ತಿಯ ಮಟ್ಟವು ಕಡಿಮೆಯಾಗುವುದನ್ನು ಮತ್ತು ದುರ್ಬಲರಾಗುವುದನ್ನು ಕಾಣುತ್ತಾರೆ. ಕೆಲವು ಕಾರಣಗಳು ಇಲ್ಲಿವೆ;

1. ಹಾರ್ಮೋನುಗಳು

ನಮ್ಮ ಋತುಚಕ್ರದ ಮೊದಲು ಮತ್ತು ಆ ಸಮಯದಲ್ಲಿ ನಾವು ಅನುಭವಿಸುವ ಆಯಾಸಕ್ಕೆ ನಮ್ಮ ಹಾರ್ಮೋನುಗಳು ಒಂದು ಪ್ರಮುಖ ಅಂಶವಾಗಿದೆ ಎಂದು ನವದೆಹಲಿಯ ನರ್ಚರ್ ಐವಿಎಫ್ ಕ್ಲಿನಿಕ್ನ ಸ್ತ್ರೀರೋಗ ತಜ್ಞೆ, ಪ್ರಸೂತಿ ಮತ್ತು ಐವಿಎಫ್ ತಜ್ಞೆ ಡಾ. ಅರ್ಚನಾ ಧವನ್ ಬಜಾಜ್ ಹೇಳುತ್ತಾರೆ.

2. ಕಡಿಮೆ ಕಬ್ಬಿಣದ ಅಂಶ

ದೇಹದಲ್ಲಿನ ಕಬ್ಬಿಣದ ಕೊರತೆಯು ತಿಂಗಳ ಮುಟ್ಟಿನ ಸಮಯದಲ್ಲಿ ಸ್ವಲ್ಪ ನಷ್ಟವನ್ನುಂಟು ಮಾಡುತ್ತದೆ. ಆದ್ದರಿಂದ, ನಿಮ್ಮ ಆಹಾರದಲ್ಲಿ ಕಬ್ಬಿಣದ ಅಂಶದ ಸೇವನೆ ಮಾಡುವುದು ಮುಖ್ಯವಾಗಿದೆ.

3. ಸಕ್ಕರೆಯ ಕಡುಬಯಕೆ

ಸಿಹಿತಿಂಡಿಗಳನ್ನು ಹಂಬಲಿಸುವುದು ಸಾಮಾನ್ಯ. ಆದರೆ ಸಿಹಿ ತಿಂಡಿ ಅಧಿಕವಾಗಿ ಸೇವನೆ ಮಾಡದಿದ್ದಲ್ಲಿ ಶಕ್ತಿ ಕುಂದುವುದು ಕಡಿಮೆಯಾಗುತ್ತದೆ.

ಋತುಚಕ್ರದ ಸಮಯದಲ್ಲಿ ದಣಿವನ್ನು ಕಡಿಮೆ ಮಾಡಲು ಸಲಹೆಗಳು;

1. ಪೋಷಣೆ

ಆರೋಗ್ಯಕರ ಆಹಾರವನ್ನು ಸೇವಿಸುವ ಮೂಲಕ ಮತ್ತು ಕಾಫಿ, ಉಪ್ಪು ಮತ್ತು ಸಕ್ಕರೆಯನ್ನು ಆಹಾರದಲ್ಲಿ ಕಡಿತಗೊಳಿಸುವ ಮೂಲಕ ನಿಮ್ಮ ಋತುಚಕ್ರದ ಸಮಯದಲ್ಲಿ ದಣಿವನ್ನು ಕಡಿಮೆ ಮಾಡಿಕೊಳ್ಳಬಹುದು. ಅಲ್ಲದೆ, ವಿವಿಧ ಹಣ್ಣುಗಳು ಮತ್ತು ತರಕಾರಿಗಳನ್ನು ತಿನ್ನುವುದರಿಂದಲೂ, ಮುಟ್ಟಿನ ಅಸ್ವಸ್ಥತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಕಬ್ಬಿಣ ಮತ್ತು ಬಿ ವಿಟಮಿನ್ ಭರಿತ ಎಲೆಗಳ ಸೊಪ್ಪುಗಳಾದ ಕೇಲ್, ಮುಟ್ಟಿನ ಆಯಾಸವನ್ನು ನಿವಾರಿಸಲು ಸಹಾಯ ಮಾಡುತ್ತದೆ ಎಂದು ಡಾ. ಬಜಾಜ್ ತಿಳಿಸಿದ್ದಾರೆ.

2. ನಿಮ್ಮನ್ನು ಹೈಡ್ರೇಟ್ ಆಗಿರಿಸಿಕೊಳ್ಳಿ

ಆಯಾಸ ಮತ್ತು ನಿರ್ಜಲೀಕರಣವು ಒಂದಕ್ಕೊಂದು ಸಂಬಂಧ ಹೊಂದಿದೆ. ಆದ್ದರಿಂದ, ಪ್ರತಿದಿನ ಕನಿಷ್ಠ ಎರಡು ಲೀಟರ್ ನೀರನ್ನು ಕುಡಿಯಿರಿ ಮತ್ತು ಹೈಡ್ರೇಟ್ ಆಗಿರಿ. ನೀವು ಸಕ್ಕರೆ ಅಂಶವಿರುವ ಪಾನೀಯಗಳು ಅಥವಾ ಕಾಫಿಗಿಂತ ನೀರನ್ನು ಹೆಚ್ಚಾಗಿ ಕುಡಿದರೆ ಹೊಟ್ಟೆ ನೋವಿನ ರಾತ್ರಿಗಳನ್ನು ಕಳೆಯುವ ಆವಶ್ಯಕತೆ ಇರುವುದಿಲ್ಲ. ಆಲ್ಕೋಹಾಲ್ ಸೇವನೆ ಮಾಡಬೇಡಿ. ಏಕೆಂದರೆ ಇದು ಖಿನ್ನತೆಯನ್ನುಂಟು ಮಾಡುತ್ತದೆ, ಜೊತೆಗೆ ಆಯಾಸವನ್ನು ಇನ್ನಷ್ಟು ಹದಗೆಡಿಸುತ್ತದೆ. ರಾತ್ರಿಯ ಊಟದೊಂದಿಗೆ ವೈನ್ ಕುಡಿಯುವುದು ಅಥವಾ ಕೆಲಸದ ನಂತರ ಕೃತಕ ಸಕ್ಕರೆ ಅಂಶವಿರುವ ಪಾನೀಯಗಳನ್ನು ಕುಡಿಯುವುದನ್ನು ತಪ್ಪಿಸಲು ಪ್ರಯತ್ನಿಸಿ.

ಇದನ್ನೂ ಓದಿ: ಪಿರಿಯಡ್ಸ್ ಸಮಯದಲ್ಲಿ ಮೂಡ್ ಸ್ವಿಂಗ್ಸ್ ಆಗುತ್ತಿದೆಯೇ? ಈ ಸಮಸ್ಯೆಗೆ ಇಲ್ಲಿದೆ ಮುಕ್ತಿ

3. ವ್ಯಾಯಾಮ

ತ್ವರಿತ ಶಕ್ತಿ ವರ್ಧಕಕ್ಕಾಗಿ ಕೆಲವು ಲಘು ವ್ಯಾಯಾಮಗಳನ್ನು ಮಾಡಲು ಪ್ರಯತ್ನಿಸಿ. ನಿಮ್ಮ ಮುಟ್ಟಿನ ಸೆಳೆತವು ನಿಮ್ಮನ್ನು ನಿದ್ರೆಯಿಂದ ದೂರವಿರಿಸುತ್ತಿದ್ದರೆ, ವ್ಯಾಯಾಮ ಸಹಾಯ ಮಾಡುತ್ತದೆ. ನಿಮ್ಮ ಋತುಚಕ್ರಕ್ಕೆ ಮುಂಚಿನ ದಿನಗಳಲ್ಲಿ ವ್ಯಾಯಾಮ ಮಾಡಲು ಸಾಧ್ಯವಿಲ್ಲ ಎಂದಾದರೆ ನೀವು ಕೆಲವು ಸಣ್ಣ ನಡಿಗೆಗಳನ್ನು ಯೋಜಿಸಬಹುದು.

ಇದನ್ನೂ ಓದಿ:

4. ರಾತ್ರಿ ಚೆನ್ನಾಗಿ ನಿದ್ದೆ ಮಾಡಿ

ಮುಟ್ಟಿನ ಆಯಾಸವನ್ನು ತಡೆಗಟ್ಟುವ ಪ್ರಮುಖ ಅಂಶವೆಂದರೆ ನೀವು ಪ್ರತಿ ರಾತ್ರಿ ಒಂದೇ ಸಮಯಕ್ಕೆ ಮಲಗುವುದನ್ನು ಖಚಿತಪಡಿಸಿಕೊಳ್ಳುವ ಮೂಲಕ ಸಾಕಷ್ಟು ನಿದ್ರೆ ಪಡೆಯುವುದು, ನೀವು ಹಾಸಿಗೆಗೆ ಹೋಗುವ ಒಂದು ಗಂಟೆ ಮೊದಲು ಮೊಬೈಲ್ ಅಥವಾ ಟಿವಿ ನೋಡದೇ ಮಲಗುವುದನ್ನು ಅಭ್ಯಾಸ ಮಾಡಿಕೊಳ್ಳಿ. ಅಲ್ಲದೆ, ನೀವು ಉತ್ತಮ ನಿದ್ರೆಯನ್ನು ಪಡೆಯಲು ಬಯಸಿದರೆ ಮಧ್ಯಾಹ್ನದ ಸಮಯದಲ್ಲಿ ಕೆಫೀನ್ ಕುಡಿಯುವುದನ್ನು ತಪ್ಪಿಸಿ.

5. ವಿಶ್ರಾಂತಿ ಪಡೆಯಿರಿ

ಯೋಗ, ಮಸಾಜ್, ಉಸಿರಾಟದ ವ್ಯಾಯಾಮ, ಸೌಮ್ಯ ವ್ಯಾಯಾಮ, ಧ್ಯಾನ ಮತ್ತು ಬಿಸಿನೀರಿನ ಸ್ನಾನದಂತಹ ಒತ್ತಡವನ್ನು ಎದುರಿಸಲು ಆರೋಗ್ಯಕರ ಮಾರ್ಗಗಳನ್ನು ಹುಡುಕಿಕೊಳ್ಳಿ. ಉತ್ತಮ ನಿದ್ರೆ ಪಡೆಯಲು ಈ ವಿಧಾನಗಳನ್ನು ಬಳಸಿಕೊಂಡು ನೀವು ಮಲಗುವ ಮೊದಲು ವಿಶ್ರಾಂತಿ ಪಡೆಯಬಹುದು. ಮನೆಯಲ್ಲಿ ನಿಮಗೆ ಋತುಚಕ್ರದ ಚಿಕಿತ್ಸೆ ಕೆಲಸ ಮಾಡದಿದ್ದರೆ, ವೈದ್ಯರನ್ನು ಸಂಪರ್ಕಿಸಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ವಿನಯ್ ಸಾವಿಗೆ ಕಾರಣರಾದ ಎಸ್​ಪಿಯನ್ನು ಕೂಡಲೇ ಸಸ್ಪೆಂಡ್ ಮಾಡಬೇಕು: ಅಶೋಕ
ವಿನಯ್ ಸಾವಿಗೆ ಕಾರಣರಾದ ಎಸ್​ಪಿಯನ್ನು ಕೂಡಲೇ ಸಸ್ಪೆಂಡ್ ಮಾಡಬೇಕು: ಅಶೋಕ
ವಿನಯ್ ಸೋಮಯ್ಯ ಸಾವು; ತಪ್ಪಿತಸ್ಥರಿಗೆ ಶಿಕ್ಷೆಯಾಗಲಿದೆ: ಕೊಡಗು ಎಸ್​ಪಿ
ವಿನಯ್ ಸೋಮಯ್ಯ ಸಾವು; ತಪ್ಪಿತಸ್ಥರಿಗೆ ಶಿಕ್ಷೆಯಾಗಲಿದೆ: ಕೊಡಗು ಎಸ್​ಪಿ
‘ಡೆವಿಲ್’ ಚಿತ್ರೀಕರಣ ಮುಗಿಸಿ ಬೆಂಗಳೂರಿಗೆ ವಾಪಸ್ಸಾದ ದರ್ಶನ್: ವಿಡಿಯೋ
‘ಡೆವಿಲ್’ ಚಿತ್ರೀಕರಣ ಮುಗಿಸಿ ಬೆಂಗಳೂರಿಗೆ ವಾಪಸ್ಸಾದ ದರ್ಶನ್: ವಿಡಿಯೋ
ಯತ್ನಾಳ್ ಹೊಸ ಪಕ್ಷ ಕಟ್ಟಿದರೆ ನಾವ್ಯಾರು ಅವರ ಜೊತೆ ಹೋಗಲ್ಲ: ಬಂಗಾರಪ್ಪ
ಯತ್ನಾಳ್ ಹೊಸ ಪಕ್ಷ ಕಟ್ಟಿದರೆ ನಾವ್ಯಾರು ಅವರ ಜೊತೆ ಹೋಗಲ್ಲ: ಬಂಗಾರಪ್ಪ
ಕೆಪಿಸಿಸಿ ಅಧ್ಯಕ್ಷ ಮಂತ್ರಿಗಿರಿ ಬಿಡಬೇಕಾದ ವಿಷಯ ಗೊತ್ತಿಲ್ಲ: ಜಾರಕಿಹೊಳಿ
ಕೆಪಿಸಿಸಿ ಅಧ್ಯಕ್ಷ ಮಂತ್ರಿಗಿರಿ ಬಿಡಬೇಕಾದ ವಿಷಯ ಗೊತ್ತಿಲ್ಲ: ಜಾರಕಿಹೊಳಿ
ಆರೋಪ ಸಾಬೀತಾದರೆ ರಾಜಕೀಯ ನಿವೃತ್ತಿ ಅಂತ ಖರ್ಗೆ ಹೇಳಿದ್ದಾರೆ: ಪರಮೇಶ್ವರ್
ಆರೋಪ ಸಾಬೀತಾದರೆ ರಾಜಕೀಯ ನಿವೃತ್ತಿ ಅಂತ ಖರ್ಗೆ ಹೇಳಿದ್ದಾರೆ: ಪರಮೇಶ್ವರ್
SSLC,PUC ಬಳಿಕ ಮುಂದೇನು?ಚಿಂತೆ ಬೇಡ,ಟಿವಿ9 ಎಜುಕೇಷನ್ EXPOದಲ್ಲಿ ಭಾಗವಹಿಸಿ
SSLC,PUC ಬಳಿಕ ಮುಂದೇನು?ಚಿಂತೆ ಬೇಡ,ಟಿವಿ9 ಎಜುಕೇಷನ್ EXPOದಲ್ಲಿ ಭಾಗವಹಿಸಿ
ಗ್ರಾಮೀಣ ಭಾಗಗಳಲ್ಲಿ ಹೆಚ್ಚುತ್ತಿದೆ ಅಕ್ರಮ ಮದ್ಯ ಮಾರಾಟ, ಇಲಾಖೆ ನಿರ್ಲಿಪ್ತ
ಗ್ರಾಮೀಣ ಭಾಗಗಳಲ್ಲಿ ಹೆಚ್ಚುತ್ತಿದೆ ಅಕ್ರಮ ಮದ್ಯ ಮಾರಾಟ, ಇಲಾಖೆ ನಿರ್ಲಿಪ್ತ
ಚಲಿಸುತ್ತಿರುವ ರೈಲು ಹತ್ತಲು ಹೋಗಿ ನಿಯಂತ್ರಣ ಕಳೆದುಕೊಂಡ ವೃದ್ಧ
ಚಲಿಸುತ್ತಿರುವ ರೈಲು ಹತ್ತಲು ಹೋಗಿ ನಿಯಂತ್ರಣ ಕಳೆದುಕೊಂಡ ವೃದ್ಧ
ಸವದತ್ತಿ ಯಲ್ಲಮ್ಮಗೆ ಜಲ ದಿಗ್ಭಂಧನ: ದೇಗುಲದಲ್ಲಿ ಪ್ರವಾಹದಂತೆ ಹರಿದ ನೀರು
ಸವದತ್ತಿ ಯಲ್ಲಮ್ಮಗೆ ಜಲ ದಿಗ್ಭಂಧನ: ದೇಗುಲದಲ್ಲಿ ಪ್ರವಾಹದಂತೆ ಹರಿದ ನೀರು