Sign In

By signing in or creating an account, you agree with Associated Broadcasting Company's Terms & Conditions and Privacy Policy.

Japanese Water Therapy: ಜಪಾನೀಸ್ ವಾಟರ್ ಥೆರಪಿಯ ಪ್ರಯೋಜನಗಳ ಬಗ್ಗೆ ನಿಮಗೆಷ್ಟು ಗೊತ್ತು?

ಜಪಾನೀಸ್ ವಾಟರ್ ಥೆರಪಿಯನ್ನು ಅಭ್ಯಾಸ ಮಾಡುವುದರಿಂದ ಕ್ಯಾಲೋರಿ ಕಡಿಮೆ ಮಾಡಿಕೊಂಡು ತೂಕವನ್ನು ಕಳೆದುಕೊಳ್ಳಬಹುದು. ಜಪಾನೀಸ್ ವಾಟರ್ ಥೆರಪಿಯ ಪ್ರಕಾರ ತಣ್ಣನೆಯ ನೀರು ನಮ್ಮ ದೇಹಕ್ಕೆ ಒಳ್ಳೆಯದಲ್ಲ.

Japanese Water Therapy: ಜಪಾನೀಸ್ ವಾಟರ್ ಥೆರಪಿಯ ಪ್ರಯೋಜನಗಳ ಬಗ್ಗೆ ನಿಮಗೆಷ್ಟು ಗೊತ್ತು?
ಸಾಂದರ್ಭಿಕ ಚಿತ್ರ
Follow us
ಸುಷ್ಮಾ ಚಕ್ರೆ
|

Updated on:Sep 06, 2023 | 7:11 PM

ನೀರಿನಿಂದ ನಮ್ಮ ದೇಹಕ್ಕೆ ಸಾಕಷ್ಟು ಪ್ರಯೋಜನಗಳಿವೆ. ದಿನವೂ ಬೆಳಗ್ಗೆ ಎದ್ದ ಕೂಡಲೆ ನಮ್ಮ ರೂಮಿನ ತಾಪಮಾನದಲ್ಲೇ ಇರುವ (ತೀರಾ ತಣ್ಣಗೂ ಅಲ್ಲ, ಬಿಸಿಯೂ ಅಲ್ಲ) ನೀರನ್ನು ಕೆಲವು ಗ್ಲಾಸ್​ ಕುಡಿಯುವುದು ಅತ್ಯಗತ್ಯ. ಇದನ್ನು ಜಪಾನೀಸ್ ವಾಟರ್ ಥೆರಪಿ (Japanese Water Therapy) ಎನ್ನಲಾಗುತ್ತದೆ. ಈ ಥೆರಪಿಯಿಂದ ಹಲವು ರೋಗಗಳನ್ನು ನಿಯಂತ್ರಿಸಬಹುದು. ಮಲಬದ್ಧತೆ (Constipation) ಮತ್ತು ಅಧಿಕ ರಕ್ತದೊತ್ತಡದಿಂದ ಟೈಪ್ 2 ಮಧುಮೇಹ ಮತ್ತು ಕ್ಯಾನ್ಸರ್‌ವರೆಗೆ ಹಲವಾರು ಸಮಸ್ಯೆಗಳಿಗೆ ಈ ರೂಢಿ ಚಿಕಿತ್ಸೆ ನೀಡಬಲ್ಲದು.

ಜಪಾನೀಸ್ ವಾಟರ್ ಥೆರಪಿ ಎಂದರೇನು?: ಜಪಾನೀಸ್ ವಾಟರ್ ಥೆರಪಿಯು ಜಪಾನೀಸ್ ಔಷಧದಲ್ಲಿ ಮತ್ತು ಜಪಾನೀ ಜನರಲ್ಲಿ ವ್ಯಾಪಕವಾಗಿ ಬಳಸಲ್ಪಡುವುದರಿಂದ ಈ ಹೆಸರು ಬಂದಿರಬಹುದು. ಇದು ಜೀರ್ಣಾಂಗ ವ್ಯವಸ್ಥೆಯನ್ನು ಶುದ್ಧೀಕರಿಸಲು ಮತ್ತು ಕರುಳಿನ ಆರೋಗ್ಯವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಬೆಳಗ್ಗೆ ಎಚ್ಚರವಾದ ನಂತರ ಖಾಲಿ ಹೊಟ್ಟೆಯಲ್ಲಿ ತುಸು ಬೆಚ್ಚಗಿನ ನೀರನ್ನು ಕುಡಿಯುವುದರಿಂದ ದೇಹದ ನಾನಾ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಪಡೆಯಬಹುದು.

ಇದನ್ನೂ ಓದಿ: ಏನಿದು ರೇಂಬೋ ಡಯೆಟ್?; ತೂಕ ಕಡಿಮೆ ಮಾಡಿಕೊಳ್ಳಲು ಇಲ್ಲಿದೆ ಹೊಸ ವಿಧಾನ

ಜಪಾನೀಸ್ ವಾಟರ್ ಥೆರಪಿಯ ಪ್ರಕಾರ ತಣ್ಣನೆಯ ನೀರು ನಮ್ಮ ದೇಹಕ್ಕೆ ಒಳ್ಳೆಯದಲ್ಲ. ಇದು ನಿಮ್ಮ ಆಹಾರದಲ್ಲಿನ ಕೊಬ್ಬುಗಳು ಮತ್ತು ತೈಲಗಳು ನಿಮ್ಮ ಜೀರ್ಣಾಂಗದಲ್ಲಿ ಗಟ್ಟಿಯಾಗುವಂತೆ ಮಾಡುತ್ತದೆ, ಹೀಗಾಗಿ ಜೀರ್ಣಕ್ರಿಯೆಯನ್ನು ನಿಧಾನಗೊಳಿಸುತ್ತದೆ ಮತ್ತು ರೋಗವನ್ನು ಉಂಟುಮಾಡುತ್ತದೆ. ಹೀಗಾಗಿ, ತುಸು ಬೆಚ್ಚಗಿನ ನೀರು ಸೇವಿಸುವುದರಿಂದ ಅನೇಕ ಪ್ರಯೋಜನಗಳಿವೆ.

ಬೆಳಗ್ಗೆ ಎದ್ದ ನಂತರ ಮತ್ತು ಹಲ್ಲುಜ್ಜುವ ಮೊದಲು ಖಾಲಿ ಹೊಟ್ಟೆಯಲ್ಲಿ ನಾಲ್ಕರಿಂದ 5 ಲೋಟ (160 ಮಿಲಿ) ಬೆಚ್ಚಗಿನ ನೀರನ್ನು ಕುಡಿಯಿರಿ. ಇದಾದ ನಂತರ 45 ನಿಮಿಷದ ನಂತರವೇ ತಿಂಡಿ ಸೇವಿಸಿ. ಊಟ-ತಿಂಡಿ ಮಾಡುವಾಗಲೂ 15 ನಿಮಿಷಕ್ಕಿಂತ ಹೆಚ್ಚು ಕಾಲ ತಿನ್ನಬೇಡಿ. ಏನಾದರೂ ತಿಂದು, ಕುಡಿದಾದ ನಂತರ ಮತ್ತೊಮ್ಮೆ ತಿನ್ನಲು 2 ಗಂಟೆಗಳ ಅಂತರವಿರಲಿ.

ಇದನ್ನೂ ಓದಿ: ಇಂಗು ನೀರು ಕುಡಿಯುವುದರಿಂದಾಗುವ ಆರೋಗ್ಯ ಪ್ರಯೋಜನಗಳು

ಈ ಜಪಾನ್ ವಾಟರ್ ಥೆರಪಿಯನ್ನು ಮಲಬದ್ಧತೆಗೆ 10 ದಿನಗಳು, ಅಧಿಕ ರಕ್ತದೊತ್ತಡಕ್ಕೆ 30 ದಿನಗಳು, ಟೈಪ್ 2 ಮಧುಮೇಹಕ್ಕೆ 30 ದಿನಗಳು, ಕ್ಯಾನ್ಸರ್ ರೋಗಕ್ಕೆ 180 ದಿನಗಳು ನಿರಂತರವಾಗಿ ಮಾಡಬೇಕಾಗುತ್ತದೆ. ಹೆಚ್ಚು ನೀರು ಕುಡಿಯುವುದು ಮಲಬದ್ಧತೆ ಮತ್ತು ರಕ್ತದೊತ್ತಡಕ್ಕೆ ಸಹಾಯ ಮಾಡಬಹುದಾದರೂ, ಜಪಾನೀಸ್ ವಾಟರ್ ಥೆರಪಿ ಟೈಪ್ 2 ಡಯಾಬಿಟಿಸ್ ಅಥವಾ ಕ್ಯಾನ್ಸರ್ ಅನ್ನು ಚಿಕಿತ್ಸೆ ಮಾಡುತ್ತದೆ ಅಥವಾ ಗುಣಪಡಿಸುತ್ತದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ. ಆದರೆ, ಇದರಿಂದ ಅಡ್ಡ ಪರಿಣಾಮಗಳಂತೂ ಇಲ್ಲ.

ಜಪಾನೀಸ್ ವಾಟರ್ ಥೆರಪಿಯನ್ನು ಅಭ್ಯಾಸ ಮಾಡುವುದರಿಂದ ಕ್ಯಾಲೋರಿ ಕಡಿಮೆ ಮಾಡಿಕೊಂಡು ತೂಕವನ್ನು ಕಳೆದುಕೊಳ್ಳಬಹುದು. ನೀವು ಜ್ಯೂಸ್ ಅಥವಾ ಸೋಡಾದಂತಹ ಸಕ್ಕರೆಯುಕ್ತ ಸಿಹಿ ಪಾನೀಯಗಳನ್ನು ಬಳಸುವ ಬದಲು ನೀರನ್ನು ಕುಡಿಯುವ ಅಭ್ಯಾಸ ರೂಢಿಸಿಕೊಳ್ಳಿ. ಇದರಿಂದ ನಿಮ್ಮ ದೇಹದ ಕ್ಯಾಲೊರಿ ಸುಲಭವಾಗಿ ಕಡಿಮೆಯಾಗುತ್ತದೆ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:10 pm, Wed, 6 September 23