ತೂಕ ಹೆಚ್ಚಾಗಲು ನಿದ್ರೆಯೂ ಕಾರಣ; ಹೇಗೆ ಅಂತೀರಾ?

ನಿದ್ರೆ ಕಡಿಮೆಯಾದರೆ ಹಾರ್ಮೋನಿನಲ್ಲೂ ವ್ಯತ್ಯಾಸವಾಗುತ್ತದೆ. ಹಾರ್ಮೋನ್​ಗಳ ವ್ಯತ್ಯಾಸದಿಂದ ತೂಕ ಹೆಚ್ಚಾಗುತ್ತದೆ. ನಾವು ಸಾಕಷ್ಟು ನಿದ್ರೆ ಪಡೆಯದಿದ್ದರೆ, ನಮ್ಮ ದೇಹದ ಹಾರ್ಮೋನ್ ಸಮತೋಲನವು ಏರುಪೇರಾಗುತ್ತದೆ. ತೂಕ ಇಳಿಸಿ, ಆರೋಗ್ಯವಂತರಾಗಿರಲು ಸರಿಯಾದ ರೀತಿಯಲ್ಲಿ ನಿದ್ರೆ ಮಾಡುವುದು ಕೂಡ ಅಗತ್ಯ.

ತೂಕ ಹೆಚ್ಚಾಗಲು ನಿದ್ರೆಯೂ ಕಾರಣ; ಹೇಗೆ ಅಂತೀರಾ?
ಸಾಂದರ್ಭಿಕ ಚಿತ್ರImage Credit source: iStock
Follow us
ಸುಷ್ಮಾ ಚಕ್ರೆ
|

Updated on:Sep 06, 2023 | 6:35 PM

ತೂಕ ಹೆಚ್ಚಾಗಲು ಹೊಟ್ಟೆ ತುಂಬ ಅಥವಾ ಕೊಬ್ಬಿನಾಂಶ ಇರುವ ಆಹಾರವನ್ನು ತಿನ್ನುವುದೊಂದೇ ಕಾರಣವಲ್ಲ. ನಮ್ಮ ಜೀವನಶೈಲಿ, ನಿದ್ರೆಯ ಪ್ರಮಾಣವೂ ಕಾರಣವಾಗಿರುತ್ತದೆ. ಸರಿಯಾದ ಸಮಯಕ್ಕೆ ನಿದ್ರೆ ಮಾಡದಿರುವುದು, ಕಡಿಮೆ ನಿದ್ರೆ ಮಾಡುವುದರಿಂದಲೂ ತೂಕ ಹೆಚ್ಚಾಗುತ್ತದೆ ಎಂಬುದು ಬಹುತೇಕ ಜನರಿಗೆ ತಿಳಿದಿಲ್ಲ. ಹೀಗಾಗಿ, ತೂಕ ಇಳಿಸಿ, ಆರೋಗ್ಯವಂತರಾಗಿರಲು ಸರಿಯಾದ ರೀತಿಯಲ್ಲಿ ನಿದ್ರೆ ಮಾಡುವುದು ಕೂಡ ಅಗತ್ಯ.

ವ್ಯಾಯಾಮ ಮತ್ತು ಆಹಾರದ ಹೊರತಾಗಿ, ತೂಕ ನಷ್ಟದ ದಿನಚರಿಯ ಮೇಲೆ ಪರಿಣಾಮ ಬೀರುವ ಪ್ರಮುಖ ಅಂಶವೆಂದರೆ ನಿದ್ರೆ. ನಿದ್ರೆ ಕಡಿಮೆಯಾದರೆ ಹಾರ್ಮೋನಿನಲ್ಲೂ ವ್ಯತ್ಯಾಸವಾಗುತ್ತದೆ. ಹಾರ್ಮೋನ್​ಗಳ ವ್ಯತ್ಯಾಸದಿಂದ ತೂಕ ಹೆಚ್ಚಾಗುತ್ತದೆ. ನಾವು ಸಾಕಷ್ಟು ನಿದ್ರೆ ಪಡೆಯದಿದ್ದರೆ, ನಮ್ಮ ದೇಹದ ಹಾರ್ಮೋನ್ ಸಮತೋಲನವು ಏರುಪೇರಾಗುತ್ತದೆ. ಗ್ರೆಲಿನ್ ಮತ್ತು ಲೆಪ್ಟಿನ್ ಎಂಬ 2 ಹಾರ್ಮೋನುಗಳು ಏರುಪೇರಾಗುತ್ತವೆ.

ಇದನ್ನೂ ಓದಿ: ನಿದ್ರೆ ಮಾಡಲಾಗದೆ ಒದ್ದಾಡುತ್ತಿದ್ದೀರಾ? ನಿದ್ರಾಹೀನತೆಗೆ ಅಶ್ವಗಂಧ ರಾಮಬಾಣ

ಗ್ರೆಲಿನ್ ಹಸಿವನ್ನು ಉತ್ತೇಜಿಸುವ ಹಾರ್ಮೋನ್ ಆಗಿದ್ದು, ಲೆಪ್ಟಿನ್ ಪೂರ್ಣತೆಯನ್ನು ಸಂಕೇತಿಸುತ್ತದೆ. ನೀವು ನಿದ್ರೆಯನ್ನು ಸರಿಯಾಗಿ ಮಾಡದಿದ್ದಾಗ ಗ್ರೆಲಿನ್ ಹಾರ್ಮೋನ್ ಮಟ್ಟ ಹೆಚ್ಚಾಗುತ್ತವೆ, ಲೆಪ್ಟಿನ್ ಮಟ್ಟಗಳು ಕಡಿಮೆಯಾಗುತ್ತವೆ. ಇದು ಅತಿಯಾಗಿ ತಿನ್ನಲು ನಿಮ್ಮನ್ನು ಪ್ರೇರೇಪಿಸುತ್ತದೆ. ಆಗ ನಿಮಗೆ ಹಸಿವಿಲ್ಲದಿದ್ದರೂ ಬಾಯಿ ಚಪಲದಿಂದ ಕೈ ಸಿಕ್ಕಿದ ತಿಂಡಿಯನ್ನೆಲ್ಲ ತಿನ್ನಲಾರಂಭಿಸುತ್ತೀರಿ. ಇದರಿಂದ ತೂಕ ಹೆಚ್ಚಾಗುತ್ತದೆ.

ಇದನ್ನೂ ಓದಿ: ಅತಿಯಾದ ನಿದ್ರೆ ಈ ಆರೋಗ್ಯ ಸಮಸ್ಯೆಗೆ ಕಾರಣವಾಗಬಹುದು, ಇಲ್ಲಿದೆ ಮಾಹಿತಿ

ನಿದ್ರೆಯ ಕೊರತೆಯಿಂದ ರಾತ್ರಿ ವೇಳೆ ಹಸಿವು ಜಾಸ್ತಿಯಾಗುತ್ತದೆ. ರಾತ್ರಿ ಏನಾದರೂ ತಿನ್ನಬೇಕೆಂಬ ಬಯಕೆ ಮೂಡುತ್ತದೆ. ಆಗ ದೇಹದಲ್ಲಿ ಕೊಬ್ಬಿನಾಂಶ, ಸಕ್ಕರೆ ಅಂಶಗಳು ಹೆಚ್ಚಾಗುತ್ತದೆ. ಹೀಗಾಗಿ, ಪ್ರತಿ ರಾತ್ರಿ 7ರಿಂದ 9 ಗಂಟೆಗಳ ನಿರಂತರ ನಿದ್ರೆ ಮಾಡುವುದು ಅಗತ್ಯ. ನಿಮ್ಮ ಕೊಠಡಿಯನ್ನು ಕತ್ತಲಾಗಿರಿಸಿಕೊಂಡು ಮಲಗಿ. ಇದರಿಂದ ನಿದ್ರೆಗೆ ಅಡ್ಡಿ ಉಂಟಾಗುವುದಿಲ್ಲ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:33 pm, Wed, 6 September 23

ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ