ನಿದ್ರೆ ಮಾಡಲಾಗದೆ ಒದ್ದಾಡುತ್ತಿದ್ದೀರಾ? ನಿದ್ರಾಹೀನತೆಗೆ ಅಶ್ವಗಂಧ ರಾಮಬಾಣ
ನಿದ್ರಾಹೀನತೆಯು ನಿಮ್ಮ ದೈಹಿಕ ಮತ್ತು ಮಾನಸಿಕ ಯೋಗಕ್ಷೇಮದ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರುವ ಸಾಮಾನ್ಯ ನಿದ್ರೆಯ ಸಮಸ್ಯೆಯಾಗಿದೆ. ಅಶ್ವಗಂಧ ಒಂದು ಸುಪ್ರಸಿದ್ಧ ಅಡಾಪ್ಟೋಜೆನ್ ಆಗಿದ್ದು, ಅದು ಒತ್ತಡವನ್ನು ಕಡಿಮೆ ಮಾಡುತ್ತದೆ.
ಅಶ್ವಗಂಧದ (Ashwagandha) ಬಗ್ಗೆ ಹೆಚ್ಚು ಜನರಿಗೆ ತಿಳಿದಿಲ್ಲ. ಈ ಗಿಡಮೂಲಿಕೆಯನ್ನು ಬಳಸುವುದರಿಂದ ನಿಮ್ಮ ನಿದ್ರೆಯ ಸಮಸ್ಯೆ ದೂರವಾಗುತ್ತದೆ. ಅಶ್ವಗಂಧ ಬಳಸಿದರೆ ಕೆಲವು ವಾರಗಳಲ್ಲಿಯೇ ನಿಮಗೆ ವೇಗವಾಗಿ ಮತ್ತು ದೀರ್ಘಕಾಲ ನಿದ್ರಿಸಲು ಸಹಾಯವಾಗುತ್ತದೆ. ಇದರಿಂದ ರಾತ್ರಿಯಿಡೀ ಉತ್ತಮವಾಗಿ ನಿದ್ರೆ ಮಾಡಬಹುದು. ನಿದ್ರೆಯಲ್ಲಿ ಪದೇ ಪದೆ ಎಚ್ಚರಗೊಳ್ಳುವುದರಿಂದಲೂ ಪರಿಹಾರ ಪಡೆಯಬಹುದು.
ನಿದ್ರಾಹೀನತೆಯು ನಿಮ್ಮ ದೈಹಿಕ ಮತ್ತು ಮಾನಸಿಕ ಯೋಗಕ್ಷೇಮದ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರುವ ಸಾಮಾನ್ಯ ನಿದ್ರೆಯ ಸಮಸ್ಯೆಯಾಗಿದೆ. ಇದಕ್ಕಾಗಿ ಸೇವಿಸುವ ಅನೇಕ ನಿದ್ರಾಹೀನತೆಯ ಔಷಧಿಗಳು ಅಡ್ಡ ಪರಿಣಾಮಗಳನ್ನು ಹೊಂದಿರುತ್ತವೆ. ಹೀಗಾಗಿ, ಅನೇಕ ಜನರು ನಿದ್ರಾಹೀನತೆಗೆ ಪರಿಹಾರವನ್ನು ಕಂಡುಕೊಳ್ಳಲು ಗಿಡಮೂಲಿಕೆಗಳನ್ನು ಬಳಸತೊಡಗಿದ್ದಾರೆ. ಅವುಗಳಲ್ಲಿ ಮುಖ್ಯವಾದುದೆಂದರೆ ಅಶ್ವಗಂಧ.
ಇದನ್ನೂ ಓದಿ: Better Sleep: ಉತ್ತಮ ನಿದ್ರೆಗೆ ಸಹಾಯ ಮಾಡುವ 6 ಆಹಾರಗಳು
ಅಶ್ವಗಂಧ ಒಂದು ಸುಪ್ರಸಿದ್ಧ ಅಡಾಪ್ಟೋಜೆನ್ ಆಗಿದ್ದು, ಅದು ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ಉತ್ತಮ ನಿದ್ರೆ ಪಡೆಯಲು ನಿಮಗೆ ಸಹಾಯ ಮಾಡುತ್ತದೆ. 2021ರಲ್ಲಿ ಪ್ರಕಟವಾದ 80 ಜನರನ್ನೊಳಗೊಂಡ 8 ವಾರಗಳ ಅಧ್ಯಯನ ನಿದ್ರಾಹೀನತೆ ಇರುವ ಮತ್ತು ಇಲ್ಲದ ವ್ಯಕ್ತಿಗಳಲ್ಲಿ ಅಶ್ವಗಂಧ ನಿದ್ರೆಯ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಅನ್ವೇಷಣೆ ಮಾಡಿದೆ. ನಿದ್ರಾಹೀನತೆ ಹೊಂದಿರುವವರ ಮೇಲೆ ಅಶ್ವಗಂಧದಿಂದ ಸಾಕಷ್ಟು ಪ್ರಯೋಜನವಾಗಿದೆ ಎಂಬುದು ಇದರಲ್ಲಿ ಸಾಬೀತಾಗಿದೆ.
2019ರಲ್ಲಿ ಮಾಡಿದ ಆಸ್ಪತ್ರೆಯ ಅಧ್ಯಯನದಲ್ಲಿ 60 ಜನರು ಭಾಗವಹಿಸಿದ್ದರು. ಅವರು 10 ವಾರಗಳ ಕಾಲ ಅಶ್ವಗಂಧ ಕ್ಯಾಪ್ಸುಲ್‌ಗಳನ್ನು ತೆಗೆದುಕೊಂಡರು. ಈ ಅಧ್ಯಯನವು ಸ್ಲೀಪ್ ಆಕ್ಟಿಗ್ರಫಿ ಸಾಧನವನ್ನು ಬಳಸಿ ಅಶ್ವಗಂಧವು ನಿದ್ರಿಸಲು ತೆಗೆದುಕೊಳ್ಳುವ ಸಮಯವನ್ನು ಕಡಿಮೆ ಮಾಡುತ್ತದೆ ಮತ್ತು ನಿದ್ರೆಯ ಗುಣಮಟ್ಟವನ್ನು ಸುಧಾರಿಸಿದೆ ಎಂದು ಕಂಡುಹಿಡಿದಿದೆ.
ಇದನ್ನೂ ಓದಿ: ಅಪೂರ್ಣ ನಿದ್ರೆಯು ನಿಮ್ಮ ಮೂಡ್ಅನ್ನು ಮಾತ್ರ ಹಾಳು ಮಾಡಲ್ಲ, ಮಾನಸಿಕ ಆರೋಗ್ಯವನ್ನೂ ಹದಗೆಡಿಸುತ್ತೆ
ಅಶ್ವಗಂಧ ವಿವಿಧ ರೂಪಗಳಲ್ಲಿ ಲಭ್ಯವಿದೆ. ಅವುಗಳೆಂದರೆ:
ಪುಡಿ: ಕ್ಯಾಪ್ಸೂಲ್ಗಳು ಅಥವಾ ಮಾತ್ರೆಗಳು.
ದ್ರವ ರೂಪ: ಚಹಾ ರೂಪದಲ್ಲೂ ಅಶ್ವಗಂಧವನ್ನು ಸೇವಿಸಬಹುದು.
ನಿಮಗೆ ಬೇಗ ರಿಸಲ್ಟ್ ಬೇಕೆಂದರೆ ಅಶ್ವಗಂಧದ ಚಹಾ ಉತ್ತಮ ಆಯ್ಕೆಯಾಗಿದೆ.