ಪಕ್ಕದ ಮನೆಯ ನಾಯಿ ಕಚ್ಚಿದ್ದ ವಿಷಯ ಮುಚ್ಚಿಟ್ಟಿದ್ದ ಬಾಲಕ, ಒಂದೂವರೆ ತಿಂಗಳ ಬಳಿಕ ರೇಬಿಸ್​ನಿಂದ ಸಾವು

ಪಕ್ಕದ ಮನೆಯ ನಾಯಿ ಕಚ್ಚಿದ್ದ ವಿಷಯವನ್ನು ಪೋಷಕರಿಂದ ಮುಚ್ಚಿಟ್ಟಿದ್ದ 14 ವರ್ಷದ ಬಾಲಕ ಒಂದೂವರೆ ತಿಂಗಳ ಬಳಿಕ ರೇಬಿಸ್​ನಿಂದ ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಘಾಜಿಯಾಬಾದ್​ನಲ್ಲಿ ನಡೆದಿದೆ. ಸಬೆಜ್‌ನ ಪಕ್ಕದ ಮನೆಯ ಮಹಿಳೆಯೊಬ್ಬರು ಬೀದಿನಾಯಿಗಳನ್ನು ಸಾಕುತ್ತಾರೆ ಮತ್ತು ಆಹಾರ ನೀಡುತ್ತಾರೆ ಮತ್ತು ಐದರಿಂದ ಆರು ನಾಯಿಗಳು ಈ ಪ್ರದೇಶದಲ್ಲೇ ಇರುತ್ತದೆ. ಸಬೇಜ್ ಎಂಬ ಬಾಲಕನನ್ನು ಆ ನಾಯಿಗಳಲ್ಲಿ ಒಂದು ನಾಯಿ ಕಚ್ಚಿದೆ ಎನ್ನಲಾಗಿದೆ. ಈ ಹಿಂದೆಯೂ ಈ ನಾಯಿಗಳು ಇತರರಿಗೆ ಕಚ್ಚಿವೆ ಎನ್ನಲಾಗಿದೆ.

ಪಕ್ಕದ ಮನೆಯ ನಾಯಿ ಕಚ್ಚಿದ್ದ ವಿಷಯ ಮುಚ್ಚಿಟ್ಟಿದ್ದ ಬಾಲಕ, ಒಂದೂವರೆ ತಿಂಗಳ ಬಳಿಕ ರೇಬಿಸ್​ನಿಂದ ಸಾವು
ರೇಬಿಸ್​ಗೆ ಬಾಲಕ ಬಲಿImage Credit source: India Today
Follow us
ನಯನಾ ರಾಜೀವ್
|

Updated on:Sep 06, 2023 | 9:14 AM

ಪಕ್ಕದ ಮನೆಯ ನಾಯಿ ಕಚ್ಚಿದ್ದ ವಿಷಯವನ್ನು ಪೋಷಕರಿಂದ ಮುಚ್ಚಿಟ್ಟಿದ್ದ 14 ವರ್ಷದ ಬಾಲಕ ಒಂದೂವರೆ ತಿಂಗಳ ಬಳಿಕ ರೇಬಿಸ್​(Rabies)ನಿಂದ ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಘಾಜಿಯಾಬಾದ್​ನಲ್ಲಿ ನಡೆದಿದೆ. ಶಾವೇಜ್​ನ ಪಕ್ಕದ ಮನೆಯ ಮಹಿಳೆಯೊಬ್ಬರು ಬೀದಿನಾಯಿಗಳನ್ನು ಸಾಕುತ್ತಾರೆ ಮತ್ತು ಆಹಾರ ನೀಡುತ್ತಾರೆ ಮತ್ತು ಐದರಿಂದ ಆರು ನಾಯಿಗಳು ಈ ಪ್ರದೇಶದಲ್ಲೇ ಇರುತ್ತದೆ. ಸಬೇಜ್ ಎಂಬ ಬಾಲಕನನ್ನು ಆ ನಾಯಿಗಳಲ್ಲಿ ಒಂದು ನಾಯಿ ಕಚ್ಚಿದೆ ಎನ್ನಲಾಗಿದೆ. ಈ ಹಿಂದೆಯೂ ಈ ನಾಯಿಗಳು ಇತರರಿಗೆ ಕಚ್ಚಿವೆ ಎನ್ನಲಾಗಿದೆ.

ಭಯದಿಂದ, ಸಬೆಜ್ ತನ್ನ ಕುಟುಂಬಕ್ಕೆ ಘಟನೆಯ ಬಗ್ಗೆ ಹೇಳಲಿಲ್ಲ ಮತ್ತು ನಾಲ್ಕು ದಿನಗಳ ನಂತರ ರೇಬೀಸ್ ರೋಗಲಕ್ಷಣಗಳು ಕಾಣಿಸಿಕೊಳ್ಳಲಾರಂಭಿಸಿತ್ತು ಎಂದು ಆತನ ಅಜ್ಜ ಮತ್ಲುಬ್ ಅಹ್ಮದ್ ಹೇಳಿದ್ದಾರೆ. ಕ್ರಮೇಣವಾಗಿ ಸಬೇಜ್ ಗಾಳಿ ಮತ್ತು ನೀರನ್ನು ಕಂಡರೆ ಭಯಪಡುತ್ತಿದ್ದ, ಸದಾ ಕತ್ತಲೆಯಲ್ಲಿಯೇ ಇರುತ್ತಿದ್ದ, ಆಗಾಗ ಭಯಗೊಂಡು ಗಲಾಟೆ ಮಾಡುತ್ತಿದ್ದ ಎಂದು ಹೇಳಿದ್ದಾರೆ.

ಸಬೇಜ್ ಅವರನ್ನು ಘಾಜಿಯಾಬಾದ್, ಮೀರತ್ ಮತ್ತು ದೆಹಲಿಯ ಏಮ್ಸ್‌ನ ಹಲವಾರು ಆಸ್ಪತ್ರೆಗಳಿಗೆ ಕರೆದೊಯ್ಯಲಾಯಿತು. ಚಿಕಿತ್ಸೆಗಾಗಿ ಬುಲಂದ್‌ಶಹರ್‌ಗೆ ಕೂಡ ಕರೆದೊಯ್ಯಲಾಯಿತು. ತನ್ನ ತಂದೆ ಯಾಕೂಬ್‌ನೊಂದಿಗೆ ಬುಲಂದ್‌ಶಹರ್‌ನಿಂದ ಹಿಂದಿರುಗುತ್ತಿದ್ದಾಗ ಶಾವೇಜ್ ಮೃತಪಟ್ಟಿದ್ದಾನೆ.

ಶಾವೇಜ್ ಅವರ ಕುಟುಂಬವು ಘಟನೆಯ ಬಗ್ಗೆ ಕ್ರಮಕ್ಕೆ ಒತ್ತಾಯಿಸಿದೆ ಮತ್ತು ಇಂತಹ ಘಟನೆಗಳು ನಡೆಯದಂತೆ ಆಡಳಿತ ಮತ್ತು ಅಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ಘಾಜಿಯಾಬಾದ್ ಮುನ್ಸಿಪಲ್ ಕಾರ್ಪೊರೇಷನ್ ಮಹಿಳೆಗೆ ನೋಟಿಸ್ ಜಾರಿ ಮಾಡಿದೆ, ಅವರು ಅನಧಿಕೃತವಾಗಿ ನಾಯಿಯನ್ನು ಸಾಕುತ್ತಿದ್ದು, ಅವು ಬೀದಿಯಲ್ಲಿ ಓಡಾಡುವವರನ್ನು ಕಚ್ಚುತ್ತಿದೆ ಎಂದು ಹೇಳಿದ್ದಾರೆ.

ಈ ನಾಯಿಗಳಿಗೆ ರೇಬಿಸ್ ಲಸಿಕೆಗಳನ್ನು ನೀಡಲಾಗಿದೆಯೇ ಎಂದು ಕಾರ್ಪೊರೇಷನ್ ಪ್ರಶ್ನಿಸಿದೆ. ಘಾಜಿಯಾಬಾದ್​ ಮುನ್ಸಿಪಲ್ ಕಾರ್ಪೊರೇಷನ್ ಅಡಿಯಲ್ಲಿ, ಸಾಕು ನಾಯಿಗಳಿಗೆ ನೋಂದಣಿ ಮತ್ತು ಲಸಿಕೆ ಹಾಕುವುದು ಕಡ್ಡಾಯವಾಗಿದೆ.

ನಾಯಿಗಳ ನೋಂದಣಿ ವಿವರಗಳೊಂದಿಗೆ ನೋಟಿಸ್‌ಗೆ ಪ್ರತಿಕ್ರಿಯಿಸಲು ಮಹಿಳೆಗೆ ಮೂರು ದಿನಗಳ ಕಾಲಾವಕಾಶ ನೀಡಲಾಗಿದೆ, ವಿಫಲವಾದರೆ 5,000 ರೂ. ದಂಡ ವಿಧಿಸಲಾಗುತ್ತದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 9:14 am, Wed, 6 September 23

ಭೈರತಿ ರಣಗಲ್: ಶಿವಮೊಗ್ಗದಲ್ಲಿ ಫ್ಯಾನ್ಸ್ ಜತೆ ಸಂಭ್ರಮಿಸಿದ ಶಿವರಾಜ್​ಕುಮಾರ್
ಭೈರತಿ ರಣಗಲ್: ಶಿವಮೊಗ್ಗದಲ್ಲಿ ಫ್ಯಾನ್ಸ್ ಜತೆ ಸಂಭ್ರಮಿಸಿದ ಶಿವರಾಜ್​ಕುಮಾರ್
ಬಿಜೆಪಿ ಸೋಲಿಗೆ ಯತ್ನಾಳ್​ನ ಹರಕು ಬಾಯಿ ಕಾರಣ: ರೇಣುಕಾಚಾರ್ಯ ವಾಗ್ದಾಳಿ
ಬಿಜೆಪಿ ಸೋಲಿಗೆ ಯತ್ನಾಳ್​ನ ಹರಕು ಬಾಯಿ ಕಾರಣ: ರೇಣುಕಾಚಾರ್ಯ ವಾಗ್ದಾಳಿ
ಸುದೀಪ್​ ಹೇಳಿದ ಒಂದೇ ಮಾತಿಗೆ ಉಗ್ರಂ ಮಂಜು, ಗೌತಮಿ ನಡುವಿನ ಸ್ನೇಹ ಕಟ್
ಸುದೀಪ್​ ಹೇಳಿದ ಒಂದೇ ಮಾತಿಗೆ ಉಗ್ರಂ ಮಂಜು, ಗೌತಮಿ ನಡುವಿನ ಸ್ನೇಹ ಕಟ್
ಅಂಬರೀಶ್ ಪುಣ್ಯಸ್ಮರಣೆ, ಸಮಾಧಿಗೆ ಪೂಜೆ ಮಾಡಿದ ಸುಮಲತಾ ಅಂಬರೀಶ್
ಅಂಬರೀಶ್ ಪುಣ್ಯಸ್ಮರಣೆ, ಸಮಾಧಿಗೆ ಪೂಜೆ ಮಾಡಿದ ಸುಮಲತಾ ಅಂಬರೀಶ್
ಮೊಮ್ಮಗ ನಿಖಿಲ್ ಸೋಲಿನ ಬಗ್ಗೆ ದೇವೇಗೌಡರ ಮೊದಲ ಪ್ರತಿಕ್ರಿಯೆ ಹೇಗಿತ್ತು ನೋಡಿ
ಮೊಮ್ಮಗ ನಿಖಿಲ್ ಸೋಲಿನ ಬಗ್ಗೆ ದೇವೇಗೌಡರ ಮೊದಲ ಪ್ರತಿಕ್ರಿಯೆ ಹೇಗಿತ್ತು ನೋಡಿ
ಸಮುದ್ರಕ್ಕೆ ಹಾರಿದ ಯುವತಿ, ರೋಚಕ ರಕ್ಷಣಾ ಕಾರ್ಯಾಚರಣೆ ಹೀಗಿತ್ತು ನೋಡಿ
ಸಮುದ್ರಕ್ಕೆ ಹಾರಿದ ಯುವತಿ, ರೋಚಕ ರಕ್ಷಣಾ ಕಾರ್ಯಾಚರಣೆ ಹೀಗಿತ್ತು ನೋಡಿ
ನಾಥನ್ ಲಿಯಾನ್ ಹೆಣೆದ ಬಲೆಗೆ ಬಿದ್ದ ರಿಷಭ್ ಪಂತ್
ನಾಥನ್ ಲಿಯಾನ್ ಹೆಣೆದ ಬಲೆಗೆ ಬಿದ್ದ ರಿಷಭ್ ಪಂತ್
ಆಸ್ಟ್ರೇಲಿಯಾ ಪಾಲಿಗೆ ದುಬಾರಿಯಾದ ಖ್ವಾಜಾ ಕೈಬಿಟ್ಟ ಕ್ಯಾಚ್
ಆಸ್ಟ್ರೇಲಿಯಾ ಪಾಲಿಗೆ ದುಬಾರಿಯಾದ ಖ್ವಾಜಾ ಕೈಬಿಟ್ಟ ಕ್ಯಾಚ್
ಮಹಾರಾಷ್ಟ್ರ: ಸ್ವತಂತ್ರ ಅಭ್ಯರ್ಥಿಯ ವಿಜಯೋತ್ಸವದ ವೇಳೆ ಅಗ್ನಿ ಅವಘಡ
ಮಹಾರಾಷ್ಟ್ರ: ಸ್ವತಂತ್ರ ಅಭ್ಯರ್ಥಿಯ ವಿಜಯೋತ್ಸವದ ವೇಳೆ ಅಗ್ನಿ ಅವಘಡ
ಸಂಭಾಲ್ ಜಾಮಾ ಮಸೀದಿ ಸಮೀಕ್ಷೆ ವೇಳೆ ಕಲ್ಲು ತೂರಾಟ
ಸಂಭಾಲ್ ಜಾಮಾ ಮಸೀದಿ ಸಮೀಕ್ಷೆ ವೇಳೆ ಕಲ್ಲು ತೂರಾಟ