Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಿ20 ಶೃಂಗಸಭೆ: ಮೆಟ್ರೋವನ್ನು ಬೆಳಗ್ಗೆ ಬೇಗ ಪ್ರಾರಂಭಿಸುವಂತೆ ಡಿಎಂಆರ್​ಸಿಗೆ ದೆಹಲಿ ಪೊಲೀಸ್ ಆಯುಕ್ತರ ಪತ್ರ

ಜಿ20 ಶೃಂಗಸಭೆಯ ವೇಳೆ ಕರ್ತವ್ಯಕ್ಕೆ ನಿಯೋಜಿಸಿರುವ ಸಿಬ್ಬಂದಿಗಾಗಿ ದೆಹಲಿ ಪೊಲೀಸ್ ಆಯುಕ್ತರು ಡಿಎಂಆರ್​ಸಿಗೆ ಪತ್ರ ಬರೆದಿದ್ದು ಬೆಳಗ್ಗೆ 4 ಗಂಟೆಗೆ ಮೆಟ್ರೋವನ್ನು ಪ್ರಾರಂಭಿಸುವಂತೆ ಮನವಿ ಮಾಡಿದ್ದಾರೆ. ದೆಹಲಿ ಪೊಲೀಸ್ ಕಮಿಷನರ್ ಸಂಜಯ್ ಅರೋರಾ ಮಂಗಳವಾರ ಡಿಎಂಆರ್‌ಸಿ ವ್ಯವಸ್ಥಾಪಕ ನಿರ್ದೇಶಕ ವಿಕಾಸ್ ಕುಮಾರ್ ಅವರಿಗೆ ಸೆಪ್ಟೆಂಬರ್ 8 ರಿಂದ 10 ರವರೆಗೆ ಬೆಳಿಗ್ಗೆ 4 ರಿಂದ ಮೆಟ್ರೋ ಸೇವೆಯನ್ನು ಪ್ರಾರಂಭಿಸಬೇಕು ಎಂದು ಒತ್ತಾಯಿಸಿದರು.

ಜಿ20 ಶೃಂಗಸಭೆ: ಮೆಟ್ರೋವನ್ನು ಬೆಳಗ್ಗೆ ಬೇಗ ಪ್ರಾರಂಭಿಸುವಂತೆ ಡಿಎಂಆರ್​ಸಿಗೆ ದೆಹಲಿ ಪೊಲೀಸ್ ಆಯುಕ್ತರ ಪತ್ರ
ದೆಹಲಿ ಮೆಟ್ರೋ Image Credit source: The Economic Times
Follow us
ನಯನಾ ರಾಜೀವ್
|

Updated on: Sep 06, 2023 | 8:19 AM

ಜಿ20 ಶೃಂಗಸಭೆಯ ವೇಳೆ ಕರ್ತವ್ಯಕ್ಕೆ ನಿಯೋಜಿಸಿರುವ ಸಿಬ್ಬಂದಿಗಾಗಿ ದೆಹಲಿ ಪೊಲೀಸ್ ಆಯುಕ್ತರು ಡಿಎಂಆರ್​ಸಿಗೆ ಪತ್ರ ಬರೆದಿದ್ದು ಬೆಳಗ್ಗೆ 4 ಗಂಟೆಗೆ ಮೆಟ್ರೋವನ್ನು ಪ್ರಾರಂಭಿಸುವಂತೆ ಮನವಿ ಮಾಡಿದ್ದಾರೆ. ದೆಹಲಿ ಪೊಲೀಸ್ ಕಮಿಷನರ್ ಸಂಜಯ್ ಅರೋರಾ ಮಂಗಳವಾರ ಡಿಎಂಆರ್‌ಸಿ ವ್ಯವಸ್ಥಾಪಕ ನಿರ್ದೇಶಕ ವಿಕಾಸ್ ಕುಮಾರ್ ಅವರಿಗೆ ಸೆಪ್ಟೆಂಬರ್ 8 ರಿಂದ 10 ರವರೆಗೆ ಬೆಳಿಗ್ಗೆ 4 ರಿಂದ ಮೆಟ್ರೋ ಸೇವೆಯನ್ನು ಪ್ರಾರಂಭಿಸಬೇಕು ಎಂದು ಒತ್ತಾಯಿಸಿದರು.

ನಿರ್ಬಂಧಗಳ ದೃಷ್ಟಿಯಿಂದ ಸೆಪ್ಟೆಂಬರ್ 8, 9 ಮತ್ತು 10 ರಂದು ಮೆಟ್ರೋ ಸೇವೆಗಳನ್ನು ಬೆಳಗ್ಗೆ 4 ಗಂಟೆಗೆ ಪುನರಾರಂಭಿಸಬಹುದೇ ಎಂದು ವಿನಂತಿಸಿದ್ದಾರೆ. ಶೃಂಗಸಭೆಯ ಕಾರಣ ಸಂಚಾರವನ್ನು ನಿರ್ಬಂಧಿಸಿರುವ ಪ್ರದೇಶಗಳಲ್ಲಿ ಮೆಟ್ರೋ ಸೇವೆಗಳು ಬೇಗನೆ ಪ್ರಾರಂಭವಾದರೆ, ಇದು ನಗರದಾದ್ಯಂತ ಪೊಲೀಸ್ ಮತ್ತು ಇತರ ಸಹಾಯಕ ಸಿಬ್ಬಂದಿ ತೊಂದರೆಯಿಲ್ಲ ಸಂಚರಿಸಬಹುದು ಎಂದು ಹೇಳಿದೆ.

ಭದ್ರತಾ ಸಿಬ್ಬಂದಿಗಳು ಐಇಸಿಸಿ, ಐಟಿಪಿಒ ಮತ್ತು ರಾಜ್‌ಘಾಟ್‌ನಂತಹ ಸ್ಥಳಗಳಿಗೆ ಬೆಳಿಗ್ಗೆ 5 ಗಂಟೆಗೆ ತಲುಪಬೇಕು ಎಂದು ಆಯುಕ್ತರು ಹೇಳಿದರು. ದೆಹಲಿಯಲ್ಲಿನ ಟ್ರಾಫಿಕ್ ನಿರ್ಬಂಧಗಳ ದೃಷ್ಟಿಯಿಂದ, ಪ್ರಾಥಮಿಕವಾಗಿ NDMC ಮತ್ತು ನೈಋತ್ಯ ಜಿಲ್ಲೆಗಳಲ್ಲಿ, ಸೆಪ್ಟೆಂಬರ್ 8,9 ಮತ್ತು 10 ರಂದು ಮೆಟ್ರೋ ಸೇವೆಗಳು ಬೆಳಿಗ್ಗೆ 4 ಗಂಟೆಯಿಂದ ಪ್ರಾರಂಭವಾದರೆ ಪೊಲೀಸ್ ಮತ್ತು ಇತರ ಸಹಾಯಕ ಸಿಬ್ಬಂದಿಗೆ ಹೆಚ್ಚಿನ ಅನುಕೂಲವಾಗಲಿದೆ.

ಮತ್ತಷ್ಟು ಓದಿ: G-20 Summit: ದೆಹಲಿಗೆ ಹೋಗುತ್ತಿದ್ದಿರಾ? ನವದೆಹಲಿ, ದೆಹಲಿ, ನಿಜಾಮುದ್ದೀನ್ ರೈಲು ನಿಲ್ದಾಣಗಳಿಗೆ ತೆರಳುವವರಿಗೆ ಇಲ್ಲಿದೆ ಸಲಹೆ

ಭಾರತವು ಈ ವರ್ಷ ಜಿ20ಯ ಅಧ್ಯಕ್ಷತೆವಹಿಸಲಿರುವ ಕಾರಣ ದೆಹಲಿಯಲ್ಲಿಯೇ ಶೃಂಗಸಭೆ ನಡೆಯಲಿದ್ದು, ಅಮೆರಿಕ ಅಧ್ಯಕ್ಷ ಜೋ ಬೈಡನ್ ಸೇರಿದಂತೆ ವಿಶ್ವದ ಉನ್ನತ ನಾಯಕರು ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಭಾರತಕ್ಕೆ ಆಗಮಿಸುತ್ತಿದ್ದಾರೆ. ಸೆಪ್ಟೆಂಬರ್ 9 ಹಾಗೂ 10 ಎರಡು ದಿನಗಳ ಕಾಲ ಶೃಂಗಸಭೆ ನಡೆಯಲಿದ್ದು, ಭದ್ರತೆಯನ್ನು ಹೆಚ್ಚಿಸಲಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ