AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊಲೆಸ್ಟ್ರಾಲ್ ಸಮಸ್ಯೆಯನ್ನು ನೈಸರ್ಗಿಕ ಗಿಡಮೂಲಿಕೆಗಳ ಸಹಾಯದಿಂದಲೂ ನಿವಾರಿಸಬಹುದು: ತಜ್ಞರ ಅಭಿಪ್ರಾಯ ಇಲ್ಲಿದೆ

ಅನಾರೋಗ್ಯಕರ ಜೀವನಶೈಲಿ, ಕೆಟ್ಟ ಆಹಾರ ಪದ್ದತಿಯ ಪಾಲನೆಯ ಕಾರಣದಿಂದ ಇಂದಿನ ದಿನಗಳಲ್ಲಿ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಹೆಚ್ಚಾಗುತ್ತಿವೆ. ಇವುಗಳಲ್ಲಿ ಒಂದು ಅಧಿಕ ಕೊಲೆಸ್ಟ್ರಾಲ್. ಈ ಸಮಸ್ಯೆಯನ್ನು ನಿಭಾಯಿಸಲು ಹೆಚ್ಚಿನವರು ಔಷಧಿಗಳು ಮತ್ತು ವೈದ್ಯಕೀಯ ಚಿಕಿತ್ಸೆಗಳನ್ನು ಪಡೆದುಕೊಳ್ಳುತ್ತಾರೆ. ಆದರೆ ಜೀವನಶೈಲಿಯ ಬದಲಾವಣೆ ಮತ್ತು ಕೆಲವು ಗಿಡಮೂಲಿಕೆಗಳ ಸಹಾಯದಿಂದಲೂ ಈ ಸಮಸ್ಯೆಯನ್ನು ನಿವಾರಿಸಬಹುದು ಎಂದು ತಜ್ಞರು ಹೇಳುತ್ತಾರೆ.

ಕೊಲೆಸ್ಟ್ರಾಲ್ ಸಮಸ್ಯೆಯನ್ನು ನೈಸರ್ಗಿಕ ಗಿಡಮೂಲಿಕೆಗಳ ಸಹಾಯದಿಂದಲೂ ನಿವಾರಿಸಬಹುದು: ತಜ್ಞರ ಅಭಿಪ್ರಾಯ ಇಲ್ಲಿದೆ
Cholesterol problemImage Credit source: Pinterest
ಮಾಲಾಶ್ರೀ ಅಂಚನ್​
| Updated By: ಅಕ್ಷತಾ ವರ್ಕಾಡಿ|

Updated on: Sep 06, 2023 | 6:12 PM

Share

ದೇಹದಲ್ಲಿ ಹೊಸ ಜೀವಕೋಶಗಳು ಮತ್ತು ಹಾರ್ಮೋನುಗಳನ್ನು ಕ್ರಮವಾಗಿ ಇರಿಸುವಲ್ಲಿ ಕೊಲೆಸ್ಟ್ರಾಲ್ ಬಹಳ ಮುಖ್ಯ ಪಾತ್ರವನ್ನು ವಹಿಸುತ್ತದೆ. ಕೊಲೆಸ್ಟ್ರಾಲ್ ಮೃದುವಾದ ಮೇಣ ಅಥವಾ ಕೊಬ್ಬಿನಂತಹ ವಸ್ತುವಾಗಿದೆ. ಇದು ದೇಹದಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚಾದಾಗ ಹಲವು ಸಮಸ್ಯೆಗಳು ಭಾಧಿಸಲು ಪ್ರಾರಂಭವಾಗುತ್ತದೆ. ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾದಾಗ ಹೃದಯಾಘಾತ, ಪಾರ್ಶ್ವವಾಯು, ಟೈಪ್ 2 ಮಧುಮೇಹ ಮತ್ತು ಇತರ ಕಾಯಿಲೆಗಳ ಅಪಾಯವು ಹೆಚ್ಚಾಗುತ್ತದೆ. ಕೊಲೆಸ್ಟ್ರಾಲ್ ಹೃದಯಾಘಾತವನ್ನು ಅಪಾಯವನ್ನು ಹೆಚ್ಚಿಸುತ್ತದೆ. ಅದಕ್ಕಾಗಿಯೇ ಕೆಟ್ಟ ಕೊಲೆಸ್ಟ್ರಾಲ್ ನಮ್ಮ ಜೀವಕ್ಕೆ ಅಪಾಯಕಾರಿ ಎಂದು ಪರಿಗಣಿಸಲಾಗಿದೆ. ಈ ಸಮಸ್ಯೆಯನ್ನು ನಿಭಾಯಿಸಲು ಹೆಚ್ಚಿ ಜನರು ಔಷಧಿಗಳು ಮತ್ತು ವೈದ್ಯಕೀಯ ಚಿಕಿತ್ಸೆಗಳನ್ನು ಪಡೆದುಕೊಳ್ಳುತ್ತಾರೆ. ಇದರ ಹೊರತಾಗಿ ಆರೋಗ್ಯಕರ ಜೀವನಶೈಲಿ, ಸರಿಯಾದ ಆಹಾರ ಕ್ರಮದ ಪಾಲನೆ ಮತ್ತು ಕೆಲವು ಗಿಡಮೂಲಿಕೆಗಳ ಸಹಾಯದಿಂದ ಈ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದು ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ.

ಹೆಲ್ತ್ ಆಂಡ್ ಫುಡ್ ಸಪ್ಲಿಮೆಂಟ್ಸ್ ಇನ್ಫರ್ಮೇಷನ್ ಸರ್ವಿಸ್ ನ ಪೌಷ್ಟಿಕ ತಜ್ಞೆ ಡಾ. ಪಮೇಲಾ ಮೇಸನ್ ಎಕ್ಸ್ ಪ್ರೆಸ್.ಕೊ.ಯುಕೆ (Express.co.uk) ಗೆ ನೀಡಿದ ಸಂದರ್ಶನದಲ್ಲಿ, ನಾವು ಸೇವನೆ ಮಾಡುವ ಆಹಾರದಲ್ಲಿ ಕೆಲವೊಂದು ಗಿಡಮೂಲಿಕೆಗಳನ್ನು ಸೇರಿಸಿದರೆ ಅಧಿಕ ಕೊಲೆಸ್ಟ್ರಾಲ್ ಸಮಸ್ಯೆಯಿಂದ ಮುಕ್ತಿಪಡೆಯಬಹುದು ಎಂಬುದನ್ನು ತಿಳಿಸಿದ್ದಾರೆ.

ಸಂಶೋಧನೆಯ ಆಧಾರದ ಮೇಲೆ ಡಾ. ಮೇಸನ್ ಶುಂಠಿ, ಬ್ಲೂ ಬೆರ್ರಿ , ಕ್ರ್ಯಾನ್ಬೆರಿ, ಬೆಳ್ಳುಳ್ಳಿ ಮತ್ತು ಜಿನ್ಸೆಂಗ್ ಈ ಐದು ಗಿಡಮೂಲಿಕೆಗಳು ಕೊಲೆಸ್ಟ್ರಾಲ್ ನ್ನು ನಿಯಂತ್ರಿಸಲು ಸಹಕಾರಿ ಎಂಬುದನ್ನು ತಿಳಿಸಿದ್ದಾರೆ. ಶುಂಠಿ, ಬಿಲ್ಬೆರಿ, ಕ್ರ್ಯಾನ್ಬೆರಿ, ಈ ಮೂರು ಮೂಲಿಕೆಗಳು ಉತ್ಕರ್ಷಣ ನಿರೋಧಕ ಅಂಶಗಳಲ್ಲಿ ಸಮೃದ್ಧವಾಗಿದೆ. ವಿಶೇಷವಾಗಿ ಪಾಲಿಫಿನಾಲ್ ಗಳು. ಇದು ದೇಹಕ್ಕೆ ಹಲವು ಪ್ರಯೋಜನವನ್ನು ನೀಡುತ್ತದೆ. ಈ ಸಸ್ಯ ಸಂಯುಕ್ತಗಳು ಉರಿಯೂತವನ್ನು ಕಡಿಮೆ ಮಾಡಲು ಮತ್ತು ರಕ್ತನಾಳಗಳ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಪೌಷ್ಟಿಕ ತಜ್ಞೆ ಡಾ. ಪಮೇಲಾ ಮೇಸನ್ ಹೇಳುತ್ತಾರೆ.

ಬ್ಲೂಬೆರ್ರಿ ನಿರ್ಧಿಷ್ಟ ಆಂಥೋಸಯಾನಿನ್ ಪಾಲಿಫಿನಾಲ್ ಸಂಯುಕ್ತಗಳನ್ನು ಹೊಂದಿದ್ದು, ಅದು ಕೊಲೆಸ್ಟ್ರಾಲ್ ಮಟ್ಟವನ್ನು ಸಾಮಾನ್ಯಗೊಳಿಸಲು ಸಹಾಯ ಮಾಡುತ್ತದೆ. ಜೊತೆಗೆ ಶುಂಠಿಯು ರಕ್ತನಾಳಗಳಲ್ಲಿನ ಕ್ಯಾಲ್ಸಿಯಂ ಚಾನಲ್ ಗಳ ಮೇಲೆ ಪರಿಣಾಮ ಬೀರುವ ಮೂಲಕ ಅಧಿಕ ಕೊಲೆಸ್ಟ್ರಾಲ್ ನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: ನಿದ್ರೆ ಮಾಡಲಾಗದೆ ಒದ್ದಾಡುತ್ತಿದ್ದೀರಾ? ನಿದ್ರಾಹೀನತೆಗೆ ಅಶ್ವಗಂಧ ರಾಮಬಾಣ

ಜರ್ನಲ್ ಆಫ್ ಎಥ್ನೋಫಾರ್ಮಾಕಾಲಜಿ ಎಂಬ ನಿಯತಕಾಲಿಕೆಯಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ ಜಿನ್ಸೆಂಗ್ ಗಿಡಮೂಲಿಕೆಯು ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ. ಹಾಗೂ ನ್ಯೂಟ್ರಿಷನ್ ಜರ್ನಲ್ ಎಂಬ ನಿಯತಕಾಲಿಕೆಯಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಬೆಳ್ಳುಳ್ಳಿಯ ಪೂರಕಗಳು ಅಧಿಕ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಈ ಎಲ್ಲಾ ಸಂಶೋಧನೆಗಳ ಆಧಾರದ ಮೇಲೆ ಅಧಿಕ ಕೊಲೆಸ್ಟ್ರಾಲ್ ಸಮಸ್ಯೆಯಿಂದ ಉತ್ತಮ ಫಲಿತಾಂಶಗಳನ್ನು ಪಡೆಯಲು ಈ ಗಿಡಮೂಲಿಕಗಳನ್ನು ಸಮತೋಲಿತ ಆಹಾರದೊಂದಿಗೆ ಸಂಯೋಜಿಸಲು ಡಾ. ಮೇಸನ್ ಶಿಫಾರಸು ಮಾಡುತ್ತಾರೆ. ಅಲ್ಲದೆ ನೀವು ಶುಂಠಿ, ಬ್ಲೂಬೆರ್ರಿ, ಕ್ರ್ಯಾನ್ ಬೆರಿ, ಬೆಳ್ಳುಳ್ಳಿ ಮತ್ತು ಜಿನ್ಸೆಂಗ್ ಗಳನ್ನು ಪೂರಕ ರೂಪದಲ್ಲಿ ತೆಗೆದುಕೊಳ್ಳಬಹುದು ಎಂದು ಡಾ. ಮೇಸನ್ ಸಲಹೆ ನೀಡಿದ್ದಾರೆ.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ