AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

International Yoga Day 2023: ಯೋಗ ಮಾಡುವಾಗ ನೀರು ಕುಡಿಯಬಹುದೇ? ಯೋಗ ಮಾಡ್ತಾ ಮಾಡ್ತಾ ನೀರನ್ನು ಕುಡಿಯುವುದು ಹೇಗೆ?

ಯೋಗ ಮತ್ತು ವ್ಯಾಯಾಮ ದೇಹವನ್ನು ಬೆಚ್ಚಗಾಗಿಸುತ್ತದೆ. ಹೃದಯ ಬಡಿತ ಹೆಚ್ಚಾಗುತ್ತದೆ. ಇಂತಹ ಸಮಯದಲ್ಲಿ ನೀರು ಕುಡಿಯುವುದು ಹೃದಯಾಘಾತ ಮತ್ತು ಪಾರ್ಶ್ವವಾಯುವಿಗೆ ಕಾರಣವಾಗಬಹುದು.

International Yoga Day 2023: ಯೋಗ ಮಾಡುವಾಗ ನೀರು ಕುಡಿಯಬಹುದೇ? ಯೋಗ ಮಾಡ್ತಾ ಮಾಡ್ತಾ ನೀರನ್ನು ಕುಡಿಯುವುದು ಹೇಗೆ?
ಯೋಗ ಮಾಡುವಾಗ ನೀರು ಕುಡಿಯಬಹುದೇ?
ಸಾಧು ಶ್ರೀನಾಥ್​
|

Updated on: Jun 21, 2023 | 11:32 AM

Share

ಯೋಗದ ಮಹತ್ವ ಮತ್ತು ಅದರಿಂದಾಗುವ ಪ್ರಯೋಜನಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಪ್ರತಿ ವರ್ಷ ಜೂನ್ 21 ರಂದು ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಗುತ್ತದೆ. ಇತ್ತೀಚೆಗೆ ಭಾರತೀಯರು ಮಾತ್ರವಲ್ಲ.. ಪ್ರಪಂಚದಾದ್ಯಂತ ಅನೇಕ ಜನರು ಯೋಗವನ್ನು ತಮ್ಮ ದಿನಚರಿಯ ಭಾಗವಾಗಿಸಿಕೊಂಡಿದ್ದಾರೆ. ಯೋಗ ಮಾನಸಿಕವಾಗಿ ಮತ್ತು ದೈಹಿಕವಾಗಿ ಆರೋಗ್ಯವಾಗಿರಲು ಸಹಾಯ ಮಾಡುತ್ತದೆ. ಆದರೆ, ಯೋಗ ಅಥವಾ ಯಾವುದೇ ವ್ಯಾಯಾಮದ ಸಮಯದಲ್ಲಿ ದೇಹದ ಉಷ್ಣತೆಯು ಹೆಚ್ಚಾಗುತ್ತದೆ. ಮತ್ತು ವಾತಾವರಣದ ಉಷ್ಣತೆಯಿಂದಾಗಿಯೂ ದೇಹವು ಮತ್ತಷ್ಟು ಬಿಸಿಯಾಗುತ್ತದೆ, ಬಳಲುತ್ತದೆ, ಬಾಯಾರಿಕೆಯಾಗುತ್ತದೆ. ಯೋಗ ಮಾಡುವಾಗ ನೀರು ಕುಡಿಯಬಹುದೇ? ನೀರು ಕುಡಿಯುವ ಅಭ್ಯಾಸವಿದ್ದರೆ, ನೀರನ್ನು ಹೇಗೆ ಕುಡಿಯಬೇಕು? ಇಲ್ಲಿ ನಾವು ಆ ಪ್ರಮುಖ ವಿವರಗಳನ್ನು ತಿಳಿಯೋಣ..

ಯೋಗ ಮಾಡುವಾಗ ನೀರು ಕುಡಿಯಬಹುದು: ಯಾವುದೇ ದೈಹಿಕ ಚಟುವಟಿಕೆಯಿಂದ ಬಾಯಾರಿಕೆಯಾಗುತ್ತದೆ. ಆದಾಗ್ಯೂ, ವ್ಯಾಯಾಮ ಮತ್ತು ಯೋಗದ ಸಮಯದಲ್ಲಿ ನೀರು ಕುಡಿಯುವುದು ತಮ್ಮ ಆರೋಗ್ಯಕ್ಕೆ ಹಾನಿ ಮಾಡುತ್ತದೆ ಎಂದು ಹಲವರು ಭಾವಿಸುತ್ತಾರೆ. ಆದರೆ ಇದು ನಿಜವಲ್ಲ ಎನ್ನುತ್ತಾರೆ ತಜ್ಞರು. ಯೋಗ ಮಾಡುವ ನಡುವೆ ನೀವು ಗುಟುಕು ನೀರು ಕುಡಿಯಬಹುದು ಎಂದು ಹೇಳಲಾಗುತ್ತದೆ. ಈ ರೀತಿ ಮಾಡುವುದರಿಂದ ದೇಹವು ಜಲೀಕರಣಗೊಳ್ಳುತ್ತದೆ ಮತ್ತು ಇದರಿಂದ ದೇಹಕ್ಕೆ ಶಕ್ತಿಯೂ ಸಿಗುತ್ತದೆ ಎಂದು ಹೇಳಲಾಗುತ್ತದೆ.

ಯೋಗ ಮತ್ತು ವ್ಯಾಯಾಮ ಮಾಡುವಾಗ ನೀರು ಕುಡಿಯುವಾಗ ಈ ತಪ್ಪುಗಳನ್ನು ಮಾಡಬೇಡಿ.. ಅನೇಕ ಜನರು ಯೋಗ ಮಾಡುವಾಗ ನೀರು ಕುಡಿಯುವುದಿಲ್ಲ. ಆದರೆ, ದೇಹದ ಪ್ರಕಾರವನ್ನು ಅವಲಂಬಿಸಿ ಈ ಸಲಹೆಯನ್ನು ಅನುಸರಿಸಬೇಕು ಎಂದು ತಜ್ಞರು ಹೇಳುತ್ತಾರೆ. ತಾಪಮಾನ ಹೆಚ್ಚಿರುವಾಗ ಯೋಗ ಮಾಡುತ್ತಿದ್ದರೆ, ಮಧ್ಯೆ ಸ್ವಲ್ಪ ನೀರು ಕುಡಿಯಲು ತಜ್ಞರು ಸಲಹೆ ನೀಡುತ್ತಾರೆ.

ಯೋಗದ ಸಮಯದಲ್ಲಿ ತಣ್ಣೀರು ಕುಡಿಯಬೇಡಿ. ತಣ್ಣೀರು ಕುಡಿಯುವುದು ಹೃದಯ ಬಡಿತದ ಮೇಲೆ ಪರಿಣಾಮ ಬೀರುತ್ತದೆ. ಅದಕ್ಕಾಗಿಯೇ ನೀವು ಸಾಮಾನ್ಯ ನೀರನ್ನು ಕುಡಿಯಬೇಕು.

ಯೋಗ ಮಾಡಿದ ತಕ್ಷಣ ನೀರು ಕುಡಿಯಬೇಡಿ. ಯೋಗ ಮತ್ತು ವ್ಯಾಯಾಮ ಮಾಡಿದ ತಕ್ಷಣ ನೀರು ಕುಡಿಯಬೇಡಿ. ಯೋಗ ಮತ್ತು ವ್ಯಾಯಾಮ ದೇಹವನ್ನು ಬೆಚ್ಚಗಾಗಿಸುತ್ತದೆ. ಹೃದಯ ಬಡಿತ ಹೆಚ್ಚಾಗುತ್ತದೆ. ಇಂತಹ ಸಮಯದಲ್ಲಿ ನೀರು ಕುಡಿಯುವುದು ಹೃದಯಾಘಾತ ಮತ್ತು ಪಾರ್ಶ್ವವಾಯುವಿಗೆ ಕಾರಣವಾಗಬಹುದು.

ಸಾಮಾನ್ಯ ನೀರು ಬೆರೆಸಿದ ತಣ್ಣೀರು ಕುಡಿಯುವುದು ಕೂಡ ಆರೋಗ್ಯಕ್ಕೆ ಒಳ್ಳೆಯದಲ್ಲ. ಬದಲಿಗೆ ಮಡಕೆ ನೀರನ್ನು ಕುಡಿಯುವುದು ಉತ್ತಮ.

ವಿಶ್ವ ಯೋಗ ದಿನಾಚರಣೆ ಕುರಿತಾದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
‘ಕರ್ನಾಟಕ ಸಹೋದರನ ಮನೆ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ: ಬಾಲಯ್ಯ
‘ಕರ್ನಾಟಕ ಸಹೋದರನ ಮನೆ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ: ಬಾಲಯ್ಯ
ಸ್ಕೈಡೈವ್ ಮಾಡುವಾಗ ವಿಮಾನದ ರೆಕ್ಕೆಗೆ ಸಿಲುಕಿದ ಪ್ಯಾರಾಚೂಟ್
ಸ್ಕೈಡೈವ್ ಮಾಡುವಾಗ ವಿಮಾನದ ರೆಕ್ಕೆಗೆ ಸಿಲುಕಿದ ಪ್ಯಾರಾಚೂಟ್
ಡಿಕೆ ಶಿವಕುಮಾರ್ ಡಿನ್ನರ್ ಮೀಟಿಂಗ್ ರಹಸ್ಯ ಇಲ್ಲಿದೆ ನೋಡಿ
ಡಿಕೆ ಶಿವಕುಮಾರ್ ಡಿನ್ನರ್ ಮೀಟಿಂಗ್ ರಹಸ್ಯ ಇಲ್ಲಿದೆ ನೋಡಿ
ಹುಬ್ಬಳ್ಳಿ: ಮಹಿಳೆಯರ ಮುಂದೆ ಅಸಭ್ಯವಾಗಿ ವರ್ತಿಸಿದವನಿಗೆ ಧರ್ಮದೇಟು!
ಹುಬ್ಬಳ್ಳಿ: ಮಹಿಳೆಯರ ಮುಂದೆ ಅಸಭ್ಯವಾಗಿ ವರ್ತಿಸಿದವನಿಗೆ ಧರ್ಮದೇಟು!