Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಹಿಳೆಯರಲ್ಲಿ ಋತುಬಂಧ ಸಮೀಪಿಸುತ್ತಿರುವ ಈ 7 ಚಿಹ್ನೆಗಳನ್ನು ನಿರ್ಲಕ್ಷ್ಯಿಸಬೇಡಿ!

ಋತುಬಂಧದ ಸಮಯದಲ್ಲಿ ಮಹಿಳೆಯರ ಹಾರ್ಮೋನುಗಳಲ್ಲಿ ಸಾಕಷ್ಟು ವ್ಯತ್ಯಾಸವಾಗುವುದರಿಂದ ತೂಕ ಹೆಚ್ಚಾಗುವುದು, ಅನಿಯಮಿತ ಋತುಚಕ್ರ, ಮೂಡ್ ಸ್ವಿಂಗ್ ಹೀಗೆ ಹಲವು ರೀತಿಯ ಬದಲಾವಣೆಗಳು ಆಗುತ್ತವೆ. ಋತುಬಂಧದ ಬಗ್ಗೆ ನಮ್ಮ ದೇಹ ಮೊದಲೇ ಕೆಲವು ಸಂಕೇತಗಳನ್ನು ನೀಡುತ್ತಿರುತ್ತದೆ.

ಮಹಿಳೆಯರಲ್ಲಿ ಋತುಬಂಧ ಸಮೀಪಿಸುತ್ತಿರುವ ಈ 7 ಚಿಹ್ನೆಗಳನ್ನು ನಿರ್ಲಕ್ಷ್ಯಿಸಬೇಡಿ!
ಪ್ರಾತಿನಿಧಿಕ ಚಿತ್ರImage Credit source: iStock
Follow us
ಸುಷ್ಮಾ ಚಕ್ರೆ
|

Updated on: Oct 09, 2023 | 3:59 PM

ಬಾಲಕಿಯರು ಋತುಮತಿಯರಾದ ನಂತರ ಅವರ ದೇಹದಲ್ಲಿ ಹಲವು ಬದಲಾವಣೆಗಳಾಗುತ್ತವೆ. ಹಾಗೇ, ಮಾನಸಿಕವಾಗಿಯೂ ಅವರಲ್ಲಿ ಬದಲಾವಣೆಗಳಾಗುತ್ತವೆ. ಅದೇ ರೀತಿ ಋತುಬಂಧದ ಸಮಯದಲ್ಲಿ ಕೂಡ ಹೆಣ್ಣುಮಕ್ಕಳ ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ಆರೋಗ್ಯದಲ್ಲಿ ಹೊರನೋಟಕ್ಕೆ ಕಾಣುವಷ್ಟರ ಮಟ್ಟಿಗೆ ಬದಲಾವಣೆಗಳಾಗುತ್ತವೆ. ಋತುಬಂಧದ ಸರಾಸರಿ ವಯಸ್ಸು 45ರಿಂದ 55 ವರ್ಷ. ಆದರೆ, ಬಹಳಷ್ಟು ಮಹಿಳೆಯರು ಕಳಪೆ ಜೀವನಶೈಲಿ ಮತ್ತು ಆಹಾರ ಪದ್ಧತಿಗಳಿಂದ 40 ವರ್ಷದೊಳಗೇ ಋತುಬಂಧವನ್ನು ಅನುಭವಿಸತೊಡಗಿದ್ದಾರೆ. 10ರಿಂದ 14 ವರ್ಷದಲ್ಲಿ ಶುರುವಾಗುವ ಋತುಚಕ್ರ 45ರ ಆಸುಪಾಸಿನಲ್ಲಿ ನಿಂತುಹೋಗುತ್ತದೆ. ಮಹಿಳೆಯರು ಮುಟ್ಟಾಗುವುದನ್ನು ನಿಲ್ಲುವುದಕ್ಕೆ ಋತುಬಂಧ ಎನ್ನಲಾಗುತ್ತದೆ.

ಋತುಬಂಧದ ಸಮಯದಲ್ಲಿ ಮಹಿಳೆಯರ ಹಾರ್ಮೋನುಗಳಲ್ಲಿ ಸಾಕಷ್ಟು ವ್ಯತ್ಯಾಸವಾಗುವುದರಿಂದ ತೂಕ ಹೆಚ್ಚಾಗುವುದು, ಅನಿಯಮಿತ ಋತುಚಕ್ರ, ಮೂಡ್ ಸ್ವಿಂಗ್ ಹೀಗೆ ಹಲವು ರೀತಿಯ ಬದಲಾವಣೆಗಳು ಆಗುತ್ತವೆ. ಆದರೆ, ಋತುಬಂಧದ ಬಗ್ಗೆ ನಮ್ಮ ದೇಹ ಮೊದಲೇ ಕೆಲವು ಸಂಕೇತಗಳನ್ನು ನೀಡುತ್ತಿರುತ್ತದೆ. ಆದರೂ ಕೆಲವು ಮಹಿಳೆಯರು ಅದನ್ನು ಗಮನಿಸುವುದೇ ಇಲ್ಲ. ಋತುಬಂಧದ ಆರಂಭಿಕ ಚಿಹ್ನೆಗಳನ್ನು ಮಹಿಳೆಯರು ನಿರ್ಲಕ್ಷ್ಯ ಮಾಡಬಾರದು. ಆ ರೀತಿಯ ಕೆಲವು ಲಕ್ಷಣಗಳ ಪಟ್ಟಿ ಇಲ್ಲಿದೆ.

ಋತುಬಂಧದ 7 ಸೂಕ್ಷ್ಮ ಚಿಹ್ನೆಗಳು:

ಯೋನಿಯ ಶುಷ್ಕತೆ:

ನಿಮ್ಮ ಗುಪ್ತಾಂಗ ಶುಷ್ಕವಾಗಿದ್ದರೆ, ತುರಿಕೆಯಿಂದ ಕೂಡಿದ್ದರೆ ಅದು ನಿಮ್ಮ ಋತುಬಂಧದ ಸುಳಿವಾಗಿರಬಹುದು. ನಮಗೆಲ್ಲರಿಗೂ ತಿಳಿದಿರುವಂತೆ ದೇಹದಲ್ಲಿ ಈಸ್ಟ್ರೊಜೆನ್ ಅಥವಾ ಸ್ತ್ರೀ ಹಾರ್ಮೋನ್ ಮಟ್ಟ ಕಡಿಮೆಯಾದಾಗ ಋತುಬಂಧ ಉಂಟಾಗುತ್ತದೆ. ಈ ಕಡಿಮೆಯಾದ ಹಾರ್ಮೋನ್ ವಲ್ವಾರ್ ಅಂಗಾಂಶವನ್ನು ತೆಳುವಾಗುವಂತೆ ಮಾಡುತ್ತದೆ. ಇದು ಚರ್ಮದ ತುರಿಕೆಕೆಗೆ ಕಾರಣವಾಗುತ್ತದೆ ಮತ್ತು ಉರಿಯೂತಕ್ಕೆ ಉಂಟಾಗುತ್ತದೆ. ಇದು ಮೂತ್ರದ ಸೋಂಕಿನ ಅಪಾಯವನ್ನೂ ಹೆಚ್ಚಿಸುತ್ತದೆ.

ಇದನ್ನೂ ಓದಿ: ಆರೋಗ್ಯ, ಸೌಂದರ್ಯವೆರಡಕ್ಕೂ ಬಟರ್ ಫ್ರೂಟ್​ನಲ್ಲಿದೆ ಪರಿಹಾರ

ಹೆಚ್ಚಿದ ಮೂತ್ರ ವಿಸರ್ಜನೆ:

ಈಸ್ಟ್ರೊಜೆನ್ ಕೊರತೆಯು ಮೂತ್ರಕೋಶದ ಕಾರ್ಯಚಟುವಟಿಕೆಗಳಿಗೆ ಅಡ್ಡಿಪಡಿಸಬಹುದು. ಇದರಿಂದ ನಿಮಗೆ ಪದೇಪದೆ ಮೂತ್ರ ವಿಸರ್ಜಿಸುವಂತಾಗಬಹುದು. ಮೂತ್ರಕೋಶದ ಮೇಲೆ ಹೆಚ್ಚಿದ ಹೊರೆ ಯುಟಿಐ ಮತ್ತು ಇತರ ತೀವ್ರ ಸಮಸ್ಯೆಗಳಿಗೆ ಕಾರಣವಾಗಬಹುದು. ಇದು ಋತುಬಂಧದ ಲಕ್ಷಣವಾಗಿರಬಹುದೇ ಎಂದು ಗುರುತಿಸಲು ಕೆಫೀನ್, ಆಮ್ಲೀಯ ಆಹಾರ, ಸಿಟ್ರಸ್ ಆಹಾರ ಸೇವಿಸಿದಾಗ ನಿಮ್ಮ ದೇಹದಲ್ಲಾಗುವ ಬದಲಾವಣೆಯನ್ನು ಗಮನಿಸಿ.

ಮೃದುವಾದ ಸ್ತನಗಳು:

ಸ್ತನಗಳ ಮೃದುತ್ವವು ಋತುಚಕ್ರದ ಸಾಮಾನ್ಯ ಲಕ್ಷಣವಾಗಿದೆ. ಹಾಗೆಯೇ ಇದು ಋತುಬಂಧದ ಎಚ್ಚರಿಕೆಯ ಸಂಕೇತವೂ ಆಗಿದೆ. ತಮ್ಮ 40ರ ದಶಕದಲ್ಲಿ ಮಹಿಳೆಯರ ಮೊಲೆತೊಟ್ಟುಗಳು ಸೆನ್ಸಿಟಿವ್ ಆದರೆ ಮತ್ತು ಸ್ತನಗಳು ಮೃದುವಾದರೆ ಆ ಮಹಿಳೆಯರು ಋತುಬಂಧಕ್ಕೆ ಹತ್ತಿರವಿದ್ದಾರೆ ಎಂದರ್ಥ. ಒಂದು ವೇಳೆ ನಿಮ್ಮ ಸ್ತನಗಳಲ್ಲಿ ಅಸಹನೀಯವಾದ ನೋವು ಕಂಡುಬಂದರೆ ವೈದ್ಯರ ಬಳಿ ಚೆಕ್ ಮಾಡಿಸಿಕೊಳ್ಳಿ. ರೋಗಲಕ್ಷಣಗಳನ್ನು ನಿವಾರಿಸಲು ಉತ್ತಮ ಆಹಾರ ಮತ್ತು ಜೀವನಶೈಲಿ ಅಭ್ಯಾಸಗಳನ್ನು ಅಭ್ಯಾಸ ಮಾಡಿಕೊಳ್ಳಿ.

ನಿದ್ರೆಯ ಸಮಸ್ಯೆಗಳು:

ಹಾರ್ಮೋನುಗಳ ಬದಲಾವಣೆಗಳಿಂದ ನಿಮ್ಮ ನಿದ್ರೆಯ ಸೈಕಲ್ ಬದಲಾಗುತ್ತದೆ. ಋತುಬಂಧವನ್ನು ಸಮೀಪಿಸುತ್ತಿರುವ ಮಹಿಳೆಯರು ನಿದ್ರಾಹೀನತೆ ಅನುಭವಿಸುವ ಸಾಧ್ಯತೆ ಹೆಚ್ಚು. ಇದು ಹೆಚ್ಚಿದ ಮಾನಸಿಕ ಮತ್ತು ದೈಹಿಕ ಒತ್ತಡದ ಮಟ್ಟಗಳ ಕಾರಣದಿಂದಾಗುತ್ತದೆ. ಈ ರೀತಿಯ ಲಕ್ಷಣಗಳು ನಿಮಗೂ ಗೋಚರಿಸಿದರೆ ನಿಮ್ಮ ಸ್ತ್ರೀರೋಗತಜ್ಞರನ್ನು ಸಂಪರ್ಕಿಸಬೇಕು.

ಇದನ್ನೂ ಓದಿ: ತೂಕ ಇಳಿಸಿಕೊಳ್ಳಲು ನಿಂಬೆ ಜ್ಯೂಸ್ ಕುಡಿಯುತ್ತೀರಾ? ಈ ಅಭ್ಯಾಸ ಬಿಟ್ಟುಬಿಡಿ

ತಲೆತಿರುಗುವುದು:

ತಲೆ ತಿರುಗುವುದು ಋತುಬಂಧದ ಪ್ರಾಥಮಿಕ ಮತ್ತು ಸೂಕ್ಷ್ಮ ಚಿಹ್ನೆಗಳಲ್ಲಿ ಒಂದಾಗಿದೆ. ಇದನ್ನು ಅನೇಕರು ಕಡೆಗಣಿಸುತ್ತಾರೆ. ಏರಿಳಿತದ ಹಾರ್ಮೋನ್ ಮಟ್ಟಗಳು ರಕ್ತದಲ್ಲಿನ ಸಕ್ಕರೆಯ ಸ್ಥಿರತೆಗೆ ಅಡ್ಡಿಯಾಗುತ್ತವೆ. ಇದರಿಂದಾಗಿ ನೀವು ತಲೆತಿರುಗುವಿಕೆಯನ್ನು ಅನುಭವಿಸಬಹುದು.

ಮನಸ್ಥಿತಿಯಲ್ಲಿ ಏರುಪೇರು:

ಮೂಡ್ ಸ್ವಿಂಗ್ ಋತುಬಂಧ ಸಮೀಪಿಸುತ್ತಿರುವುದರ ಪ್ರಮುಖ ಲಕ್ಷಣವಾಗಿದೆ. ಆದರೆ ಪೆರಿಮೆನೋಪಾಸ್ ಆಗಿರುವ ಮಹಿಳೆಯರು ಇದನ್ನು ಬಹಳಷ್ಟು ಅನುಭವಿಸುತ್ತಾರೆ. ಇದು ಅವರ ಭಾವನಾತ್ಮಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಇದು ಅವರ ವೈಯಕ್ತಿಕ ಮತ್ತು ವೃತ್ತಿಪರ ಸಂಬಂಧಗಳ ಮೇಲೂ ಪರಿಣಾಮ ಬೀರುತ್ತದೆ. ಈ ಪರಿಣಾಮವನ್ನು ಕಡಿಮೆ ಮಾಡಲು ಈ ಸಮಯದಲ್ಲಿ ಕುಟುಂಬದ ಸದಸ್ಯರು ಬೆಂಬಲವನ್ನು ನೀಡಬೇಕು.

ಲೈಂಗಿಕ ಕ್ರಿಯೆಯಲ್ಲಿ ನಿರಾಸಕ್ತಿ:

ಋತುಬಂಧದ ಸಮಯ ಸಮೀಪಿಸುತ್ತಿದ್ದಂತೆ ನಿಮಗೆ ಲೈಂಗಿಕ ಕ್ರಿಯೆಯಲ್ಲಿ ನಿರಾಸಕ್ತಿ ಉಂಟಾಗುತ್ತದೆ. ಮಹಿಳೆಯರು ಹೆಚ್ಚಿನ ಮಾನಸಿಕ ಒತ್ತಡ ಮತ್ತು ಆಯಾಸಕ್ಕೆ ಒಳಗಾಗುತ್ತಾರೆ. ಈಸ್ಟ್ರೊಜೆನ್ ಹಾರ್ಮೋನ್ ಮಟ್ಟವನ್ನು ಕಡಿಮೆ ಆಗುವುದರಿಂದ ಲೈಂಗಿಕವಾಗಿ ಆಸಕ್ತಿಯೂ ಕಡಿಮೆ ಆಗುತ್ತದೆ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಕ್ಕ ಪಾಠ ಕಲಿಸುತ್ತೇವೆ; ಉಗ್ರರ ದಾಳಿಗೆ ಸಚಿವ ಪ್ರಲ್ಹಾದ್ ಜೋಶಿ ಖಂಡನೆ
ತಕ್ಕ ಪಾಠ ಕಲಿಸುತ್ತೇವೆ; ಉಗ್ರರ ದಾಳಿಗೆ ಸಚಿವ ಪ್ರಲ್ಹಾದ್ ಜೋಶಿ ಖಂಡನೆ
ಮಂಜುನಾಥ್, ಸಾವಿಗೂ ಮುನ್ನ ಪತ್ನಿಯೊಂದಿಗೆ ಕಾಶ್ಮೀರದಲ್ಲಿ ಕಳೆದ ಕೊನೆ ಕ್ಷಣ
ಮಂಜುನಾಥ್, ಸಾವಿಗೂ ಮುನ್ನ ಪತ್ನಿಯೊಂದಿಗೆ ಕಾಶ್ಮೀರದಲ್ಲಿ ಕಳೆದ ಕೊನೆ ಕ್ಷಣ
ಉಗ್ರರ ದಾಳಿ ಬಳಿಕ ಭದ್ರತಾ ಪರಿಶೀಲನೆಗೆ ಶ್ರೀನಗರಕ್ಕೆ ತೆರಳಿದ ಅಮಿತ್ ಶಾ
ಉಗ್ರರ ದಾಳಿ ಬಳಿಕ ಭದ್ರತಾ ಪರಿಶೀಲನೆಗೆ ಶ್ರೀನಗರಕ್ಕೆ ತೆರಳಿದ ಅಮಿತ್ ಶಾ
ಪಹಲ್ಗಾಮ್‌: ಪತ್ನಿ ಎದುರೇ ಪತಿಯನ್ನ ಕೊಂದು ಮೋದಿಗೆ ಹೋಗಿ ಹೇಳು ಎಂದ ಉಗ್ರ
ಪಹಲ್ಗಾಮ್‌: ಪತ್ನಿ ಎದುರೇ ಪತಿಯನ್ನ ಕೊಂದು ಮೋದಿಗೆ ಹೋಗಿ ಹೇಳು ಎಂದ ಉಗ್ರ
ಪತ್ನಿ ಪಲ್ಲವಿ ಹಾಗೂ ಮಗನೊಂದಿಗೆ ಪ್ರವಾಸ ತೆರಳಿದ್ದ ಮಂಜುನಾಥ್
ಪತ್ನಿ ಪಲ್ಲವಿ ಹಾಗೂ ಮಗನೊಂದಿಗೆ ಪ್ರವಾಸ ತೆರಳಿದ್ದ ಮಂಜುನಾಥ್
ಕೇವಲ ಕಳ್ಳತನಕ್ಕಾಗಿ ನಡೆದ ಕೊಲೆ ಅಲ್ಲ ಇದು, ಬೇರೆ ಕಾರಣವೂ ಇದೆ: ಡಿಸಿಪಿ
ಕೇವಲ ಕಳ್ಳತನಕ್ಕಾಗಿ ನಡೆದ ಕೊಲೆ ಅಲ್ಲ ಇದು, ಬೇರೆ ಕಾರಣವೂ ಇದೆ: ಡಿಸಿಪಿ
ದರ್ಶನ್ ಜಾಮೀನು ರದ್ದು ಅರ್ಜಿ: ಸುಪ್ರೀಂಕೋರ್ಟ್​ನಲ್ಲಿ ಇಂದು ನಡೆದ ವಾದವೇನು?
ದರ್ಶನ್ ಜಾಮೀನು ರದ್ದು ಅರ್ಜಿ: ಸುಪ್ರೀಂಕೋರ್ಟ್​ನಲ್ಲಿ ಇಂದು ನಡೆದ ವಾದವೇನು?
ದರ್ಶನ್, ಪವಿತ್ರಾ ಗೌಡ ಸಂಬಂಧದ ಬಗ್ಗೆ ಸುಪ್ರೀಂಕೋರ್ಟ್ ಕೇಳಿದ ಪ್ರಶ್ನೆ ಏನು?
ದರ್ಶನ್, ಪವಿತ್ರಾ ಗೌಡ ಸಂಬಂಧದ ಬಗ್ಗೆ ಸುಪ್ರೀಂಕೋರ್ಟ್ ಕೇಳಿದ ಪ್ರಶ್ನೆ ಏನು?
ನಾವು ಇದುವರೆಗೆ ಯಾರನ್ನೂ ಅಪರಾಧಿಗಳು ಅಂತ ಹೇಳಿಲ್ಲ: ರಿಕ್ಕಿ ರೈ ವಕೀಲ
ನಾವು ಇದುವರೆಗೆ ಯಾರನ್ನೂ ಅಪರಾಧಿಗಳು ಅಂತ ಹೇಳಿಲ್ಲ: ರಿಕ್ಕಿ ರೈ ವಕೀಲ
ವಿಜಯಪುರದಲ್ಲಿ ವಿಜಯೇಂದ್ರ ಭಾಷಣ ಮಾಡುವಾಗ ಸ್ವಲ್ಪ ಜನರಿದ್ದರು: ಯತ್ನಾಳ್
ವಿಜಯಪುರದಲ್ಲಿ ವಿಜಯೇಂದ್ರ ಭಾಷಣ ಮಾಡುವಾಗ ಸ್ವಲ್ಪ ಜನರಿದ್ದರು: ಯತ್ನಾಳ್