AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತೂಕ ಇಳಿಸಿಕೊಳ್ಳಲು ನಿಂಬೆ ಜ್ಯೂಸ್ ಕುಡಿಯುತ್ತೀರಾ? ಈ ಅಭ್ಯಾಸ ಬಿಟ್ಟುಬಿಡಿ

Weight Loss Tips: ಬೆಳಿಗ್ಗೆ ಬೆಚ್ಚಗಿನ ನಿಂಬೆ ನೀರನ್ನು ಕುಡಿಯುವುದರಿಂದ ದೇಹದ ವಿಷಕಾರಿ ಅಂಶಗಳು ಹೊರಹೋಗುತ್ತವೆ ಮತ್ತು ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ ಎಂದು ನಂಬಲಾಗಿದೆ. ಆದರೆ, ಇದು ಎಷ್ಟರ ಮಟ್ಟಿಗೆ ಸತ್ಯ? ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

ತೂಕ ಇಳಿಸಿಕೊಳ್ಳಲು ನಿಂಬೆ ಜ್ಯೂಸ್ ಕುಡಿಯುತ್ತೀರಾ? ಈ ಅಭ್ಯಾಸ ಬಿಟ್ಟುಬಿಡಿ
ನಿಂಬೆ ರಸ Image Credit source: iStock
ಸುಷ್ಮಾ ಚಕ್ರೆ
|

Updated on: Oct 07, 2023 | 4:07 PM

Share

ಸಾಮಾನ್ಯವಾಗಿ ತೂಕ ಇಳಿಸಿಕೊಳ್ಳಲು ಡಯೆಟ್ ಮಾಡುವವರು ಬಿಸಿ ನೀರಿಗೆ ನಿಂಬೆ ರಸ ಹಾಕಿಕೊಂಡು ಕುಡಿಯುತ್ತಾರೆ. ಇನ್ನು ಕೆಲವರು ನೀರಿನ ಬಾಟಲಿಗೆ ನಿಂಬೆ ಹೋಳುಗಳನ್ನು ಹಾಕಿಟ್ಟುಕೊಳ್ಳುತ್ತಾರೆ. ನಿಂಬೆ ರಸ ಸೇವನೆಯಿಂದ ದೇಹದ ಕೊಬ್ಬು ಕರಗುತ್ತದೆ ಎಂಬ ನಂಬಿಕೆಯಿದೆ. ಬೆಳಿಗ್ಗೆ ಬೆಚ್ಚಗಿನ ನಿಂಬೆ ನೀರನ್ನು ಕುಡಿಯುವುದರಿಂದ ದೇಹದ ವಿಷಕಾರಿ ಅಂಶಗಳು ಹೊರಹೋಗುತ್ತವೆ ಮತ್ತು ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ ಎಂದು ನಂಬಲಾಗಿದೆ. ಆದರೆ, ಇದು ಎಷ್ಟರ ಮಟ್ಟಿಗೆ ಸತ್ಯ? ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

ನಿಂಬೆ ನೀರು ಕುಡಿಯುವುದರಿಂದ ದೇಹದ ತೂಕ ಇಳಿಯುತ್ತದೆ ಎಂಬುದಕ್ಕೆ ಯಾವುದೇ ವೈಜ್ಞಾನಿಕ ಆಧಾರವಿಲ್ಲ ಎಂದು ಪೌಷ್ಟಿಕತಜ್ಞೆ ಲೊವ್ನೀತ್ ಬಾತ್ರಾ ಹೇಳಿದ್ದಾರೆ. ನಿಂಬೆ ಜ್ಯೂಸ್ ಸರಿಯಾಗಿ ದೇಹವನ್ನು ಹೈಡ್ರೇಟ್ ಮಾಡುತ್ತದೆ ಮತ್ತು ದೇಹಕ್ಕೆ ವಿಟಮಿನ್ ಸಿ ನೀಡುತ್ತದೆ. ನಿಂಬೆ ಹಣ್ಣು ನಮ್ಮ ಒಟ್ಟಾರೆ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ ಎಂಬುದು ಸತ್ಯ. ಆದರೆ, ನಿಂಬೆ ಹಣ್ಣಿನ ರಸ ಸೇವಿಸಿದರೆ ತೂಕ ಇಳಿಸಿಕೊಳ್ಳಬಹುದು ಎಂಬುದಕ್ಕೆ ವೈಜ್ಞಾನಿಕ ಆಧಾರಗಳಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: Guava Juice: ತೂಕ ಇಳಿಸಿಕೊಳ್ಳಲು ಪೇರಲೆ ಜ್ಯೂಸ್ ಕುಡಿದು ನೋಡಿ

ನಮ್ಮ ದೇಹವು ಲಿವರ್ ಮತ್ತು ಕಿಡ್ನಿಗಳಿಂದ ನಡೆಸಲ್ಪಡುವ ತಮ್ಮದೇ ಆದ ನೈಸರ್ಗಿಕ ನಿರ್ವಿಶೀಕರಣ ಪ್ರಕ್ರಿಯೆಗಳನ್ನು ಹೊಂದಿದೆ. ಈ ಪ್ರಕ್ರಿಯೆಯನ್ನು ತೀವ್ರವಾಗಿ ಹೆಚ್ಚಿಸಲು ಯಾವ ಜ್ಯೂಸ್ ಅಥವಾ ಆಹಾರದಿಂದಲೂ ಸಾಧ್ಯವಿಲ್ಲ. ತೂಕ ಇಳಿಸಿಕೊಳ್ಳಬೇಕೆಂದರೆ ಸಮತೋಲಿತ ಆಹಾರ, ನಿಯಮಿತ ದೈಹಿಕ ವ್ಯಾಯಾಮದ ಅಗತ್ಯ. ನಮ್ಮ ಆರೋಗ್ಯಕರ ಜೀವನಶೈಲಿಯಿಂದ ತೂಕ ಇಳಿಸಿಕೊಳ್ಳಬಹುದೇ ವಿನಃ ಯಾವುದೇ ಜ್ಯೂಸ್ ಕುಡಿದ ತಕ್ಷಣ ತೂಕ ಇಳಿಯುತ್ತದೆ ಎಂಬುದು ಸುಳ್ಳು ಎಂದಿದ್ದಾರೆ.

ಆದರೆ, ನೀವು ತೂಕ ಇಳಿಸುವ ಪ್ರಯಾಣದಲ್ಲಿದ್ದರೆ ನಿಮ್ಮ ಆಹಾರಕ್ರಮದಲ್ಲಿ ನೀವು ಈ ಕೆಲವು ಆಹಾರ ಪದಾರ್ಥಗಳನ್ನು ಸೇರಿಸಿಕೊಳ್ಳಬಹುದು. ಇವು ನಿಮ್ಮ ತೂಕ ಇಳಿಸಲು ಸಹಾಯ ಮಾಡಬಹುದಷ್ಟೇ. ಆದರೆ, ಇದನ್ನು ಸೇವಿಸುವುದರಿಂದ ಮಾತ್ರ ತೂಕ ಇಳಿಸಿಕೊಳ್ಳಬಹುದು ಎಂಬುದು ಸತ್ಯಕ್ಕೆ ದೂರದ ಮಾತು.

ಇದನ್ನೂ ಓದಿ: ಪುರಾಣ ಕಾಲದ ಬೇಲದ ಹಣ್ಣು ನಮ್ಮ ಆರೋಗ್ಯಕ್ಕೆ ಎಷ್ಟು ಮುಖ್ಯ ಗೊತ್ತಾ?

1. ಸಿಟ್ರಸ್ ಹಣ್ಣುಗಳಾದ ನಿಂಬೆಹಣ್ಣುಗಳು, ಕಿತ್ತಳೆ ಮತ್ತು ಟ್ಯಾಂಗರಿನ್‌ಗಳು.

2. ಗೆಣಸು.

3. ವಿವಿಧ ಸೂಪ್‌ಗಳು.

4. ಮೂಲಂಗಿ.

5. ಸೂರ್ಯಕಾಂತಿ ಬೀಜಗಳು.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ