AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ayurvedic Bathing Rules: ಆಯುರ್ವೇದದ ಪ್ರಕಾರ ಸ್ನಾನ ಮಾಡುವ ಸರಿಯಾದ ವಿಧಾನ ಯಾವುದು? ಅದರ ಪ್ರಯೋಜನಗಳ ಬಗ್ಗೆ ತಿಳಿಯಿರಿ

ದೇಹವನ್ನು ಸ್ವಚ್ಛವಾಗಿ ಮತ್ತು ಆರೋಗ್ಯಕರವಾಗಿಡಲು ಪ್ರತಿನಿತ್ಯ ಸ್ನಾನ ಮಾಡುವುದು ಬಹಳ ಮುಖ್ಯ. ಆದರೆ ನೀವು ಸರಿಯಾದ ರೀತಿಯಲ್ಲಿ ಸ್ನಾನ ಮಾಡದಿದ್ದರೆ, ಅದು ಆರೋಗ್ಯ ಮತ್ತು ಚರ್ಮ ಸಂಬಂಧಿ ಸಮಸ್ಯೆಗಳನ್ನು ಉಂಟುಮಾಡಬಹುದು. ಆದ್ದರಿಂದ ಸ್ನಾನ ಮಾಡುವ ಸರಿಯಾದ ವಿಧಾನದ ಬಗ್ಗೆ ತಿಳಿದುಕೊಳ್ಳುವುದು ಬಹಳ ಮುಖ್ಯ. ಹಾಗಾದರೆ ಆಯುರ್ವೇದದ ಪ್ರಕಾರ ಸ್ನಾನ ಮಾಡುವ ಸರಿಯಾದ ವಿಧಾನ ಯಾವುದು, ಅದರಿಂದ ಲಭಿಸುವ ಪ್ರಯೋಜನಗಳೇನು ಎಂಬುದನ್ನು ನೋಡೋಣ.

Ayurvedic Bathing Rules: ಆಯುರ್ವೇದದ ಪ್ರಕಾರ ಸ್ನಾನ ಮಾಡುವ ಸರಿಯಾದ ವಿಧಾನ ಯಾವುದು?  ಅದರ ಪ್ರಯೋಜನಗಳ ಬಗ್ಗೆ  ತಿಳಿಯಿರಿ
ಸಾಂದರ್ಭೀಕ ಚಿತ್ರImage Credit source: Pinterest
ಮಾಲಾಶ್ರೀ ಅಂಚನ್​
| Edited By: |

Updated on: Oct 07, 2023 | 6:07 PM

Share

ಉತ್ತಮ ಆರೋಗ್ಯಕ್ಕಾಗಿ ಪ್ರತಿನಿತ್ಯ ಸ್ನಾನ ಮಾಡುವುದು ಮುಖ್ಯ. ಸ್ನಾನ ಮಾಡುವುದರಿಂದ ಸೋಂಕುಗಳು ಮತ್ತು ರೋಗಗಳ ಅಪಾಯವನ್ನು ತಡೆಯಬಹುದು ಮಾತ್ರವಲ್ಲದೆ ಇದರಿಂದ ನೀವು ದಿನವಿಡೀ ಉಲ್ಲಾಸಭರಿತವಾಗಿರಬಹುದು. ಕೆಲವರು ಬೆಳಗ್ಗೆ ಸ್ನಾನ ಮಾಡಿದರೆ ಇನ್ನೂ ಕೆಲವರು ರಾತ್ರಿ ಹೊತ್ತಿನಲ್ಲಿ ಸ್ನಾನ ಮಾಡುವ ಅಭ್ಯಾಸವನ್ನು ಬೆಳೆಸಿಕೊಂಡಿರುತ್ತಾರೆ. ಸ್ನಾನ ಮಾಡುವಾಗ ಸರಿಯಾದ ರೀತಿಯಲ್ಲಿ ಸ್ನಾನ ಮಾಡುವುದು ತುಂಬಾನೇ ಮುಖ್ಯ. ಏಕೆಂದರೆ ದೇಹದ ಮೇಲೆ ಸಂಗ್ರಹಗೊಳ್ಳುವ ಕೊಳೆಗಳನ್ನು ಸರಿಯಾಗಿ ಸ್ವಚ್ಛಗೊಳಿಸದಿದ್ದರೆ, ಅದು ಅನೇಕ ರೋಗಗಳ ಅಪಾಯವನ್ನು ಉಂಟುಮಾಡುವ ಸಾಧ್ಯತೆಯಿರುತ್ತದೆ. ಆದ್ದರಿಂದ ಸ್ನಾನದ ಸರಿಯಾದ ವಿಧಾನವನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ಆಯುರ್ವೇದದಲ್ಲಿ ಸರಿಯಾದ ಸಮಯಕ್ಕೆ ಎದ್ದೇಳಲು, ಆಹಾರ ಸೇವಿಸಲು, ಯೋಗ ಮಾಡಲು ಹಲವು ನಿಯಮಗಳಿರುವಂತೆ ಸ್ನಾನಕ್ಕೂ ಕೂಡಾ ಕೆಲವು ನಿಯಮಗಳಿವೆ. ಸ್ನಾನದ ಈ ನಿಯಮಗಳನ್ನು ಪಾಲಿಸುವುದರಿಂದ ಹಲವು ಪ್ರಯೋಜನಗಳನ್ನು ನೀವು ಪಡದುಕೊಳ್ಳಬಹುದು. ಹಾಗಾದರೆ ಸ್ನಾನ ಮಾಡುವ ಸರಿಯಾದ ವಿಧಾನ ಯಾವುದೆಂಬುದನ್ನು ನೋಡೋಣ.

ದಿನಕ್ಕೆ ಎಷ್ಟು ಬಾರಿ ಸ್ನಾನ ಮಾಡಬೇಕು ಹಾಗೂ ಸ್ನಾನ ಮಾಡಲು ಸರಿಯಾದ ಸಮಯ ಯಾವುದು?

ಆಯುರ್ವೇದದ ಪ್ರಕಾರ ದಿನಕ್ಕೆ ಎರಡು ಬಾರಿ ಸ್ನಾನ ಮಾಡುವುದು ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಮೊದಲನೆಯದಾಗಿ ಸೂರ್ಯ ಉದಯಿಸುವ ಮೊದಲು ಅಂದರೆ ಮುಂಜಾನೆ. ಈ ಹೊತ್ತಿನಲ್ಲಿ ಸ್ನಾನ ಮಾಡುವುದರಿಂದ ದೇಹವು ಸಕ್ರಿಯವಾಗಿರಲು ಸಹಾಯ ಮಾಡುತ್ತದೆ. ಮತ್ತು ಇದರಿಂದ ಆಯಾಸ ಮತ್ತು ಆಲಸ್ಯದಿಂದ ಪರಿಹಾರವನ್ನು ಪಡೆಯಬಹುದು. ಎರಡನೆಯದಾಗಿ ಸೂರ್ಯಸ್ತದ ಸಮಯದಲ್ಲಿ ಉಗುರು ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡುವುದು ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಈ ಸ್ನಾನವು ಆ ದಿನದ ಒತ್ತಡದಿಂದ ಪರಿಹಾರ ನೀಡುತ್ತದೆ ಮತ್ತು ಸ್ನಾಯುಗಳು ಮತ್ತು ನರಗಳಿಗೆ ವಿಶ್ರಾಂತಿಯನ್ನು ನೀಡುತ್ತದೆ.

ನೀರಿನ ತಾಪಮಾನ ಸರಿಯಾಗಿರಲಿ:

ಆಯುರ್ವೇದದ ಪ್ರಕಾರ, ಸ್ನಾನಕ್ಕೆ ತಣ್ಣೀರು ಅಥವಾ ಉಗುರುಬೆಚ್ಚಗಿನ ನೀರನ್ನು ಬಳಸುವುದು ಸೂಕ್ತ. ಇದು ದೇಹಕ್ಕೆ ಎಲ್ಲಾ ರೀತಿಯಲ್ಲೂ ಪ್ರಯೋಜನಕಾರಿಯಾಗಿದೆ. ಕೆಲವೊಬ್ಬರು ತುಂಬಾ ಬಿಸಿ ನೀರಿನ ಸ್ನಾನವನ್ನು ಆನಂದಿಸಬಹುದು, ಆದರೆ ಇದು ದೇಹಕ್ಕೆ ಹಾನಿಕಾರಕವಾಗಿದೆ. ಇದು ಚರ್ಮದ ಶುಷ್ಕತೆಯನ್ನು ಹೆಚ್ಚಿಸುತ್ತದೆ. ಅಲ್ಲದೆ ಇದು ಕೂದಲಿಗೂ ಕೂಡಾ ಹಾನಿಕಾರಕವಾಗಿದೆ. ಆದ್ದರಿಂದ ಸ್ನಾನಕ್ಕೆ ತಣ್ಣೀರು ಅಥವಾ ಉಗುರು ಬೆಚ್ಚಗಿನ ನೀರನ್ನು ಬಳಸುವುದು ಸೂಕ್ತ.

ಇದನ್ನೂ ಓದಿ: ರೋಸ್ಮರಿ ಎಣ್ಣೆ ಬಳಸಿ, ಕೂದಲ ಸಮಸ್ಯೆಗಳಿಗೆ ಗುಡ್​ಬೈ ಹೇಳಿ

ಸ್ನಾನ ಮಾಡುವ ಮುನ್ನ ದೇಹಕ್ಕೆ ಎಣ್ಣೆ ಹಚ್ಚಿ ಮಸಾಜ್ ಮಾಡಿ:

ಆಯುರ್ವೇದದಲ್ಲಿ ಸ್ನಾನ ಮಾಡುವ ಮುನ್ನ ದೇಹಕ್ಕೆ ಎಣ್ಣೆಯನ್ನು ಅನ್ವಯಿಸಿ ಮಸಾಜ್ ಮಾಡುವುದು ಹಲವು ವಿಧದಲ್ಲಿ ಪ್ರಯೋಜನಕಾರಿ ಎಂದು ಹೇಳಿದೆ. ಇದು ದೇಹದಲ್ಲಿ ರಕ್ತ ಸಂಚಾರವನ್ನು ಹೆಚ್ಚಿಸುತ್ತದೆ ಮತ್ತು ಸ್ನಾಯುಸೆಳೆತ ಸಮಸ್ಯೆಯನ್ನು ಕೂಡಾ ನಿವಾರಿಸುತ್ತದೆ. ಆದ್ದರಿಂದ ಸ್ನಾನ ಮಾಡುವ ಮೊದಲು ತೆಂಗಿನೆಣ್ಣೆ ಅಥವಾ ಎಳ್ಳೆಣ್ಣೆ ಅಥವಾ ಬಾದಾಮಿ ಎಣ್ಣೆಯಿಂದ ದೇಹವನ್ನು ಮಸಾಜ್ ಮಾಡಿ. ಸುಮಾರು ಅರ್ಧ ಗಂಟೆಯ ನಂತರ ಸ್ನಾನ ಮಾಡಿ. ಸ್ನಾನಕ್ಕೆ ಸೋಪಿನ ಬದಲಿಗೆ ಗಿಡಮೂಲಿಕೆಗಳ ಪುಡಿಯನ್ನು ಬಳಕೆ ಮಾಡುವುದು ಉತ್ತಮ.

ದೇಹವು ತಾನಾಗಿಯೇ ಒಣಗಲು ಬಿಡಿ:

ಸಾಮಾನ್ಯವಾಗಿ ಎಲ್ಲರೂ ಸ್ನಾನ ಮಾಡಿದ ತಕ್ಷಣ ದೇಹದಲ್ಲಿ ಉಳಿದಿರುವ ನೀರಿನಾಂಶವನ್ನು ತೆಗೆದುಹಾಕಲು ಟವೆಲ್ ಸಹಾಯದಿಂದ ರಭಸವಾಗಿ ಉಜ್ಜುತ್ತಾರೆ. ಆದರೆ ಇದು ಸರಿಯಾದ ವಿಧಾನವಲ್ಲ. ಹೀಗೆ ಮಾಡುವುದರಿಂದ ತ್ವಚೆಗೆ ಹಾನಿಯುಂಟಾಗಬಹುದು. ಅಲ್ಲದೆ ಟವೆಲ್ನ್ನು ಕಾಲಕಾಲಕ್ಕೆ ಸ್ವಚ್ಛಗೊಳಿಸದೆ ಅದೇ ಟವೆಲ್ನ್ನು ಪ್ರತಿನಿತ್ಯ ಬಳಸಿದರೆ, ಅದರಲ್ಲಿರುವ ಬ್ಯಾಕ್ಟೀರಿಯಾಗಳು ಮತ್ತು ಕೊಳೆಗಳು ನಿಮ್ಮ ದೇಹವನ್ನು ಸೇರಬಹುದು. ಆದ್ದರಿಂದ ಸ್ನಾನ ಮಾಡಿದ ಬಳಿಕ ಎರಡು ನಿಮಿಷಗಳ ಕಾಲ ಹಾಗೇನೆ ನಿಂತುಕೊಳ್ಳಿ, ಇದರಿಂದ ನೀರು ತಾನಾಗಿಯೇ ಒಣಗುತ್ತದೆ.

ನಿಮ್ಮ ದೇಹದೊಂದಿಗೆ ನಿಮ್ಮ ಮನಸ್ಸನ್ನು ಆರೋಗ್ಯಕರವಾಗಿಡಲು ಬಯಸಿದರೆ, ಸ್ನಾನದ ಈ ನಿಯಮಗಳನ್ನು ಅನುಸರಿಸಿ. ಇದರಿಂದ ದಿನವಿಡೀ ತಾಜಾತನವನ್ನು ಅನುಭವಿಸುತ್ತೀರಿ ಹಾಗೂ ರಾತ್ರಿಯಲ್ಲಿ ಉತ್ತಮ ನಿದ್ರೆಯನ್ನು ಕೂಡಾ ಪಡೆಯಬಹುದು.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

ಬಾಲಿವುಡ್ ಬಿದ್ದೋಯ್ತು, ಇದು ಸ್ಯಾಂಡಲ್​​ವುಡ್ ಸಮಯ: ಡಿಕೆಶಿ
ಬಾಲಿವುಡ್ ಬಿದ್ದೋಯ್ತು, ಇದು ಸ್ಯಾಂಡಲ್​​ವುಡ್ ಸಮಯ: ಡಿಕೆಶಿ
ಪುರಾತನ ಕಲ್ಯಾಣಿ ಸ್ವಚ್ಚತೆ ವೇಳೆ ಶಿವಲಿಂಗ ಪತ್ತೆ
ಪುರಾತನ ಕಲ್ಯಾಣಿ ಸ್ವಚ್ಚತೆ ವೇಳೆ ಶಿವಲಿಂಗ ಪತ್ತೆ
ರಜತ್-ಗಿಲ್ಲಿ ಕಣ್ಣಿಗೆ ಬಟ್ಟೆ: ನಕ್ಕು ಸುಸ್ತಾದ ಸುದೀಪ್
ರಜತ್-ಗಿಲ್ಲಿ ಕಣ್ಣಿಗೆ ಬಟ್ಟೆ: ನಕ್ಕು ಸುಸ್ತಾದ ಸುದೀಪ್
ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು