Sign In

By signing in or creating an account, you agree with Associated Broadcasting Company's Terms & Conditions and Privacy Policy.

Vidura Niti : ಮನುಷ್ಯನ ಈ ಕೆಟ್ಟ ಗುಣಗಳೇ ದುಃಖಕ್ಕೆ ಮೂಲ ಕಾರಣ ಎನ್ನುತ್ತಾನೆ ವಿದುರ

ಜೀವನವೆಂದ ಮೇಲೆ ಸುಖ ದುಃಖಗಳಿರುತ್ತದೆ. ಆದರೆ ಕೆಲವು ಜನರು ಸದಾ ಸಂತೋಷಯುತವಾದ ಜೀವನ ನಡೆಸುತ್ತಾರೆ. ಇನ್ನು ಕೆಲವರ ಜೀವನದಲ್ಲಿ ದುಃಖ, ಕಣ್ಣೀರು ಬಿಟ್ಟರೆ ಖುಷಿ ಅನ್ನೋದೇ ದೂರದ ಮಾತಾಗಿರುತ್ತದೆ. ಆದರೆ ಯಾವ ವ್ಯಕ್ತಿಯಲ್ಲಿ ವಿದುರ ಹೇಳುವ ಗುಣಗಳಿರುತ್ತದೆಯೋ ಆತನ ಜೀವನದಲ್ಲಿ ದುಃಖವೇ ತುಂಬಿರುತ್ತದೆ. ಎಷ್ಟೇ ಪ್ರಯತ್ನ ಪಟ್ಟರೂ ಖುಷಿಯಾಗಿರಲು ಸಾಧ್ಯವೇ ಇಲ್ವಂತೆ. ಹಾಗಾದ್ರೆ ಜೀವನದಲ್ಲಿ ದುಃಖ ಹಾಗೂ ನೋವನ್ನು ಉಂಟು ಮಾಡುವ ಗುಣಗಳಾವುವು? ಎನ್ನುವ ಮಾಹಿತಿ ಇಲ್ಲಿದೆ.

Vidura Niti : ಮನುಷ್ಯನ ಈ ಕೆಟ್ಟ ಗುಣಗಳೇ ದುಃಖಕ್ಕೆ ಮೂಲ ಕಾರಣ ಎನ್ನುತ್ತಾನೆ ವಿದುರ
Vidura Niti
Follow us
ಸಾಯಿನಂದಾ
| Updated By: ಅಕ್ಷತಾ ವರ್ಕಾಡಿ

Updated on:Jan 18, 2025 | 9:45 AM

ಸಂತೋಷ ಯಾರಿಗೆ ತಾನೇ ಬೇಡ ಹೇಳಿ. ಪ್ರತಿಯೊಬ್ಬನು ಕೂಡ ತನ್ನ ಜೀವನಮಾನವಿಡಿ ಖುಷಿ, ನೆಮ್ಮದಿ ಹಾಗೂ ಸಂತೋಷಕ್ಕಾಗಿ ಒದ್ದಾಡುತ್ತಾನೆ. ಆದರೆ ಈ ದುಃಖವೆನ್ನುವುದು ಹೇಳದೇನೇ ಬರುತ್ತದೆ. ಕೆಲವೊಮ್ಮೆ ಮನುಷ್ಯನ ಈ ಕೆಲವು ಗುಣಗಳು ದುಃಖಕ್ಕೆ ಕಾರಣವಾಗುತ್ತದೆ ಎನ್ನುತ್ತಾನೆ ವಿದುರ. ತನ್ನ ನೀತಿಯಲ್ಲಿ ಮನುಷ್ಯನು ಈ ಗುಣಗಳನ್ನು ತನ್ನ ಬದುಕಿನಲ್ಲಿ ಅಳವಡಿಸಿಕೊಂಡರೆ ಖುಷಿಗಿಂತ ದುಃಖವೇ ತುಂಬಿರುತ್ತದೆ. ಅದರಲ್ಲೇ ಕೊನೆಯವರೆಗೂ ಜೀವಿಸಬೇಕಾಗುತ್ತದೆ. ಹೀಗಾಗಿ ಈ ಕೆಟ್ಟ ಗುಣಗಳನ್ನು ತ್ಯಜಿಸುವುದೇ ಉತ್ತಮ ಎನ್ನುವ ಸಲಹೆಯನ್ನು ನೀಡಿದ್ದಾನೆ ವಿದುರ.

ಅಸೂಯೆ ಪಡುವವರು:

ಯಾವಾಗಲೂ ಇತರರನ್ನು ಕಂಡು ಅಸೂಯೆಪಡುವ ವ್ಯಕ್ತಿಯೂ ಜೀವನದಲ್ಲಿ ದುಃಖವನ್ನು ಅನುಭವಿಸುತ್ತಾನೆ. ಆತನಿಗೆ ಇನ್ನೊಬ್ಬರ ಸಂತೋಷವನ್ನು ಸಹಿಸಿಕೊಳ್ಳಲು ಆಗುವುದಿಲ್ಲ. ಹೀಗಾಗಿ ಆತನು ತನ್ನನ್ನು ಅವರಿಗಿಂತ ಕೀಳು ಎಂದು ಭಾವಿಸಿ ಅದರಲ್ಲೇ ಕೊರಗುತ್ತಾನೆ. ಆದರೆ ಎಲ್ಲರ ಮುಂದೆ ತಾನು ಕೂಡ ಯಾರಿಗೂ ಕಡಿಮೆಯಿಲ್ಲ ಇಲ್ಲ ಎಂದು ನಟಿಸುತ್ತಾನೆ, ಮನಸ್ಸಿನೊಳಗೆ ಸದಾ ನೋವನ್ನು ಪಟ್ಟುಕೊಳ್ಳುತ್ತಾನೆ.

ಇತರರ ಮೇಲೆ ಅವಲಂಬಿತನಾಗಿರುವವನು:

ಜೀವನದಲ್ಲಿ ಒಂಟಿಯಾಗಿ ಬದುಕಲು ಸಾಧ್ಯವಿಲ್ಲ. ಹೀಗಾಗಿ ಪ್ರತಿಯೊಬ್ಬರು ಒಂದಲ್ಲ ಒಂದು ಸಂದರ್ಭದಲ್ಲಿ ತನ್ನ ಮನೆಯ ಸದಸ್ಯರನ್ನು ಅವಲಂಬಿಸಿರುತ್ತಾರೆ. ಆದರೆ ವಿದುರನು ಹೇಳುವಂತೆ ಇತರರಿಗೆ ಸಂಪೂರ್ಣವಾಗಿ ಅಧೀನವಾಗಿರುವ ವ್ಯಕ್ತಿ ಅಥವಾ ಸದಾ ಇತರರ ಮೇಲೆ ಅವಲಂಬಿತನಾಗಿರುವ ವ್ಯಕ್ತಿಯೂ ತನ್ನ ಅಸ್ತಿತ್ವವನ್ನೇ ಕಳೆದುಕೊಂಡಿರುತ್ತಾರೆ. ಆತನು ತಾನೇ ಸ್ವಂತ ನಿರ್ಧಾರವನ್ನು ತೆಗೆದುಕೊಂಡು ಕೆಲಸ ಮಾಡಲು ಸಾಧ್ಯವಿಲ್ಲ. ಎಲ್ಲದಕ್ಕೂ ಇತರರ ಮೇಲೆ ಅವಲಂಬಿತನಾಗಿರುತ್ತಾನೆ. ತನ್ನ ಆತ್ಮೀಯರು ನಿರ್ಲಕ್ಷ್ಯ ವಹಿಸಿದರೆ ದುಃಖದಲ್ಲೇ ಮುಳುಗುತ್ತಾನೆ. ಹೀಗಾಗಿ ಈ ಗುಣವುಳ್ಳ ವ್ಯಕ್ತಿಯೂ ಜೀವನದಲ್ಲಿ ಖುಷಿಯ ಬದಲು ದುಃಖವನ್ನೇ ಅನುಭವಿಸುತ್ತಾನಂತೆ.

ಇತರರನ್ನು ದ್ವೇಷಿಸುವವನು:

ಈಗಿನ ಕಾಲದಲ್ಲಿ ಒಬ್ಬರನ್ನು ಕಂಡರೆ ಮತ್ತೊಬ್ಬರಿಗೆ ಆಗುವುದಿಲ್ಲ. ಕೆಲವರು ದ್ವೇಷವನ್ನೇ ಜೀವನದ ಭಾಗವಾಗಿಕೊಂಡು ಬಿಟ್ಟಿರುತ್ತಾರೆ. ಇತರರನ್ನು ದ್ವೇಷಿಸುವ ತನ್ನ ಸುತ್ತ ಮುತ್ತಲಿನವರ ಜೊತೆಗೆ ಕುಳಿತುಕೊಳ್ಳಲು ಹಾಗೂ ಅವರೊಂದಿಗೆ ಬೆರೆಯಲು ಇಷ್ಟ ಪಡುವುದಿಲ್ಲ. ಎಲ್ಲರನ್ನು ತನಗಿಂತ ಕೀಳು ಹಾಗೂ ತಾನು ಮಾತ್ರ ಮೇಲು ಎನ್ನುವ ಭಾವನೆಯಿರುತ್ತದೆ. ಈ ವ್ಯಕ್ತಿಯೂ ತನ್ನ ಜೀವನದಲ್ಲಿ ಖುಷಿಯನ್ನು ಕಾಣುವುದಿಲ್ಲ, ಸದಾ ದುಃಖದಲ್ಲೇ ಮುಳುಗಿರುತ್ತಾನೆ.

ಅತೃಪ್ತನಾಗಿರುವವನು:

ಜೀವನದಲ್ಲಿ ತೃಪ್ತಿ ಎನ್ನುವುದು ಬಹಳ ಮುಖ್ಯ. ಆದರೆ ಕೆಲ ಜನರು ಜೀವನದಲ್ಲಿ ಎಷ್ಟೇ ಸಂಪಾದನೆ ಮಾಡಿದರೂ, ಎಲ್ಲಾ ಸಿಕ್ಕಿದರೂ ಕೂಡ ತೃಪ್ತಿ ಅನ್ನೋದೇ ಇರಲ್ಲ. ಕೆಲ ವ್ಯಕ್ತಿಗಳಲ್ಲಿ ಅತೃಪ್ತ ಭಾವನೆಯಿರುತ್ತದೆ. ತನ್ನ ಸುತ್ತಲಿನ ವ್ಯಕ್ತಿಗಳು ತನ್ನ ಬಳಿ ಎಲ್ಲಾ ಇದ್ದರೂ ಕೂಡ ಬೇರೆಯವರನ್ನು ನೋಡಿ ದುಃಖಿಸುತ್ತಾನೆ. ಇಂತಹ ವ್ಯಕ್ತಿಗಳು ಜೀವನದಲ್ಲಿ ಎಷ್ಟೇ ಇದ್ದರೂ ಸಂತೋಷವಾಗಿರಲು ಸಾಧ್ಯವಿಲ್ಲ. ಅತೃಪ್ತ ಭಾವನೆಯಿಂದ ದುಃಖ ನೋವಿನಿಂದಲೇ ಜೀವನ ಕಳೆಯುತ್ತಾರೆ ಎಂದು ಹೇಳುತ್ತಾನೆ ವಿದುರ.

ಇದನ್ನೂ ಓದಿ: ಟೂತ್ ಪೇಸ್ಟ್ ಟ್ಯೂಬ್ ಹಿಂಡುವ ರೀತಿಯೇ ನಿಮ್ಮ ವ್ಯಕ್ತಿತ್ವ ಬಿಚ್ಚಿಡುತ್ತೆ

ಕೋಪಿಸಿಕೊಳ್ಳುವ ವ್ಯಕ್ತಿ:

ಕೋಪ ಯಾರಿಗೆ ತಾನೇ ಬರಲ್ಲ ಹೇಳಿ. ಆದರೆ ತನ್ನ ಜೀವನದಲ್ಲಿ ನಕಾರಾತ್ಮಕ ಭಾವನೆಗಳನ್ನು ಹೊಂದಿರುವ ವ್ಯಕ್ತಿಯೂ ಯಾವ ಕೆಲಸದಲ್ಲಿಯೂ ಕೂಡ ತೃಪ್ತನಾಗುವುದಿಲ್ಲ. ಹೀಗಾಗಿ ಚಿಕ್ಕ ಚಿಕ್ಕ ವಿಷಯಗಳಿಗೂ ಕೋಪಿಸಿಕೊಳ್ಳುತ್ತಾ ತನ್ನ ಮನಸ್ಸನ್ನೇ ಹಾಳು ಮಾಡಿಕೊಳ್ಳುತ್ತಾನೆ. ಈ ವ್ಯಕ್ತಿಯೂ ಜೀವನದಲ್ಲಿ ಖುಷಿಯನ್ನು ಕಾಣೋದು ಕಡಿಮೆ. ಕೋಪದ ಗುಣದಿಂದ ಜೀವನದಲ್ಲಿ ದುಃಖವೇ ತುಂಬಿರುತ್ತದೆ.

ಅನುಮಾನಿಸುವ ವ್ಯಕ್ತಿ:

ಕೆಲ ವ್ಯಕ್ತಿಗಳು ಜೀವನದಲ್ಲಿ ಇತರರನ್ನು ಅನುಮಾನಿಸುತ್ತಲೇ ಇರುತ್ತಾರೆ. ತನ್ನ ಜೊತೆಗೆ ಇರುವ ವ್ಯಕ್ತಿಯೂ ಏನು ಕೆಲಸ ಮಾಡಿದರೂ ಕೂಡ ಸಮಾಧಾನವಿರುವುದಿಲ್ಲ. ಅದರಲ್ಲೇ ತಪ್ಪು ಕಂಡು ಹಿಡಿಯುವುದು, ಚುಚ್ಚಿ ಮಾತನಾಡುವ ಮೂಲಕ ಅವಮಾನಿಸುವುದನ್ನೇ ಪ್ರವೃತ್ತಿಯಾಗಿ ಮಾಡಿಕೊಂಡಿರುತ್ತಾರೆ. ಈ ಗುಣವಿರುವ ವ್ಯಕ್ತಿಗಳು ಜೀವನದಲ್ಲಿ ಎಂದಿಗೂ ಖುಷಿಯಾಗಿರಲ್ಲ, ಇವರ ಜೀವನದಲ್ಲಿ ಸದಾ ದುಃಖವೇ ತುಂಬಿರುತ್ತದೆ ಎಂದಿದ್ದಾನೆ ವಿದುರ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:44 am, Sat, 18 January 25

ಪವಿತ್ರಾ ಬದುಕಿನ ಏಳು-ಬೀಳಿನ ಬಗ್ಗೆ ಬಿಗ್​ಬಾಸ್ ನೀತು ಮಾತು
ಪವಿತ್ರಾ ಬದುಕಿನ ಏಳು-ಬೀಳಿನ ಬಗ್ಗೆ ಬಿಗ್​ಬಾಸ್ ನೀತು ಮಾತು
ಟ್ರಂಪ್ ಜೊತೆಗಿನ ಮೋದಿ ಮಾತುಕತೆಗೆ ಕಾಂಗ್ರೆಸ್ ನಾಯಕ ಶಶಿ ತರೂರ್ ಮೆಚ್ಚುಗೆ
ಟ್ರಂಪ್ ಜೊತೆಗಿನ ಮೋದಿ ಮಾತುಕತೆಗೆ ಕಾಂಗ್ರೆಸ್ ನಾಯಕ ಶಶಿ ತರೂರ್ ಮೆಚ್ಚುಗೆ
ಅಮೆರಿಕ ಪ್ರವಾಸ ಮುಗಿಸಿ ಭಾರತಕ್ಕೆ ಹೊರಟ ಪ್ರಧಾನಿ ಮೋದಿ; ಇಲ್ಲಿವೆ ಹೈಲೈಟ್ಸ್
ಅಮೆರಿಕ ಪ್ರವಾಸ ಮುಗಿಸಿ ಭಾರತಕ್ಕೆ ಹೊರಟ ಪ್ರಧಾನಿ ಮೋದಿ; ಇಲ್ಲಿವೆ ಹೈಲೈಟ್ಸ್
ಕಾಳಿ ನದಿಗೆ ಅಡ್ಡಲಾಗಿ ಕಟ್ಟಿರುವ ಸೇತುವೆ ಪಿಲ್ಲರ್ ಕುಸಿತ: ತಪ್ಪಿದ ಅನಾಹುತ
ಕಾಳಿ ನದಿಗೆ ಅಡ್ಡಲಾಗಿ ಕಟ್ಟಿರುವ ಸೇತುವೆ ಪಿಲ್ಲರ್ ಕುಸಿತ: ತಪ್ಪಿದ ಅನಾಹುತ
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಪೊಲೀಸರ ಅತ್ಮಸ್ಥೈರ್ಯ ಕುಂದಿದೆ: ಅಶೋಕ
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಪೊಲೀಸರ ಅತ್ಮಸ್ಥೈರ್ಯ ಕುಂದಿದೆ: ಅಶೋಕ
ಇನ್ನೂ ಕಾರ್ಯಪ್ರವೃತ್ತರಾಗದ ಅರಣ್ಯ ಇಲಾಖೆ ಅಧಿಕಾರಿಗಳು
ಇನ್ನೂ ಕಾರ್ಯಪ್ರವೃತ್ತರಾಗದ ಅರಣ್ಯ ಇಲಾಖೆ ಅಧಿಕಾರಿಗಳು
Video: ಪ್ರಧಾನಿ ಮೋದಿಗೆ ವಿಶೇಷ ಉಡುಗೊರೆ ನೀಡಿದ ಡೊನಾಲ್ಡ್​ ಟ್ರಂಪ್
Video: ಪ್ರಧಾನಿ ಮೋದಿಗೆ ವಿಶೇಷ ಉಡುಗೊರೆ ನೀಡಿದ ಡೊನಾಲ್ಡ್​ ಟ್ರಂಪ್
ನಾನು ರೆಸ್ಟ್​ನಲ್ಲಿದ್ದೇನೆ, ಯಾವುದೇ ಸ್ಥಾನದ ಆಕಾಂಕ್ಷಿಯಲ್ಲ: ಡಿಕೆ ಸುರೇಶ್
ನಾನು ರೆಸ್ಟ್​ನಲ್ಲಿದ್ದೇನೆ, ಯಾವುದೇ ಸ್ಥಾನದ ಆಕಾಂಕ್ಷಿಯಲ್ಲ: ಡಿಕೆ ಸುರೇಶ್
ವೈಷಮ್ಯ, ಹೆಣ್ಣು ಮತ್ತು ಮಣ್ಣು-ಬಾಗಪ್ಪ ಕೊಲೆ ಹಿಂದಿನ ಕಾರಣಗಳು: ಎಸ್​ಪಿ
ವೈಷಮ್ಯ, ಹೆಣ್ಣು ಮತ್ತು ಮಣ್ಣು-ಬಾಗಪ್ಪ ಕೊಲೆ ಹಿಂದಿನ ಕಾರಣಗಳು: ಎಸ್​ಪಿ
ಕಳ್ಳರ ಹಾವಳಿ‌ ತಡೆಯಲು ಮಹಿಳೆಯರ ರಾತ್ರಿ ಗಸ್ತು
ಕಳ್ಳರ ಹಾವಳಿ‌ ತಡೆಯಲು ಮಹಿಳೆಯರ ರಾತ್ರಿ ಗಸ್ತು