AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಕ್ಕಳು ಮೊಬೈಲ್, ಟಿವಿ ಮುಂದೆ ಕುಳಿತುಕೊಳ್ಳುವುದನ್ನು ತಡೆಯಲು ಈ ರೀತಿ ಮಾಡಿ

ಪೋಷಕರು ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳಿಗೆ ಫೋನ್‌ಗಳನ್ನು ನೀಡುತ್ತಿದ್ದಾರೆ, ಇದು ಅವರ ದೈಹಿಕ ಮತ್ತು ಮಾನಸಿಕ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತಿದೆ. ಅದರಲ್ಲಿಯೂ ಕೆಲ ಮಕ್ಕಳು ಈ ಮೊಬೈಲ್‌ಗಳಿಗೆ ಎಷ್ಟು ಅಡಿಕ್ಟ್ ಆಗಿಬಿಬಿಟ್ಟಿದ್ದಾರೆ ಎಂದರೆ ತಾಯಿ, ತಂದೆಗೂ ಸಮಯ ಕೊಡುತ್ತಿಲ್ಲ. ಹಾಗಾದರೆ ಈ ಸಮಸ್ಯೆಯನ್ನು ತಡೆಯುವುದು ಹೇಗೆ, ಈ ಬಗ್ಗೆ ವೈದ್ಯರ ಅಭಿಪ್ರಾಯವೇನು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಮಕ್ಕಳು ಮೊಬೈಲ್, ಟಿವಿ ಮುಂದೆ ಕುಳಿತುಕೊಳ್ಳುವುದನ್ನು ತಡೆಯಲು ಈ ರೀತಿ ಮಾಡಿ
Mobile Screen TimeImage Credit source: Getty Images
ಪ್ರೀತಿ ಭಟ್​, ಗುಣವಂತೆ
|

Updated on: Feb 12, 2026 | 8:27 PM

Share

ಮಕ್ಕಳಿಗೆ ತುಂಬಾ ಚಿಕ್ಕ ವಯಸ್ಸಿನಲ್ಲಿಯೇ ಮೊಬೈಲ್ (Phone Addiction) ಕೊಡುವುದರಿಂದ ಅವರ ಮಾನಸಿಕ ಹಾಗೂ ಶಾರೀರಿಕ ಅಭಿವೃದ್ಧಿ ಕುಂಠಿತಗೊಳ್ಳುತ್ತದೆ. ಅದರಲ್ಲಿಯೂ ಕೆಲ ಮಕ್ಕಳು ಈ ಮೊಬೈಲ್‌ಗಳಿಗೆ ಎಷ್ಟು ಅಡಿಕ್ಟ್ ಆಗಿಬಿಬಿಟ್ಟಿದ್ದಾರೆ ಎಂದರೆ ತಾಯಿ, ತಂದೆಗೂ ಸಮಯ ಕೊಡುತ್ತಿಲ್ಲ. ಮೊಬೈಲ್ ಕಸಿದರೆ ಕೋಪ, ಅಸಹನೆ ಹಾಗೂ ಮಾನಸಿಕ ಒತ್ತಡ ತೋರಿಸುತ್ತಿದ್ದಾರೆ. ಈ ಮೊಬೈಲ್ ಫೋನ್ ಮತ್ತು ಟಿವಿ ಮಕ್ಕಳಿಂದ ಬಾಲ್ಯವನ್ನೇ ಕಸಿದುಕೊಳ್ಳುತ್ತಿದೆ ಎಂದರೆ ತಪ್ಪಾಗುವುದಿಲ್ಲ. ಈಗಿನ ಮಕ್ಕಳು ಹೊರಗೆ ಆಟವಾಡುವ ಬದಲು, ಟಿವಿ ನೋಡುತ್ತಾ, ಫೋನ್‌ ಬಳಸುತ್ತಾ ಸಮಯ ಕಳೆಯುತ್ತಾರೆ. ಇದು ಅವರ ಮಾನಸಿಕ (Mental Health) ಮತ್ತು ದೈಹಿಕ ಬೆಳವಣಿಗೆಯ ಮೇಲೆ ನೇರವಾಗಿ ಪರಿಣಾಮ ಬೀರುತ್ತಿದೆ. ಹಾಗಾದರೆ ಈ ಸಮಸ್ಯೆಯನ್ನು ತಡೆಯುವುದು ಹೇಗೆ, ಈ ಬಗ್ಗೆ ವೈದ್ಯರ ಅಭಿಪ್ರಾಯವೇನು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ನ್ಯೂರೋ ಕೇರ್ ಸೆಂಟರ್‌ನ ಡಾ. ಜೋಲಿ ಜೈನ್ ಗುಪ್ತಾ ಹೇಳುವ ಪ್ರಕಾರ, ಸಾಮಾನ್ಯವಾಗಿ ಈಗಿನ ತಾಯಿ, ತಂದೆ ಮಕ್ಕಳಿಗೆ ಸಾಕಷ್ಟು ಸಮಯ ನೀಡಲು ಸಾಧ್ಯವಾಗುತ್ತಿಲ್ಲ. ಜೊತೆಗೆ ಮಕ್ಕಳನ್ನು ಶಾಂತವಾಗಿರಿಸಲು ಮೊಬೈಲ್ ಅಥವಾ ಟಿವಿ ಮುಂದೆ ಕೂರಿಸುತ್ತಾರೆ. ಇದರಿಂದ ಮಕ್ಕಳ ಮಾನಸಿಕ ಸಮತೋಲನ ಹದಗೆಡುತ್ತದೆ. ಅಷ್ಟು ಮಾತ್ರವಲ್ಲ, ಸಾಮಾಜಿಕ ಮತ್ತು ದೈಹಿಕ ಬೆಳವಣಿಗೆ ಕೂಡ ಕುಂಠಿತವಾಗಬಹುದು. ಆಟ, ಕ್ರೀಡೆಗಳಂತಹ ಸ್ವಾಭಾವಿಕ ಚಟುವಟಿಕೆ ಕೂಡ ಕಡಿಮೆಯಾಗುತ್ತಿವೆ. ಹಾಗಾಗಿ ಮಕ್ಕಳ ಜೊತೆಗೆ ಪೋಷಕರಾದವರು ತಮಗೆ ತಾವೇ ಕಟ್ಟುನಿಟ್ಟಿನ ಬೆಲಿ ಹಾಕಿಕೊಂಡು ಕೆಲವು ಸಲಹೆಗಳನ್ನು ಪಾಲಿಸುವುದು ಉತ್ತಮ.

ಇದನ್ನೂ ಓದಿ: 35 ವರ್ಷಕ್ಕಿಂತ ಕಡಿಮೆ ವಯಸ್ಸಿನವರಲ್ಲಿ ಮಾನಸಿಕ ಕಾಯಿಲೆ ಹೆಚ್ಚಾಗುತ್ತಿರುವುದಕ್ಕೆ ಕಾರಣವೇನು?

ಮಕ್ಕಳಿಗೆ ಕಟ್ಟುನಿಟ್ಟಿನ ಸಲಹೆ:

2 ವರ್ಷದವರೆಗಿನ ಮಕ್ಕಳನ್ನು ಪೂರ್ಣವಾಗಿ ಮೊಬೈಲ್‌ನಿಂದ ದೂರವಿಡಬೇಕು. ವೀಡಿಯೋ ಕಾಲ್ ಕೂಡ ಮಾಡಿಸಬಾರದು. ಈ ವಯಸ್ಸಿನಲ್ಲಿ ಸ್ಕ್ರೀನ್ ಬಳಕೆ ಮೆದುಳಿನ ಬೆಳವಣಿಗೆಯ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. 2 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ಸ್ಕ್ರೀನ್ ಟೈಮ್ ಬಹಳ ಕಡಿಮೆ ಇರಬೇಕು. ಓದಿಗಾಗಿ ಬಳಸಿದರೂ ದಿನಕ್ಕೆ 15 ನಿಮಿಷಕ್ಕಿಂತ ಹೆಚ್ಚು ಕೊಡಬಾರದು. ಗೇಮ್‌, ವೀಡಿಯೊ ಮತ್ತು ರೀಲ್ಸ್‌ಗಳಿಂದ ದೂರವಿಡಬೇಕು. ಇದೆಲ್ಲದರ ಜೊತೆಗೆ ಮೊಬೈಲ್ ಬಳಸುವ ಸಮಯವನ್ನು ನಿಗದಿಪಡಿಸಬೇಕು.

ತಾಯಿ, ತಂದೆ ಈ ಸಲಹೆಗಳನ್ನು ಪಾಲಿಸಬೇಕು:

  • ಪ್ರತಿದಿನ ಆದಷ್ಟು ಮಕ್ಕಳೊಂದಿಗೆ ಸಮಯ ಕಳೆಯಿರಿ.
  • ಹೊರಾಂಗಣ ಆಟಗಳನ್ನು ಆಡುವುದಕ್ಕೆ ಪ್ರೋತ್ಸಾಹ ನೀಡಿ.
  • ಮನೆಯಲ್ಲಿ “ನೋ- ಫೋನ್ ಟೈಮ್” ನಿಗದಿಪಡಿಸಿ.
  • ನೀವು ಸಹ ಸ್ಕ್ರೀನ್ ಬಳಕೆಯನ್ನು ಕಡಿಮೆ ಮಾಡಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ