AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೈಬಿಪಿ ಇರುವವರಿಗೆ ತಲೆಯ ಹಿಂಭಾಗದಲ್ಲಿ ನೋವು ಕಂಡುಬರುತ್ತದೆಯೇ?

ಕೆಲವೊಮ್ಮೆ ತಲೆಯ ಹಿಂಭಾಗದಲ್ಲಿ ಕಂಡುಬರುವ ನೋವು ಕುತ್ತಿಗೆಯವರೆಗೂ ವಿಸ್ತರಿಸುತ್ತದೆ. ಈ ರೀತಿ ಕಂಡುಬಂದಾಗ ನಿರ್ಲಕ್ಷ್ಯವಹಿಸಬೇಡಿ ಇದು ಕೆಲವು ಸಂದರ್ಭಗಳಲ್ಲಿ, ಅಧಿಕ ರಕ್ತದೊತ್ತಡದ ಲಕ್ಷಣವಾಗಿರಬಹುದು. ಹಾಗಾದರೆ ಅಧಿಕ ರಕ್ತದೊತ್ತಡಕ್ಕೂ ತಲೆ ನೋವಿಗೂ ಏನು ಸಂಬಂಧ, ಯಾಕೆ ಈ ರೀತಿಯಾಗುತ್ತದೆ, ಇದನ್ನು ಗುರುತಿಸುವುದು ಹೇಗೆ ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಹೈಬಿಪಿ ಇರುವವರಿಗೆ ತಲೆಯ ಹಿಂಭಾಗದಲ್ಲಿ ನೋವು ಕಂಡುಬರುತ್ತದೆಯೇ?
High Bp HeadacheImage Credit source: Getty Images
ಪ್ರೀತಿ ಭಟ್​, ಗುಣವಂತೆ
|

Updated on: Feb 12, 2026 | 7:40 PM

Share

ತಲೆನೋವು (Headache) ಕಂಡುಬರುವುದು ಸಾಮಾನ್ಯ. ಕೆಲವೊಮ್ಮೆ ಈ ನೋವು ತಲೆಯ ಮುಂಭಾಗದಲ್ಲಿ, ಮಧ್ಯದಲ್ಲಿ, ಕೆಲವೊಮ್ಮೆ ಇಡೀ ತಲೆ, ಮತ್ತೆ ಕೆಲವು ಸಂದರ್ಭಗಳಲ್ಲಿ ಹಿಂಭಾಗದಲ್ಲಿ ನೋವು ಕಂಡುಬರುತ್ತದೆ. ಈ ತಲೆನೋವು ಸಾಮಾನ್ಯವಾಗಿ ಮೈಗ್ರೇನ್, ನಿದ್ರೆಯ ಕೊರತೆ, ಹಳೆಯ ಗಾಯ ಅಥವಾ ಮಾನಸಿಕ ಒತ್ತಡದಂತಹ ಹಲವು ಕಾರಣಗಳಿಂದ ಕಂಡುಬರಬಹುದು. ಆದರೆ ಅಂತಹ ಯಾವುದೇ ಸಮಸ್ಯೆ ಇಲ್ಲದಿದ್ದರೂ ಕೂಡ ತಲೆಯ ಹಿಂಭಾಗದಲ್ಲಿ ಇನ್ನೂ ಕಂಡುಬರುತ್ತಿದ್ದರೆ ಅದಕ್ಕೆ ಅಧಿಕ ರಕ್ತದೊತ್ತಡವೂ (High BP) ಕಾರಣವಾಗಿರಬಹುದು. ಹಾಗಾದರೆ ಅಧಿಕರಕ್ತದೊತ್ತಡಕ್ಕೂ ತಲೆ ನೋವಿಗೂ ಏನು ಸಂಬಂಧ, ಯಾಕೆ ಈ ರೀತಿಯಾಗುತ್ತದೆ, ಇದನ್ನು ಗುರುತಿಸುವುದು ಹೇಗೆ ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ದೆಹಲಿಯ ರಾಜೀವ್ ಗಾಂಧಿ ಆಸ್ಪತ್ರೆಯ ಹೃದ್ರೋಗ ವಿಭಾಗದ ಡಾ. ಅಜಿತ್ ಜೈನ್ ಹೇಳುವ ಪ್ರಕಾರ, ಯಾವುದೇ ವ್ಯಕ್ತಿಗಾಗಲಿ ಒಂದು ಅಥವಾ ಎರಡು ಬಾರಿ ಅಧಿಕ ರಕ್ತದೊತ್ತಡ ಕಂಡುಬಂದರೆ ಅದು ತಲೆಯ ಹಿಂಭಾಗದಲ್ಲಿ ನೋವು ಉಂಟುಮಾಡುವುದಿಲ್ಲ. ಆದರೆ ಈ ರಕ್ತದೊತ್ತಡವು 180/120 mmHg ಕ್ಕಿಂತ ಹೆಚ್ಚಾದರೆ, ಅದು ತಲೆನೋವಿಗೆ ಕಾರಣವಾಗಬಹುದು. ಈ ಸ್ಥಿತಿಯನ್ನು ವೈದ್ಯಕೀಯ ತುರ್ತುಸ್ಥಿತಿ ಎಂದು ಪರಿಗಣಿಸಲಾಗುತ್ತದೆ. ಆಗ ರೋಗಿಯನ್ನು ತಕ್ಷಣವೇ ಆಸ್ಪತ್ರೆಗೆ ಸೇರಿಸಬೇಕಾಗಬಹುದು. ಆದರೆ ಕೆಲವು ಸಂದರ್ಭಗಳಲ್ಲಿ, ರಕ್ತದೊತ್ತಡದಲ್ಲಿ ಸ್ವಲ್ಪ ಹೆಚ್ಚಳ ಕಂಡುಬಂದರೂ ಕೂಡ ತಲೆಯ ಹಿಂಭಾಗದಲ್ಲಿ ನೋವನ್ನು ಉಂಟುಮಾಡಬಹುದು.

ಅಧಿಕ ರಕ್ತದೊತ್ತಡದಿಂದ ಉಂಟಾಗುವ ತಲೆನೋವು ಹೇಗಿರುತ್ತದೆ?

  • ತಲೆಯ ಹಿಂಭಾಗದಲ್ಲಿ ನೋವಿನ ಜೊತೆಗೆ ಭಾರವೂ ಇರುತ್ತದೆ.
  • ತಲೆನೋವಿನೊಂದಿಗೆ ದೃಷ್ಟಿ ಮಸುಕಾಗುವುದು.
  • ತಲೆತಿರುಗುವಿಕೆ
  • ವಾಂತಿ

ಇದನ್ನೂ ಓದಿ: ಮೈಗ್ರೇನ್ ಬಿಪಿಯನ್ನು ಹೆಚ್ಚಿಸುತ್ತದೆಯೇ? ಮಹಿಳೆಯರೇ… ಈ ವಿಷಯಗಳ ಬಗ್ಗೆ ಗಮನ ಕೊಡಿ

ತಲೆಯ ಹಿಂಭಾಗದಲ್ಲಿ ನೋವು ಕಂಡುಬರುವುದಕ್ಕೆ ಕಾರಣವೇನು?

ವ್ಯಕ್ತಿಯ ರಕ್ತದೊತ್ತಡ ಹೆಚ್ಚಾದಾಗ, ಅದು ಮೆದುಳಿನಲ್ಲಿರುವ ರಕ್ತನಾಳಗಳ ಮೇಲೆ ಒತ್ತಡವನ್ನು ಬೀರುತ್ತದೆ. ಇದು ತಲೆನೋವಿಗೆ ಕಾರಣವಾಗುತ್ತದೆ. ಹೆಚ್ಚಿನವರಲ್ಲಿ, ನೋವು ತಲೆಯ ಹಿಂಭಾಗದಲ್ಲಿ ಕಂಡುಬರುತ್ತದೆ, ಆದರೆ ಅನೇಕರಲ್ಲಿ ಈ ನೋವು ಪೂರ್ತಿ ತಲೆಯನ್ನು ಆವರಿಸಿಕೊಳ್ಳಬಹುದು. ಅಧಿಕ ರಕ್ತದೊತ್ತಡದ ಲಕ್ಷಣಗಳನ್ನು ಸುಲಭವಾಗಿ ಗುರುತಿಸಲಾಗದ ಕಾರಣ, ಈ ರೋಗಲಕ್ಷಣವನ್ನು ನಿರ್ಲಕ್ಷಿಸುತ್ತಾರೆ, ಆದರೆ ಈ ರೀತಿ ಮಾಡುವುದು ಒಳ್ಳೆಯದಲ್ಲ. ಇಂತಹ ಸಂದರ್ಭಗಳಲ್ಲಿ, ನೀವು ವೈದ್ಯರನ್ನು ಸಂಪರ್ಕಿಸುವುದು ಬಹಳ ಮುಖ್ಯ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ