ಭಾರತದ ಮೊದಲ ವರ್ಲ್ಡ್ ಟ್ರಾವೆಲ್ ಅಂಡ್ ಟೂರಿಸಂ ಫೆಸ್ಟಿವಲ್ ಗೆ ದಿನಗಣನೆ, ಈ ಉತ್ಸವದಲ್ಲಿ ಏನೆಲ್ಲಾ ವಿಶೇಷತೆ ಇರಲಿದೆ?

World Travel and Tourism Festival 2025: ಟಿವಿ9 ನೆಟ್‌ವರ್ಕ್ ಹಾಗೂ ರೆಡ್ ಹ್ಯಾಟ್ ಕಮ್ಯುನಿಕೇಷನ್ಸ್ ಜಂಟಿಯಾಗಿ ವರ್ಲ್ಡ್ ಟ್ರಾವೆಲ್ ಅಂಡ್ ಟೂರಿಸಂ ಫೆಸ್ಟಿವಲ್ 2025 ಆಯೋಜಿಸಿದೆ. ದೆಹಲಿಯ ಮೇಜರ್ ಧ್ಯಾನ್ ಚಂದ್ ಸ್ಟೇಡಿಯಂನಲ್ಲಿ ಮೂರು ದಿನಗಳ ಕಾಲ ಈ ಉತ್ಸವವು ನಡೆಯಲಿದ್ದು, ಫೆಬ್ರವರಿ 14 ರಿಂದ ಪ್ರಾರಂಭವಾಗಿ ಫೆಬ್ರವರಿ 16 ಕ್ಕೆ ಕೊನೆಗೊಳ್ಳಲಿದೆ. ಜಾಗತಿಕ ಸಹಕಾರದೊಂದಿಗೆ ಆರ್ಥಿಕ ಪ್ರಗತಿಯನ್ನು ವೇಗಗೊಳಿಸಲು ಮತ್ತು ಸಾಂಸ್ಕೃತಿಕ ಪರಂಪರೆಯನ್ನು ರಕ್ಷಿಸುವ ಉದ್ದೇಶವನ್ನು ಹೊಂದಿದೆ. ಹಾಗಾದ್ರೆ ಈ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.

ಭಾರತದ ಮೊದಲ ವರ್ಲ್ಡ್ ಟ್ರಾವೆಲ್ ಅಂಡ್ ಟೂರಿಸಂ ಫೆಸ್ಟಿವಲ್ ಗೆ ದಿನಗಣನೆ, ಈ ಉತ್ಸವದಲ್ಲಿ ಏನೆಲ್ಲಾ ವಿಶೇಷತೆ ಇರಲಿದೆ?
World Travel And Tourism Festival
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on:Jan 17, 2025 | 3:36 PM

ಪ್ರವಾಸೋದ್ಯಮವು ವಿಶ್ವದ ಅತಿದೊಡ್ಡ ಉದ್ಯಮಗಳಲ್ಲಿ ಒಂದಾಗಿದೆ. ಈ ಪ್ರವಾಸೋದ್ಯಮದಿಂದಲೇ ಅನೇಕ ದೇಶಗಳ ಆದಾಯವು ಹೆಚ್ಚಳವಾಗುತ್ತಿದೆ. ಇದೀಗ ಟಿವಿ9 ನೆಟ್‌ವರ್ಕ್ ಹಾಗೂ ರೆಡ್ ಹ್ಯಾಟ್ ಕಮ್ಯುನಿಕೇಷನ್ ಜಂಟಿಯಾಗಿ ಮೂರು ದಿನಗಳ ಕಾಲ ವರ್ಲ್ಡ್ ಟ್ರಾವೆಲ್ ಅಂಡ್ ಟೂರಿಸಂ ಫೆಸ್ಟಿವಲ್ 2025 ಆಯೋಜಿಸಿದೆ. ಈ ಉತ್ಸವವು ಫೆಬ್ರವರಿ 14 ರಿಂದ 16 ರವರೆಗೆ ನವದೆಹಲಿಯ ಐಕಾನಿಕ್ ಮೇಜರ್ ಧ್ಯಾನ್‌ ಚಂದ್ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆಯಲಿದೆ. ಈ ಉತ್ಸವವು ಭಾರತೀಯ ಪ್ರಯಾಣಿಕರು ಜಗತ್ತನ್ನು ಅನ್ವೇಷಿಸುವ ವಿಧಾನವನ್ನು ಮರು ವ್ಯಾಖ್ಯಾನಿಸಲು ಅನುವು ಮಾಡಿಕೊಡುತ್ತದೆ.

ಬಹುನಿರೀಕ್ಷಿತ ಈವೆಂಟ್ ಪ್ರಯಾಣದ ಉತ್ಸಾಹಿಗಳಿಗೆ ಮತ್ತು ಉದ್ಯಮದ ಮಧ್ಯಸ್ಥಗಾರರಿಗೆ ಗೇಮ್ ಚೇಂಜರ್ ಆಗಲಿದೆ. ಭಾರತದ ಮೊದಲ ಬಿ2ಸಿ ಪ್ರಯಾಣ ಮತ್ತು ಪ್ರವಾಸೋದ್ಯಮ ಕಾರ್ಯಕ್ರಮವು ಇದಾಗಿದ್ದು, ಇದು ಪ್ರಯಾಣಿಕರು, ಪ್ರವಾಸೋದ್ಯಮ ಮಂಡಳಿಗಳು ಮತ್ತು ಬ್ರ್ಯಾಂಡ್‌ಗಳು ಒಟ್ಟುಗೂಡಲು ಒಂದು ಅನನ್ಯ ವೇದಿಕೆಯನ್ನು ಒದಗಿಸುತ್ತದೆ. ಈ ವೇದಿಕೆಯು ಭಾರತೀಯ ಪ್ರಯಾಣಿಕರಿಗೆ ಹಿಂದೆಂದಿಗಿಂತಲೂ ಜಾಗತಿಕ ಪ್ರಯಾಣವನ್ನು ಕೈಗೊಳ್ಳಲು ಸಹಾಯ ಮಾಡುತ್ತದೆ.

World Travel And Tourism Festival (2)

85 ಪ್ರತಿಶತ ಭಾರತೀಯ ಪ್ರವಾಸಿಗರು ಹೊಸ ಅನುಭವವನ್ನು ಪಡೆಯಲು ವಿದೇಶಕ್ಕೆ ತೆರಳುತ್ತಿದ್ದಾರೆ. ಆದರೆ ಈ ಉತ್ಸವವು ಸ್ಥಳೀಯ ಮತ್ತು ಅಂತಾರಾಷ್ಟ್ರೀಯ ಪ್ರವಾಸೋದ್ಯಮದ ನಡುವಿನ ಸಂಪರ್ಕವನ್ನು ಬಲಪಡಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಉತ್ಸವದಲ್ಲಿ ಪ್ರಯಾಣ ಸಮಾಲೋಚನೆಗಳು, ತಜ್ಞರ ನೇತೃತ್ವದಲ್ಲಿ ಮಾತುಕತೆಗಳು, ಸಾಂಸ್ಕೃತಿಕ ಪ್ರದರ್ಶನಗಳು, ಆಹಾರ ಹಾಗೂ ಪಾಕಪದ್ಧತಿಗಳು ಇನ್ನಿತ್ತರ ಆಕರ್ಷಣೆಯನ್ನು ಕಾಣಬಹುದು.

World Travel And Tourism Festival (1)

ಈ ಮೂರು ದಿನಗಳ ಉತ್ಸವದಲ್ಲಿ ಭಾಗವಹಿಸುವ ಬ್ರ್ಯಾಂಡ್‌ ಗಳಿಗೆ ಹೊಸ ಅನುಭವ ವಲಯ, ಟ್ರಾವೆಲ್ ಟೂರ್ ಆಪರೇಟರ್‌ಗಳೊಂದಿಗೆ ಬಿ2ಬಿ ಸಭೆಗಳನ್ನು ಒಳಗೊಂಡಿರುತ್ತದೆ. ವಿನಂತಿಯ ಮೇರೆಗೆ ಬಿ2ಬಿ ಪವರ್ ಬ್ರೇಕ್‌ಫಾಸ್ಟ್ ಮತ್ತು ಲಂಚ್ ಪೋರಮ್ ಗಳು ಲಭ್ಯವಿರುತ್ತದೆ. ಅದಲ್ಲದೇ, ಟ್ರಾವೆಲ್ ಟ್ರೇಡ್ ಅವಾರ್ಡ್ಸ್, ಸಂಜೆಯ ವೇಳೆ ಸಾಂಸ್ಕೃತಿಕ ಪ್ರದರ್ಶನಗಳು ಮತ್ತು ಗ್ರಾಹಕರೊಂದಿಗೆ ಸಂವಹನ ಸೆಷನ್ಸ್ ಗಳು, ಜಾಗತಿಕ ಪ್ರೇಕ್ಷಕರನ್ನು ಆಕರ್ಷಿಸಲು ಮನರಂಜನೆ, ನೃತ್ಯ, ಸಂಗೀತ, ಆಹಾರ ಮತ್ತು ಅಗ್ರ ಬಿ2ಸಿ ಬ್ರಾಂಡ್‌ಗಳ ಸಾಟಿಯಿಲ್ಲದ ಸಂಯೋಜನೆಯನ್ನು ಒಂದೇ ವೇದಿಕೆಯಲ್ಲಿ ಕಾಣಬಹುದು.

ಈ ಉತ್ಸವದಲ್ಲಿ ಅಂತಾರಾಷ್ಟ್ರೀಯ ಪ್ರವಾಸೋದ್ಯಮ ಮಂಡಳಿಗಳು, ರಾಜ್ಯ ಪ್ರವಾಸೋದ್ಯಮ ಪ್ರತಿನಿಧಿಗಳು, ವಿಮಾನಯಾನ ಸಂಸ್ಥೆಗಳು ಸೇರಿಕೊಂಡಿವೆ. ಪ್ರಯಾಣದ ಪ್ರವೃತ್ತಿಗಳು ಹಾಗೂ ಹಾಟ್ ಸ್ಪಾಟ್‌ಗಳ ಕುರಿತು ಉದ್ಯಮದ ತಜ್ಞರಿಂದ ಮಾಹಿತಿ ಪಡೆಯಬಹುದು. ಪ್ರಯಾಣದ ಛಾಯಾಗ್ರಹಣ, ಪ್ರಯಾಣ ಯೋಜನೆ ಕುರಿತು ಸೆಷನ್‌ಗಳು ಇರುತ್ತವೆ. ಪ್ರವಾಸದಲ್ಲಿ ಆಸಕ್ತಿ ಇರುವ ಪ್ರಯಾಣಿಕರಿಗೆ ನೋಡಲೇಬೇಕಾದ ಸ್ಥಳಗಳ ಪೂರ್ವವೀಕ್ಷಣೆಯನ್ನು ಸಹ ಒದಗಿಸುತ್ತದೆ. ಅದಲ್ಲದೇ, 100 ಕ್ಕೂ ಹೆಚ್ಚು ಪ್ರಭಾವಿಗಳು ಮತ್ತು ಸಾಮಾಜಿಕ ಮಾಧ್ಯಮ ರಚನೆಕಾರರು ಭಾಗವಹಿಸಲಿದ್ದಾರೆ. ಈ ಉತ್ಸವದಲ್ಲಿ ನೀವು ಭಾಗವಹಿಸಿ ಹೊಸ ಅನುಭವ ಪಡೆಯುವ ಮೂಲಕ ಮೂರು ದಿನಗಳ ಉತ್ಸವವನ್ನು ಎಂಜಾಯ್ ಮಾಡಬಹುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:33 pm, Fri, 17 January 25

ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು
ಗಾಂಧಿ ಭಾರತ ಒಂದು ಸರ್ಕಾರೀ ಕಾರ್ಯಕ್ರಮ, ಎಲ್ಲರೂ ಭಾಗವಹಿಸಬಹುದು: ಶಿವಕುಮಾರ್
ಗಾಂಧಿ ಭಾರತ ಒಂದು ಸರ್ಕಾರೀ ಕಾರ್ಯಕ್ರಮ, ಎಲ್ಲರೂ ಭಾಗವಹಿಸಬಹುದು: ಶಿವಕುಮಾರ್
ಮಹಾಕುಂಭದಲ್ಲಿ ಹೂವಿನ ಹಾರ ಮಾರುವ ಯುವತಿ ಸೌಂದರ್ಯಕ್ಕೆ ಫ್ಯಾನ್ ಆಗದವರೇ ಇಲ್ಲ
ಮಹಾಕುಂಭದಲ್ಲಿ ಹೂವಿನ ಹಾರ ಮಾರುವ ಯುವತಿ ಸೌಂದರ್ಯಕ್ಕೆ ಫ್ಯಾನ್ ಆಗದವರೇ ಇಲ್ಲ
ನಾನು ನಿಷ್ಠಾವಂತ ಕಾರ್ಯಕರ್ತ, ಸತೀಶ್ ಜಾರಕಿಹೊಳಿ ಹಿಂಬಾಲಕನಲ್ಲ: ಕಾರ್ಯಕರ್ತ
ನಾನು ನಿಷ್ಠಾವಂತ ಕಾರ್ಯಕರ್ತ, ಸತೀಶ್ ಜಾರಕಿಹೊಳಿ ಹಿಂಬಾಲಕನಲ್ಲ: ಕಾರ್ಯಕರ್ತ
ಸುಮ್ಮನಿರುವಂತೆ ಸತೀಶ್ ಹೇಳಿದರೂ ಕೂಗಾಟ ನಿಲ್ಲಿಸದ ಕಾರ್ಯಕರ್ತರು!
ಸುಮ್ಮನಿರುವಂತೆ ಸತೀಶ್ ಹೇಳಿದರೂ ಕೂಗಾಟ ನಿಲ್ಲಿಸದ ಕಾರ್ಯಕರ್ತರು!
ಈ ಸೀಸನ್​ನ ಕೊನೆಯ ನಾಮಿನೇಷನ್​ನಲ್ಲಿ ಮಂಜಣ್ಣ ಟಾರ್ಗೆಟ್
ಈ ಸೀಸನ್​ನ ಕೊನೆಯ ನಾಮಿನೇಷನ್​ನಲ್ಲಿ ಮಂಜಣ್ಣ ಟಾರ್ಗೆಟ್
ಬಿಎಂಟಿಸಿ ಟಿಕೆಟ್ ದರ ಹೆಚ್ಚಿರುವ ಬೆನ್ನಲ್ಲೇ ಮೆಟ್ರೋ ಪ್ರಯಾಣ ದರ ಏರಿಕೆ!
ಬಿಎಂಟಿಸಿ ಟಿಕೆಟ್ ದರ ಹೆಚ್ಚಿರುವ ಬೆನ್ನಲ್ಲೇ ಮೆಟ್ರೋ ಪ್ರಯಾಣ ದರ ಏರಿಕೆ!
ಜನಪ್ರತಿನಿಧಿಗಳು ಎಲೆಕ್ಟ್ರಾನಿಕ್ ಮಾಧ್ಯಮಗಳ ನ್ಯೂಸ್ ವೀಕ್ಷಿಸುವುದಿಲ್ಲವೇ?
ಜನಪ್ರತಿನಿಧಿಗಳು ಎಲೆಕ್ಟ್ರಾನಿಕ್ ಮಾಧ್ಯಮಗಳ ನ್ಯೂಸ್ ವೀಕ್ಷಿಸುವುದಿಲ್ಲವೇ?
ಡಿಕೆ ಸುರೇಶ್​ಗೆ ಕೆಪಿಸಿಸಿ ಅಧ್ಯಕ್ಷನಾಗುವ ಹಂಬಲವಿದೆಯೇ?
ಡಿಕೆ ಸುರೇಶ್​ಗೆ ಕೆಪಿಸಿಸಿ ಅಧ್ಯಕ್ಷನಾಗುವ ಹಂಬಲವಿದೆಯೇ?