Desi Ghee Side Effects: ದೇಸಿ ತುಪ್ಪ ಅಧಿಕವಾಗಿ ಸೇವಿಸುವುದು ಹಾನಿಕಾರಕವೇ? ತಜ್ಞರು ಏನನ್ನುತ್ತಾರೆ ಗೊತ್ತಾ?
Desi Ghee Side Effects: ಯಾವುದನ್ನೇ ಆಗಲೀ ಅತಿಯಾಗಿ ತಿನ್ನುವುದರಿಂದ ಹಾನಿಯಾಗಬಹುದು. ಅತಿಯಾದರೆ ಅಮೃತವೂ ವಿಷವಾದೀತು ಅಲ್ಲವೇ? ಇನ್ನು ದೇಸಿ/ನಾಟಿ ತುಪ್ಪದ ವಿಷಯದಲ್ಲಿ ಕೂಡ ಇದೇ ಪರಿಸ್ಥಿತಿ. ಕಾರಣದಿಂದಾಗಿ ಇದು ಆರೋಗ್ಯಕ್ಕೆ ಮಾರಕವಾಗುತ್ತದೆ.

ತುಪ್ಪದಲ್ಲಿಅದರಲ್ಲೂ ದೇಸಿ/ ನಾಟಿ ತುಪ್ಪದಲ್ಲಿ ಅನೇಕ ಔಷಧೀಯ ಗುಣಗಳಿವೆ ಎ.ಂಬುದರಲ್ಲಿ ಎರಡು ಮಾತಿಲ್ಲ. ಅದು ಆರೋಗ್ಯಕ್ಕೆ ಒಳ್ಳೆಯದು ಎಂದು ಭಾವಿಸುವುದರ ಜೊತೆಗೆ ಆಹಾರದ ರುಚಿ, ಮೌಲ್ಯವನ್ನೂ ಕೂಡ ಹೆಚ್ಚಿಸುತ್ತದೆ. ಇದರಲ್ಲಿ ವಿಟಮಿನ್ ಎ, ಸಿ, ಡಿ, ಕೆ ಮುಂತಾದ ಅನೇಕ ಪೌಷ್ಟಿಕಾಂಶಗಳು ಇವೆ. ಯಾವುದೇ ರೂಪದಲ್ಲಿಯಾದರೂ ತುಪ್ಪ ತಿನ್ನಲು ಇಷ್ಟ ಪಡುವವರು ಬಹಳ ಮಂದಿ ಇರುತ್ತಾರೆ. ಆದರೂ ಕೂಡ ನಾಟಿ ತುಪ್ಪ ಹಾನಿಕಾರಕ ಎಂಬುದು ನಿಮಗೆ ಗೊತ್ತಾ?
ದೇಸಿ/ ನಾಟಿ ತುಪ್ಪ ಉತ್ತಮ ಆರೋಗ್ಯಕ್ಕೆ ಒಂದು ವರ ಇದ್ದಂತೆ. ಮತ್ತಜ್ಜಿಯರ ಕಾಲದಿಂದಲೂ ಇದನ್ನು ತಿನ್ನಬೇಕೆಂದು ಸೂಚಿಸಲಾಗುತ್ತಿದೆ. ದೇಸಿ/ ನಾಟಿ ತುಪ್ಪದಲ್ಲಿ ಅನೇಕ ಪೌಷ್ಟಿಕಾಂಶಗಳು, ಜೀವಸತ್ವಗಳು, ಖನಿಜಗಳು ಇವೆ. ಆಯುರ್ವೇದದ ಪ್ರಕಾರ.. ತುಪ್ಪದಲ್ಲಿ ಅನೇಕ ಔಷಧೀಯ ಗುಣಗಳಿವೆ. ವಾಸ್ತವವಾಗಿ ಇದನ್ನು ತಿನ್ನುವುದರಿಂದ ದೇಹ ಸೌಖ್ಯದಲ್ಲಿ ಉದ್ಭವಿಸುವ ಕೆಲವು ಏರಪೇರುಗಳಿಂದ ಉಪಶಮನ ಸಿಗುತ್ತದೆ. ಹಾಗೆಯೇ ಅದರ ಬದಲು ಹಾನಿಯೂ ಉಂಟಾಗುತ್ತದೆ ಎನ್ನಬಹುದು. ತುಪ್ಪ ಸೇವಿಸುವುದರಿಂದ ಯಾವ ರೀತಿಯ ಪರದಾಟಗಳು ಉದ್ಭವಿಸುತ್ತವೆ, ಅದರಿಂದ ಯಾವ ರೀತಿಯ ಹಾನಿ ಉಂಟಾಗುತ್ತದೋ ಎಂಬುದನ್ನು ಇಲ್ಲಿ ತಿಳಿಯೋಣ.
ದೇಸಿ/ ನಾಟಿ ತುಪ್ಪ : ಆಯುರ್ವೇದ ಏನು ಹೇಳುತ್ತದೆ?
ಯಾವುದನ್ನೇ ಆಗಲೀ ಅತಿಯಾಗಿ ತಿನ್ನುವುದರಿಂದ ಹಾನಿಯಾಗಬಹುದು. ಅತಿಯಾದರೆ ಅಮೃತವೂ ವಿಷವಾದೀತು ಅಲ್ಲವೇ? ಇನ್ನು ದೇಸಿ/ನಾಟಿ ತುಪ್ಪದ ವಿಷಯದಲ್ಲಿ ಕೂಡ ಇದೇ ಪರಿಸ್ಥಿತಿ. ಪ್ರಸ್ತುತ ಮಾರುಕಟ್ಟೆಯಲ್ಲಿ ಸಿಗುವ ತುಪ್ಪಗಳು ಬಹಳಷ್ಟು ಕಲಬೆರಕೆಯಾಗಿರುತ್ತವೆ ಅಥವಾ ನಕಲಿ ತುಪ್ಪವಾಗಿರುತ್ತದೆ. ಈ ಕಾರಣದಿಂದಾಗಿ ಇದು ಆರೋಗ್ಯಕ್ಕೆ ಮಾರಕವಾಗುತ್ತದೆ.
ಹಸುವಿನ ತುಪ್ಪ ಅತ್ಯುತ್ತಮವಾದುದು:
ಸಾಲ ಮಾಡಿಯಾದರೂ ತುಪ್ಪ ತಿನ್ನಬೇಕು ಎಂಬ ಗಾದೆ ಮಾತಿದೆ. ಹಸುವಿನ ತುಪ್ಪ ಬಳಕೆಗೆ ಉತ್ತಮವಾಗಿದೆ. ಏಕೆಂದರೆ ಇದು ದೇಹದಲ್ಲಿ ಉತ್ತಮ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುತ್ತದೆ. ಆದರೆ ಹೆಚ್ಚಾಗಿ ಈ ತುಪ್ಪ ತಿನ್ನುವುದು ಕೂಡ ಹಾನಿ ಮಾಡುತ್ತದೆ. ಏಕೆಂದರೆ ಇದನ್ನು ಸೇವಿಸುವುದರಿಂದ ದೇಹ-ಮನಸು ಚುರುಕಾಗಿ ಇರುವುದಿಲ್ಲ. ಇದರಿಂದ ಕೊಬ್ಬು ಬೆಳೆಯುತ್ತದೆ. ಇದರಿಂದ ಹೃದಯ ಸಂಬಂಧಿ ಕಾಯಿಲೆಗಳ ಗೂಡಾಗುತ್ತದೆ. ಅದೇ ಚುರುಕಾಗಿದ್ದು, ತುಪ್ಪ ತಿನ್ನುತ್ತಿದ್ದರೆ ಅದರಿಂದ ಪ್ರಯೋಜನಗಳು ಹೆಚ್ಚಾಗಿರುತ್ತವೆ.
ಯಾವ ಪರಿಸ್ಥಿತಿಗಳಲ್ಲಿ ತುಪ್ಪ ತಿನ್ನಬಾರದು?
ಯಾರಿಗೆ ಜೀರ್ಣಕಾರಿ ಸಮಸ್ಯೆಗಳಿದೆಯೋ ಅಂತಹವರು ಕಡಿಮೆ ತುಪ್ಪ ತೆಗೆದುಕೊಳ್ಳಬೇಕು. ಹಾಗೆಯೇ ಮೊದಲು ಡಾಕ್ಟರ್ ಸಲಹೆ ತೆಗೆದುಕೊಳ್ಳಬೇಕು. ಅಷ್ಟೇ ಅಲ್ಲ ಕೆಟ್ಟ ಕೊಲೆಸ್ಟ್ರಾಲ್ ವೃದ್ಧಿಸುತ್ತಿದ್ದರೆ ತುಪ್ಪದಿಂದ ದೂರವಿರಬೇಕು. ಅಧಿಕ ಕೊಲೆಸ್ಟ್ರಾಲ್‌ನಿಂದ ಬಳಲುತ್ತಿರುವ ವ್ಯಕ್ತಿ ತುಪ್ಪ ಹೆಚ್ಚಾಗಿ ತೆಗೆದುಕೊಂಡರೆ ಸಮಸ್ಯೆಗಳು ಹೆಚ್ಚಾಗುವ ಸಾಧ್ಯತೆಯಿದೆ.
ಇದನ್ನೂ ಓದಿ: Health: ಸಂಜೆಯಾಗುತ್ತಿದ್ದಂತೆ ನಿಮ್ಮಲ್ಲಿ ಈ ಲಕ್ಷಣಗಳು ಕಂಡುಬರುತ್ತಿವೆಯಾ? ಹಾಗಾದರೆ ತಕ್ಷಣ ಅಲರ್ಟ್ ಆಗಿ
(ಸೂಚನೆ: ಮೇಲೆ ತಿಳಿಸಿದ ವಿಷಯಗಳು ಕೇವಲ ಪ್ರಾಥಮಿಕ ಮಾಹಿತಿಗಾಗಿ ಒದಗಿಸಿದವು ಮಾತ್ರ. ಆರೋಗ್ಯಕ್ಕೆ ಸಂಬಂಧಿಸಿದಂತೆ ವೈದ್ಯರ ಉಪಸ್ಥಿತಿಯಲ್ಲಿ ಅವರ ಸೂಚನೆ ಮೇರೆಗೆ ಸೂಕ್ತ ಚಿಕಿತ್ಸೆ ತೆಗೆದುಕೊಳ್ಳುವುದು ಉತ್ತಮ)
ಹೆಚ್ಚಿನ ಆರೋಗ್ಯ ಸುದ್ದಿಗಳಿಗಾಗಿ ಇಲ್ಲ ಕ್ಲಿಕ್ ಮಾಡಿ..