ಅನಿಯಮಿತ ಋತುಚಕ್ರದಿಂದ ಬಳಲುತ್ತಿದ್ದೀರಾ? ನೈಸರ್ಗಿಕವಾಗಿ ಋತುಚಕ್ರವನ್ನು ಪ್ರಚೋದಿಸುವುದು ಹೇಗೆ? ಇಲ್ಲಿವೆ ಸಲಹೆ

ಮಹಿಳೆಯರು ಆರಂಭಿಕ ಋತುಚಕ್ರ ಅಥವಾ ವಿಳಂಬವಾದ ಋತುಚಕ್ರವನ್ನು ಅನುಭವಿಸುವುದು ಸಾಮಾನ್ಯವಾಗಿದೆ. ಆದರೆ ಮಹಿಳೆಯ ನಡುವಿನ ಅಂತರವು 35 ದಿನಗಳಿಗಿಂತ ಹೆಚ್ಚು ಅಥವಾ 21 ದಿನಗಳಿಗಿಂತ ಕಡಿಮೆಯಿದ್ದರೆ ಅದನ್ನು ಅನಿಯಮಿತ ಎಂದು ಹೇಳಲಾಗುತ್ತದೆ. ಪ್ರತಿ ತಿಂಗಳು ಅನಿಯಮಿತ ಋತುಚಕ್ರ ಬರುವ ಬಗ್ಗೆ ಚಿಂತಿಸುತ್ತಿದ್ದೀರಾ? ಋತುಚಕ್ರವನ್ನು ಸುರಕ್ಷಿತವಾಗಿ ಪ್ರಚೋದಿಸಲು ನೈಸರ್ಗಿಕ ಮಾರ್ಗಗಳನ್ನು ಪ್ರಯತ್ನಿಸಿ.

ಅನಿಯಮಿತ ಋತುಚಕ್ರದಿಂದ ಬಳಲುತ್ತಿದ್ದೀರಾ? ನೈಸರ್ಗಿಕವಾಗಿ ಋತುಚಕ್ರವನ್ನು ಪ್ರಚೋದಿಸುವುದು ಹೇಗೆ? ಇಲ್ಲಿವೆ ಸಲಹೆ
ಸಾಂದರ್ಭಿಕ ಚಿತ್ರ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on: Sep 27, 2023 | 3:20 PM

ಆರೋಗ್ಯಕರ ಋತುಚಕ್ರವು ಸರಾಸರಿ 28 ದಿನಗಳ ಅಂತರವನ್ನು ಹೊಂದಿರುತ್ತದೆ. ಆದರೆ ಎಲ್ಲಾ ಮಹಿಳೆಯರಿಗೆ ಋತುಚಕ್ರವು ನಿಯಮಿತವಾಗಿದ್ದರೆ, ಕೆಲವು ಮಹಿಳೆಯರು ಆರಂಭಿಕ ಋತುಚಕ್ರ ಅಥವಾ ವಿಳಂಬವಾದ ಋತುಚಕ್ರವನ್ನು ಅನುಭವಿಸುವುದು ಸಾಮಾನ್ಯವಾಗಿದೆ. ಆದರೆ ಮಹಿಳೆಯ ನಡುವಿನ ಅಂತರವು 35 ದಿನಗಳಿಗಿಂತ ಹೆಚ್ಚು ಅಥವಾ 21 ದಿನಗಳಿಗಿಂತ ಕಡಿಮೆಯಿದ್ದರೆ ಅದನ್ನು ಅನಿಯಮಿತ ಎಂದು ಪರಿಗಣಿಸಲಾಗುತ್ತದೆ. ಋತುಚಕ್ರ ತಡವಾಗಿ ಆಗುತ್ತಿರುವ ಬಗ್ಗೆ ಚಿಂತೆ ಮಾಡುತ್ತಿದ್ದರೆ, ನೀವು ಗರ್ಭಿಣಿಯಾಗುವ ನಿರೀಕ್ಷೆಯಲ್ಲಿಲ್ಲದಿದ್ದರೆ ಋತುಚಕ್ರವನ್ನು ಪ್ರಚೋದಿಸಲು ನೈಸರ್ಗಿಕ ಮಾರ್ಗಗಳನ್ನು ಪ್ರಯತ್ನಿಸಬಹುದು.

ಅನಿಯಮಿತ ಋತುಚಕ್ರಕ್ಕೆ ಕಾರಣವೇನು?

ಅನಿಯಮಿತ ಋತುಚಕ್ರವು ವಿವಿಧ ಕಾರಣಗಳಿಂದಾಗಿ ಸಂಭವಿಸಬಹುದು ಮತ್ತು ಅವು ಅಸಾಮಾನ್ಯವಲ್ಲ ಎಂದು ಬೆಂಗಳೂರಿನ ಎಚ್ಆರ್ಬಿಆರ್ ಲೇಔಟ್ನ ಮದರ್ಹುಡ್ ಆಸ್ಪತ್ರೆಗಳ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ ಡಾ. ಶ್ವೇತಾ ಎಂ.ಪಿ. ತಿಳಿಸಿದ್ದು, ಅವರು ಕೆಲವು ಸಾಮಾನ್ಯ ಕಾರಣಗಳನ್ನು ಹಂಚಿಕೊಂಡಿದ್ದಾರೆ. ಏನದು? ಇಲ್ಲಿದೆ ಮಾಹಿತಿ.

1. ಒತ್ತಡ

ಹೆಚ್ಚಿನ ಮಟ್ಟದ ಒತ್ತಡವು ನಿಮ್ಮ ದೇಹಕ್ಕೆ ಒಳ್ಳೆಯದಲ್ಲ. ಋತುಚಕ್ರದ ವಿಷಯಕ್ಕೆ ಬಂದಾಗ, ಇದು ದೇಹದಲ್ಲಿನ ಹಾರ್ಮೋನುಗಳ ಸಮತೋಲನವನ್ನು ಅಡ್ಡಿಪಡಿಸುತ್ತದೆ, ಇದು ಅನಿಯಮಿತ ಋತುಚಕ್ರಕ್ಕೆ ಕಾರಣವಾಗುತ್ತದೆ. ದೇಹವು ಹೆಚ್ಚು ಕಾರ್ಟಿಸೋಲ್ (ಒತ್ತಡದ ಹಾರ್ಮೋನ್) ಅನ್ನು ಉತ್ಪಾದಿಸಬಹುದು, ಇದು ಋತುಚಕ್ರದ ನಿಯಮಿತತೆಯ ಮೇಲೆ ಪರಿಣಾಮ ಬೀರುತ್ತದೆ.

2. ತೂಕ ಬದಲಾವಣೆಗಳು

ಗಮನಾರ್ಹ ತೂಕ ನಷ್ಟ ಅಥವಾ ಹೆಚ್ಚಳವು ಹಾರ್ಮೋನ್ ಹೆಚ್ಚಳದ ಮೇಲೆ ಪರಿಣಾಮ ಬೀರಬಹುದು ಮತ್ತು ಅನಿಯಮಿತ ಋತುಚಕ್ರಕ್ಕೆ ಕಾರಣವಾಗಬಹುದು. ಅತ್ಯಂತ ಕಡಿಮೆ ದೇಹದ ತೂಕ (ಕಡಿಮೆ ತೂಕ) ಅಥವಾ ಬೊಜ್ಜು ಋತುಚಕ್ರವನ್ನು ಅಡ್ಡಿಪಡಿಸುತ್ತದೆ ಎಂದು ತಜ್ಞರು ಹೇಳುತ್ತಾರೆ.

3. ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ (ಪಿಸಿಒಎಸ್)

ಪಿಸಿಒಎಸ್ ಒಂದು ಸಾಮಾನ್ಯ ಹಾರ್ಮೋನುಗಳ ಅಸ್ವಸ್ಥತೆಯಾಗಿದ್ದು, ಇದು ಇತರ ರೋಗಲಕ್ಷಣಗಳ ನಡುವೆ ಅನಿಯಮಿತ ಋತುಚಕ್ರಕ್ಕೆ ಕಾರಣವಾಗಬಹುದು.

4. ಥೈರಾಯ್ಡ್ ಅಸ್ವಸ್ಥತೆಗಳು

ಋತುಚಕ್ರವನ್ನು ನಿಯಂತ್ರಿಸುವಲ್ಲಿ ಥೈರಾಯ್ಡ್ ಹಾರ್ಮೋನುಗಳು ನಿರ್ಣಾಯಕ ಪಾತ್ರವಹಿಸುತ್ತವೆ. ನಿಷ್ಕ್ರಿಯ ಅಥವಾ ಅತಿಯಾದ ಥೈರಾಯ್ಡ್ ಗ್ರಂಥಿಯು ನಿಮ್ಮ ಋತುಚಕ್ರದ ಮೇಲೆ ಪರಿಣಾಮ ಬೀರಬಹುದು.

5. ಅತಿಯಾದ ವ್ಯಾಯಾಮ

ವ್ಯಾಯಾಮವು ಅನೇಕ ಪ್ರಯೋಜನಗಳನ್ನು ಹೊಂದಿದೆ, ಆದರೆ ತೀವ್ರವಾದ ಅಥವಾ ಅತಿಯಾದ ದೈಹಿಕ ಚಟುವಟಿಕೆಯು ಹಾರ್ಮೋನುಗಳ ಸಮತೋಲನವನ್ನು ಅಡ್ಡಿಪಡಿಸುತ್ತದೆ ಮತ್ತು ಅನಿಯಮಿತ ಋತುಚಕ್ರಕ್ಕೆ ಕಾರಣವಾಗಬಹುದು.

6. ಕಳಪೆ ಪೌಷ್ಠಿಕಾಂಶ

ಪೌಷ್ಠಿಕಾಂಶದ ಕೊರತೆಯು ಹಾರ್ಮೋನ್ ಉತ್ಪಾದನೆಯ ಮೇಲೆ ಪರಿಣಾಮ ಬೀರಬಹುದು, ಆದ್ದರಿಂದ ಅಗತ್ಯ ಪೋಷಕಾಂಶಗಳ ಕೊರತೆಯಿರುವ ಆಹಾರವು ಅನಿಯಮಿತ ಋತುಚಕ್ರಕ್ಕೆ ಕಾರಣವಾಗುತ್ತದೆ ಎನ್ನುತ್ತಾರೆ ತಜ್ಞರು.

7. ಪೆರಿಮೆನೊಪಾಸ್

ಮಹಿಳೆಯರು ಋತುಬಂಧವನ್ನು ಸಮೀಪಿಸುತ್ತಿದ್ದಂತೆ, ಅಂದರೆ ಸಾಮಾನ್ಯವಾಗಿ ಅವರ 40 ರ ದಶಕದಲ್ಲಿ, ಹಾರ್ಮೋನ್ ಮಟ್ಟವು ಸ್ವಾಭಾವಿಕವಾಗಿ ಏರಿಳಿತಗೊಳ್ಳುತ್ತದೆ, ಇದು ಋತುಚಕ್ರವು ಸಂಪೂರ್ಣವಾಗಿ ನಿಲ್ಲುವ ಮೊದಲು ಅನಿಯಮಿತ ಋತುಚಕ್ರಕ್ಕೆ ಕಾರಣವಾಗುತ್ತದೆ.

ಇದನ್ನೂ ಓದಿ: ಋತುಚಕ್ರದ ಗ್ಯಾಸ್ಟ್ರಿಕ್​ಗೆ ಈ ಮನೆಮದ್ದುಗಳನ್ನು ಬಳಸಿ ನೋಡಿ

ಋತುಚಕ್ರವನ್ನು ನೈಸರ್ಗಿಕವಾಗಿ ಪ್ರಚೋದಿಸುವುದು ಹೇಗೆ?

ನಿಮ್ಮ ಋತುಚಕ್ರ ತಡವಾಗಿರುವುದರ ಬಗ್ಗೆ ನೀವು ಚಿಂತೆ ಮಾಡುತ್ತಿದ್ದರೇ, ಋತುಚಕ್ರವನ್ನು ಪ್ರಚೋದಿಸಲು ಅಥವಾ ಋತುಚಕ್ರವನ್ನು ನಿಯಂತ್ರಿಸಲು ಈ ವಿಧಾನಗಳನ್ನು ಪ್ರಯತ್ನಿಸಿ.

1. ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಿ

ನೀವು ದಪ್ಪಗಿದ್ದರೂ ಅಥವಾ ತೆಳ್ಳಗಿದ್ದರೂ ಋತುಚಕ್ರ ಸಮಸ್ಯೆ ನಿಮ್ಮನ್ನು ಕಾಡಬಹುದು. ಹಾಗಾಗಿ ಸಮತೋಲಿತ ಆಹಾರ ಮತ್ತು ನಿಯಮಿತ ವ್ಯಾಯಾಮದ ಮೂಲಕ ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳುವುದರಿಂದ ನಿಮ್ಮ ಋತುಚಕ್ರವನ್ನು ನಿಯಂತ್ರಣ ದಲ್ಲಿಡಬಹುದು.

2. ಒತ್ತಡವನ್ನು ನಿರ್ವಹಿಸಿ

ಹಾರ್ಮೋನುಗಳನ್ನು ಸಮತೋಲನಗೊಳಿಸಲು ಸಹಾಯ ಮಾಡಲು ಯೋಗ, ಧ್ಯಾನ, ಆಳವಾದ ಉಸಿರಾಟ ಅಥವಾ ಒತ್ತಡವನ್ನು ಕಡಿಮೆ ಮಾಡುವ ತಂತ್ರಗಳನ್ನು ಅಭ್ಯಾಸ ಮಾಡಿ ಎಂದು ಡಾ. ಶ್ವೇತಾ ಸಲಹೆ ನೀಡುತ್ತಾರೆ.

3. ಆಹಾರ ಬದಲಾವಣೆಗಳು

ಕಬ್ಬಿಣ, ಜೀವಸತ್ವಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿರುವ ಆಹಾರವನ್ನು ನಿಮ್ಮ ದೈನಂದಿನ ಆಹಾರದಲ್ಲಿ ಸೇರಿಸಿಕೊಳ್ಳಿ. ಸೊಪ್ಪುಗಳು, ಪ್ರೋಟೀನ್ ಗಳು ಮತ್ತು ಧಾನ್ಯಗಳಂತಹ ಆರೋಗ್ಯಕರ ಆಹಾರಗಳ ಸೇವನೆ ಮಾಡಿ.

4. ಗಿಡಮೂಲಿಕೆಯ ಚಹಾ

ಶುಂಠಿ ಮತ್ತು ಕ್ಯಾಮೊಮೈಲ್ ನಂತಹ ಕೆಲವು ಗಿಡಮೂಲಿಕೆ ಚಹಾಗಳು ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ಹೆಸರುವಾಸಿಯಾಗಿದ್ದು, ಮುಟ್ಟನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ.

5. ಮಿತವಾಗಿ ವ್ಯಾಯಾಮ ಮಾಡಿ

ನಿಯಮಿತ ದೈಹಿಕ ಚಟುವಟಿಕೆಯನ್ನು ಪ್ರಯತ್ನಿಸಿ, ಮತ್ತು ಅತಿಯಾದ ವ್ಯಾಯಾಮವನ್ನು ತಪ್ಪಿಸಿ ಏಕೆಂದರೆ ಇದು ನಿಮ್ಮ ಋತುಚಕ್ರವನ್ನು ಅಡ್ಡಿಪಡಿಸುತ್ತದೆ, ಆದ್ದರಿಂದ ಸಮತೋಲನವನ್ನು ಸಾಧಿಸುವುದು ಮುಖ್ಯ.

6. ವಿಟಮಿನ್ ಸಿ

ವಿಟಮಿನ್ ಸಿ ಯ ಹೆಚ್ಚಿನ ಪ್ರಮಾಣವು ಈಸ್ಟ್ರೊಜೆನ್ ಉತ್ಪಾದನೆಯನ್ನು ಉತ್ತೇಜಿಸುತ್ತದೆ, ನಿಮ್ಮ ಋತುಚಕ್ರವನ್ನು ನಿಯಂತ್ರಿಸುತ್ತದೆ. ಸಿಟ್ರಸ್ ಹಣ್ಣುಗಳು ಮತ್ತು ಅದರ ಪೂರಕ ಆಹಾರಗಳಿಂದ ನೀವು ವಿಟಮಿನ್ ಸಿ ಪಡೆಯಬಹುದು.

7. ಆರೋಗ್ಯಕರ ಕೊಬ್ಬುಗಳು

ಆವಕಾಡೊಗಳು, ಬೀಜಗಳು ಮತ್ತು ಮೀನುಗಳಲ್ಲಿ ಕಂಡು ಬರುವ ಆರೋಗ್ಯಕರ ಕೊಬ್ಬುಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳಿ, ಏಕೆಂದರೆ ಅವು ಹಾರ್ಮೋನ್ ಉತ್ಪಾದನೆಯನ್ನು ಬೆಂಬಲಿಸುತ್ತವೆ ಎಂದು ತಜ್ಞರು ಹೇಳುತ್ತಾರೆ.

8. ಸಾಕಷ್ಟು ನಿದ್ರೆ ಮಾಡುವುದು

ನಿದ್ರೆಯ ಮಾದರಿಗಳು ಹಾರ್ಮೋನುಗಳ ಸಮತೋಲನದ ಮೇಲೆ ಪರಿಣಾಮ ಬೀರುವುದರಿಂದ ನೀವು ಸಾಕಷ್ಟು ನಿದ್ರೆಯನ್ನು ಪಡೆಯುತ್ತೀರಿ ಎಂದು ಖಚಿತಪಡಿಸಿಕೊಳ್ಳಿ. ಆದ್ದರಿಂದ, ಮಲಗುವ ಮೊದಲು ನಿಮ್ಮ ಫೋನ್ ಅಥವಾ ಟಿವಿ ಪರದೆಗಳಿಂದ ದೂರವಿರಿ.

ಆದರೆ ಈ ನೈಸರ್ಗಿಕ ವಿಧಾನಗಳು ಎಲ್ಲರಿಗೂ ಕೆಲಸ ಮಾಡದಿರಬಹುದು ಮತ್ತು ಅವುಗಳ ಪರಿಣಾಮಕಾರಿತ್ವವು ಬದಲಾಗಬಹುದು ಎಂಬುದನ್ನು ಗಮನದಲ್ಲಿಟ್ಟುಕೊಳ್ಳುವುದು ಮುಖ್ಯ. ಗರ್ಭಧಾರಣೆಯ ಸಾಧ್ಯತೆ ಇದ್ದರೆ, ನಿಮ್ಮ ಋತುಚಕ್ರವನ್ನು ಪ್ರಚೋದಿಸದಿರುವುದು ಬಹಳ ಮುಖ್ಯ, ಏಕೆಂದರೆ ಇದು ಗರ್ಭಧಾರಣೆಗೆ ಹಾನಿ ಮಾಡುತ್ತದೆ. ಎಂಡೊಮೆಟ್ರಿಯೋಸಿಸ್, ಫೈಬ್ರಾಯ್ಡ್ಗಳು ಅಥವಾ ರಕ್ತಸ್ರಾವದ ಅಸ್ವಸ್ಥತೆಗಳಂತಹ ವೈದ್ಯಕೀಯ ಪರಿಸ್ಥಿತಿಗಳನ್ನು ಹೊಂದಿರುವ ಮಹಿಳೆಯರು ಋತುಚಕ್ರವನ್ನು ಪ್ರಚೋದಿಸಲು ಯಾವುದೇ ನೈಸರ್ಗಿಕ ವಿಧಾನಗಳನ್ನು ಪ್ರಯತ್ನಿಸುವ ಮೊದಲು ವೈದ್ಯರನ್ನು ಸಂಪರ್ಕಿಸಬೇಕು.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ