Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿಕ್ಕ ಮಕ್ಕಳಿಗೆ ಬೆಳ್ಳಿ ಆಭರಣಗಳನ್ನು ಹಾಕಲು ಕಾರಣವೇನು?

ಮಕ್ಕಳು ಹುಟ್ಟಿದ ಸ್ವಲ್ಪ ದಿನಗಳಲ್ಲಿ ಅವರಿಗೆ ಕಾಲಿಗೆ, ಕೈಗೆ ಬೆಳ್ಳಿಯ ಬಳೆಗಳನ್ನು ಕತ್ತಿಗೆ ಸರಗಳನ್ನು ಹಾಕುವ ಸಂಪ್ರದಾಯವಿದೆ. ಈ ಬಗ್ಗೆ ನಿಮಗೂ ತಿಳಿದಿರಬಹುದು. ಈ ಆಚರಣೆ ತಲೆಮಾರುಗಳಿಂದ ನಡೆದುಕೊಂಡು ಬಂದಿದೆ. ಆದರೆ ಇದು ಕೇವಲ ಆಚರಣೆಯಲ್ಲ. ಬದಲಾಗಿ ಈ ಪದ್ದತಿಯ ಹಿಂದೆ ವೈಜ್ಞಾನಿಕ ಕಾರಣವಿದೆ. ಬೆಳ್ಳಿಯಲ್ಲಿ ಕೆಲವು ವಿಶಿಷ್ಟ ಔಷಧೀಯ ಗುಣಗಳಿದ್ದು ಇದನ್ನು ದೇಹದ ಮೇಲೆ ಧರಿಸುವುದರಿಂದ ಅನೇಕ ರೀತಿಯ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದಾಗಿದೆ. ಬೆಳ್ಳಿ ಧರಿಸುವುದರಿಂದ ಮಗುವಿಗೆ ಯಾವ ರೀತಿಯ ಪ್ರಯೋಜನಗಳು ಸಿಗುತ್ತದೆ ಎಂಬುದನ್ನು ತಿಳಿದುಕೊಳ್ಳಿ. ಈ ಬಗ್ಗೆ ಮಾಹಿತಿ ಇಲ್ಲಿದೆ.

ಚಿಕ್ಕ ಮಕ್ಕಳಿಗೆ ಬೆಳ್ಳಿ ಆಭರಣಗಳನ್ನು ಹಾಕಲು ಕಾರಣವೇನು?
ಸಾಂದರ್ಭಿಕ ಚಿತ್ರ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on: Apr 08, 2025 | 2:42 PM

ಮಕ್ಕಳು ಹುಟ್ಟಿದಾಗ ನಾಮಕರಣ ಅಥವಾ ತೊಟ್ಟಿಲು ಶಾಸ್ತ್ರ ಮಾಡುವ ಸಂದರ್ಭಗಳಲ್ಲಿ ಕಾಲು ಮತ್ತು ಕೈಗಳಿಗೆ ಬೆಳ್ಳಿ (Silver) ಬಳೆ (Bracelet), ಕಡಗ, ಸೊಂಟದ ಸರಪಳಿ (Waist chain) ಮತ್ತು ಸರಗಳನ್ನು ಹಾಕುವ ರೂಢಿ ಇದೆ. ಈ ಸಂಪ್ರದಾಯ ತಲೆಮಾರುಗಳಿಂದ ನಡೆದುಕೊಂಡು ಬರುತ್ತಿದೆ. ಆದರೆ ಈ ಆಚರಣೆಯ ಹಿಂದೆ ವೈಜ್ಞಾನಿಕ ಕಾರಣವಿದೆ ಎಂಬುದು ನಿಮಗೆ ತಿಳಿದಿದೆಯೇ? ಹೌದು. ಬೆಳ್ಳಿ ಕೆಲವು ವಿಶಿಷ್ಟ ಔಷಧೀಯ ಗುಣಗಳನ್ನು ಹೊಂದಿದ್ದು ದೇಹಕ್ಕೆ ಒಳ್ಳೆಯದು ಎಂಬ ನಂಬಿಕೆ ಇದೆ. ಅದರಲ್ಲಿಯೂ ಚಿಕ್ಕ ಮಕ್ಕಳಿಗೆ ತಮ್ಮ ದೇಹದಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಹೇಳಲು ಸಾಧ್ಯವಾಗದ ಕಾರಣ ಅವುಗಳ ಆರೋಗ್ಯವನ್ನು ಕಾಪಾಡಲು ಈ ರೀತಿಯ ಸಂಪ್ರದಾಯಗಳನ್ನು ಪಾಲನೆ ಮಾಡುತ್ತಾರೆ. ಆದರೆ ಈಗಿನವರಿಗೆ ಇದರ ಪ್ರಾಮುಖ್ಯತೆ ತಿಳಿಯದ ಕಾರಣ ತಮ್ಮ ಗೌರವ ಕಾಪಾಡಿಕೊಳ್ಳಲು ಚಿಕ್ಕ ಮಕ್ಕಳಿಗೆ ಬಂಗಾರ ನೀಡುತ್ತಾರೆ. ಆದರೆ ಹುಟ್ಟಿದ ಮಕ್ಕಳಿಗೆ ಬಂಗಾರ ಹಾಕುವುದಕ್ಕಿಂತ ಬೆಳ್ಳಿ ಆಭರಣ (Silver jewelry) ಗಳನ್ನು ಹಾಕುವುದು ಆರೋಗ್ಯಕ್ಕೆ ಬಹಳ ಒಳ್ಳೆಯದು ಎಂದು ವೈದ್ಯರೂ ಕೂಡ ಹೇಳುತ್ತಾರೆ. ಹಾಗಾದರೆ ಬೆಳ್ಳಿ ಧರಿಸುವುದರಿಂದ ಮಕ್ಕಳಿಗೆ ಯಾವ ರೀತಿಯ ಅನುಕೂಲಗಳು ಸಿಗುತ್ತವೆ ಎಂಬುದನ್ನು ತಿಳಿದುಕೊಳ್ಳಿ.

ಯಾಕೆ ಬೆಳ್ಳಿಯ ಆಭರಣಗಳನ್ನು ಧರಿಸಬೇಕು?

  • ಬೆಳ್ಳಿಗೆ ನೈಸರ್ಗಿಕವಾಗಿ ದೇಹವನ್ನು ತಂಪಾಗಿಡುವ ಗುಣವಿರುವುದರಿಂದ ಇದು ಮಕ್ಕಳಿಗೆ ಒಳ್ಳೆಯದು ಎನ್ನಲಾಗುತ್ತದೆ. ಚಿಕ್ಕ ಮಕ್ಕಳಿಗೆ ಅದರಲ್ಲಿಯೂ ಬೇಸಿಗೆ ಸಮಯದಲ್ಲಿ ಅವರಿಗೆ ಶಾಖ ತಡೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಶಾಖದಿಂದ ಅವರ ದೇಹವು ಅತಿಯಾಗಿ ಬಿಸಿಯಾಗದಂತೆ ತಡೆಯಲು ಬೆಳ್ಳಿ ಸಹಾಯ ಮಾಡುತ್ತದೆ. ಬೆಳ್ಳಿ ಧರಿಸುವುದರಿಂದ ದೇಹದ ಉಷ್ಣತೆ ಸಮತೋಲನದಲ್ಲಿರುತ್ತದೆ. ಇದು ಮಕ್ಕಳು ಶಾಂತವಾಗಿರಲು ಸಹಾಯ ಮಾಡುತ್ತದೆ. ಅದಕ್ಕಾಗಿಯೇ ಹುಟ್ಟಿದ ಮಕ್ಕಳಿಗೆ ಬೆಳ್ಳಿ ಆಭರಣಗಳನ್ನು ಹಾಕಲಾಗುತ್ತದೆ.
  • ಬೆಳ್ಳಿ ಮಕ್ಕಳ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಬೆಳ್ಳಿ ನೈಸರ್ಗಿಕವಾಗಿ ಬ್ಯಾಕ್ಟೀರಿಯಾ ಮತ್ತು ವೈರಸ್ಗಳನ್ನು ನಾಶಪಡಿಸುವ ಗುಣವನ್ನು ಹೊಂದಿದೆ. ಇದು ಮಕ್ಕಳ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಅಲ್ಲದೆ ದೇಹದಿಂದ ವಿಷವನ್ನು ಹೊರಹಾಕುತ್ತದೆ ಮತ್ತು ಆರೋಗ್ಯವನ್ನು ಕಾಪಾಡುತ್ತದೆ.
  • ಸಾಮಾನ್ಯವಾಗಿ ಚಿಕ್ಕ ಮಕ್ಕಳು ಆಟವಾಡುವಾಗ ಸಣ್ಣಪುಟ್ಟ ಗಾಯಗಳನ್ನು ಮಾಡಿಕೊಳ್ಳುತ್ತಾರೆ. ಅಂತಹ ಸಮಯದಲ್ಲಿ ಬೆಳ್ಳಿ ಆಭರಣಗಳು ಆ ಗಾಯಗಳು ಬೇಗನೆ ಗುಣವಾಗಲು ಸಹಾಯ ಮಾಡುತ್ತದೆ. ಏಕೆಂದರೆ ಬೆಳ್ಳಿಯ ವಸ್ತುಗಳು ದೇಹವನ್ನು ರಕ್ಷಿಸುವ ಸಾಮರ್ಥ್ಯವನ್ನು ಹೊಂದಿದೆ. ಜೊತೆಗೆ ಅವು ಚರ್ಮಕ್ಕೆ ಸಂಬಂಧಿಸಿದ ಕೆಲವು ಸಮಸ್ಯೆಗಳನ್ನು ಸಹ ಕಡಿಮೆ ಮಾಡುತ್ತದೆ.
  • ಬೆಳ್ಳಿ ದೇಹದಲ್ಲಿ ಸರಿಯಾದ ರಕ್ತ ಪರಿಚಲನೆ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಉತ್ತಮ ರಕ್ತ ಪರಿಚಲನೆ ಇದ್ದಾಗ ಮಗುವಿನ ದೇಹದ ಬೆಳವಣಿಗೆಯೂ ಸರಿಯಾಗಿ ಆಗುತ್ತದೆ.
  • ಮಕ್ಕಳಿಗೆ ಬೆಳ್ಳಿಯ ಸರ ಅಥವಾ ಸರಪಳಿಗಳನ್ನು ಹಾಕುವುದರಿಂದ ಅವರಿಗೆ ಕೆಟ್ಟ ದೃಷ್ಟಿ ತಾಗುವುದಿಲ್ಲ ಎಂಬ ನಂಬಿಕೆ ಇದೆ. ಜೊತೆಗೆ ದುಷ್ಟ ಶಕ್ತಿಗಳಿಂದ ಮಕ್ಕಳನ್ನು ರಕ್ಷಿಸಲು ಇದು ಸಹಾಯ ಮಾಡುತ್ತದೆ ಎಂದು ಅನೇಕರು ನಂಬುತ್ತಾರೆ.
  • ಬೆಳ್ಳಿಗೆ ಮಾನಸಿಕ ಒತ್ತಡವನ್ನು ಕಡಿಮೆ ಮಾಡುವ ಶಕ್ತಿ ಇದೆ. ಇದು ಮಕ್ಕಳಿಗೆ ಶಾಂತತೆಯನ್ನು ಮತ್ತು ಸಂತೋಷವನ್ನು ನೀಡುತ್ತದೆ. ಜೊತೆಗೆ ಇದು ನಿದ್ರೆಯ ಮೇಲೂ ಪರಿಣಾಮ ಬೀರುತ್ತದೆ. ಬೆಳ್ಳಿಯನ್ನು ಧರಿಸುವುದರಿಂದ ಮಕ್ಕಳು ಆರಾಮವಾಗಿ ಮಲಗುತ್ತಾರೆ.

ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.

ಇದನ್ನೂ ಓದಿ
Image
ಪ್ರೋಟೀನ್ ಹೆಚ್ಚಾದರೆ ಮೂತ್ರಪಿಂಡಕ್ಕೆ ಹಾನಿ
Image
ಕಣ್ಣಿಗೆ ಧೂಳು, ಕಸ ಬಿದ್ದರೆ ಹೀಗೆ ಮಾಡಿ
Image
ಬೇಸಿಗೆಯಲ್ಲಿ ಸ್ನಾನಕ್ಕೆ ಬಿಸಿ ನೀರನ್ನೇ ಆಯ್ಕೆ ಮಾಡಿಕೊಳ್ತೀರಾ?
Image
ನೀವು ಆರೋಗ್ಯವಾಗಿದ್ದೀರಿ ಎಂದು ಬೆಳಗಿನಜಾವದ ಈ ಸೂಚನೆಗಳಿಂದ ತಿಳಿಯಬಹುದು

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ