ರಕ್ತಹೀನತೆ ಸಮಸ್ಯೆ ಇದ್ಯಾ? ಈ ಸುಲಭ ಮನೆಮದ್ದನ್ನು ಟ್ರೈ ಮಾಡಿ ನೋಡಿ
ಸೋಂಪು ಮತ್ತು ಬೆಲ್ಲ ಈ ಎರಡು ವಸ್ತುಗಳನ್ನು ಒಟ್ಟಿಗೆ ಸೇವಿಸುವುದರಿಂದ ಗ್ಯಾಸ್, ಅಜೀರ್ಣತೆ ಮುಂತಾದ ಸಮಸ್ಯೆಗಳನ್ನು ತಡೆಯಬಹುದು. ಜೊತೆಗೆ ಇವೆರಡರ ಮಿಶ್ರಣ ಮಹಿಳೆಯರಿಗೆ ತುಂಬಾ ಪ್ರಯೋಜನಕಾರಿ. ಇದು ಋತುಚಕ್ರಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸುತ್ತದೆ. ಇದೆಲ್ಲದರ ಜೊತೆಗೆ ಶೀತ ಮತ್ತು ಕೆಮ್ಮಿನಿಂದ ಬಳಲುತ್ತಿರುವವರಿಗೂ ಕೂಡ ತುಂಬಾ ಒಳ್ಳೆಯದು.
Updated on:Apr 08, 2025 | 6:51 PM

ಸೋಂಪು, ಬಡೆಸಪ್ಪು ಹೀಗೆ ನಾನಾ ರೀತಿಯ ಹೆಸರುಗಳಿಂದ ಕರೆಯುವ ಮಸಾಲೆಯಲ್ಲಿ ಹಲವಾರು ರೀತಿಯ ಆರೋಗ್ಯ ಪ್ರಯೋಜನಗಳಿವೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ಸೋಂಪಿನ ಜೊತೆ ಬೆಲ್ಲ ಸೇವನೆ ಮಾಡುವುದರಿಂದ ಮತ್ತಷ್ಟು ಲಾಭಗಳಿವೆ.

ಬೆಲ್ಲ ಮತ್ತು ಸೋಂಪು ಅದರದ್ದೇ ಆದಂತಹ ಆರೋಗ್ಯಕರ ಗುಣಗಳನ್ನು ಹೊಂದಿದೆ. ಆದರೆ ಇವೆರಡನ್ನೂ ಒಟ್ಟಿಗೆ ಸೇರಿಸಿ ಸೇವನೆ ಮಾಡಿದಾಗ ಮತ್ತಷ್ಟು ಒಳ್ಳೆಯ ಪಯೋಜನಗಳನ್ನು ಪಡೆಯಬಹುದು.

ಬೆಲ್ಲ ಮತ್ತು ಸೋಂಪು ದೈಹಿಕ ದೌರ್ಬಲ್ಯವನ್ನು ಕಡಿಮೆ ಮಾಡಿ ದೇಹದ ಶಕ್ತಿಯನ್ನು ಹೆಚ್ಚಿಸುತ್ತದೆ. ಜೊತೆಗೆ ದೇಹದ ದಣಿವು, ಆಲಸ್ಯ, ದುಃಖ ಮುಂತಾದ ರೋಗಲಕ್ಷಣಗಳನ್ನು ಕೂಡ ಕ್ಷಣಾರ್ಧದಲ್ಲಿ ನಿವಾರಿಸುತ್ತದೆ. ಅಲ್ಲದೆ ರಕ್ತಹೀನತೆ ಇರುವವರಿಗೂ ಕೂಡ ಇದು ಪ್ರಯೋಜನಕಾರಿಯಾಗಿದ್ದು ಮನೆಯಲ್ಲಿಯೇ ಮಾಡಿ ನೋಡಬಹುದಾಗಿದೆ.

ಸೋಂಪು ಮತ್ತು ಬೆಲ್ಲ ಈ ಎರಡು ವಸ್ತುಗಳನ್ನು ಒಟ್ಟಿಗೆ ಸೇವಿಸುವುದರಿಂದ ಗ್ಯಾಸ್, ಅಜೀರ್ಣತೆ ಮುಂತಾದ ಸಮಸ್ಯೆಗಳನ್ನು ತಡೆಯಬಹುದು. ಜೊತೆಗೆ ಇವೆರಡರ ಮಿಶ್ರಣ ಮಹಿಳೆಯರಿಗೆ ತುಂಬಾ ಪ್ರಯೋಜನಕಾರಿ. ಇದು ಋತುಚಕ್ರಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸುತ್ತದೆ.

ಇದೆಲ್ಲದರ ಜೊತೆಗೆ ಶೀತ ಮತ್ತು ಕೆಮ್ಮಿನಿಂದ ಬಳಲುತ್ತಿರುವವರಿಗೂ ಕೂಡ ತುಂಬಾ ಒಳ್ಳೆಯದು. ಇದು ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳನ್ನು ಹೊಂದಿದೆ. ಪ್ರತಿನಿತ್ಯ ಇದನ್ನು ಸ್ವಲ್ಪ ಸ್ವಲ್ಪ ಸೇವನೆ ಮಾಡುವುದರಿಂದ ಅನೇಕ ರೀತಿಯ ಆರೋಗ್ಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು.
Published On - 6:50 pm, Tue, 8 April 25



















