ಆರೋಗ್ಯವಾಗಿರಲು ದಿನಕ್ಕೆ ಎಷ್ಟು ಬಾರಿ ಮಲವಿಸರ್ಜನೆ ಮಾಡಬೇಕು? ಅಧ್ಯಯನ ಹೇಳಿದ್ದೇನು?
ಮನುಷ್ಯ ದೇಹದ ಕಲ್ಮಶ ಹೊರಹಾಕಲು ಮಲವಿಸರ್ಜನೆ ಮಾಡುತ್ತಾನೆ ಇದು ನೈಸರ್ಗಿಕ ಪ್ರಕ್ರಿಯೆ. ಆದರೆ ಆತ ಎಷ್ಟು ಬಾರಿ ಮಲವಿಸರ್ಜನೆ ಮಾಡುತ್ತಾನೆ ಎಂಬ ಆಧಾರದ ಮೇಲೆ ಅವನ ದೀರ್ಘಕಾಲೀನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಸೆಲ್ ರಿಪೋರ್ಟ್ಸ್ ಮೆಡಿಸಿನ್ ನಲ್ಲಿ ಪ್ರಕಟವಾದ ಹೊಸ ಅಧ್ಯಯನ ತಿಳಿಸಿದೆ. ದಿನಕ್ಕೆ ಒಂದು ಅಥವಾ ಎರಡು ಬಾರಿ ಮಲವಿಸರ್ಜನೆಯಾಗುವುದು ಸಾಮಾನ್ಯ ಎಂದು ತಜ್ಞರು ಹೇಳಿದ್ದಾರೆ. ಆದರೆ ಈ ಹಿಂದೆ, ಅಧ್ಯಯನಗಳು ಮಲಬದ್ಧತೆ ಮತ್ತು ಅತಿಸಾರವು ಸಂಬಂಧ ಹೊಂದಿವೆ ಮತ್ತು ಅವು ನ್ಯೂರೋಡಿಜೆನರೇಟಿವ್ ಅಪಾಯದೊಂದಿಗೆ ಸಂಬಂಧ ಹೊಂದಿವೆ ಎಂದು ಕಂಡುಹಿಡಿದಿತ್ತು.
ಪ್ರತಿಯೊಬ್ಬ ಮನುಷ್ಯನು ದೇಹದ ಕಲ್ಮಶ ಹೊರಹಾಕಲು ಮಲವಿಸರ್ಜನೆ ಮಾಡುತ್ತಾನೆ ಇದು ನೈಸರ್ಗಿಕ ಪ್ರಕ್ರಿಯೆ. ಆದರೆ ಆತ ಎಷ್ಟು ಬಾರಿ ಮಲವಿಸರ್ಜನೆ ಮಾಡುತ್ತಾನೆ ಎಂಬ ಆಧಾರದ ಮೇಲೆ ಅವನ ದೀರ್ಘಕಾಲೀನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಸೆಲ್ ರಿಪೋರ್ಟ್ಸ್ ಮೆಡಿಸಿನ್ ನಲ್ಲಿ ಪ್ರಕಟವಾದ ಹೊಸ ಅಧ್ಯಯನ ತಿಳಿಸಿದೆ. ದಿನಕ್ಕೆ ಒಂದು ಅಥವಾ ಎರಡು ಬಾರಿ ಮಲವಿಸರ್ಜನೆಯಾಗುವುದು ಸಾಮಾನ್ಯ ಎಂದು ತಜ್ಞರು ಹೇಳಿದ್ದಾರೆ. ಆದರೆ ಈ ಹಿಂದೆ, ಅಧ್ಯಯನಗಳು ಮಲಬದ್ಧತೆ ಮತ್ತು ಅತಿಸಾರವು ಸಂಬಂಧ ಹೊಂದಿವೆ ಮತ್ತು ಅವು ನ್ಯೂರೋಡಿಜೆನರೇಟಿವ್ ಅಪಾಯದೊಂದಿಗೆ ಸಂಬಂಧ ಹೊಂದಿವೆ ಎಂದು ಕಂಡುಹಿಡಿದಿತ್ತು.
ಆರೋಗ್ಯವಾಗಿರಲು ನೀವು ಎಷ್ಟು ಬಾರಿ ಮಲವಿಸರ್ಜನೆ ಮಾಡಬೇಕು?
ಅನಿಯಮಿತವಾಗಿ ಮಲವಿಸರ್ಜನೆಯಾಗುವುದನ್ನು ವೈದ್ಯರು ಆಗಾಗ ತಳ್ಳಿಹಾಕುತ್ತಾರೆ ಎಂದು ಇನ್ಸ್ಟಿಟ್ಯೂಟ್ ಫಾರ್ ಸಿಸ್ಟಮ್ಸ್ ಬಯಾಲಜಿಯ ಸಂಶೋಧಕರು ತಿಳಿಸಿದ್ದು ಇದರ ಬಗ್ಗೆ ಸರಿಯಾದ ತೀರ್ಮಾನಕ್ಕೆ ಬರಲು, ತಜ್ಞರು 1,400 ಕ್ಕೂ ಹೆಚ್ಚು ಆರೋಗ್ಯವಂತ ವಯಸ್ಕರ ಮೇಲೆ ಅಧ್ಯಯನ ನಡೆಸಲಾಗಿದ್ದು ಜೀವನಶೈಲಿ, ಮತ್ತಿತರ ವಿಷಯಗಳ ಆಧಾರದ ಮೇಲೆ ಮಾಹಿತಿ ಸಂಗ್ರಹಿಸಿದ್ದರು. ಈ ವರದಿ ಮಾಡಿದ ಬಳಿಕ ಕರುಳಿನ ಆವರ್ತನಗಳನ್ನು ಅಂದರೆ ಮಲವಿಸರ್ಜನೆಗೆ ಹೋಗುವುದನ್ನು ಅವಲಂಬಿಸಿ, ಭಾಗವಹಿಸಿದವರನ್ನು ನಾಲ್ಕು ಗುಂಪುಗಳಾಗಿ ವಿಂಗಡಿಸಿದೆ.
ಮಲಬದ್ಧತೆ – ವಾರದಲ್ಲಿ ಒಂದು ಅಥವಾ ಎರಡು ಬಾರಿ
ಕಡಿಮೆ ಸಾಮಾನ್ಯ – ವಾರಕ್ಕೆ ಮೂರರಿಂದ ಆರು ಬಾರಿ
ಹೆಚ್ಚಿನ ಸಾಮಾನ್ಯ – ದಿನಕ್ಕೆ ಒಂದರಿಂದ ಮೂರು ಅತಿಸಾರ
ಇದನ್ನೂ ಓದಿ: ಬೊಗಸೆ ಹಿಡಿದು ನೀರು ಕುಡಿದರೆ ಆರೋಗ್ಯ ವೃದ್ಧಿ
ಭಾಗವಹಿಸಿದವರು ತಮ್ಮ ಆಹಾರ, ಆರೋಗ್ಯ ಮತ್ತು ಜೀವನಶೈಲಿಯ ಬಗ್ಗೆ ಪ್ರಶ್ನಾವಳಿಯನ್ನು ಭರ್ತಿ ಮಾಡುವುದರ ಜೊತೆಗೆ ಮಲ ಮತ್ತು ರಕ್ತದ ಪ್ಲಾಸ್ಮಾ ಸ್ಮೇಪಲ್ಗಳನ್ನು ಸಹ ಹಂಚಿಕೊಂಡರು. ಮಲವು ಕರುಳಿನಲ್ಲಿ ದೀರ್ಘಕಾಲ ಉಳಿದಾಗ, ಸೂಕ್ಷ್ಮಜೀವಿಗಳು ಫೈಬರ್ ಅನ್ನು ಹೊರಹಾಕುತ್ತವೆ, ನಂತರ ಅದು ಸಣ್ಣ ಸರಪಳಿ ಕೊಬ್ಬುಗಳಾಗಿ ಹುದುಗುತ್ತದೆ. ತಾತ್ತ್ವಿಕವಾಗಿ, ಪ್ರೋಟೀನ್ಗಳನ್ನು ಒಳಗೆ ಹುದುಗಿಸಬೇಕಾಗುತ್ತದೆ, ಮತ್ತು ಇದು ಪಿ-ಕ್ರೆಸೋಲ್ ಸಲ್ಫೇಟ್ ಮತ್ತು ಇಂಡಾಕ್ಸಿಲ್ ಸಲ್ಫೇಟ್ ರಚನೆಗೆ ಕಾರಣವಾಗುತ್ತದೆ. ಹಾಗಾಗಿ ಮಲಬದ್ಧತೆ ಹೊಂದಿರುವವರಲ್ಲಿ ರಕ್ತದಲ್ಲಿ ವಿಷದ ಮಟ್ಟ ಹೆಚ್ಚಾಗುತ್ತದೆ ಎಂದು ತಜ್ಞರು ಕಂಡುಕೊಂಡಿದ್ದಾರೆ. ಇದು ಮೂತ್ರಪಿಂಡಗಳ ಮೇಲೆ ಹೊರೆಯನ್ನುಂಟು ಮಾಡುವುದಲ್ಲದೆ ಅವುಗಳ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರುತ್ತದೆ. ಅತಿಸಾರದ ಸಂದರ್ಭದಲ್ಲಿ, ದೇಹವು ಹೆಚ್ಚಿನ ಪಿತ್ತರಸ ಆಮ್ಲವನ್ನು ಹೊರಹಾಕುವುದರಿಂದ ಯಕೃತ್ತಿಗೆ ಹಾನಿಯಾಗುತ್ತದೆ ಮತ್ತು ಉರಿಯೂತ ಉಂಟಾಗುತ್ತದೆ ಎಂದು ಕಂಡುಕೊಂಡಿದ್ದು ಈ ಬಗ್ಗೆ ಹೆಚ್ಚಿನ ಸಂಶೋಧನೆಯ ಅಗತ್ಯವಿದೆ ಎಂದು ತಜ್ಞರು ಹೇಳಿದ್ದಾರೆ.
ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ