Pregnancy Care: ಗರ್ಭಿಣಿಯರು ಕಾಫಿ ಕುಡಿಯಬಹುದೇ? ವೈದ್ಯರು ಹೇಳುವುದೇನು?
ಗರ್ಭಿಣಿಯರು ಹೆಚ್ಚು ಕಾಫಿ ಕುಡಿದರೆ ಗರ್ಭಕೋಶ ಮತ್ತು ಪ್ಲಾಸೆಂಟಾದಲ್ಲಿನ ರಕ್ತನಾಳಗಳು ಸಂಕುಚಿತಗೊಳ್ಳುತ್ತವೆ ಎಂದು ಹೇಳಲಾಗುತ್ತದೆ. ಈ ಕುರಿತು ತಜ್ಞರು ನೀಡಿರುವ ಸಲಹೆ ಇಲ್ಲಿದೆ.
ಗರ್ಭಾವಸ್ಥೆಯಲ್ಲಿ ಸಾಕಷ್ಟು ಪೌಷ್ಟಿಕಾಂಶದ ಆಹಾರವನ್ನು ಸೇವಿಸುವುದು ಮುಖ್ಯ. ಎಲ್ಲಕ್ಕಿಂತ ಹೆಚ್ಚಾಗಿ, ಎಲ್ಲಾ ಆಹಾರಗಳು ಆರೋಗ್ಯಕರವಾಗಿದ್ದರೂ, ಕೆಲವು ಆಹಾರಗಳು ಬೆಳೆಯುತ್ತಿರುವ ಮಗುವಿನ ಆರೋಗ್ಯದ ಮೇಲೆ ಹೆಚ್ಚು ಪರಿಣಾಮ ಬೀರುತ್ತವೆ. ಅದರಂತೆ, ಅನೇಕ ಗರ್ಭಿಣಿಯರು ಗರ್ಭಾವಸ್ಥೆಯಲ್ಲಿ ಕಾಫಿ ಕುಡಿಯುವ ಬಗ್ಗೆ ಸಂಶಯ ವ್ಯಕ್ತಪಡಿಸುತ್ತಾರೆ. ಇದರ ಬಗ್ಗೆ ವೈದ್ಯರು ಏನು ಹೇಳುತ್ತಾರೆಂದು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
ಗರ್ಭಿಣಿಯರು ಕಾಫಿ ಕುಡಿಯಬಹುದೇ?
ಗರ್ಭಿಣಿಯರು ಹೆಚ್ಚು ಕಾಫಿ ಕುಡಿದರೆ ಗರ್ಭಕೋಶ ಮತ್ತು ಪ್ಲಾಸೆಂಟಾದಲ್ಲಿನ ರಕ್ತನಾಳಗಳು ಸಂಕುಚಿತಗೊಳ್ಳುತ್ತವೆ ಎಂದು ಹಿಂದೆ ಹೇಳಲಾಗಿತ್ತು. ಅಲ್ಲದೆ, ಇದು ಭ್ರೂಣಕ್ಕೆ ರಕ್ತ ಪೂರೈಕೆಯನ್ನು ಕಡಿಮೆ ಮಾಡುವುದಲ್ಲದೆ, ಬೆಳವಣಿಗೆಯನ್ನು ಕುಂಠಿತಗೊಳಿಸುತ್ತದೆ ಮತ್ತು ಗರ್ಭಪಾತಕ್ಕೆ ಕಾರಣವಾಗುತ್ತದೆ ಎಂದು ಹೇಳಲಾಗಿತ್ತು. ಆದರೆ ಇತ್ತೀಚಿಗಷ್ಟೇ babycenter.com ನಲ್ಲಿನ ಸಂಬಂಧಿತ ಲೇಖನದ ಪ್ರಕಾರ, ಗರ್ಭಾವಸ್ಥೆಯಲ್ಲಿ ಮಧ್ಯಮ ಪ್ರಮಾಣದ ಕಾಫಿಯನ್ನು ಕುಡಿಯುವುದು ರಕ್ತನಾಳಗಳ ಸಂಕೋಚನ, ಗರ್ಭಪಾತ ಮತ್ತು ಅವಧಿಪೂರ್ವ ಜನನದೊಂದಿಗೆ ಯಾವುದೇ ಸಂಬಂಧವನ್ನು ಹೊಂದಿಲ್ಲ. ಆದ್ದರಿಂದ, ನಿಯಮಿತ ಕಾಫಿ ಕುಡಿಯಬಹುದು ಎಂದು ಸಹ ಹೇಳಲಾಗಿದೆ.
ಗರ್ಭಿಣಿಯರು ದಿನಕ್ಕೆ ಎಷ್ಟು ಕಾಫಿ ಕುಡಿಯಬಹುದು?
ಗರ್ಭಿಣಿಯರು ಕಾಫಿ ಕುಡಿಯಬಹುದು ಎಂದು ಹೇಳಲಾಗಿದ್ದರೂ, ದಿನಕ್ಕೆ 200 ಮಿಗ್ರಾಂಗಿಂತ ಹೆಚ್ಚು ಸೇವಿಸಬಾರದು ಎಂದು ಹೇಳಲಾಗಿದೆ. ಆದ್ದರಿಂದ, 200 ಮಿಗ್ರಾಂಗಿಂತ ಹೆಚ್ಚು ಕಾಫಿಯನ್ನು ತೆಗೆದುಕೊಳ್ಳಬೇಡಿ. ಆದಾಗ್ಯೂ, ಹಾಲುಣಿಸುವ ತಾಯಂದಿರು ಕೆಲವು ತಿಂಗಳುಗಳವರೆಗೆ ಕಾಫಿಯನ್ನು ಬಿಟ್ಟು ಬಿಡಿ. ಏಕೆಂದರೆ ನೀವು ಸೇವಿಸುವ ಕಾಫಿಯು ಎದೆ ಹಾಲಿನ ಮೂಲಕ ಮಗುವಿಗೆ ಹೋಗಬಹುದು.
ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ