AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Health Tips: ಬೊಗಸೆ ಹಿಡಿದು ನೀರು ಕುಡಿದರೆ ಆರೋಗ್ಯ ವೃದ್ಧಿ

 ನಮ್ಮ ಪೂರ್ವಜರು ಬೊಗಸೆಯಲ್ಲಿ ನೀರು ಕುಡಿಯುವುದನ್ನು ನೀವು ನೋಡಿರಬಹುದು. ಈ ಅಭ್ಯಾಸವನ್ನು ಈಗಲೂ ಕೆಲವರು ಅನುಸರಿಸುತ್ತಾರೆ. ಬೊಗಸೆಯಲ್ಲಿ ನೀರು ಕುಡಿಯುವುದು ಎಂದರೆ ನಿಮ್ಮ ಎರಡು ಕೈಗಳನ್ನು ಜೋಡಿಸಿ ಅದರಲ್ಲಿ ನೀರು ಕುಡಿಯುವ ಒಂದು ಕ್ರಮ. ಈ ರೀತಿ ನೀರು ಕುಡಿಯುವುದು ಕೇವಲ ರೂಢಿಯಲ್ಲ. ಇದರ ಹಿಂದೆ ಅನೇಕ ರೀತಿಯ ಆರೋಗ್ಯ ಪ್ರಯೋಜನಗಳಿವೆ ಎಂದರೆ ನೀವು ನಂಬುತ್ತೀರಾ? ಹೌದು, ನಿಜ. ಪ್ರತಿದಿನ ಬೆಳಿಗ್ಗೆ ಬೊಗಸೆಯಲ್ಲಿ ನೀರು ಕುಡಿಯುವುದರಿಂದ ನಿಮ್ಮ ಆರೋಗ್ಯ 100 ಪಟ್ಟು ಹೆಚ್ಚಾಗುವುದರಲ್ಲಿ ಸಂದೇಹವಿಲ್ಲ. ಆದರೆ ಈ ರೀತಿ ನೀರು ಕುಡಿಯಬೇಕು ಎನ್ನಲು ಕಾರಣವೇನು? ಯಾವ ನೀರನ್ನು ಬೊಗಸೆಯಲ್ಲಿ ಕುಡಿಯಬೇಕು? ಇಲ್ಲಿದೆ ಮಾಹಿತಿ.

Health Tips: ಬೊಗಸೆ ಹಿಡಿದು ನೀರು ಕುಡಿದರೆ ಆರೋಗ್ಯ ವೃದ್ಧಿ
ಸಾಂದರ್ಭಿಕ ಚಿತ್ರ
ಪ್ರೀತಿ ಭಟ್​, ಗುಣವಂತೆ
| Edited By: |

Updated on: Jul 18, 2024 | 12:31 PM

Share

ಹಿಂದಿನ ಕಾಲದಲ್ಲಿ ನಮ್ಮ ಪೂರ್ವಜರು ಬೊಗಸೆಯಲ್ಲಿ ನೀರು ಕುಡಿಯುವುದನ್ನು ನೀವು ನೋಡಿರಬಹುದು. ಈ ಅಭ್ಯಾಸವನ್ನು ಈಗಲೂ ಕೆಲವರು ಅನುಸರಿಸುತ್ತಾರೆ. ಬೊಗಸೆಯಲ್ಲಿ ನೀರು ಕುಡಿಯುವುದು ಎಂದರೆ ನಿಮ್ಮ ಎರಡು ಕೈಗಳನ್ನು ಜೋಡಿಸಿ ಅದರಲ್ಲಿ ನೀರು ಕುಡಿಯುವ ಒಂದು ಕ್ರಮ. ಈ ರೀತಿ ನೀರು ಕುಡಿಯುವುದು ಕೇವಲ ರೂಢಿಯಲ್ಲ. ಇದರ ಹಿಂದೆ ಅನೇಕ ರೀತಿಯ ಆರೋಗ್ಯ ಪ್ರಯೋಜನಗಳಿವೆ ಎಂದರೆ ನೀವು ನಂಬುತ್ತೀರಾ? ಹೌದು, ನಿಜ. ಪ್ರತಿದಿನ ಬೆಳಿಗ್ಗೆ ಬೊಗಸೆಯಲ್ಲಿ ನೀರು ಕುಡಿಯುವುದರಿಂದ ನಿಮ್ಮ ಆರೋಗ್ಯ 100 ಪಟ್ಟು ಹೆಚ್ಚಾಗುವುದರಲ್ಲಿ ಸಂದೇಹವಿಲ್ಲ. ಆದರೆ ಈ ರೀತಿ ನೀರು ಕುಡಿಯಬೇಕು ಎನ್ನಲು ಕಾರಣವೇನು? ಯಾವ ನೀರನ್ನು ಬೊಗಸೆಯಲ್ಲಿ ಕುಡಿಯಬೇಕು? ಇಲ್ಲಿದೆ ಮಾಹಿತಿ.

rjsowjanya ತಮ್ಮ ಇನ್ಸ್ಟಾ ಖಾತೆಯಲ್ಲಿ ಈ ವಿಷಯವಾಗಿ ಒಂದು ವಿಡಿಯೋವನ್ನು ಹಂಚಿಕೊಂಡಿದ್ದು ಅವರು ಹೇಳುವ ಪ್ರಕಾರ, ಬೆಳಿಗ್ಗೆ ಎದ್ದ ತಕ್ಷಣ ನೀರು ಕುಡಿಯಬೇಕು ಇದು ಒಳ್ಳೆಯದು ಎಂಬುದು ನಮಗೆಲ್ಲರಿಗೂ ಗೊತ್ತು. ಆದರೆ ಲೋಟ ಅಥವಾ ಬಾಟಲ್ ಗಳಲ್ಲಿರುವ ನೀರನ್ನು ಕುಡಿಯುವುದಕ್ಕಿಂತ, ಎಂಟು ಬೊಗಸೆ ಅಂದರೆ ನಿಮ್ಮ ಎರಡು ಕೈಗಳನ್ನು ಸೇರಿಸಿ ಎಂಟು ಬಾರಿ ನೀರನ್ನು ಕುಡಿಯುವುದರಿಂದ ಆರೋಗ್ಯ ವೃದ್ಧಿಯಾಗುತ್ತದೆ. ಅದು ಯಾವ ರೀತಿ ಎಂದರೆ, ರಾತ್ರಿ ತಾಮ್ರದ ಪಾತ್ರೆಯಲ್ಲಿ ಇಟ್ಟ ನೀರನ್ನು ಬೆಳಿಗ್ಗೆ ಕುಡಿಯಬೇಕು ಇದರಿಂದ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳಿಂದ ಪರಿಹಾರ ಕಂಡುಕೊಳ್ಳಬಹುದು ಎಂದಿದ್ದಾರೆ.

ಇದನ್ನೂ ಓದಿ: ಬಾಣಂತಿಯರಿಗೆ ಸಬ್ಬಸಿಗೆ ಸೊಪ್ಪು ದೇವರು ಕೊಟ್ಟ ವರದಾನ!

ಆರೋಗ್ಯ ಪ್ರಯೋಜನಗಳೇನು?

ತಲೆನೋವು, ಸ್ಥೂಲಕಾಯ, ಅಜೀರ್ಣ, ಕಣ್ಣು ನೋವು, ಸೊಂಟ ನೋವು ಹೀಗೆ ಸಾಕಷ್ಟು ಜೀವನಶೈಲಿಗೆ ಸಂಬಂಧಪಟ್ಟಂತಹ ಆರೋಗ್ಯ ಸಮಸ್ಯೆಗಳನ್ನು ನಿವಾರಣೆ ಮಾಡುತ್ತದೆ ಜೊತೆಗೆ ಆರೋಗ್ಯವನ್ನು ವೃದ್ಧಿಸುತ್ತದೆ. ಪ್ರತಿದಿನ ಈ ಕ್ರಮವನ್ನು ಅಳವಡಿಸಿಕೊಂಡರೆ ಹಲವಾರು ರೀತಿಯ ಸಮಸ್ಯೆಗಳು ತಾನಾಗಿಯೇ ಕಡಿಮೆಯಾಗುತ್ತದೆ. ಈಗಿನ ಒತ್ತಡದ ಜೀವನಶೈಲಿಯಿಂದ ಬೇಸತ್ತಿರುವ ನಮಗೆ ನಮ್ಮ ಆರೋಗ್ಯ ಕಾಪಾಡಿಕೊಳ್ಳಲು ಸಾವಿರಾರು ಮಾರ್ಗಗಳನ್ನು ಹುಡುಕುವ ಬದಲು ಆರೋಗ್ಯಕರ ಒಂದು ಮಾರ್ಗ ದಿನನಿತ್ಯ ಎದುರಿಸುವ ಹಲವಾರು ಸಮಸ್ಯೆಗಳಿಂದ ಮುಕ್ತಿ ನೀಡುತ್ತದೆ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ