ಎಲ್ಲರೂ ಫೈನಲ್‌ಗೆ… 10 ಚಿನ್ನದ ಪದಕಗಳ ಮೇಲೆ ಭಾರತೀಯರ ಕಣ್ಣು!
Commonwealth Games 2026: ಗ್ಲ್ಯಾಸ್ಗೋ ಕಾಮನ್‌ವೆಲ್ತ್ ಗೇಮ್ಸ್ 2026ರ ಬಾಕ್ಸಿಂಗ್‌ನಲ್ಲಿ ಭಾರತಕ್ಕೆ ಕನಿಷ್ಠ 10 ಬೆಳ್ಳಿ ಪದಕಗಳು ಈಗಾಗಲೇ ಖಚಿತವಾಗಿವೆ. ಏಕೆಂದರೆ ರಿಂಗ್‌ನಲ್ಲಿ ಕಣಕ್ಕಿಳಿದಿದ್ದ ಹತ್ತೂ ಮಂದಿ ಅಪ್ರತಿಮ ಪ್ರದರ್ಶನ ನೀಡಿ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ. ಈ ಅದ್ಭುತ ಸಾಧನೆಯೊಂದಿಗೆ ಬೆಳ್ಳಿ ಪದಕಗಳನ್ನು ಭದ್ರಪಡಿಸಿಕೊಂಡಿರುವ ಭಾರತೀಯ ಬಾಕ್ಸರ್‌ಗಳು, ಈಗ ಫೈನಲ್‌ನಲ್ಲಿ ಜಯಭೇರಿ ಬಾರಿಸಿ ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಳ್ಳುವ ವಿಶ್ವಾಸದಲ್ಲಿದ್ದಾರೆ.

ಗ್ಲ್ಯಾಸ್ಗೋದಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಗೇಮ್ಸ್ 2026 (CWG 2026) ರ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಭಾರತೀಯ ಕ್ರೀಡಾಪಟುಗಳು ಐತಿಹಾಸಿಕ ಸಾಧನೆ ಮಾಡಿದ್ದಾರೆ. ಸೆಮಿಫೈನಲ್ ತಲುಪಿದ್ದ ಎಲ್ಲಾ 10 ಭಾರತೀಯ ಬಾಕ್ಸರ್‌ಗಳು ಭರ್ಜರಿ ಜಯಗಳಿಸಿ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ. ಈ ಅದ್ಭುತ ಪ್ರದರ್ಶನದಿಂದಾಗಿ ಎಲ್ಲರಿಗೂ ಕನಿಷ್ಠ ಬೆಳ್ಳಿ ಪದಕ ಖಚಿತವಾಗಿದ್ದು, ಭಾರತಕ್ಕೆ ಬಾಕ್ಸಿಂಗ್ ಒಂದರಲ್ಲೇ 10 ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಳ್ಳುವ ಸುವರ್ಣ ಅವಕಾಶ ಒದಗಿಬಂದಿದೆ.
ಆಗಸ್ಟ್ 1 ರಂದು (ಶನಿವಾರ) ನಡೆಯಲಿರುವ ಫೈನಲ್ ಪಂದ್ಯಗಳ ಸಂಪೂರ್ಣ ವೇಳಾಪಟ್ಟಿ ಮತ್ತು ಮುಖಾಮುಖಿ ವಿವರ ಇಲ್ಲಿದೆ:
- ಪ್ರೀತಿ ಪವಾರ್ (ಮಹಿಳೆಯರ 54kg) vs ಸ್ಕಾರ್ಲೆಟ್ ಡೆಲ್ಗಾಡೊ (ಕೆನಡಾ) – ಮಧ್ಯಾಹ್ನ 3:30
- ಜಾಸ್ಮಿನ್ ಲ್ಯಾಂಬೋರಿಯಾ (ಮಹಿಳೆಯರ 57kg) vs ಮೈಕೆಲಾ ವಾಲ್ಷ್ (ನಾರ್ತ್ ಐರ್ಲೆಂಡ್) – ಮಧ್ಯಾಹ್ನ 3:45
- ಜಾದುಮಣಿ ಸಿಂಗ್ (ಪುರುಷರ 55kg) vs ಜೈ ಡಿಕ್ಸನ್ (ಆಸ್ಟ್ರೇಲಿಯಾ) – ಸಂಜೆ 4:15
- ಸಾಕ್ಷಿ ಚೌಧರಿ (ಮಹಿಳೆಯರ 51kg) vs ರೂಬಿ ವೈಟ್ (ಇಂಗ್ಲೆಂಡ್) – ರಾತ್ರಿ 9:00
- ಪ್ರಿಯಾ ಘಂಘಾಸ್ (ಮಹಿಳೆಯರ 60kg) vs ಮೇರಿ-ಬಾಥೌಲ್ ಅಲ್-ಅಹಮದಿಯಾ (ಕೆನಡಾ) – ರಾತ್ರಿ 9:15
- ಅರುಂಧತಿ ಚೌಧರಿ (ಮಹಿಳೆಯರ 70kg) vs ಚಾಂಟೆಲ್ ರೀಡ್ (ಇಂಗ್ಲೆಂಡ್) – ರಾತ್ರಿ 9:30.
- ಲವ್ಲಿನಾ ಬೊರ್ಗೊಹೈನ್ (ಮಹಿಳೆಯರ 75kg) vs ಎಮ್ಮಾ-ಸೂ ಗ್ರೀನ್‌ಟ್ರೀ (ಆಸ್ಟ್ರೇಲಿಯಾ) – ರಾತ್ರಿ 9:45
- ಸಚಿನ್ ಸಿವಾಚ್ (ಪುರುಷರ 60kg) vs ಟ್ರೈಅಗೇನ್ ಂದೆವೆಲೊ (ನಮೀಬಿಯಾ) – ರಾತ್ರಿ 10:00
- ಅಂಕುಶ್ ಪಾಂಗಲ್ (ಪುರುಷರ 80kg) vs ದಿಮೇಜಿ ಶಿಟ್ಟು (ಇಂಗ್ಲೆಂಡ್) – ರಾತ್ರಿ 10:15
- ನರೇಂದ್ರ ಬರ್ವಾಲ್ (ಪುರುಷರ +90kg) vs ಡ್ಯಾಮರ್ ಥಾಮಸ್ (ಇಂಗ್ಲೆಂಡ್) – ರಾತ್ರಿ 10:30
ಒಂದು ವೇಳೆ ಫೈನಲ್ ತಲುಪಿರುವ ಎಲ್ಲಾ 10 ಬಾಕ್ಸರ್‌ಗಳು ಚಿನ್ನದ ಪದಕ ಗೆದ್ದರೆ, ಭಾರತದ ಚಿನ್ನದ ಪದಕಗಳ ಸಂಖ್ಯೆ 15ಕ್ಕೆ ಏರಿಕೆಯಾಗಲಿದೆ. ಈ ಹದಿನೈದು ಪದಕಗಳೊಂದಿಗೆ ಭಾರತ ಕಾಮನ್‌ವೆಲ್ತ್ ಗೇಮ್ಸ್ನ ಮೆಡಲ್ ಲಿಸ್ಟ್ನಲ್ಲಿ 4ನೇ ಸ್ಥಾನಕ್ಕೇರಬಹುದು.
ಇದನ್ನೂ ಓದಿ: 12 ಸ್ಟೇಡಿಯಂ, 57 ಪಂದ್ಯಗಳು: ಹೀಗಿರಲಿದೆ ಏಕದಿನ ವಿಶ್ವಕಪ್ ಟೂರ್ನಿ!
ಅಂದರೆ, ಪ್ರಸ್ತುತ ಪದಕ ಪಟ್ಟಿಯಲ್ಲಿ 10ನೇ ಸ್ಥಾನದಲ್ಲಿರುವ ಭಾರತವು ಇಂದು ಬಾಕ್ಸಿಂಗ್ ಫೈನಲ್‌ಗಳಲ್ಲಿ ಗೆದ್ದು 10 ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡರೆ ಮೆಡಲ್ ಲಿಸ್ಟ್ನಲ್ಲಿ ಏಕಾಏಕಿ 4ನೇ ಸ್ಥಾನಕ್ಕೇರಲಿದೆ! ಇದೇ ಕಾರಣಕ್ಕೆ ಇಂದಿನ ಈ ಐತಿಹಾಸಿಕ ಬಾಕ್ಸಿಂಗ್ ಹಣಾಹಣಿಯನ್ನು ಇಡೀ ಕ್ರೀಡಾಲೋಕವೇ ಅತ್ಯಂತ ಕುತೂಹಲದಿಂದ ಎದುರು ನೋಡುತ್ತಿದೆ.




