AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

12 ಸ್ಟೇಡಿಯಂ, 57 ಪಂದ್ಯಗಳು: ಹೀಗಿರಲಿದೆ ಏಕದಿನ ವಿಶ್ವಕಪ್​ ಟೂರ್ನಿ!

ODI World Cup 2027: 2027ರ ಐಸಿಸಿ ಪುರುಷರ ಏಕದಿನ ವಿಶ್ವಕಪ್ ಟೂರ್ನಿಯು 2027ರ ಅಕ್ಟೋಬರ್ 4 ರಿಂದ ನವೆಂಬರ್ 21 ರವರೆಗೆ ನಡೆಯಲಿದೆ. ಮುಂಬರುವ ಟೂರ್ನಿಗೆ ಆಫ್ರಿಕಾ ಖಂಡದ ಪ್ರಮುಖ ಮೂರು ದೇಶಗಳಾದ ಸೌತ್ ಆಫ್ರಿಕಾ, ಝಿಂಬಾಬ್ವೆ ಮತ್ತು ನಮೀಬಿಯಾ ಜಂಟಿಯಾಗಿ ಆತಿಥ್ಯವಹಿಸಲಿದೆ.

12 ಸ್ಟೇಡಿಯಂ, 57 ಪಂದ್ಯಗಳು: ಹೀಗಿರಲಿದೆ ಏಕದಿನ ವಿಶ್ವಕಪ್​ ಟೂರ್ನಿ!
Odi World Cup 2027Image Credit source: ICC
ಝಾಹಿರ್ ಯೂಸುಫ್
|

Updated on: Aug 01, 2026 | 8:22 AM

Share

ಸೌತ್ ಆಫ್ರಿಕಾ, ಝಿಂಬಾಬ್ವೆ ಹಾಗೂ ನಮೀಬಿಯಾ ಜಂಟಿಯಾಗಿ ಆಯೋಜಿಸಲಿರುವ 2027ರ ಏಕದಿನ ವಿಶ್ವಕಪ್‌ಗಾಗಿ ಒಟ್ಟು 12 ಕ್ರೀಡಾಂಗಣಗಳನ್ನು ಅಂತಿಮಗೊಳಿಸಲಾಗಿದೆ. ಇದರಲ್ಲಿ ಸೌತ್ ಆಫ್ರಿಕಾದ 8, ಝಿಂಬಾಬ್ವೆಯ 3 ಹಾಗೂ ನಮೀಬಿಯಾದ 1 ಕ್ರೀಡಾಂಗಣದಲ್ಲಿ ಪಂದ್ಯಗಳು ನಡೆಯಲಿದ್ದು, ಆ ಕ್ರೀಡಾಂಗಣಗಳ ವಿವರ ಇಲ್ಲಿದೆ…

  • ಸೌತ್ ಆಫ್ರಿಕಾ
  • ವಾಂಡರರ್ಸ್ ಸ್ಟೇಡಿಯಂ – ಜೋಹಾನ್ಸ್​ಬರ್ಗ್​
  • ನ್ಯೂಲಾಂಡ್ಸ್ ಕ್ರಿಕೆಟ್ ಮೈದಾನ – ಕೇಪ್ ಟೌನ್
  •  ಕಿಂಗ್ಸ್​ಮೀಡ್ ಕ್ರಿಕೆಟ್ ಮೈದಾನ – ಡರ್ಬನ್
  • ಸೂಪರ್‌ಸ್ಪೋರ್ಟ್ ಪಾರ್ಕ್ – ಸೆಂಚುರಿಯನ್
  • ಸೇಂಟ್ ಜಾರ್ಜ್ ಪಾರ್ಕ್ – ಪೋರ್ಟ್ ಎಲಿಜಬೆತ್
  • ಮಂಗಾಂಗ್ ಓವಲ್ – ಬ್ಲೋಮ್‌ಫಾಂಟೈನ್
  • ಬೋಲ್ಯಾಂಡ್ ಪಾರ್ಕ್ – ಪಾರ್ಲ್
  • ಬಫಲೋ ಪಾರ್ಕ್ – ಈಸ್ಟ್ ಲಂಡನ್

ಇದನ್ನೂ ಓದಿ: ಐಸಿಸಿ ರ‍್ಯಾಂಕಿಂಗ್​ನಲ್ಲಿ ಟೀಮ್ ಇಂಡಿಯಾದ ನಾಲ್ವರು ನಂಬರ್ 1

  • ಝಿಂಬಾಬ್ವೆ
  • ಹರಾರೆ ಸ್ಪೋರ್ಟ್ಸ್ ಕ್ಲಬ್ – ಹರಾರೆ
  • ಕ್ವೀನ್ಸ್ ಸ್ಪೋರ್ಟ್ಸ್ ಕ್ಲಬ್ – ಬುಲವಾಯೊ
  • ಫಾಲೆ ಮೋಸಿ-ಓವಾ-ತುನ್ಯಾ ಕ್ರೀಡಾಂಗಣ – ವಿಕ್ಟೋರಿಯಾ ಫಾಲ್ಸ್
  • ನಮೀಬಿಯಾ 
  • ನಮೀಬಿಯಾ ಕ್ರಿಕೆಟ್ ಮೈದಾನ – ವಿಂಡ್‌ಹೋಕ್

12 ಸ್ಟೇಡಿಯಂ, 57 ಪಂದ್ಯಗಳು:

ಈ 12 ಸ್ಟೇಡಿಯಂಗಳಲ್ಲಿ ಒಟ್ಟು 57 ಪಂದ್ಯಗಳು ನಡೆಯಲಿವೆ. ಆದರೆ ಈ ಬಾರಿಯ ವಿಶ್ವಕಪ್ ನಡೆಯಲಿರುವುದು ಹೊಸ ಸ್ವರೂಪದಲ್ಲಿ ಎಂಬುದು ವಿಶೇಷ. ಅಂದರೆ ಹೊಸ ಫಾರ್ಮ್ಯಾಟ್​ ಮೂಲಕ ಒಟ್ಟು ನಾಲ್ಕು ಹಂತಗಳಲ್ಲಿ ಟೂರ್ನಿಯನ್ನು ಆಯೋಜಿಸಲು ರೂಪುರೇಷೆ ಸಿದ್ಧಪಡಿಸಿದೆ. ಹಾಗಾದರೆ ಈ ಬಾರಿ ಏನೆಲ್ಲಾ ಬದಲಾವಣೆಗಳಾಗಿವೆ? ಟೂರ್ನಿಯ ಮೂರು ಹಂತಗಳಾವುವು ಎಂಬುದರ ಸಮಗ್ರ ಮಾಹಿತಿ ಇಲ್ಲಿದೆ.

ಹಂತ 1: ಸೂಪರ್ ಸೀರೀಸ್:

ಈ ಬಾರಿಯ ವಿಶ್ವಕಪ್​ನಲ್ಲಿ ಒಟ್ಟು 14 ತಂಡಗಳು ಕಣಕ್ಕಿಳಿಯಲಿವೆ. ಆದರೆ ಈ ಹದಿನಾಲ್ಕು ತಂಡಗಳಲ್ಲಿ ಎರಡು ಟೀಮ್​ಗಳು ಮೊದಲ ಸುತ್ತಿನಲ್ಲೇ ಹೊರಬೀಳಲಿವೆ. ಅಂದರೆ ವಿಶ್ವಕಪ್‌ಗೆ ಅರ್ಹತೆ ಪಡೆದ ಒಟ್ಟು 14 ತಂಡಗಳಲ್ಲಿ, ಅತ್ಯಂತ ಕಡಿಮೆ ಶ್ರೇಯಾಂಕ ಹೊಂದಿರುವ ಕೊನೆಯ 3 ತಂಡಗಳ (12, 13 ಮತ್ತು 14ನೇ ಸ್ಥಾನ) ನಡುವೆ ಮಾತ್ರ ಈ ಆರಂಭಿಕ ಸುತ್ತು ನಡೆಯಲಿದೆ.

  • ಯಾರ ನಡುವೆ?: ಅರ್ಹತೆ ಪಡೆದ ಒಟ್ಟು 14 ತಂಡಗಳಲ್ಲಿ, ಐಸಿಸಿ ಶ್ರೇಯಾಂಕದಲ್ಲಿ ಅತ್ಯಂತ ಕೆಳಗಿರುವ ಕೊನೆಯ 3 ತಂಡಗಳು ಈ ಹಂತದಲ್ಲಿ ಸ್ಪರ್ಧಿಸುತ್ತವೆ. ಅಂದರೆ 11 ತಂಡಗಳು ನೇರ ಅರ್ಹತೆ ಪಡೆದರೆ, 3 ತಂಡಗಳು ಟೂರ್ನಿ ಆರಂಭಕ್ಕೂ ಮುನ್ನ ಸೂಪರ್ ಸಿರೀಸ್ ಆಡಿ ಅರ್ಹತೆ ಪಡೆಯಬೇಕಿದೆ.
  • ಮಾದರಿ: ಈ ಮೂರು ತಂಡಗಳು ಪರಸ್ಪರ ತಲಾ ಒಂದು ಪಂದ್ಯವನ್ನು ಆಡಲಿವೆ (ಮಿನಿ ಲೀಗ್).
  • ಫಲಿತಾಂಶ: ಈ ಮೂರು ತಂಡಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಕೇವಲ 1 ತಂಡ ಮಾತ್ರ ಮುಂದಿನ ಹಂತಕ್ಕೆ ಅರ್ಹತೆ ಪಡೆಯುತ್ತದೆ. ಉಳಿದ 2 ತಂಡಗಳು ಟೂರ್ನಿಯಿಂದ ಹೊರಬೀಳುತ್ತವೆ.

ಹಂತ 2: ಗ್ರೂಪ್ ರೌಂಡ್:

ವಿಶ್ವಕಪ್​ಗೆ ನೇರವಾಗಿ ಅರ್ಹತೆ ಪಡೆದ ಅಗ್ರ 11 ತಂಡಗಳು ಮತ್ತು ಮೊದಲ ಹಂತದ ಸೂಪರ್ ಸೀರೀಸ್‌ನಲ್ಲಿ ಗೆದ್ದು ಬರುವ 1 ತಂಡ ಸೇರಿ ಒಟ್ಟು 12 ತಂಡಗಳು ದ್ವಿತೀಯ ಸುತ್ತಿನಲ್ಲಿ ಕಣಕ್ಕಿಳಿಯಲಿವೆ.

  • ಯಾರ ನಡುವೆ?: ಸೂಪರ್ ಸೀರೀಸ್‌ನಿಂದ ಗೆದ್ದು ಬಂದ 1 ತಂಡವು, ಉಳಿದ 11 ಉನ್ನತ ಶ್ರೇಯಾಂಕದ ತಂಡಗಳನ್ನು ಸೇರಿಕೊಳ್ಳುತ್ತದೆ. ಅದರಂತೆ ದ್ವಿತೀಯ ಹಂತದಲ್ಲಿ ಒಟ್ಟು 12 ತಂಡಗಳು ಕಣಕ್ಕಿಳಿಯಲಿವೆ.
  • ಮಾದರಿ: ಈ 12 ತಂಡಗಳನ್ನು ತಲಾ 6 ತಂಡಗಳಂತೆ ಎರಡು ಗುಂಪುಗಳಾಗಿ (ಗ್ರೂಪ್ A ಮತ್ತು ಗ್ರೂಪ್ B) ವಿಂಗಡಿಸಲಾಗುತ್ತದೆ. ಪ್ರತಿಯೊಂದು ತಂಡವು ತನ್ನ ಗುಂಪಿನಲ್ಲಿರುವ ಉಳಿದ ಐದು ತಂಡಗಳೊಂದಿಗೆ ತಲಾ ಒಂದು ಪಂದ್ಯವನ್ನು (ಒಟ್ಟು 5 ಪಂದ್ಯಗಳು) ಆಡಲಿವೆ.
  • ಫಲಿತಾಂಶ: ಪ್ರತಿ ಗುಂಪಿನಿಂದ ಅಗ್ರ 3 ತಂಡಗಳು ನೇರವಾಗಿ ಮುಂದಿನ ಹಂತಕ್ಕೆ ಹೋಗುತ್ತವೆ (ಒಟ್ಟು 6 ತಂಡಗಳು). ಇದರೊಂದಿಗೆ, ಎರಡೂ ಗುಂಪುಗಳಲ್ಲಿ ಉಳಿದ ತಂಡಗಳ ಪೈಕಿ ಅತ್ಯುತ್ತಮ ಪ್ರದರ್ಶನ ನೀಡಿದ ಮತ್ತೊಂದು ಹೆಚ್ಚುವರಿ ತಂಡಕ್ಕೆ ಅವಕಾಶ ಸಿಗುತ್ತದೆ. ಹೀಗೆ ಒಟ್ಟು 7 ತಂಡಗಳು ಮುಂದಿನ ಹಂತಕ್ಕೆ ಲಗ್ಗೆ ಇಡುತ್ತವೆ.
  • 7ನೇ ತಂಡದ ಆಯ್ಕೆ ಹೇಗೆ?: ಗ್ರೂಪ್ ಹಂತದ 5 ಪಂದ್ಯಗಳ ಮುಕ್ತಾಯದ ನಂತರ, ಎರಡೂ ಗ್ರೂಪ್‌ಗಳ 4ನೇ ಸ್ಥಾನದಲ್ಲಿರುವ ತಂಡಗಳ ಪೈಕಿ ಯಾವ ತಂಡ ಅತಿ ಹೆಚ್ಚು ಅಂಕಗಳನ್ನು ಹೊಂದಿದೆಯೋ ಆ ತಂಡವು 7ನೇ ತಂಡವು ಮೂರನೇ ಹಂತಕ್ಕೆ ಪ್ರವೇಶಿಸುತ್ತದೆ.

ಹಂತ 3: ಸೂಪರ್ 7 ರೌಂಡ್:

ದ್ವಿತೀಯ ಸುತ್ತಿನಲ್ಲಿ ಕಣಕ್ಕಿಳಿದ 12 ತಂಡಗಳಲ್ಲಿ ಮೂರನೇ ಸುತ್ತಿಗೆ 7 ತಂಡಗಳು ಮಾತ್ರ ಪ್ರವೇಶಿಸಲಿದೆ. ಅಂದರೆ ಇಲ್ಲಿ ಎರಡೂ ಗುಂಪುಗಳಿಂದ ತಲಾ 3 ಅತ್ಯುತ್ತಮ ತಂಡಗಳು (3 + 3 = 6) ಮತ್ತು ಎರಡೂ ಗುಂಪುಗಳನ್ನು ಒಟ್ಟಾರೆಯಾಗಿ ಪರಿಗಣಿಸಿ ಅತ್ಯುತ್ತಮ ಪ್ರದರ್ಶನ ನೀಡಿದ ಮತ್ತೊಂದು ತಂಡಕ್ಕೆ ಸೂಪರ್-7 ನಲ್ಲಿ ಅವಕಾಶ ಸಿಗಲಿದೆ.

  • ಮಾದರಿ: ಅರ್ಹತೆ ಪಡೆದ 7 ತಂಡಗಳು ಸಿಂಗಲ್ ರೌಂಡ್-ರಾಬಿನ್ ಮಾದರಿಯಲ್ಲಿ ಪರಸ್ಪರ ಮುಖಾಮುಖಿಯಾಗುತ್ತವೆ. ಅಂದರೆ ಇಲ್ಲಿ ಯಾವುದೇ ಗುಂಪುಗಳಿರುವುದಿಲ್ಲ, ಪ್ರತಿ ತಂಡವೂ ಉಳಿದ 6 ತಂಡಗಳ ವಿರುದ್ಧ ಆಡಲೇಬೇಕು (ಒಟ್ಟು 21 ಪಂದ್ಯಗಳು ನಡೆಯಲಿವೆ).

ಹಂತ 4: ನಾಕೌಟ್ ರೌಂಡ್:

ಸೂಪರ್ 7 ಹಂತದ ಅಂತ್ಯದಲ್ಲಿ ಅಂಕಪಟ್ಟಿಯಲ್ಲಿ ಮೊದಲ 4 ಸ್ಥಾನಗಳನ್ನು ಪಡೆಯುವ ತಂಡಗಳು ಸೆಮಿಫೈನಲ್‌ಗೆ ಅರ್ಹತೆ ಪಡೆಯುತ್ತವೆ.

  • ಸೆಮಿಫೈನಲ್ 1: ಸೂಪರ್ 7 ಅಂಕಪಟ್ಟಿಯಲ್ಲಿ ಮೊದಲ ಸ್ಥಾನ (ನಂ.1) ಪಡೆದ ತಂಡವು ನಾಲ್ಕನೇ ಸ್ಥಾನ (ನಂ.4) ಪಡೆದ ತಂಡದ ವಿರುದ್ಧ ಸೆಣಸಾಡಲಿದೆ.
  • ಸೆಮಿಫೈನಲ್ 2: ಅಂಕಪಟ್ಟಿಯಲ್ಲಿ ಎರಡನೇ ಸ್ಥಾನ (ನಂ.2) ಪಡೆದ ತಂಡವು ಮೂರನೇ ಸ್ಥಾನ (ನಂ.3) ಪಡೆದ ತಂಡದ ಮುಖಾಮುಖಿಯಾಗಲಿದೆ.

ಇದನ್ನೂ ಓದಿ: CWG 2026: ಒಂದೇ ದಿನ 6 ಪದಕಗಳನ್ನು ಗೆದ್ದ ಭಾರತೀಯರು!

ಇನ್ನು ಸೆಮಿಫೈನಲ್​ಗಳಲ್ಲಿ ಗೆಲ್ಲುವ ಎರಡು ತಂಡಗಳು ನವೆಂಬರ್ 21 ರಂದು ನಡೆಯಲಿರುವ ಫೈನಲ್ ಪಂದ್ಯದಲ್ಲಿ ಮುಖಾಮುಖಿಯಾಗಲಿದೆ.

Follow Us
ಅಂಬಾನಿ ಮನೆಯಲ್ಲಿ ಅದ್ದೂರಿ ಗಣೇಶೋತ್ಸವ; ರಾಧಿಕಾ ಮರ್ಚೆಂಟ್​ ನೃತ್ಯ
ಅಂಬಾನಿ ಮನೆಯಲ್ಲಿ ಅದ್ದೂರಿ ಗಣೇಶೋತ್ಸವ; ರಾಧಿಕಾ ಮರ್ಚೆಂಟ್​ ನೃತ್ಯ
ಬೆಂಗಳೂರಿನಲ್ಲಿ ಅಬ್ಬರಿಸಿದ ಮಳೆರಾಯ: ರಸ್ತೆಗಳೆಲ್ಲಾ ಜಲಾವೃತ!
ಬೆಂಗಳೂರಿನಲ್ಲಿ ಅಬ್ಬರಿಸಿದ ಮಳೆರಾಯ: ರಸ್ತೆಗಳೆಲ್ಲಾ ಜಲಾವೃತ!
ಕೊಪ್ಪಳ ಹಾಸ್ಟೆಲ್​​ಗೆ ಬಂದು ತಿಗಣಿಗೆ ಮದ್ದು ನೀಡಿದ ಚೆನ್ನೈ ತಜ್ಞರು
ಕೊಪ್ಪಳ ಹಾಸ್ಟೆಲ್​​ಗೆ ಬಂದು ತಿಗಣಿಗೆ ಮದ್ದು ನೀಡಿದ ಚೆನ್ನೈ ತಜ್ಞರು
ಬಿಗ್​​ಬಾಸ್​​ ಮನೆಯಿಂದ ಹೊರಬಂದಿದ್ದಕ್ಕೆ ಕಾರಣ ತಿಳಿಸಿದ ಓಂ ಪ್ರಕಾಶ್ ರಾವ್
ಬಿಗ್​​ಬಾಸ್​​ ಮನೆಯಿಂದ ಹೊರಬಂದಿದ್ದಕ್ಕೆ ಕಾರಣ ತಿಳಿಸಿದ ಓಂ ಪ್ರಕಾಶ್ ರಾವ್
ಅರಿಶಿನದ ಕೊಂಬುಗಳಿಂದಲೇ ಸಿದ್ಧವಾದ ಪರಿಸರಸ್ನೇಹಿ ಗಣೇಶನ ಮೂರ್ತಿ!
ಅರಿಶಿನದ ಕೊಂಬುಗಳಿಂದಲೇ ಸಿದ್ಧವಾದ ಪರಿಸರಸ್ನೇಹಿ ಗಣೇಶನ ಮೂರ್ತಿ!
ಕೆಡಿಪಿ ಸಭೆಗೆ ಪೊಲೀಸ್ ಆಯುಕ್ತ ಗೈರಾಗಿದ್ದಕ್ಕೆ ಸಚಿವ ಯು.ಟಿ.ಖಾದರ್ ಗರಂ
ಕೆಡಿಪಿ ಸಭೆಗೆ ಪೊಲೀಸ್ ಆಯುಕ್ತ ಗೈರಾಗಿದ್ದಕ್ಕೆ ಸಚಿವ ಯು.ಟಿ.ಖಾದರ್ ಗರಂ
ಗಂಭೀರ ಪಡೆದುಕೊಂಡ ಜಾರಕಿಹೊಳಿ ಕೇಸ್: ಇಡಿ ಸಭೆಯಲ್ಲಿ ಮಹತ್ವದ ಚರ್ಚೆ
ಗಂಭೀರ ಪಡೆದುಕೊಂಡ ಜಾರಕಿಹೊಳಿ ಕೇಸ್: ಇಡಿ ಸಭೆಯಲ್ಲಿ ಮಹತ್ವದ ಚರ್ಚೆ
LIVE: ಕೇಂದ್ರ ಸಚಿವ ಜೆ.ಪಿ‌.ನಡ್ಡಾ ಮಹತ್ವದ ಸುದ್ದಿಗೋಷ್ಠಿ
LIVE: ಕೇಂದ್ರ ಸಚಿವ ಜೆ.ಪಿ‌.ನಡ್ಡಾ ಮಹತ್ವದ ಸುದ್ದಿಗೋಷ್ಠಿ
ಕ್ಯಾರೆಕ್ಟರ್ ಲೆಸ್ ಎಂದ ಮಂಜ, ಗಂಡಸೇ ಅಲ್ಲ ಎಂದ ಕಾವ್ಯಾ: ವಿಡಿಯೋ
ಕ್ಯಾರೆಕ್ಟರ್ ಲೆಸ್ ಎಂದ ಮಂಜ, ಗಂಡಸೇ ಅಲ್ಲ ಎಂದ ಕಾವ್ಯಾ: ವಿಡಿಯೋ
ಟಿ.ನರಸೀಪುರ ಇನ್ಸ್​​​ಪೆಕ್ಟರ್ ಪರ ಡಿಕೆ ಶಿವಕುಮಾರ್ ಬ್ಯಾಟಿಂಗ್
ಟಿ.ನರಸೀಪುರ ಇನ್ಸ್​​​ಪೆಕ್ಟರ್ ಪರ ಡಿಕೆ ಶಿವಕುಮಾರ್ ಬ್ಯಾಟಿಂಗ್