AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs SL: ಕೈಗೆ ಗಂಭೀರ ಗಾಯ ಬ್ಯಾಟಿಂಗ್‌ ನಿಲ್ಲಿಸಿದ ರಿಷಭ್ ಪಂತ್

Rishabh Pant Injury: ಶ್ರೀಲಂಕಾ ಪ್ರವಾಸದಲ್ಲಿ ಟೀಂ ಇಂಡಿಯಾ ಗಾಯದ ಸಮಸ್ಯೆಯಿಂದ ಬಳಲುತ್ತಿದೆ. ಸರಣಿ ಆರಂಭಕ್ಕೂ ಮುನ್ನ ಬುಮ್ರಾ, ಸಾಯಿ ಸುದರ್ಶನ್ ಹೊರಬಿದ್ದ ಬೆನ್ನಲ್ಲೇ, ಕೊಲಂಬೊ ಟೆಸ್ಟ್‌ನಲ್ಲಿ ವಿಕೆಟ್‌ಕೀಪರ್ ರಿಷಭ್ ಪಂತ್ ತಮ್ಮ ಎಡಗೈಗೆ ಗಾಯ ಮಾಡಿಕೊಂಡಿದ್ದಾರೆ. ಶಾರ್ಟ್ ಬಾಲ್‌ಗೆ ಪೆಟ್ಟು ಬಿದ್ದು ರಿಟೈರ್ಡ್ ಹರ್ಟ್ ಆದ ಪಂತ್, ತಂಡದ ಆತಂಕ ಹೆಚ್ಚಿಸಿದ್ದಾರೆ. ಪಂತ್ ಮತ್ತೆ ಬ್ಯಾಟಿಂಗ್‌ಗೆ ಇಳಿಯುವ ಬಗ್ಗೆಯೂ ಅನಿಶ್ಚಿತತೆ ಇದೆ.

IND vs SL: ಕೈಗೆ ಗಂಭೀರ ಗಾಯ ಬ್ಯಾಟಿಂಗ್‌ ನಿಲ್ಲಿಸಿದ ರಿಷಭ್ ಪಂತ್
Rishabh Pant
ಪೃಥ್ವಿಶಂಕರ
|

Updated on:Aug 23, 2026 | 7:48 PM

Share

ಶ್ರೀಲಂಕಾ ಪ್ರವಾಸದಲ್ಲಿರುವ ಟೀಂ ಇಂಡಿಯಾದಲ್ಲಿ (India vs Sri Lanka) ಗಾಯಾಳುಗಳ ಸಮಸ್ಯೆ ಕಡಿಮೆಯಾಗುವ ಯಾವ ಲಕ್ಷಣಗಳು ಕಾಣುತ್ತಿಲ್ಲ. ಸರಣಿ ಆರಂಭಕ್ಕೂ ಮುನ್ನವೇ ಜಸ್ಪ್ರಿತ್ ಬುಮ್ರಾ ಹಾಗೂ ಸಾಯಿ ಸುದರ್ಶನ್ ಗಾಯದಿಂದಾಗಿ ಸರಣಿಯಿಂದಲೇ ಹೊರಬಿದ್ದಿದ್ದರು. ಇದೀಗ ಸರಣಿಯ ನಡುವೆ ಪ್ರಮುಖ ಆಟಗಾರರು ಗಾಯಗಳಿಗೆ ತುತ್ತಾಗುತ್ತಿದ್ದಾರೆ. ಕೊಲಂಬೊದಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ ಮೊದಲ ದಿನದಾಟದಂದು ವಿಕೆಟ್​ಕೀಪರ್ ಬ್ಯಾಟ್ಸ್‌ಮನ್ ರಿಷಭ್ ಪಂತ್ (Rishabh Pant) ಬ್ಯಾಟಿಂಗ್‌ ಮಾಡುವ ವೇಳೆ ತಮ್ಮ ಎಡಗೈಗೆ ಗಾಯ ಮಾಡಿಕೊಂಡಿದ್ದಾರೆ. ಇದರಿಂದಾಗಿ ಪಂತ್ ಅರ್ಧಕ್ಕೆ ಬ್ಯಾಟಿಂಗ್‌ ನಿಲ್ಲಿಸಿ ರಿಟೈರ್ಡ್​ ಹರ್ಟ್​ ಆಗಿ ಪೆವಿಲಿಯನ್ ಸೇರಿಕೊಂಡರು. ಅಲ್ಲದೆ ಇಡೀ ದಿನ ಪಂತ್ ಮತ್ತೆ ಬ್ಯಾಟಿಂಗ್​ಗೆ ಬರಲಿಲ್ಲ. ಇದು ತಂಡವನ್ನು ಆತಂಕಕ್ಕೆ ದೂಡಿದೆ.

ಪಂತ್ ಎಡಗೈಗೆ ಗಾಯ

ವಾಸ್ತವವಾಗಿ ನಾಯಕ ಶುಭ್​ಮನ್ ಗಿಲ್ ಔಟಾದ ನಂತರ, ರಿಷಭ್ ಪಂತ್ ಬ್ಯಾಟಿಂಗ್‌ಗೆ ಬಂದರು. ಆದರೆ ಪಂತ್​ಗೆ ಹೆಚ್ಚು ಸಮಯ ಕ್ರೀಸ್‌ನಲ್ಲಿ ಬ್ಯಾಟಿಂಗ್ ಮುಂದುವರೆಸಲು ಸಾಧ್ಯವಾಗಲಿಲ್ಲ. ದೊಡ್ಡ ಹೊಡೆತವನ್ನು ಹೊಡೆಯುವ ಯತ್ನದಲ್ಲಿ ಪಂತ್ ತಮ್ಮ ಎಡಗೈಗೆ ಗಾಯ ಮಾಡಿಕೊಂಡರು. ಶ್ರೀಲಂಕಾದ ವೇಗದ ಬೌಲರ್ ಲಹಿರು ಕುಮಾರ ಬೌಲಿಂಗ್​ನಲ್ಲಿ ಈ ಘಟನೆ ನಡೆಯಿತು. ಲಹಿರು ಕುಮಾರ ಎಸೆದ ಶಾರ್ಟ್​ ಬಾಲ್ ಅನ್ನು ಪಂತ್ ಪುಲ್ ಶಾಟ್ ಮಾಡಲು ಪ್ರಯತ್ನಿಸಿದರು. ಆದರೆ ಪಂತ್ ಬೇಗನೇ ಆ ಶಾಟ್ ಆಡಿದ ಕಾರಣದಿಂದಾಗಿ ಚೆಂಡು ಬ್ಯಾಟ್​ಗೆ ಬಡಿಯುವ ಬದಲು ಪಂತ್ ಅವರ ಎಡ ಮಣಿಕಟ್ಟಿನ ಬಳಿ ಬಲವಾಗಿ ತಗುಲಿತು.

ಅರ್ಧಕ್ಕೆ ಬ್ಯಾಟಿಂಗ್ ನಿಲ್ಲಿಸಿದ ಪಂತ್

ಇದರಿಂದ ಪಂತ್‌ ತೀವ್ರ ನೋವಿನಿಂದ ಬಳಲಲಾರಂಭಿಸಿದರು, ಹೀಗಾಗಿ ಆಟವನ್ನು ಕೆಲ ಸಮಯ ನಿಲ್ಲಿಸಲಾಯಿತು. ಕೂಡಲೇ ಮೈದಾನಕ್ಕೆ ಬಂದ ಟೀಂ ಇಂಡಿಯಾದ ಫಿಸಿಯೋ ಪಂತ್ ಅವರನ್ನು ಸಂಕ್ಷಿಪ್ತವಾಗಿ ಪರೀಕ್ಷಿಸಿ ಬ್ಯಾಂಡೇಜ್ ಹಾಕಿದರು. ಆದಾಗ್ಯೂ, ಪಂತ್ ಅವರ ನೋವು ಕಡಿಮೆಯಾಗಲಿಲ್ಲ. ಆದ್ದರಿಂದ ಪಂತ್ ಗಾಯಗೊಂಡು ನಿವೃತ್ತಿ ಹೊಂದಲು ನಿರ್ಧರಿಸಿ ಮೈದಾನದಿಂದ ಹೊರನಡೆದರು. ಹೀಗಾಗಿ ರವೀಂದ್ರ ಜಡೇಜಾ ಬ್ಯಾಟಿಂಗ್​ಗೆ ಬರಬೇಕಾಯಿತು.

IND vs SL: ಸಿಕ್ಸರ್‌ಗಳ ಶತಕ; ವಿಶ್ವ ದಾಖಲೆ ನಿರ್ಮಿಸಿದ ರಿಷಭ್ ಪಂತ್

2ನೇ ದಿನ ಬ್ಯಾಟಿಂಗ್​ಗೆ ಬರಬಹುದು

ಪಂತ್ ಬ್ಯಾಟಿಂಗ್‌ ನಿಲ್ಲಿಸಿದಾಗ 15 ಎಸೆತಗಳಲ್ಲಿ ಕೇವಲ 3 ರನ್ ಗಳಿಸಿದ್ದರು. ಪಂತ್ ನಿವೃತ್ತಿಯ ನಂತರ, ಟೀಂ ಇಂಡಿಯಾ 2 ವಿಕೆಟ್‌ಗಳನ್ನು ಕಳೆದುಕೊಂಡಿತ್ತಾದರೂ ಪಂತ್ ಮತ್ತೆ ಬ್ಯಾಟಿಂಗ್​ಗೆ ಬರಲಿಲ್ಲ. ಪರಿಣಾಮವಾಗಿ, ಪಂತ್ ಈ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್‌ಗೆ ಬರುತ್ತಾರೋ ಇಲ್ಲವೋ ಎಂಬ ಬಗ್ಗೆ ಸ್ವಲ್ಪ ಆತಂಕ ಇದೆ. ಮೊದಲ ದಿನದ ಆಟದ ಅಂತ್ಯದ ವೇಳೆಗೆ ಟೀಂ ಇಂಡಿಯಾ 5 ವಿಕೆಟ್‌ಗಳನ್ನು ಕಳೆದುಕೊಂಡಿದೆ. ಹೀಗಾಗಿ ಪಂತ್ ಎರಡನೇ ದಿನದಂದು ಬ್ಯಾಟಿಂಗ್‌ಗೆ ಮರಳುವ ನಿರೀಕ್ಷೆಯಿದೆ.

Published On - 7:46 pm, Sun, 23 August 26

Follow Us
ಪೃಥ್ವಿಶಂಕರ
ಪೃಥ್ವಿಶಂಕರ

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್