29 ವರ್ಷದ ಯುವಕ ಹಠಾತ್ ಹೃದಯ ಸ್ತಂಭನಕ್ಕೆ ಬಲಿ; ಕಾರಣ ವಿವರಿಸಿದ ಆರ್ಥೋಪೆಡಿಕ್ ಸರ್ಜನ್
ಇತ್ತೀಚಿನ ದಿನಗಳಲ್ಲಿ ಹೃದಯಾಘಾತದ ಪ್ರಕರಣಗಳು ತೀರಾ ಹೆಚ್ಚಾಗಿದೆ. ಯುವಕರೇ ಹೆಚ್ಚಾಗಿ ಇದಕ್ಕೆ ಬಲಿಯಾಗುತ್ತಿದ್ದಾರೆ. ಇತ್ತೀಚಿಗಷ್ಟೇ ಟೆಕ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಂತ ರೋಹನ್ ಎಂಬ 29 ವರ್ಷ ವಯಸ್ಸಿನ ಯುವಕ ಹೃದಯ ಸ್ತಂಭನಕ್ಕೆ ಬಲಿಯಾಗಿದ್ದು, ಮದ್ಯಪಾನ, ಧೂಮಪಾನದ ದುರಭ್ಯಾಸ ಇಲ್ಲದ, ಜಿಮ್‌ಗೆ ಹೋಗಿ ಫಿಟ್ ಆಗಿದ್ದ ಆ ಯುವಕನ ಪ್ರಾಣಕ್ಕೆ ಕುತ್ತು ತಂದ ಅಂಶ ಯಾವುದೆಂಬುದನ್ನು ಆರ್ಥೋಪೆಡಿಕ್ ಸರ್ಜನ್ ವಿವರಣೆಯನ್ನು ನೀಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಹೃದಯಾಘಾತ ಪ್ರಕರಣಗಳು ತೀರಾ ಹೆಚ್ಚಾಗಿದೆ. ಅದರಲ್ಲೂ ಸಣ್ಣ ವಯಸ್ಸಿನಲ್ಲಿ ಹೃದಯಾಘಾತಕ್ಕೆ ಒಳಗಾಗಿ ಸಾಯುವವರ ಸಂಖ್ಯೆ ಹೆಚ್ಚುತ್ತಿದೆ. ಗಟ್ಟಿಮುಟ್ಟಾಗಿದ್ದ 25 ವರ್ಷದ ಯುವಕನಿಗೆ ಹೃದಯಾಘಾತವಾಯಿತಂತೆ, 40 ವರ್ಷದ ವ್ಯಕ್ತಿಗೆ ಹಾರ್ಟ್ ಅಟ್ಯಾಕ್ ಆಯಿತಂತೆ ಎಂದೆಲ್ಲಾ ಇತ್ತೀಚಿಗೆ ಸಾಕಷ್ಟು ಪ್ರಕರಣಗಳು ಕೇಳಿ ಬರುತ್ತಿವೆ. ಅದೇ ರೀತಿ ಟೆಕ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಂತ ರೋಹನ್ ಎಂಬ 29 ವರ್ಷ ವಯಸ್ಸಿನ ಯುವಕ ಹಠಾತ್ ಹೃದಯ ಸ್ತಂಭನಕ್ಕೆ (cardiac arrest) ಬಲಿಯಾಗಿದ್ದು, ಸ್ಮೋಕ್, ಡ್ರಿಂಕ್ಸ್ ಅಭ್ಯಾಸ ಇರದ, ವಾರಕ್ಕೆ ಆರು ದಿನ ಜಿಮ್‌ಗೆ ಹೋಗಿ ಫಿಟ್ ಆಗಿ ಆರೋಗ್ಯವಂತನಾಗಿದ್ದ ಯುವಕ ಹಠಾತ್ ಹೃದಯ ಸ್ತಂಭನದಿಂದ ಬಲಿಯಾಗಿದ್ದಾದರೂ ಹೇಗೆ ಎಂಬ ವಿಚಾರವನ್ನು ಆರ್ಥೋಪೆಡಿಕ್ ಸರ್ಜನ್ (Orthopedic surgeon) ಡಾ. ಶಗುನ್ ಅಗರ್ವಾಲ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.
29 ವರ್ಷ ವಯಸ್ಸಿನ ಯುವಕ ಹೃದಯ ಸ್ತಂಭನಕ್ಕೆ ಬಲಿಯಾಗಿದ್ದು ಹೇಗೆ?
ಆರೋಗ್ಯವಂತರಾಗಿರಲು ಹೆಚ್ಚಿನವರು ಜಿಮ್ ಹೋಗಿ ವ್ಯಾಯಾಮ ಮಾಡುತ್ತಾರೆ, ಜಂಕ್ ಫುಡ್, ಮದ್ಯಪಾನ, ಧೂಮಪಾನವನ್ನು ತಪ್ಪಿಸುವ ಮೂಲಕ ಆರೋಗ್ಯಕರ ಜೀವನಶೈಲಿಯನ್ನು ಪಾಲಿಸಲು ಪ್ರಯತ್ನಿಸುತ್ತಾರೆ. ಅದೇ ರೀತಿ ಸ್ಮೋಕ್, ಡ್ರಿಂಕ್ಸ್ ಮಾಡದ, ಆರೋಗ್ಯಕರ ಜೀವನಶೈಲಿಯನ್ನು ಪಾಲಿಸುತ್ತಿದ್ದಂತಹ 29 ವರ್ಷದ ಯುವಕ ಹಠತ್ ಹೃದಯಾಘಾತಕ್ಕೆ ಹೇಗೆ ಬಲಿಯಾದ ಎಂಬುದನ್ನು ಡಾ. ಶಗುನ್ ಅಗರ್ವಾಲ್ ವಿವರಿಸಿದ್ದಾರೆ.
ರೋಹನ್ ಎಂಬ ಹೆಸರಿನ ಆ ಯುವಕ ಧೂಮಪಾನ, ಮದ್ಯಪಾನ ಮಾಡುತ್ತಿರಲಿಲ್ಲ, ಜಂಕ್ ಫುಡ್ ಸೇವನೆ ಮಾಡುತ್ತಿರಲಿಲ್ಲ, ವಾರದ ಆರು ದಿನ ಜಿಮ್‌ಗೆ ಹೋಗುತ್ತಾ ತುಂಬಾನೇ ಶಿಸ್ತುಬದ್ಧ ಜೀವನಶೈಲಿಯನ್ನು ಪಾಲಿಸುತ್ತಿದ್ದನು. ಆದರೆ ಆತ ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಿರುವಾಗಲೇ ಕುಸಿದು ಬಿದ್ದನು. ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಆತನ ಪ್ರಾಣವೇ ಹೋಗಿತ್ತು.
ವಿಡಿಯೋ ಇಲ್ಲಿದೆ ನೋಡಿ:
View this post on Instagram
ಆರೋಗ್ಯವಂತ ಯುವಕನ ಪ್ರಾಣಕ್ಕೆ ಕುತ್ತಾಗಿದ್ದಾದರೂ ಏನು?
ಈ ಯುವಕ ಹಠಾತ್ ಹೃದಯ ಸ್ತಂಭನದ ಕಾರಣದಿಂದ ಸಾವನ್ನಪ್ಪಿದನು. ಡಾ. ಅಗರ್ವಾಲ್ ಅವರ ಪ್ರಕಾರ, ಹೈಪರ್ಟ್ರೋಫಿಕ್ ಕಾರ್ಡಿಯೊಮಯೋಪತಿ (HCM) ನಿಂದ ಉಂಟಾಗುವ ಹಠಾತ್ ಹೃದಯ ಸ್ತಂಭನದಿಂದಾಗಿ ಈ ಸಾವು ಸಂಭವಿಸಿದೆ. ಹೆಚ್.ಸಿ.ಎಂ ಎಂದರೆ ಹೃದಯ ಸ್ನಾಯು ಅಸಹಜವಾಗಿ ದಪ್ಪವಾಗುವ ಒಂದು ಸ್ಥಿತಿ.
ಇದನ್ನೂ ಓದಿ: ನಿಮ್ಮ ದೇಹದಲ್ಲಿ ಈ ಬದಲಾವಣೆಗಳು ಕಂಡು ಬಂದರೆ ಹೃದಯಾಘಾತವಾಗುವ ಸಾಧ್ಯತೆ ಇರುತ್ತಂತೆ!
ಆರೋಗ್ಯವಂತರಾಗಿದ್ದರೂ ಇಸಿಜಿ ಇತ್ಯಾದಿ ಮೂಲಭೂತ ಆರೋಗ್ಯ ತಪಾಸಣೆಗಳನ್ನು ಮಾಡಲೇಬೇಕು. ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ಪ್ರತಿದಿನ 7 ರಿಂದ 8 ಗಂಟೆಗಳ ಕಾಲ ನಿದ್ದೆ ಮಾಡಬೇಕು. ವ್ಯಾಯಾಮಕ್ಕೂ ಮುನ್ನ ಕೆಫೀನ್ ಅಂಶ ಹೆಚ್ಚಿರುವ ಆಹಾರವನ್ನು ಸೇವನೆ ಮಾಡಬೇಡಿ, ಸರಿಯಾಗಿ ವಿಶ್ರಾಂತಿ ಪಡೆಯಿರಿ, ದಿನಕ್ಕೆ 10 ಸಾವಿರ ಹೆಜ್ಜೆ ವಾಕಿಂಗ್ ಮಾಡಿ ಎಂದು ಡಾ. ಅಗರ್ವಾಲ್ ಸಲಹೆ ನೀಡಿದ್ದಾರೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








