AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಣ್ಣುಗಳಿಗೆ ಹಿತ ಈ ಆಯುರ್ವೇದೀಯ ಐ ಡ್ರಾಪ್ಸ್; ಹೇಗೆ ಕೆಲಸ ಮಾಡುತ್ತೆ ಈ ಪತಂಜಲಿ ದೃಷ್ಟಿ ಔಷಧಿ ನೋಡಿ

Patanjali Drishti Eye Drops: ನಿಮ್ಮ ಕಣ್ಣುಗಳು ಸೋಂಕಿನಿಂದಾಗಿ ಉರಿಯುತ್ತಿದ್ದರೆ, ಕೆಂಪಾಗಿದ್ದರೆ, ಊದಿಕೊಂಡಿದ್ದರೆ ಅಥವಾ ದೃಷ್ಟಿ ಸಮಸ್ಯೆಯಿಂದ ಬಳಲುತ್ತಿದ್ದರೆ, ಪತಂಜಲಿ ಐ ಡ್ರಾಪ್ಸ್ ನಿಮಗೆ ಆಯುರ್ವೇದ ಪರಿಹಾರವಾಗಬಹುದು. ಈ ಐ ಡ್ರಾಪ್ಸ್ ಶುದ್ಧ ನೈಸರ್ಗಿಕ, ಹಾಗೂ ಪರಿಣಾಮಕಾರಿ ಎನಿಸಿದೆ. ಮಿತವ್ಯಯಿ ಕೂಡ ಆಗಿದೆ.

ಕಣ್ಣುಗಳಿಗೆ ಹಿತ ಈ ಆಯುರ್ವೇದೀಯ ಐ ಡ್ರಾಪ್ಸ್; ಹೇಗೆ ಕೆಲಸ ಮಾಡುತ್ತೆ ಈ ಪತಂಜಲಿ ದೃಷ್ಟಿ ಔಷಧಿ ನೋಡಿ
ಪತಂಜಲಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 10, 2025 | 8:30 PM

Share

ಈಗೀಗ ಕಣ್ಣಿನ ಸಮಸ್ಯೆಗಳು ವೃದ್ಧರಿಗಷ್ಟೇ ಅಲ್ಲ ಚಿಕ್ಕ ವಯಸ್ಸಿನವರಲ್ಲೂ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತಿವೆ. ಮಳೆಗಾಲದಲ್ಲಿ ಸೋಂಕು ಬರುವುದರಿಂದ ಹಿಡಿದು ಕಂಪ್ಯೂಟರ್, ಲ್ಯಾಪ್​ಟಾಪ್, ಮೊಬೈಲ್ ಸ್ಕ್ರೀನ್ ಅನ್ನು ನಿರಂತರವಾಗಿ ನೋಡುವವರಿಗೆ ಕಣ್ಣಿನ ಸಮಸ್ಯೆಗಳು ಕಾಣಿಸಿಕೊಳ್ಳುವುದು ಸಾಮಾನ್ಯ. ಕಣ್ಣಿನ ರಕ್ಷಣೆಗೆ ಮತ್ತು ಸಮಸ್ಯೆ ಪರಿಹಾರಕ್ಕೆ ಹಲವು ಮಾರ್ಗೋಪಾಯಗಳಿವೆ. ಇಂಗ್ಲೀಷ್ ಮೆಡಿಸಿನ್​ಗಳು ವ್ಯಾಪಕವಾಗಿ ಬಳಕೆಯಲ್ಲಿವೆ. ಆಯುರ್ವೇದದಲ್ಲೂ ಇದಕ್ಕೆ ಪರಿಹಾರ ಇದೆ. ಯಾವುದೇ ಅಡ್ಡಪರಿಣಾಮದ ಭಯ ಇಲ್ಲದೇ ಕಣ್ಣಿನ ಆರೈಕೆ ಮಾಡಬಯಸುತ್ತಿದ್ದರೆ ಪತಂಜಲಿಯ ಆಯುರ್ವೇದ ಚಿಕಿತ್ಸೆ (Patanjali treatment) ಉತ್ತಮ ಆಯ್ಕೆ ಎನಿಸುತ್ತದೆ. ಪತಂಜಲಿ ಸಂಸ್ಥೆಯ ಆಯುರ್ವೇದೀಯ ಕಣ್ಣಿನ ಹನಿ ಅಥವಾ ಐ ಡ್ರಾಪ್ಸ್ ಬಹಳ ಪರಿಣಾಮಕಾರಿ ಎನಿಸುತ್ತದೆ.

ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಕಾಲಘಟ್ಟದಲ್ಲಿ ಹೆಚ್ಚಿನ ಚಟುವಟಿಕೆಗಳು ಇಂಟರ್ನೆಟ್ ಮೂಲಕ ನಡೆಯುತ್ತಿವೆ. ಹೀಗಾಗಿ, ಸ್ಕ್ರೀನ್ ಬಳಕೆ ಹೆಚ್ಚಿರುತ್ತದೆ. ಅತಿಯಾಗಿ ಸ್ಕ್ರೀನ್​ಗಳನ್ನು ನೋಡುವುದರಿಂದ ಕಣ್ಣಿಗೆ ಆಯಾಸ ಹೆಚ್ಚುತ್ತದೆ. ಕಣ್ಣು ಕೆಂಪಗಾಗುವುದು, ದೃಷ್ಟಿ ಮಸುಕಾಗುವುದು, ತುರಿಕೆಯಾಗುವುದು ಇತ್ಯಾದಿ ಸಮಸ್ಯೆಗಳು ಬರಬಹುದು. ಕಣ್ಣಿನ ದೃಷ್ಟಿ ಕಡಿಮೆ ಆಗುತ್ತಿದೆ ಎನಿಸಿದರೆ ಪತಂಜಲಿಯ ಐ ಡ್ರಾಪ್ಸ್ ಉತ್ತಮ ಪರಿಹಾರ ಕೊಡಬಹುದು. ಆಯುರ್ವೇದ ವಿಧಾನಗಳಿಂದ ತಯಾರಿಸಲ್ಪಟ್ಟ ಈ ಕಣ್ಣಿನ ಹನಿಗಳು ಆಯುರ್ವೇದ ಗಿಡಮೂಲಿಕೆಗಳ ಪರಿಪೂರ್ಣ ಮಿಶ್ರಣವಾಗಿದೆ. ಇದು ಬಿಳಿ ಈರುಳ್ಳಿ, ಶುಂಠಿ ರಸ, ನಿಂಬೆ ರಸ ಮತ್ತು ಜೇನುತುಪ್ಪದಂತಹ ನೈಸರ್ಗಿಕ ಪದಾರ್ಥಗಳನ್ನು ಒಳಗೊಂಡಿದೆ. ಇವೆಲ್ಲವೂ ಕಣ್ಣುಗಳನ್ನು ತಂಪಾಗಿಸುತ್ತವೆ ಮತ್ತು ಕಣ್ಣುಗಳಲ್ಲಿ ಸಂಗ್ರಹವಾದ ಕೊಳೆಯನ್ನು ಸಹ ತೆಗೆದುಹಾಕುತ್ತವೆ.

ಇದನ್ನೂ ಓದಿ: ಗ್ಯಾಸ್ಟ್ರಿಕ್, ಆ್ಯಸಿಡಿಟಿ, ಮಲಬದ್ಧತೆ ಸಮಸ್ಯೆಗಳಿಗೆ ಮನೆ ಮದ್ದು; ಬಾಬಾ ರಾಮದೇವ್ ಟಿಪ್ಸ್

ಪತಂಜಲಿಯ ಆಯುರ್ವೇದ ಐ ಡ್ರಾಪ್ಸ್ ಕಣ್ಣುಗಳಿಗೆ ಹೇಗೆ ಪ್ರಯೋಜನಕಾರಿ ಎಂಬ ವಿವರ ಈ ಕೆಳಕಂಡಂತಿವೆ:

ದೃಷ್ಟಿ ಸುಧಾರಿಸುತ್ತದೆ

ಹತ್ತಿರ ಅಥವಾ ದೂರದಲ್ಲಿರುವ ವಸ್ತುಗಳು ಸ್ಪಷ್ಟವಾಗಿ ಕಾಣುತ್ತಿಲ್ಲ, ಮಸುಕೆನಿಸುತ್ತಿದ್ದರೆ ನಿಮ್ಮ ದೃಷ್ಟಿ ಕ್ಷೀಣಿಸುತ್ತಿದೆ ಎಂದರ್ಥ. ಆಯುರ್ವೇದ ತಜ್ಞರ ಪ್ರಕಾರ, ನೀವು ಕೆಲವು ವಾರಗಳವರೆಗೆ ನಿರಂತರವಾಗಿ ಕಣ್ಣಿನ ಹನಿಗಳನ್ನು ಬಳಸಿದರೆ, ಹತ್ತಿರದ ಅಥವಾ ದೂರದಲ್ಲಿರುವ ವಸ್ತುಗಳಲ್ಲಿ ನೀವು ಹೊಸ ಹೊಳಪನ್ನು ನೋಡುತ್ತೀರಿ.

ಕಿರಿಕಿರಿಯನ್ನು ದೂರ ಮಾಡುತ್ತದೆ

ಮೊಬೈಲ್ ಅಥವಾ ಕಂಪ್ಯೂಟರ್ ಬೆಳಕಿನಿಂದ ಕಣ್ಣಿನ ಕಿರಿಕಿರಿ ಉಂಟಾದರೆ, ಪರದೆಯನ್ನು ದೀರ್ಘಕಾಲ ನೋಡಿದ ನಂತರ ಕಣ್ಣುಗಳು ಒಣಗುತ್ತವೆ. ಇದರಿಂದಾಗಿ ಕಣ್ಣುಗಳು ಉರಿಯಲು ಪ್ರಾರಂಭಿಸುತ್ತವೆ. ಪತಂಜಲಿ ಐ ಡ್ರಾಪ್​ನ ಒಂದು ಹನಿ ಹಚ್ಚುವುದರಿಂದ, ಕಣ್ಣುಗಳ ಶುಷ್ಕತೆ ಕಡಿಮೆಯಾಗುತ್ತದೆ ಮತ್ತು ನಿರಾಳವಾಗುತ್ತದೆ.

ಕಣ್ಣುಗಳ ಕೆಂಪು ಬಣ್ಣವನ್ನು ನಿವಾರಿಸುತ್ತದೆ

ಧೂಳಿನ ಕಣಗಳು ಕಣ್ಣುಗಳಿಗೆ ಸೇರಿದಾಗ, ಕಣ್ಣುಗಳು ತುರಿಕೆ ಮಾಡಲು ಪ್ರಾರಂಭಿಸುತ್ತವೆ, ಇದರಿಂದಾಗಿ ಕಣ್ಣುಗಳು ಕೆಂಪಾಗುತ್ತವೆ. ಈ ಪತಂಜಲಿ ಐ ಡ್ರಾಪ್ಸ್​ನ ಒಂದು ಹನಿಯನ್ನು ದಿನಕ್ಕೆ ಎರಡು ಬಾರಿ ಎರಡೂ ಕಣ್ಣುಗಳಲ್ಲಿ ಹಾಕುವುದರಿಂದ, ಕಣ್ಣುಗಳ ಕೆಂಪು ಬಣ್ಣವು ಗುಣವಾಗುತ್ತದೆ.

ಕಣ್ಣಿನ ಊತವನ್ನು ನಿವಾರಿಸುತ್ತದೆ

ಮಳೆಗಾಲವಾದ್ದರಿಂದ ಕಣ್ಣಿನ ಸೋಂಕಿನ ಅಪಾಯವೂ ಹೆಚ್ಚಾಗುತ್ತದೆ. ಸೋಂಕಿನಿಂದಾಗಿ ಕಣ್ಣುಗಳು ಊದಿಕೊಳ್ಳುತ್ತವೆ ಮತ್ತು ಸರಿಯಾಗಿ ನೋಡಲು ಸಾಧ್ಯವಾಗುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ನೀವು ಪತಂಜಲಿಯ ಈ ಐ ಡ್ರಾಪ್ಸ್ ಬಳಸಬಹುದು. ಇದು ಸೋಂಕು ಮತ್ತು ಊತವನ್ನು ತೆಗೆದುಹಾಕುತ್ತದೆ.

ಇದನ್ನೂ ಓದಿ: ಚರ್ಮರೋಗಗಳಿಗೆ ಪರಿಹಾರ ಈ ಪತಂಜಲಿ ಔಷಧಿ; ದಿವ್ಯ ಕಾಯಕಲ್ಪ ವಟಿ ಬಳಕೆ ಹೇಗೆ? ಇಲ್ಲಿದೆ ವಿವರ

ದೃಷ್ಟಿ ಕಣ್ಣಿನ ಹನಿ ಎಲ್ಲರಿಗೂ ಪ್ರಯೋಜನಕಾರಿಯೇ?

ಪತಂಜಲಿ ಕಣ್ಣಿನ ಹನಿಗಳು ಆಯುರ್ವೇದ ಔಷಧವೇನೋ ಹೌದು. ಆದರೆ ಇದರ ಅರ್ಥ ಯಾರು ಬೇಕಾದರೂ ಅದನ್ನು ಬಳಸಬೇಕು ಎಂದಲ್ಲ. ಕಣ್ಣಿನ ಹನಿಗಳನ್ನು ಸರಿಯಾಗಿ ಬಳಸುವುದು ಹೇಗೆ? ಪತಂಜಲಿ ಆಯುರ್ವೇದದ ಪ್ರಕಾರ, ದೃಷ್ಟಿ ಕಣ್ಣಿನ ಹನಿಗಳು ಯಾವುದೇ ಅಡ್ಡಪರಿಣಾಮಗಳನ್ನು ಹೊಂದಿಲ್ಲ, ಆದರೆ ಯಾವುದೇ ರೀತಿಯ ಔಷಧವನ್ನು ತಜ್ಞರನ್ನು ಸಂಪರ್ಕಿಸಿದ ನಂತರವೇ ಕಣ್ಣುಗಳಲ್ಲಿ ಬಳಸಬೇಕು. ಕಣ್ಣುಗಳಲ್ಲಿ ಯಾವುದೇ ರೀತಿಯ ಗಾಯವಿದ್ದರೆ ಅಥವಾ ನೀವು ಯಾವುದೇ ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದರೆ, ವೈದ್ಯರ ಅನುಮತಿ ಇಲ್ಲದೇ ದಯವಿಟ್ಟು ಇದನ್ನು ಬಳಸಬೇಡಿ.

ಇನ್ನಷ್ಟು ಆರೋಗ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ