ಹೆಂಡತಿಯಾದವಳು ತನ್ನ ಗಂಡನಿಂದ ಈ ವಿಷಯಗಳನ್ನು ಎಂದಿಗೂ ಮರೆ ಮಾಡಬಾರದು
ಗಂಡ ಹೆಂಡತಿಯ ಸಂಬಂಧ ಎನ್ನುವಂತಹದ್ದು, ತುಂಬಾನೇ ಅಮೂಲ್ಯವಾದದ್ದು. ಈ ಸಂಬಂಧ ಗಟ್ಟಿಯಾಗಿ ನಿಲ್ಲುವುದೇ ಪ್ರೀತಿ, ನಂಬಿಕೆಯ ಆಧಾರದ ಮೇಲೆ. ಗಂಡ ಹೆಂಡತಿಯ ಈ ಬಾಂಧವ್ಯ ಶಾಶ್ವತವಾಗಿರಬೇಕಾದರೆ ಇವರಿಬ್ಬರ ಮಧ್ಯೆ ಯಾವುದೇ ರೀತಿಯ ಮುಚ್ಚುಮರೆ ಇರಬಾರದು. ಅದರಲ್ಲೂ ಹೆಂಡತಿಯಾದವಳು ಈ ಒಂದಷ್ಟು ವಿಷಯಗಳನ್ನು ಗಂಡನಿಂದ ಮುಚ್ಚಿಡಲೇಬಾರದಂತೆ. ಆ ವಿಷಯಗಳು ಯಾವುವು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ಗಂಡ-ಹೆಂಡತಿಯ (Husband and Wife) ಸಂಬಂಧ ನಿಂತಿರುವುದೇ ನಂಬಿಕೆಯ ಆಧಾರದ ಮೇಲೆ. ಇವರಿಬ್ಬರ ನಡುವೆ ಯಾವುದೇ ಮುಚ್ಚುಮರೆ ಇರಬಾರದು. ಪತಿ ಪತ್ನಿ ಯಾವುದೇ ಮುಚ್ಚುಮರೆ ಇಲ್ಲದೆ ಪ್ರತಿಯೊಂದು ವಿಷಯಗಳನ್ನು ಹಂಚಿಕೊಂಡಾಗ ಮಾತ್ರ ಸಂಸಾರ ಸುಸೂತ್ರವಾಗಿ ಸಾಗುತ್ತದೆ. ಹೀಗಿದ್ದರೂ ಕೂಡ ಹೆಂಡತಿ ಗಂಡನಿಂದ, ಗಂಡನಾದವನು ಹೆಂಡತಿಯಿಂದ ಕೆಲವೊಂದಿಷ್ಟು ವಿಚಾರಗಳನ್ನು ಮರೆ ಮಾಡುವಂತಹದ್ದು ನಡೆಯುತ್ತಿರುತ್ತದೆ. ಈ ಅಭ್ಯಾಸ ಖಂಡಿತ ಒಳ್ಳೆಯದಲ್ಲ. ಅದರಲ್ಲೂ ಹೆಂಡತಿಯಾದವಳು ಯಾವುದೇ ಕಾರಣಕ್ಕೂ ತನ್ನ ಗಂಡನಿಂದ ಈ ವಿಷಯಗಳನ್ನು ಮರೆ ಮಾಡಬಾರದಂತೆ. ಅನೇಕ ಮಹಿಳೆಯರು ಗಂಡನಿಗೆ ತಿಳಿಯದಂತೆ ಅನೇಕ ವಿಷಯಗಳನ್ನು ಮರೆಮಾಡುತ್ತಾರೆ. ಇದು ಇಬ್ಬರ ಸಂಬಂಧವನ್ನು ದುರ್ಬಲಗೊಳಿಸುವ ಸಾಧ್ಯತೆ ಇರುತ್ತದೆ. ಆ ವಿಚಾರಗಳು ಯಾವುವು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
ಹೆಂಡತಿಯಾದವಳು ಈ ವಿಚಾರಗಳನ್ನು ಗಂಡನಿಂದ ಮುಚ್ಚಿಡಬಾರದು:
ಹಣದ ವಿಚಾರ: ಹೆಂಡತಿ ತನ್ನ ಸಂಬಳ ಮತ್ತು ಆದಾಯದ ವಿವರಗಳನ್ನು ತನ್ನ ಗಂಡನಿಂದ ಎಂದಿಗೂ ಮರೆಮಾಡಬಾರದು. ಎಲ್ಲಕ್ಕಿಂತ ಮುಖ್ಯವಾಗಿ ಯಾರಿಗಾದರೂ ಸಾಲ ನೀಡಿದರೆ ಅಥವಾ ಯಾರಿಂದಾದರೂ ಸಾಲ ಪಡೆದಿದ್ದರೆ ತಕ್ಷಣ ಆ ವಿಷಯವನ್ನು ಹಂಚಿಕೊಳ್ಳಬೇಕು. ಹಣದ ಬಗ್ಗೆ ಯಾವುದೇ ರಹಸ್ಯವಿಲ್ಲದಿದ್ದರೆ ಮಾತ್ರ ಸಂಬಂಧವು ಉತ್ತಮವಾಗಿರುತ್ತದೆ.
ಚಿಂತೆಗಳು ಮತ್ತು ಭಯದ ವಿಚಾರಗಳು: ಹೆಂಡತಿ ತನ್ನ ಚಿಂತೆಗಳನ್ನು ಗಂಡನಿಂದ ಮರೆಮಾಡಬಾರದು, ತನಗಿರುವ ಭಯದ ಬಗ್ಗೆಯೂ ಗಂಡನಿಂದ ಮರೆ ಮಾಡಬಾರದು. ಇಂತಹ ವಿಚಾರಗಳನ್ನು ಹಂಚಿಕೊಂಡಾಗಲೇ ಭಯ, ಆತಂಕ ಕಡಿಮೆಯಾಗುತ್ತದೆ ಮತ್ತು ಸಂಬಂಧ ಬಲಗೊಳ್ಳುತ್ತದೆ. ಹೀಗೆ ಈ ವಿಚಾರಗಳನ್ನು ಹಂಚಿಕೊಂಡಾಗ ಗಂಡನಿಂದ ನಿಮಗೆ ಬೆಂಬಲವೂ ಸಿಗುತ್ತದೆ.
ಇದನ್ನೂ ಓದಿ: ನಿಮ್ಮ ಈ ವಿಚಾರಗಳನ್ನು ಅಪ್ಪಿತಪ್ಪಿಯೂ ಯಾರೊಂದಿಗೂ ಹಂಚಿಕೊಳ್ಳಬಾರದು ಎನ್ನುತ್ತಾರೆ ಚಾಣಕ್ಯ
ಭಾವನೆಗಳನ್ನು ಮರೆಮಾಡಬಾರದು: ಹೆಚ್ಚಿನ ಹೆಣ್ಣುಮಕ್ಕಳು ತಮ್ಮ ಭಾವನೆಗಳನ್ನು ಗಂಡನಿಂದ ಮರೆ ಮಾಡುತ್ತಾರೆ. ಅವರು ಅವುಗಳನ್ನು ಹಂಚಿಕೊಳ್ಳುವುದಿಲ್ಲ. ಹೀಗೆ ಭಾವನೆಗಳನ್ನು ಮರೆ ಮಾಡುವುದರಿಂದ ಸಂಬಂಧ ದುರ್ಬಲಗೊಳ್ಳುತ್ತದೆ. ಇದರ ಬದಲು ನಿಮ್ಮೆಲ್ಲಾ ಭಾವನೆಗಳನ್ನು ಗಂಡನೊಂದಿಗೆ ಶೇರ್ ಮಾಡಿ, ಇದು ಅವರೂ ನಿಮ್ಮನ್ನು ಅರ್ಥ ಮಾಡಿಕೊಳ್ಳಲು ಅನುವು ಮಾಡಿಕೊಡುತ್ತದೆ. ಜೊತೆಗೆ ಸಂಬಂಧವನ್ನೂ ಬಲಪಡಿಸುತ್ತದೆ.
ಇಷ್ಟಗಳನ್ನು ಮರೆಮಾಡಬಾರದು: ಹೆಚ್ಚಿನ ಮಹಿಳೆಯರು ತಮ್ಮ ಇಷ್ಟಕಷ್ಟಗಳನ್ನು ಗಂಡನೊಂದಿಗೆ ಹಂಚಿಕೊಳ್ಳದೆ ತಮ್ಮೊಳಗೆ ಮರೆ ಮಾಡಿ ಇಟ್ಟುಕೊಳ್ಳುತ್ತಾರೆ. ಹೀಗೆ ನಿಮಗೆ ಯಾವುದು ಇಷ್ಟ ಮತ್ತು ಯಾವುದು ಕಷ್ಟ ಎಂದು ಅವರಿಗೆ ಹೇಳದಿದ್ದರೆ, ನಿಮ್ಮ ಗಂಡನಿಗೆ ನಿಮ್ಮ ಇಷ್ಟಕಷ್ಟಗಳ ಬಗ್ಗೆ ಗೊತ್ತಾಗುವುದಿಲ್ಲ. ಈ ಎಲ್ಲಾ ವಿಚಾರಗಳನ್ನು ಮರೆ ಮಾಡುವ ಬದಲು ಈ ಬಗ್ಗೆ ಗಂಡನೊಂದಿಗೆ ಮುಕ್ತವಾಗಿ ಮಾತನಾಡಿ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








