Chanakya Niti: ವಿವಾಹಿತ ಪುರುಷರು ಈ ಕೆಲಸಗಳನ್ನು ಎಂದಿಗೂ ಮಾಡಬಾರದು ಎನ್ನುತ್ತಾರೆ ಚಾಣಕ್ಯ
ಸಂತೋಷ ಮತ್ತು ಸುಂದರ ದಾಂಪತ್ಯ ಜೀವನಕ್ಕೆ ಸಂಬಂಧಿಸಿ ಹಲವು ಪ್ರಮುಖ ವಿಚಾರಗಳ ಬಗ್ಗೆ ಆಚಾರ್ಯ ಚಾಣಕ್ಯರು ತಿಳಿಸಿಕೊಟ್ಟಿದ್ದಾರೆ. ಅದರಲ್ಲೂ ವಿವಾಹಿತ ಪುರುಷರು ತಮ್ಮ ದಾಂಪತ್ಯದಲ್ಲಿ ಸಾಮರಸ್ಯ, ನಂಬಿಕೆ ಮತ್ತು ಪ್ರೀತಿಯನ್ನು ಕಾಪಾಡಿಕೊಳ್ಳಲು ಈ ಕೆಲವೊಂದಿಷ್ಟು ತಪ್ಪುಗಳನ್ನು ಎಂದಿಗೂ ಮಾಬಾರದು, ಇದರಿಂದ ದಾಂಪತ್ಯ ಜೀವನವೇ ಹಾಳಾಗಬಹುದು ಎಂದು ಎಚ್ಚರಿಸಿದ್ದಾರೆ. ಹಾಗಾದ್ರೆ ಮದುವೆಯಾದ ಗಂಡಸರು ಯಾವೆಲ್ಲಾ ತಪ್ಪುಗಳನ್ನು ಮಾಡಲೇಬಾರದು ಎಂಬುದನ್ನು ನೋಡೋಣ ಬನ್ನಿ.

ದಾಂಪತ್ಯ ಜೀವನ ಎನ್ನುವಂತಹದ್ದು ಪ್ರೀತಿ, ನಂಬಿಕೆ, ವಿಶ್ವಾಸದ ಮೇಲೆ ನಿಂತಿದೆ. ಗಂಡ ಹೆಂಡತಿಯ ನಡುವೆ ಪ್ರೀತಿ, ನಂಬಿಕೆ, ಪ್ರಾಮಾಣಿಕತೆ ಇದ್ದಾಗ ಮಾತ್ರ ದಾಂಪತ್ಯ ಜೀವನವು ಯಶಸ್ವಿಯಾಗಿ ಸಾಗುತ್ತವೆ. ಇದರಲ್ಲಿ ಒಂದು ಸಣ್ಣ ಎಡವಟ್ಟು ಆದ್ರೂ ಕೂಡ ಸಂಸಾರದಲ್ಲಿ ಒಂದಷ್ಟು ಸಮಸ್ಯೆಗಳು ಉದ್ಭವಿಸುತ್ತದೆ. ಅದರಲ್ಲೂ ಗಂಡನಾದವನು ಈ ಕೆಲವು ತಪ್ಪುಗಳನ್ನು ಮಾಡಿದ್ರೆ ಸುಂದರ ದಾಂಪತ್ಯ ಜೀವನವೇ ಹಾಳಾಗುವ ಸಾಧ್ಯತೆ ಇರುತ್ತಂತೆ. ಈ ಬಗ್ಗೆ ಆಚಾರ್ಯ ಚಾಣಕ್ಯರು (Chanakya Niti) ತಮ್ಮ ನೀತಿ ಶಾಸ್ತ್ರದಲ್ಲಿ ತಿಳಿಸಿಕೊಟ್ಟಿದ್ದು, ವಿವಾಹಿತ ಪುರುಷರು ತಮ್ಮ ದಾಂಪತ್ಯದಲ್ಲಿ ಸಾಮರಸ್ಯ, ನಂಬಿಕೆ ಮತ್ತು ಪ್ರೀತಿಯನ್ನು ಕಾಪಾಡಿಕೊಳ್ಳಲು ಬಯಸಿದರೆ ಈ ಕೆಲವೊಂದಿಷ್ಟು ತಪ್ಪುಗಳನ್ನು (mistakes married men should avoid) ಎಂದಿಗೂ ಮಾಡಬಾರದು ಎನ್ನುತ್ತಾರೆ. ಹಾಗಾದ್ರೆ ಮದುವೆಯಾದ ಗಂಡಸರು ಯಾವೆಲ್ಲಾ ತಪ್ಪುಗಳನ್ನು ಮಾಡಲೇಬಾರದು ಎಂಬುದನ್ನು ನೋಡೋಣ ಬನ್ನಿ.
ವಿವಾಹಿತ ಪುರುಷರು ಈ ಕೆಲಸಗಳನ್ನು ಎಂದಿಗೂ ಮಾಡಬಾರದು:
ಹೆಂಡತಿಯ ಬಗ್ಗೆ ಅಗೌರವ ಮತ್ತು ನಿರ್ಲಕ್ಷ್ಯ: ಚಾಣಕ್ಯರ ಪ್ರಕಾರ, ವಿವಾಹಿತ ಪುರುಷನು ತನ್ನ ಹೆಂಡತಿಯನ್ನು ಗೌರವಿಸಬೇಕು ಮತ್ತು ಅವಳ ಭಾವನೆಗಳನ್ನು ನಿರ್ಲಕ್ಷಿಸಬಾರದು. ತನ್ನ ಹೆಂಡತಿಗೆ ಗೌರವ ನೀಡದ ಪುರುಷನು ತನ್ನ ಮನೆಯ ಶಾಂತಿಯನ್ನೇ ಹಾಳುಮಾಡುತ್ತಾನೆ. ಹೌದು ಈ ಗುಣ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿಸುವು ಮಾತ್ರವಲ್ಲದೆ ಕುಟುಂಬದ ನೆಮ್ಮದಿಯನ್ನು ಸಹ ಕೆಡಿಸುತ್ತದೆ. ಹಾಗಾಗಿ ವಿವಾಹಿತ ಪುರುಷರು ತಮ್ಮ ಹೆಂಡತಿಯ ಅಭಿಪ್ರಾಯಗಳನ್ನು ಗೌರವಿಸಬೇಕು, ಅವಳ ಭಾವನೆಗಳನ್ನು ಅರ್ಥಮಾಡಿಕೊಳ್ಳಬೇಕು ಮತ್ತು ಅವಳನ್ನು ಸಮಾನವಾಗಿ ಪರಿಗಣಿಸಬೇಕು.
ದಾಂಪತ್ಯ ದ್ರೋಹ: ನಂಬಿಕೆ ಎನ್ನುವಂತಹದ್ದು ಸಂಬಂಧದ ಕೀಲಿಕೈ. ಆದ್ದರಿಂದ ಯಾವುದೇ ಕಾರಣಕ್ಕೂ ಮದುವೆಯಾದ ಪುರುಷ ತನ್ನ ಹೆಂಡತಿಗೆ ಮೋಸ ಮಾಡಬಾರದು. ಆತನ ತನ್ನ ಹೆಂಡತಿಗೆ ನಿಷ್ಠನಾಗಿರಬೇಕು. ದಾಂಪತ್ಯ ದ್ರೋಹ ಸಂಬಂಧವನ್ನು ಮುರಿಯುವುದಲ್ಲದೆ, ಕುಟುಂಬದ ಅಡಿಪಾಯವನ್ನು ಸಹ ದುರ್ಬಲಗೊಳಿಸುತ್ತದೆ. ಚಾಣಕ್ಯರ ಪ್ರಕಾರ ಒಮ್ಮೆ ಒಡೆದು ಹೋದ ನಂಬಿಕೆಯನ್ನು ಪುನರ್ನಿರ್ಮಿಸುವುದು ತುಂಬಾ ಕಷ್ಟ. ಆದ್ದರಿಂದ, ಪುರುಷರು ತಮ್ಮ ಹೆಂಡತಿಯ ನಂಬಿಕೆಯನ್ನು ಹಾಳುಮಾಡುವ ಯಾವುದೇ ಕೆಲಸವನ್ನು ಮಾಡಬಾರದು
ಕೋಪ ಮತ್ತು ಆತುರದ ನಿರ್ಧಾರ ತೆಗೆದುಕೊಳ್ಳುವುದು: ಕೋಪ ಮನುಷ್ಯನ ದೊಡ್ಡ ಶತ್ರು ಎಂದು ಚಾಣಕ್ಯರು ಹೇಳುತ್ತಾರೆ. ಆದ್ದರಿಂದ, ವಿವಾಹಿತ ಪುರುಷರು ಕೋಪದಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು ತಪ್ಪಿಸಬೇಕು. ಕೋಪದಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು ಹೆಚ್ಚಾಗಿ ತಪ್ಪಾಗಿರುತ್ತವೆ ಮತ್ತು ಸಂಬಂಧವನ್ನು ಹಾಳು ಮಾಡುತ್ತವೆ. ಚಾಣಕ್ಯ ನೀತಿಯ ಪ್ರಕಾರ, ಕೋಪದಲ್ಲಿ ತೆಗೆದುಕೊಳ್ಳುವ ನಿರ್ಧಾರ ಆತ್ಮಹತ್ಯೆಗೆ ಸಮಾನ. ಪುರುಷರು ತಮ್ಮ ಹೆಂಡತಿಯ ಜೊತೆ ಶಾಂತ ರೀತಿಯಲ್ಲಿ ಸಂಭಾಷಣೆ ನಡೆಸಬೇಕು ಮತ್ತು ತಿಳುವಳಿಕೆಯ ಮೂಲಕ ಸಮಸ್ಯೆಗಳನ್ನು ಪರಿಹರಿಸಬೇಕು. ಕಿರುಚುವುದು, ನಿಂದನೀಯ ಪದಗಳನ್ನು ಬಳಸಬಾರದು.
ಇದನ್ನೂ ಓದಿ: ಲೈಫಲ್ಲಿ ಸಕ್ಸಸ್ ಸಿಗ್ಬೇಕಂದ್ರೆ ಚಾಣಕ್ಯರು ಹೇಳಿದ ಈ ತಂತ್ರಗಳನ್ನು ಅನುಸರಿಸಿ
ಜವಾಬ್ದಾರಿಗಳಿಂದ ಓಡಿಹೋಗುವುದು: ವಿವಾಹಿತ ಪುರುಷನು ತನ್ನ ಕುಟುಂಬದ ಜವಾಬ್ದಾರಿಗಳಿಂದ ಓಡಿ ಹೋಗಬಾರದು. ಮಕ್ಕಳನ್ನು ಬೆಳೆಸುವುದಾಗಿರಲಿ, ಮನೆ ಕೆಲಸವನ್ನು ಮಾಡುವುದಾಗಿರಲಿ ಎಲ್ಲಾ ಜವಾಬ್ದಾರಿಗಳನ್ನು ಗಂಡ ಹೆಂಡತಿ ಸಮಾನವಾಗಿ ವಹಿಸಿಕೊಳ್ಳಬೇಕು. ಕುಟುಂಬದ ಬಗ್ಗೆ ನಿರ್ಲಕ್ಷ್ಯ ತೋರಿದರೆ ಸಂಬಂಧಗಳಲ್ಲಿ ಅಂತರ ಸೃಷ್ಟಿಯಾಗುತ್ತದೆ. ಹಾಗಾಗಿ ಮದುವೆಯಾದ ಗಂಡಸು ತನ್ನ ಜವಾಬ್ದಾರಿಗಳಿಂದ ಓಡಿ ಹೋಗಬಾರದು.
ಇತರರೊಂದಿಗೆ ಹೋಲಿಕೆ: ಚಾಣಕ್ಯ ನೀತಿಯ ಪ್ರಕಾರ, ಹೋಲಿಕೆ ಸಂಬಂಧಗಳನ್ನು ಹಾಳು ಮಾಡುತ್ತದೆ. ವಿವಾಹಿತ ಪುರುಷರು ತಮ್ಮ ಹೆಂಡತಿಯರನ್ನು ಇತರ ಮಹಿಳೆಯರೊಂದಿಗೆ ಅಥವಾ ತಮ್ಮ ವೈವಾಹಿಕ ಜೀವನವನ್ನು ಇತರ ದಂಪತಿಗಳೊಂದಿಗೆ ಹೋಲಿಸಬಾರದು. ಪ್ರತಿಯೊಬ್ಬ ವ್ಯಕ್ತಿ ಮತ್ತು ಸಂಬಂಧವು ಭಿನ್ನವಾಗಿರುತ್ತದೆ. ಹೀಗಿರುವಾಗ ನೀವು ನಿಮ್ಮ ಹೆಂಡತಿಯನ್ನು ಇತರೆ ಮಹಿಳೆಯೊಂದಿಗೆ ಹೋಲಿಕೆ ಮಾಡಿದಾಗ ಹೆಂಡತಿಯ ಮನಸ್ಸಲ್ಲಿ ತನ್ನ ಬಗ್ಗೆ ಕೀಳರಿಮೆ ಮತ್ತು ಅಭದ್ರತೆಯ ಭಾವನೆಗಳನ್ನು ಉಂಟುಮಾಡಬಹುದು. ಹಾಗಾಗಿ ಪುರುಷರು ತಮ್ಮ ಹೆಂಡತಿಯ ಸಾಮಾರ್ಥ್ಯವನ್ನು ಗುರುತಿಸಿ ಪ್ರಶಂಸಿಸಬೇಕೇ ಹೊರತು, ಇತರರೊಂದಿಗೆ ಹೋಲಿಕೆ ಮಾಡಬಾರದು.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








