AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Chanakya Niti: ಈ ಜನರಿಗೆ ಸಹಾಯ ಮಾಡುವ ತಪ್ಪನ್ನು ಎಂದಿಗೂ ಮಾಡಬೇಡಿ

ಆಚಾರ್ಯ ಚಾಣಕ್ಯರು ತಮ್ಮ ನೀತಿಯಲ್ಲಿ ದಾಂಪತ್ಯ ಜೀವನ, ಸ್ನೇಹ, ವೃತ್ತಿ ಜೀವನ ಸೇರಿದಂತೆ ನಮ್ಮ ಜೀವನಕ್ಕೆ ಸಂಬಂಧಿಸಿದ ವಿವಿಧ ಅಂಶಗಳ ಬಗ್ಗೆ ತಿಳಿಸಿಕೊಟ್ಟಿದ್ದಾರೆ. ಅದೇ ರೀತಿ ಚಾಣಕ್ಯರು ಈ ಒಂದಷ್ಟು ಜನರಿಗೆ ಸಹಾಯ ಮಾಡಬೇಡಿ, ನೀವೇನಾದ್ರೂ ಅವರಿಗೆ ಸಹಾಯ ಮಾಡಿದ್ರೆ ನಂತರ ವಿಷಾದಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಹಾಗಿದ್ರೆ ಎಂತಹ ಜನರಿಗೆ ಸಹಾಯ ಮಾಡಬಾರದು ಎಂಬುದನ್ನು ನೋಡೋಣ ಬನ್ನಿ.

Chanakya Niti: ಈ ಜನರಿಗೆ ಸಹಾಯ ಮಾಡುವ ತಪ್ಪನ್ನು ಎಂದಿಗೂ ಮಾಡಬೇಡಿ
ಚಾಣಕ್ಯ ನೀತಿImage Credit source: Pinterest
ಮಾಲಾಶ್ರೀ ಅಂಚನ್​
|

Updated on: Sep 17, 2025 | 9:44 AM

Share

ಜೀವನದಲ್ಲಿ ಸಹಾಯ ಮನೋಭಾವವನ್ನು (Helping Nature)  ಬೆಳೆಸಿಕೊಳ್ಳಬೇಕು, ಕಷ್ಟದಲ್ಲಿ ಇರುವವರಿಗೆ ನಿಮ್ಮ ಕೈಲಾದಷ್ಟು ಸಹಾಯವನ್ನು ಮಾಡಬೇಕು ಎಂದೆಲ್ಲಾ ಹೇಳ್ತಾರೆ. ಹಲವರು ತಮ್ಮ ಕಷ್ಟದಲ್ಲಿರುವ ತಮ್ಮ ಸ್ನೇಹಿತರು, ಕುಟುಂಬಸ್ಥರಿಗೆ ಯಾವುದೇ ಸ್ವಾರ್ಥವಿಲ್ಲದೆ ತಮ್ಮ ಕೈಲಾಗುವ ಸಹಾವನ್ನು ಮಾಡುತ್ತಾರೆ. ಒಬ್ಬರಿಗೆ ಸಹಾಯ ಮಾಡುವ ಈ ಗುಣ ತುಂಬಾನೇ ಒಳ್ಳೆಯದು, ಆದರೆ ಒಂದಷ್ಟು ಜನರಿಗೆ ಮಾತ್ರ ಯಾವುದೇ ಕಾರಣಕ್ಕೂ ಸಹಾಯ ಮಾಡಬಾರದು ಎನ್ನುತ್ತಾರೆ ಆಚಾರ್ಯ ಚಾಣಕ್ಯರು (Acharya Chanakya).  ಅವರ ಪ್ರಕಾರ, ಈ ಕೆಲವು ಜನರಿಗೆ ಸಹಾಯ ಮಾಡುವುದು ನಿಷ್ಪ್ರಯೋಜಕವಾಗಿರುವುದಲ್ಲದೆ, ಅದರಿಂದ ನೀವು ವಿಷಾದವನ್ನೂ ಪಡಬೇಕಾಗುತ್ತದೆ.  ಹಾಗಿದ್ದರೆ ಎಂತಹ ಜನರಿಗೆ ಹೆಲ್ಪ್‌ ಮಾಡದಿರುವುದು ಒಳ್ಳೆಯದು ಎಂಬುದರ ಸಂಪೂರ್ಣ ಮಾಹಿತಿಯನ್ನು ತಿಳಿಯಿರಿ.

ಎಂತಹ ಜನರಿಗೆ ಸಹಾಯವನ್ನು ಮಾಡಬಾರದು?

ಕೃತಘ್ನನಾಗಿರದ ವ್ಯಕ್ತಿ: ಚಾಣಕ್ಯರ ಪ್ರಕಾರ, ಕೃತಜ್ಞತೆ ಭಾವವಿರದ ವ್ಯಕ್ತಿಗೆ ಸಹಾಯ ಮಾಡುವುದು ನಿಷ್ಪ್ರಯೋಜಕ. ಅಂತಹ ಜನರು ನಿಮ್ಮಿಂದ ಸಹಾಯವನ್ನು ಸ್ವೀಕರಿಸುತ್ತಾರೆ, ಆದರೆ ಪ್ರತಿಯಾಗಿ ನಿಮಗೆ ಕೃತಘ್ನರಾಗಿರುವುದಿಲ್ಲ ಅಥವಾ ನಿಮಗೆ ನಿಷ್ಠೆಯನ್ನು ತೋರಿಸುವುದಿಲ್ಲ. ಅಂತಹ ಜನರು ನಿಮ್ಮಿಂದ ಸಹಾಯವನ್ನು ಸ್ವೀಕರಿಸಿದ ನಂತರವೂ ನಿಮ್ಮನ್ನು ಅವಮಾನಿಸಬಹುದು ಅಥವಾ ನಿಮ್ಮ ವಿರುದ್ಧ ಕೆಲಸ ಮಾಡಬಹುದು. ಇಂತಹ ಜನಗಳಿಂದ ಹಾನಿಯೇ ಹೆಚ್ಚು. ಹಾಗಾಗಿ ಅವರಿಗೆ ಸಹಾಯವನ್ನು ಮಾಡದಿರುವುದೇ ಒಳ್ಳೆಯದು.

ಸ್ವಾರ್ಥಿ ಮತ್ತು ಮೋಸಗಾರ ವ್ಯಕ್ತಿ: ತಮ್ಮ ಸ್ವಾರ್ಥಕ್ಕಾಗಿ ಮಾತ್ರ ಇತರರನ್ನು ಬಳಸಿಕೊಳ್ಳುವವರಿಗೆ ಸಹಾಯ ಮಾಡದಂತೆ ಚಾಣಕ್ಯ ಸಲಹೆ ನೀಡಿದ್ದಾರೆ. ಇಂತಹ ಸ್ವಾರ್ಥಿ ಜನರು ಸಿಹಿ ಮಾತುಗಳು ಮತ್ತು ಹೊಗಳಿಕೆಯಿಂದ ನಿಮ್ಮನ್ನು ಮೆಚ್ಚಿಸಬಹುದು, ಆದರೆ ಅವರ ಉದ್ದೇಶವು ಯಾವಾಗಲೂ ಮೋಸದಿಂದಲೇ ಕೂಡಿರುತ್ತವೆ. ಹಾಗಾಗಿ ಎಂದಿಗೂ ಸಿಹಿ ಮಾತುಗಳನ್ನಾಡುವವರನ್ನು ಕುರುಡಾಗಿ ನಂಬಬಾರದು ಎಂದು ಚಾಣಕ್ಯ ಹೇಳುತ್ತಾರೆ. ಇಂತಹ ಜನರಿಗೆ ಸಹಾಯ ಮಾಡುವುದರಿಂದ ನಿಮಗೆ ನಷ್ಟವೇ ಹೆಚ್ಚಾಗುತ್ತದೆ.

ಇದನ್ನೂ ಓದಿ
Image
ಹೆಣ್ಮಕ್ಳು ಸಾಧ್ಯವಾದಷ್ಟು ಇಂತಹ ಜನರಿಂದ ದೂರವಿರಬೇಕು
Image
ಮಾನಸಿಕವಾಗಿ ಬಲಿಷ್ಠರಾಗಿರಲು ಚಾಣಕ್ಯರ ಈ ಮಾತುಗಳನ್ನು ತಪ್ಪದೆ ಪಾಲಿಸಿ
Image
ನಿಮ್ಮ ಅತಿಯಾದ ಕೋಪದಿಂದಾಗಿ ಈ ಎಲ್ಲವನ್ನೂ ಕಳೆದುಕೊಳ್ಳಬೇಕಾಗುತ್ತೆ
Image
ಜೀವನದಲ್ಲಿ ಈ ಐದು ಜನರನ್ನು ಯಾವುದೇ ಕಾರಣಕ್ಕೂ ನಂಬಬೇಡಿ

ಮೂರ್ಖ ಮತ್ತು ಅಜ್ಞಾನಿ ವ್ಯಕ್ತಿ: ಮೂರ್ಖನಿಗೆ ಸಹಾಯ ಮಾಡುವುದು ನಿಷ್ಪ್ರಯೋಜಕ ಎಂದು ಚಾಣಕ್ಯರು ಹೇಳುತ್ತಾರೆ. ಏಕೆಂದರೆ ಮೂರ್ಖ ವ್ಯಕ್ತಿಗಳು ನಿಮ್ಮ ಪ್ರಯತ್ನಗಳನ್ನು ಅರ್ಥಮಾಡಿಕೊಳ್ಳುವುದಿಲ್ಲ ಮತ್ತು ಅವುಗಳನ್ನು ಸರಿಯಾಗಿ ಬಳಸಿಕೊಳ್ಳುವುದಿಲ್ಲ. ಒಟ್ಟಿನಲ್ಲಿ ಹೇಳಬೇಕೆಂದರೆ ಮೂರ್ಖನಿಗೆ ಸಹಾಯ ಮಾಡುವುದು ಮರಳಿನಲ್ಲಿ ನೀರನ್ನು ಸುರಿದಂತಿದೆ. ಅಂತಹ ಜನರು ನಿಮ್ಮ ಸಲಹೆ ಅಥವಾ ಸಹಾಯವನ್ನು ದುರುಪಯೋಗಪಡಿಸಿಕೊಳ್ಳುತ್ತಾರೆ. ಕೆಲವೊಮ್ಮೆ ಈ ಸಹಾಯದಿಂದ ನಿಮಗೆ ಹಾನಿಯಾಗುವ ಸಾಧ್ಯತೆಯೂ ಇರುತ್ತದೆ.

ಇದನ್ನೂ ಓದಿ: ಹೆಣ್ಮಕ್ಳು ಸಾಧ್ಯವಾದಷ್ಟು ಇಂತಹ ಜನರಿಂದ ದೂರವಿರಬೇಕು ಎನ್ನುತ್ತಾರೆ ಚಾಣಕ್ಯ

ನಕಾರಾತ್ಮಕ ಮತ್ತು ಕೆಟ್ಟ ಮನಸ್ಸಿನ ಜನರು: ನಕಾರಾತ್ಮಕ ಆಲೋಚನೆಗಳನ್ನು ಹೊಂದಿರುವವರು ಅಥವಾ ಕೆಟ್ಟ ಸ್ವಭಾವವನ್ನು ಹೊಂದಿರುವವರಿಗೆ ಸಹಾಯ ಮಾಡಬಾರದು ಎಂದು ಚಾಣಕ್ಯರು ಹೇಳುತ್ತಾರೆ.  ಏಕೆಂದರೆ ಅಂತಹ ಜನರು ಇತರರಿಗೆ ಒಳ್ಳೆಯದನ್ನು ಬಯಸುವುದಿಲ್ಲ, ನಿಮ್ಮ ಸಹಾಯವನ್ನು ಅವರು  ತಮ್ಮ ಸ್ವಾರ್ಥಕ್ಕಾಗಿ ಮತ್ತು ಕೆಟ್ಟ ಉದ್ದೇಶಗಳಿಗಾಗಿ ಬಳಸಬಹುದು. ಮತ್ತು ಅವರಿಗೆ ಸಹಾಯ ಮಾಡುವುದರಿಂದ ನಿಮ್ಮ ಸಮಯ ಮತ್ತು ಸಂಪನ್ಮೂಲ ಎರಡೂ ವ್ಯರ್ಥವಾಗಬಹುದು.

ಸೋಮಾರಿ ಮತ್ತು ಬೇಜವಾಬ್ದಾರಿ ವ್ಯಕ್ತಿ: ಸೋಮಾರಿಗಳು, ಬೇಜವಾಬ್ದಾರಿತನವನ್ನು ತೋರುವ ವ್ಯಕ್ತಿಗಳಿಗೆ ಸಹಾಯ ಮಾಡುವುದು ವ್ಯರ್ಥ ಎನ್ನುತ್ತಾರೆ ಆಚಾರ್ಯ ಚಾಣಕ್ಯರು. ಈ ಸೋಮಾರಿ ಜನರು ಸಮಸ್ಯೆಗಳು ಎದುರಾದಾಗ ಅದನ್ನು ತಾವೇ ಪರಿಹರಿಸಿಕೊಳ್ಳುವುದಿಲ್ಲ, ಇತರರನ್ನು ಅವಲಂಬಿಸುತ್ತಾರೆ.  ಇಂತಹ ಸೋವಾರಿಗಳಿಗೆ ನೀವು ಪದೇ ಪದೇ  ಸಹಾಯ ಮಾಡಿದರೆ ಅವರು ಸ್ವಾವಲಂಬಿಗಳಾಗುವ ಬದಲು, ಅವರು ನಿಮ್ಮ ಮೇಲೆ ಇನ್ನಷ್ಟು ಅವಲಂಬಿತರಾಗುತ್ತಾರೆ. ಇದು ನಿಮ್ಮ ಸಮಯವನ್ನು ವ್ಯರ್ಥ ಮಾಡುವುದಲ್ಲದೆ, ಅವರ ಪ್ರಗತಿಗೂ ಅಡ್ಡಿಯಾದಂತೆ. ಹಾಗಾಗಿ ಸೋಮಾರಿಗಳಿಗೆ ಎಂದಿಗೂ ಸಹಾಯ ಮಾಡಬೇಡಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Malashree anchan
Malashree anchan

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವಳು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
9 ಗಂಟೆ ಕಾರ್ಯಾಚರಣೆ ಬಳಿಕ ಬೋರ್​​ವೆಲ್​ನಿಂದ 4 ವರ್ಷದ ಬಾಲಕನ ರಕ್ಷಣೆ!
9 ಗಂಟೆ ಕಾರ್ಯಾಚರಣೆ ಬಳಿಕ ಬೋರ್​​ವೆಲ್​ನಿಂದ 4 ವರ್ಷದ ಬಾಲಕನ ರಕ್ಷಣೆ!
ಬಿಸಿಸಿಐನ ರೋಬೋ ಶ್ವಾನ ಚಂಪಕ್ ಮೇಲೆ ಕೊಹ್ಲಿ ಅಸಮಾಧಾನ
ಬಿಸಿಸಿಐನ ರೋಬೋ ಶ್ವಾನ ಚಂಪಕ್ ಮೇಲೆ ಕೊಹ್ಲಿ ಅಸಮಾಧಾನ
ಲಕ್ಕುಂಡಿಯಲ್ಲಿ ಪತ್ತೆಯಾಗಿದ್ದ ನಿಧಿ ಮೌಲ್ಯ 8 ಕೋಟಿ ರೂ
ಲಕ್ಕುಂಡಿಯಲ್ಲಿ ಪತ್ತೆಯಾಗಿದ್ದ ನಿಧಿ ಮೌಲ್ಯ 8 ಕೋಟಿ ರೂ
ತಮಿಳು ನಟ ಜಯಂ ರವಿ ಕಣ್ಣೀರು, ಆಕ್ರೋಶ: ಆಗಿದ್ದೇನು? ವಿಡಿಯೋ ನೋಡಿ
ತಮಿಳು ನಟ ಜಯಂ ರವಿ ಕಣ್ಣೀರು, ಆಕ್ರೋಶ: ಆಗಿದ್ದೇನು? ವಿಡಿಯೋ ನೋಡಿ
ಝಲ್ಮುರಿ ಇಲ್ಲಿಗೂ ತಲುಪಿತೇ? ಮೋದಿ ಪ್ರಶ್ನೆಗೆ ಭಾರತೀಯ ವಲಸಿಗರ ಕರತಾಡನ
ಝಲ್ಮುರಿ ಇಲ್ಲಿಗೂ ತಲುಪಿತೇ? ಮೋದಿ ಪ್ರಶ್ನೆಗೆ ಭಾರತೀಯ ವಲಸಿಗರ ಕರತಾಡನ
ಹಾವೇರಿ: ಸಿನಿಮೀಯ ಶೈಲಿಯಲ್ಲಿ ಕಳ್ಳತನ; ಲಕ್ಷಾಂತರ ಮೌಲ್ಯದ ಚಿನ್ನಾಭರಣ ಲೂಟಿ
ಹಾವೇರಿ: ಸಿನಿಮೀಯ ಶೈಲಿಯಲ್ಲಿ ಕಳ್ಳತನ; ಲಕ್ಷಾಂತರ ಮೌಲ್ಯದ ಚಿನ್ನಾಭರಣ ಲೂಟಿ
ಪ್ರಧಾನಿ ಮೋದಿಗೆ ಹೇಗ್‌ನಲ್ಲಿ ಯುವ ಕಲಾವಿದರಿಂದ ಸಂಗೀತ, ನೃತ್ಯದ ಸ್ವಾಗತ
ಪ್ರಧಾನಿ ಮೋದಿಗೆ ಹೇಗ್‌ನಲ್ಲಿ ಯುವ ಕಲಾವಿದರಿಂದ ಸಂಗೀತ, ನೃತ್ಯದ ಸ್ವಾಗತ
ಭೀಕರ ಅಪಘಾತ; ಫುಟ್‌ಪಾತ್‌ಗೆ ನುಗ್ಗಿದ ಕಾರು, ಮಗು ಸೇರಿ ಮೂವರಿಗೆ ಗಂಭೀರ ಗಾಯ
ಭೀಕರ ಅಪಘಾತ; ಫುಟ್‌ಪಾತ್‌ಗೆ ನುಗ್ಗಿದ ಕಾರು, ಮಗು ಸೇರಿ ಮೂವರಿಗೆ ಗಂಭೀರ ಗಾಯ
ಜೆ.ಪಿ. ಪಾರ್ಕ್ ಫ್ಲೈಓವರ್ ಕೆಳಗೆ ಕಸದ ರಾಶಿ! GBA ನಿದ್ದೆ ಜಾರಿದೆಯೇ?
ಜೆ.ಪಿ. ಪಾರ್ಕ್ ಫ್ಲೈಓವರ್ ಕೆಳಗೆ ಕಸದ ರಾಶಿ! GBA ನಿದ್ದೆ ಜಾರಿದೆಯೇ?
ಸಿದ್ದರಾಮಯ್ಯ ಬಿಟ್ರೆ CM ಆಗುವ ಅರ್ಹತೆ ಖರ್ಗೆಗೆ ಮಾತ್ರ: ರಾಯರೆಡ್ಡಿ
ಸಿದ್ದರಾಮಯ್ಯ ಬಿಟ್ರೆ CM ಆಗುವ ಅರ್ಹತೆ ಖರ್ಗೆಗೆ ಮಾತ್ರ: ರಾಯರೆಡ್ಡಿ