Chanakya Niti: ನಿಮ್ಮ ಅತಿಯಾದ ಕೋಪದಿಂದಾಗಿ ಈ ಎಲ್ಲವನ್ನೂ ಕಳೆದುಕೊಳ್ಳಬೇಕಾಗುತ್ತೆ, ಜೋಕೆ
ಆಚಾರ್ಯ ಚಾಣಕ್ಯರು ರಾಜಕೀಯ ನೀತಿಗಳು ಮಾತ್ರವಲ್ಲದೆ ನಮ್ಮ ಜೀವನಕ್ಕೆ ಸಂಬಂಧಿಸಿದ ಹಲವಾರು ವಿಷಯಗಳ ಬಗ್ಗೆ ತಮ್ಮ ನೀತಿಶಾಸ್ತ್ರದಲ್ಲಿ ತಿಳಿಸಿಕೊಟ್ಟಿದ್ದಾರೆ. ದಾಂಪತ್ಯ, ಸ್ನೇಹ, ವೃತ್ತಿ ಜೀವನ, ಯಶಸ್ಸು ಸೇರಿದಂತೆ ಹಲವು ವಿಚಾರಗಳ ಬಗ್ಗೆ ಹೇಳಿದ್ದಾರೆ. ಅದೇ ರೀತಿ ಅವರು ಮನುಷ್ಯ ಏಕೆ ಕೋಪ ಮಾಡಿಕೊಳ್ಳಬಾರದು, ಅತಿಯಾದ ಕೋಪದಿಂದಾಗುವ ನಷ್ಟಗಳೇನು ಎಂಬ ಬಗ್ಗೆಯೂ ಚಾಣಕ್ಯರು ತಿಳಿಸಿಕೊಟ್ಟಿದ್ದಾರೆ.

ಕೋಪವನ್ನು (anger) ಮನುಷ್ಯನ ದೊಡ್ಡ ದೌರ್ಬಲ್ಯವೆಂದು ಹೇಳಲಾಗುತ್ತದೆ. ಅತಿಯಾದ ಕೋಪ ಎಂದಿಗೂ ಒಳ್ಳೆಯದಲ್ಲ, ಒಂದು ನಿಮಿಷದ ಕೋಪ ಒಂದು ಸಂಬಂಧ, ಒಬ್ಬರ ಜೀವನವನ್ನೇ ಹಾಳು ಮಾಡಿಬಿಡುತ್ತದೆ. ಆಚಾರ್ಯ ಚಾಣಕ್ಯರು (Acharya Chanakya) ಸಹ ಈ ಕೋಪದ ಬಗ್ಗೆ ತಮ್ಮ ನೀತಿಶಾಸ್ತ್ರದಲ್ಲಿ ತಿಳಿಸಿಕೊಟ್ಟಿದ್ದಾರೆ. ಅವರು ಹೇಳುತ್ತಾರೆ ಕೋಪವೇ ಮನುಷ್ಯನ ಅತಿದೊಡ್ಡ ಶತ್ರು, ಕೋಪದಿಂದಾಗಿ ಜೀವನದಲ್ಲಿ ಈ ಎಲ್ಲವನ್ನು ಕಳೆದುಕೊಳ್ಳಬೇಕಾಗುತ್ತದೆ, ಅತಿಯಾದ ಕೋಪ ಎಂದಿಗೂ ಒಳ್ಳೆಯದಲ್ಲವೆಂದು. ಹಾಗಿದ್ರೆ ಚಾಣಕ್ಯರು ಹೇಳಿರುವ ಪ್ರಕಾರ ಅತಿಯಾದ ಕೋಪದಿಂದಾಗಿ ಏನೆಲ್ಲಾ ತೊಂದರೆಗಳಾಗುತ್ತದೆ ಎಂಬುದನ್ನು ನೋಡೋಣ ಬನ್ನಿ.
ಅತಿಯಾದ ಕೋಪದಿಂದಾಗುವ ಸಮಸ್ಯೆಗಳು: ಸಂಬಂಧಗಳಲ್ಲಿ ಅಂತರ ಸೃಷ್ಟಿಯಾಗುತ್ತದೆ: ಕೋಪ ಮಾಡಿಕೊಂಡಾಗ ಒಬ್ಬ ವ್ಯಕ್ತಿಯು ತನ್ನ ಪ್ರೀತಿಪಾತ್ರರನ್ನು ನೋಯಿಸುತ್ತಾನೆ. ಕೋಪದಲ್ಲಿ ಮಾತನಾಡುವ ಕಠಿಣ ಮಾತುಗಳು ಸಂಬಂಧಗಳ ಅಡಿಪಾಯವನ್ನು ಬುಡಮೇಲು ಮಾಡುತ್ತದೆ. ಹೀಗೆ ಕೋಪದಲ್ಲಾಡಿದ ಮಾತುಗಳೇ ಸಂಬಂಧದಲ್ಲಿ ಅಂತರವನ್ನು ಸೃಷ್ಟಿಸುತ್ತದೆ.
ವೃತ್ತಿಜೀವನದಲ್ಲಿನ ಅಡೆತಡೆಗಳು: ಕೋಪದಲ್ಲಿ, ಒಬ್ಬ ವ್ಯಕ್ತಿಯು ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾನೆ, ಅದು ಅವನ ವೃತ್ತಿಜೀವನಕ್ಕೆ ಒಂದು ಕಪ್ಪು ಚುಕ್ಕೆಯಂತಾಗುತ್ತದೆ. ಅತಿಯಾಗಿ ಕೋಪಗೊಳ್ಳುವ ವ್ಯಕ್ತಿಯನ್ನು ಕೆಲಸದ ಸ್ಥಳದಲ್ಲಿ ವಿಶ್ವಾಸಾರ್ಹ ವ್ಯಕ್ತಿ ಎಂದು ಪರಿಗಣಿಸಲಾಗುವುದಿಲ್ಲ. ಅಂತಹ ಜನರು ನಾಯಕತ್ವದ ಜವಾಬ್ದಾರಿಯನ್ನು ಎಂದಿಗೂ ಪೂರೈಸಲು ಸಾಧ್ಯವಾಗುವುದಿಲ್ಲ ಎನ್ನುತ್ತಾರೆ ಚಾಣಕ್ಯ.
ಗೌರವ ಕಳೆದುಕೊಳ್ಳಬೇಕಾಗುತ್ತದೆ: ಪದೇ ಪದೇ ಕೋಪಗೊಳ್ಳುವುದರಿಂದ ಸಮಾಜದಲ್ಲಿ ಆ ವ್ಯಕ್ತಿಯ ಇಮೇಜ್ ಹಾಳಾಗುತ್ತದೆ. ಜನರು ಅಂತಹ ವ್ಯಕ್ತಿಯಿಂದ ಸಾಧ್ಯವಾದಷ್ಟು ದೂರವಿರಲು ಪ್ರಾರಂಭಿಸುತ್ತಾರೆ ಮತ್ತು ಅತಿಯಾಗಿ ಕೋಪ ಮಾಡಿಕೊಳ್ಳುವವರ ಗೌರವವೂ ಕ್ರಮೇಣ ಕಡಿಮೆಯಾಗುತ್ತದೆ ಹೀಗೆ ಕೋಪದಲ್ಲಿ ಮನಸ್ಸಿಗೆ ನೋವುಂಟು ಮಾಡುವ ವ್ಯಕ್ತಿಗಳೊಂದಿಗೆ ಯಾರು ಇರಲು ಇಷ್ಟಪಡುವುದಿಲ್ಲ. ಈ ಪರಿಸ್ಥಿತಿಯು ಆ ವ್ಯಕ್ತಿಯನ್ನು ಒಂಟಿತನದತ್ತ ತಳ್ಳುತ್ತದೆ ಎಂದು ಚಾಣಕ್ಯ ಹೇಳುತ್ತಾರೆ.
ಮಾನಸಿಕ ಶಾಂತಿ ಕಳೆದುಕೊಳ್ಳಬೇಕಾಗುತ್ತದೆ: ಕೋಪವು ಒಬ್ಬ ವ್ಯಕ್ತಿಯ ಮಾನಸಿಕ ನೆಮ್ಮದಿಯನ್ನೇ ಹಾಲು ಮಾಡಿಬಿಡುತ್ತದೆ. ಹೌದು ಅತಿಯಾದ ಕೋಪದಿಂದಾಗಿ ಮಾನಸಿಕ ಶಾಂತಿ ಹಾಳಾಗುತ್ತದೆ. ಮತ್ತು ಇದು ಒತ್ತಡ, ಆತಂಕ, ಮಾನಸಿಕ ಅಸ್ಥಿರತೆಯನ್ನು ಹೆಚ್ಚಿಸುತ್ತದೆ. ಕಾಲಾನಂತರದಲ್ಲಿ ಇದು ಆರೋಗ್ಯದ ಮೇಲೂ ನಕಾರಾತ್ಮಕ ಪರಿಣಾಮ ಬೀರುತ್ತದೆ ಎನ್ನುತ್ತಾರೆ ಚಾಣಕ್ಯ.
ಇದನ್ನೂ ಓದಿ: ಜೀವನದಲ್ಲಿ ಈ ಐದು ಜನರನ್ನು ಯಾವುದೇ ಕಾರಣಕ್ಕೂ ನಂಬಬೇಡಿ; ಯಾಕೆ ಗೊತ್ತಾ?
ತಪ್ಪು ನಿರ್ಧಾರಗಳು ಮತ್ತು ವಿಷಾದಗಳು: ಅತಿಯಾಗಿ ಕೋಪಗೊಂಡಾಗ ವ್ಯಕ್ತಿಯ ಯೋಚಿಸುವ ಮತ್ತು ಅರ್ಥಮಾಡಿಕೊಳ್ಳುವ ಸಾಮರ್ಥ್ಯ ಕಳೆದುಹೋಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು ತಪ್ಪಾಗಿಯೇ ಇರುತ್ತದೆ. ಈ ತಪ್ಪು ನಿರ್ಧಾರಗಳು ಸಂಬಂಧವನ್ನು ಹಾಳು ಮಾಡುತ್ತವೆ, ವೃತ್ತಿ ಜೀವನಕ್ಕೆ ಹೊಡೆತ ನೀಡುತ್ತದೆ. ಇದರಿಂದಾಗಿ ನಂತರ ವಿಷಾದ ಪಡಬೇಕಾಗುತ್ತದೆ. ಹಾಗಾಗಿ ಎಂದಿಗೂ ಅತಿಯಾದ ಕೋಪ ಒಳ್ಳೆಯದಲ್ಲ, ಕೋಪ ಮಾಡಿಕೊಂಡರೂ ನಿಯಂತ್ರಣವನ್ನು ಕಳೆದುಕೊಳ್ಳಬಾರದು ಎನ್ನುತ್ತಾರೆ ಚಾಣಕ್ಯ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








