AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹುಡುಗಿಯರೇ ನಿಮ್ಮ ಸಂಗಾತಿಗೆ ಕಿಸ್​​ ಮಾಡುವ ಮುನ್ನ ಎಚ್ಚರ, ತುಟಿಯಲ್ಲಿ ಈ ಸಮಸ್ಯೆ ಕಾಣಿಸಬಹುದು

ದೈಹಿಕ ಸಂಪರ್ಕದ ಸಮಯದಲ್ಲಿ ಅಥವಾ ಪ್ರೀತಿಸುವ ಯುವ ಮನಸ್ಸುಗಳು ಕಿಸ್​​ ಮಾಡುವ ಮುನ್ನ ಈ ಎಚ್ಚರಿಕೆಯನ್ನು ವಹಿಸಬೇಕು. ಒಂದು ಭಾರಿ ಸಂತೋಷ ನೀಡುವ ಈ ಚುಂಬನ ದೊಡ್ಡ ಸಮಸ್ಯೆಯನ್ನು ತರಬಹುದು. ಅದರಲ್ಲೂ ಹುಡುಗಿಯರು ಈ ಬಗ್ಗೆ ತಿಳಿದುಕೊಳ್ಳಲೇಬೇಕು. ಚುಂಬನದಿಂದ ನಿಮ್ಮ ತುಟಿ ಬಹುದೊಡ್ಡ ತೊಂದರೆಯನ್ನು ಎದುರಿಸಬಹುದು.

ಹುಡುಗಿಯರೇ ನಿಮ್ಮ ಸಂಗಾತಿಗೆ ಕಿಸ್​​ ಮಾಡುವ ಮುನ್ನ ಎಚ್ಚರ, ತುಟಿಯಲ್ಲಿ ಈ ಸಮಸ್ಯೆ ಕಾಣಿಸಬಹುದು
ಸಾಂದರ್ಭಿಕ ಚಿತ್ರ
ಮಾಲಾಶ್ರೀ ಅಂಚನ್​
| Updated By: ಸಾಯಿನಂದಾ|

Updated on: Sep 11, 2025 | 6:21 PM

Share

ಪ್ರೀತಿಯಲ್ಲಿ ಚುಂಬನ (kissing) ಅಥವಾ ಕಿಸ್​​​ ಸಹಜ, ವಿದೇಶಿ ಸಂಸ್ಕೃತಿಯಾದರೂ, ಇದನ್ನು ಕೆಲವರು ಫ್ಯಾಷನ್​​ ಆಗಿ ಪರಿಗಣಿಸಿದ್ದಾರೆ, ಆದರೆ ನೀವು ಪ್ರೀತಿ ಮಾಡಿದ ವ್ಯಕ್ತಿಗೆ ಕಿಸ್​​​ ಮಾಡುವ ಮುನ್ನ ಕೆಲವೊಂದು ವಿಚಾರವನ್ನು ತಿಳಿದುಕೊಳ್ಳಬೇಕು. ಅದರಲ್ಲೂ ಹುಡುಗಿಯರು ಈ ಬಗ್ಗೆ ಹೆಚ್ಚು ಕಾಳಜಿಯಿಂದ ಇರಬೇಕು. ಹೆಣ್ಣಿನ ತುಟಿಗಳು ತುಂಬಾ ಸೂಕ್ಷ್ಮವಾಗಿರುತ್ತದೆ. ಆ ಕಾರಣಕ್ಕೆ ಕಿಸ್​​​ ಮಾಡುವ ಮೊದಲು ಕೆಲವೊಂದು ಎಚ್ಚರಿಕೆಯನ್ನು ವಹಿಸಬೇಕು. ಇದರಲ್ಲೂ ದೀರ್ಘಕಾಲದವರೆಗೆ ಕಿಸ್​​ ಮಾಡಿದ್ರೆ ಅದು ಅಪಾಯವನ್ನು ಉಂಟು ಮಾಡಬಹುದು. ಇದೇ ಕಾರಣದಿಂದ ಅನೇಕ ಹುಡುಗಿಯರು ಮಧುಚಂದ್ರದ ಅವಧಿಯಲ್ಲಿ ತುಟಿಗಳ ಊತ ಅಥವಾ ಕಿರಿಕಿರಿಯಂತಹ ಸಮಸ್ಯೆಗಳನ್ನು ಎದುರಿಸುವುದಿದೆ.

ತುಟಿಗಳು ಏಕೆ ಸೂಕ್ಷ್ಮ:

ದೇಹದ ಉಳಿದ ಭಾಗಗಳಿಗೆ ಹೋಲಿಸಿದರೆ ತುಟಿಗಳ ಚರ್ಮವು ತುಂಬಾ ತೆಳ್ಳಗಿರುತ್ತದೆ ಮತ್ತು ಬೆವರು ಗ್ರಂಥಿಗಳನ್ನು ಹೊಂದಿರುವುದಿಲ್ಲ. ಈ ಕಾರಣದಿಂದಾಗಿ ಅವು ಬೇಗನೆ ಒಣಗುತ್ತವೆ.  ಯಾವುದೇ ಬಾಹ್ಯ ಒತ್ತಡ ಅಥವಾ ದೀರ್ಘ ಚುಂಬನವು ಅವುಗಳನ್ನು ಹಾನಿಗೊಳಿಸುತ್ತದೆ. ಚುಂಬನದಿಂದ ತುಟಿಗಳು ಒಡೆದು ಹೋಗಬಹುದು, ಊತದಂತಹ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.

ಚುಂಬನದ ಅಡ್ಡಪರಿಣಾಮಗಳು

ತುಟಿಗಳಲ್ಲಿ ಶುಷ್ಕತೆ: ದೀರ್ಘಕಾಲ ಚುಂಬಿಸುವುದರಿಂದ ತುಟಿಗಳ ತೇವಾಂಶ ಕಡಿಮೆಯಾಗುತ್ತದೆ ಮತ್ತು ಅವು ಒಣಗಿ ನಿರ್ಜೀವವಾಗಿ ಕಾಣಲು ಪ್ರಾರಂಭಿಸುತ್ತವೆ.

ಇದನ್ನೂ ಓದಿ
Image
ರಾತ್ರಿ ಬ್ರಾ ಧರಿಸಿ ಮಲಗುವುದು ನಿಜಕ್ಕೂ ಹಾನಿಕರವೇ?
Image
ರಕ್ತದಲ್ಲಿನ ಸಕ್ಕರೆ ಮಟ್ಟ ಕಡಿಮೆಯಾಗಿರುವುದನ್ನು ಪತ್ತೆ ಮಾಡುವುದು ಹೇಗೆ?
Image
ಕಿವಿಯಲ್ಲಿ ಆಗ್ಗಾಗೆ ಉಂಟಾಗುವ ಅಡಚಣೆ ನಿವಾರಿಸುವುದು ಹೇಗೆ?
Image
ಸುಖ ನಿದ್ರೆಗೆ ಡಾ. ಜನೈನ್ ಬೌರಿಂಗ್ ಹೇಳಿರುವ ಈ ಸಲಹೆ ಪಾಲಿಸಿ

ಚರ್ಮದ ಬಿರುಕು: ತೆಳುವಾದ ಚರ್ಮದಿಂದಾಗಿ, ಅತಿಯಾದ ಒತ್ತಡ ಅಥವಾ ದೀರ್ಘ ಚುಂಬನದಿಂದಾಗಿ ತುಟಿಗಳು ಬಿರುಕು ಬಿಡಬಹುದು.

ತುಟಿಗಳಲ್ಲಿ ಊರಿ: ಧೂಮಪಾನ ಅಥವಾ ತಂಬಾಕು ತಿನ್ನುವ ಸಂಗಾತಿಯೊಂದಿಗೆ ಚುಂಬನ ಮಾಡುವುದರಿಂದ ತುಟಿಗಳಲ್ಲಿ ಉರಿ ಮತ್ತು ತುರಿಕೆ ಉಂಟಾಗಬಹುದು.

ತುಟಿಗಳ ಊತ : ಆಳವಾದ ಚುಂಬನದ ನಂತರ, ತುಟಿಗಳ ಮೇಲೆ ಸೌಮ್ಯ ಅಥವಾ ತೀವ್ರವಾದ ಊತ ಉಂಟಾಗಬಹುದು.

ಕೆಟ್ಟ ಮನಸ್ಥಿತಿ : ಒಂದು ಸಣ್ಣ ಮುತ್ತು ಮನಸ್ಥಿತಿಯನ್ನು ಸುಧಾರಿಸಿದರೆ, ಬಹಳ ದೀರ್ಘ ಮುತ್ತು ತುಟಿಗಳ ನರಗಳನ್ನು ಆಯಾಸಗೊಳಿಸುತ್ತದೆ ಹಾಗೂ ಮನಸ್ಥಿತಿಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ.

ಉಸಿರಾಟದ ತೊಂದರೆ : 2 ನಿಮಿಷಗಳಿಗಿಂತ ಹೆಚ್ಚು ಕಾಲ ನಿರಂತರವಾಗಿ ಚುಂಬಿಸುವುದರಿಂದ ಉಸಿರಾಟದ ತೊಂದರೆ ಉಂಟಾಗುತ್ತದೆ.

ಸೋಂಕಿನ ಅಪಾಯ:

ಮೌಖಿಕ ನೈರ್ಮಲ್ಯ ಚೆನ್ನಾಗಿಲ್ಲದಿದ್ದರೆ, ಹರ್ಪಿಸ್ ಮತ್ತು ಬ್ಯಾಕ್ಟೀರಿಯಾದ ಸೋಂಕಿನ ಅಪಾಯ ಹೆಚ್ಚಾಗುತ್ತದೆ.

ಇದನ್ನೂ ಓದಿ: ರಾತ್ರಿ ಬ್ರಾ ಧರಿಸಿ ಮಲಗುವುದು ನಿಜಕ್ಕೂ ಹಾನಿಕರವೇ? ಸತ್ಯಾಸತ್ಯತೆ ತಿಳಿಯಿರಿ

ಇದರಿಂದ ಪರಿಹಾರ ಪಡೆಯುವುದು ಹೇಗೆ?

ತಣ್ಣನೆಯ ಹತ್ತಿ ಪ್ಯಾಡ್: ತುಟಿಗಳ ಮೇಲೆ ತಣ್ಣನೆಯ ಪ್ಯಾಡ್ ಇಡುವುದರಿಂದ ತಕ್ಷಣ ಪರಿಹಾರ ಸಿಗುತ್ತದೆ.

ಕ್ರೀಮ್ ಅಥವಾ ಲಿಪ್ ಬಾಮ್: ತೇವಾಂಶವನ್ನು ಮರಳಿ ತರಲು ಮನೆಯಲ್ಲಿ ತಯಾರಿಸಿದ ಕ್ರೀಮ್ ಅಥವಾ ಮಾಯಿಶ್ಚರೈಸಿಂಗ್ ಲಿಪ್ ಬಾಮ್ ಅನ್ನು ಹಚ್ಚಿ.

ದ್ರವ ಆಹಾರ: ಹೆಚ್ಚು ನೀರು ಕುಡಿಯಿರಿ ಮತ್ತು ಹೈಡ್ರೇಟೆಡ್ ಆಗಿರಿ.

ಪ್ರಿಸ್ಕೂಲ್ ಇಲ್ಲದೆ ದೊರೆಯುವ ಔಷಧಿ: ತೀವ್ರ ಊತ ಉಂಟಾದರೆ, ವೈದ್ಯರ ಸಲಹೆಯ ಮೇರೆಗೆ ನೀವು ಔಷಧಿ ತೆಗೆದುಕೊಳ್ಳಬಹುದು.

ಸ್ವಲ್ಪ ಸಮಯದವರೆಗೆ ಚುಂಬನ ಮಾಡುವುದನ್ನು ಅಥವಾ ಅಲರ್ಜಿ ಉತ್ಪನ್ನಗಳನ್ನು ಬಳಸುವುದನ್ನು ತಪ್ಪಿಸಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ