AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೈಪೊಗ್ಲಿಸಿಮಿಯಾನಿಂದ ಕುಸಿದು ಬಿದ್ದ ಸ್ವೀಡನ್‌ನ ಆರೋಗ್ಯ ಸಚಿವೆ, ರಕ್ತದಲ್ಲಿನ ಸಕ್ಕರೆ ಮಟ್ಟ ಕಡಿಮೆಯಾಗಿರುವುದನ್ನು ಪತ್ತೆ ಮಾಡುವುದು ಹೇಗೆ?

ಸ್ವೀಡನ್‌ನ ಹೊಸದಾಗಿ ನೇಮಕಗೊಂಡ ಆರೋಗ್ಯ ಸಚಿವೆ ಎಲಿಸಬೆಟ್ ಲ್ಯಾನ್​​ ಪತ್ರಿಕಾಗೋಷ್ಠಿ ನಡೆಸುವ ವೇಳೆ ಇದ್ದಕ್ಕಿದ್ದಂತೆ ವೇದಿಕೆಯಲ್ಲಿ ಕುಸಿದು ಬಿದ್ದಿದ್ದಾರೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟ ಕಡಿಮೆಯಾಗಿರುವ ಕಾರಣ ಅವರು ಕುಸಿದು ಬಿದ್ದಿದ್ದಾರೆ. ರಕ್ತದಲ್ಲಿನ ಸಕ್ಕರೆ ಮಟ್ಟ ಕಡಿಮೆ ಆಗಲು ಕಾರಣ ಏನು? ಯಾರಿಗೆಲ್ಲ ಇದರ ಸಮಸ್ಯೆ ಕಾಡುತ್ತದೆ ಎಂಬುದನ್ನು ಇಲ್ಲಿ ಹೇಳಲಾಗಿದೆ.

ಹೈಪೊಗ್ಲಿಸಿಮಿಯಾನಿಂದ ಕುಸಿದು ಬಿದ್ದ ಸ್ವೀಡನ್‌ನ ಆರೋಗ್ಯ ಸಚಿವೆ, ರಕ್ತದಲ್ಲಿನ ಸಕ್ಕರೆ ಮಟ್ಟ ಕಡಿಮೆಯಾಗಿರುವುದನ್ನು ಪತ್ತೆ ಮಾಡುವುದು ಹೇಗೆ?
ವೈರಲ್​​ ವಿಡಿಯೋ
ಮಾಲಾಶ್ರೀ ಅಂಚನ್​
|

Updated on: Sep 11, 2025 | 3:04 PM

Share

ರಕ್ತದಲ್ಲಿನ ಸಕ್ಕರೆ ಮಟ್ಟ (low blood sugar) ಕಡಿಮೆಯಾದರೆ ತುಂಬಾ ಅಪಾಯವನ್ನು ಎದುರಿಸಬೇಕಾಗುತ್ತದೆ. ಇದೀಗ ಇಂತಹ ಪರಿಸ್ಥಿತಿಯನ್ನು ಆರೋಗ್ಯ ಸಚಿವರೊಬ್ಬರು ಅನುಭವಿಸಿದ್ದಾರೆ. ಸ್ವೀಡನ್‌ನ ಹೊಸದಾಗಿ ನೇಮಕಗೊಂಡ ಆರೋಗ್ಯ ಸಚಿವೆ ಎಲಿಸಬೆಟ್ ಲ್ಯಾನ್​​ ಮೊದಲ ಪತ್ರಿಕಾಗೋಷ್ಠಿಯನ್ನು ನಡೆಸಿದ್ದಾರೆ. ಈ ವೇಳೆ ಅವರು ಇದ್ದಕ್ಕಿದ್ದಂತೆ ವೇದಿಕೆಯಲ್ಲಿ ಕುಸಿದು ಬಿದ್ದಿದ್ದಾರೆ. ಇದು ಟಿವಿಯಲ್ಲಿ ನೇರಪ್ರಸಾರವಾಗಿದೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗಿದೆ. ಪತ್ರಿಕಾಗೋಷ್ಠಿ ನಡೆಸುತ್ತಿದ್ದ ವೇಳೆ ಕುಸಿದು ಬಿದ್ದ ಸಚಿವೆ ಎಲಿಸಬೆಟ್ ಲ್ಯಾನ್​​ನ್ನಿ ತಕ್ಷಣ ಅಲ್ಲಿದ್ದ ಸಿಬ್ಬಂದಿಗಳು ಅವರನ್ನು ಎತ್ತಲು ಸಹಾಯ ಮಾಡಿದ್ದಾರೆ. ಸ್ವಲ್ಪ ಸಮಯದ ನಂತರ ಸುಧಾರಿಸಿಕೊಂಡ ಎಲಿಸಬೆಟ್ ಲ್ಯಾನ್, ಮತ್ತೆ ವೇದಿಕೆಗೆ ಬಂದು ನನಗೆ ಹೈಪೊಗ್ಲಿಸಿಮಿಯಾ ಎಂದೂ ಕರೆಯಲ್ಪಡುವ ರಕ್ತದಲ್ಲಿನ ಸಕ್ಕರೆ ಮಟ್ಟ ಕಡಿಮೆಯಾಗಿರುವ ಕಾರಣ ಈ ರೀತಿ ಆಗಿದೆ ಎಂದು ಅದರ ಬಗ್ಗೆ ವಿವರಿಸಿದ್ದಾರೆ.

ಈ ಘಟನೆ ಸೆ.9ರಂದು ನಡೆದಿದೆ. ಸ್ವೀಡನ್‌ನ ಹೊಸ ಆರೋಗ್ಯ ಸಚಿವೆ ಎಲಿಸಬೆಟ್ ಲ್ಯಾನ್ ಅವರು ಮೊದಲ ಬಾರಿಗೆ ಪತ್ರಿಕಾಗೋಷ್ಠಿಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ವೇಳೆ ಪ್ರಧಾನಿ ಉಲ್ಫ್ ಕ್ರಿಸ್ಟರ್ಸನ್ ಮತ್ತು ಇತರ ಅಧಿಕಾರಿಗಳ ಮುಂದೆಯೇ ಅವರು ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಅಲ್ಲಿದ್ದ ಸಿಬ್ಬಂದಿಗಳು ಸಹಾಯ ಮಾಡಿ ಅವರನ್ನು ಚೇತರಿಸಿಕೊಳ್ಳವಂತೆ ಮಾಡಿದ್ದಾರೆ. ನಂತರ ಮತ್ತೆ ವೇದಿಕೆಗೆ ಬಂದಿದ್ದಾರೆ. ನನಗೆ ರಕ್ತದಲ್ಲಿ ಸಕ್ಕರೆ ಮಟ್ಟ ಕಡಿಮೆಯಾದ ಕಾರಣ ಹೀಗೆ ಆಗಿದೆ ಎಂದು ವಿವರಿಸಿದ್ದಾರೆ. ಸಿಬ್ಬಂದಿಗಳಿಗೆ ಅವರು ಧನ್ಯವಾದವನ್ನು ಕೂಡ ಹೇಳಿದ್ದಾರೆ.

ರಕ್ತದಲ್ಲಿನ ಸಕ್ಕರೆ ಮಟ್ಟ ಕಡಿಮೆ ಎಂದರೇನು?

ರಕ್ತದಲ್ಲಿನ ಸಕ್ಕರೆ ಮಟ್ಟ ಕಡಿಮೆ ಅಥವಾ ವೈದ್ಯಕೀಯವಾಗಿ ಹೈಪೊಗ್ಲಿಸಿಮಿಯಾ ಎಂದು ಕರೆಯಲ್ಪಡುವ ಈ ಆರೋಗ್ಯ ಸಮಸ್ಯೆಯು, ಗ್ಲೂಕೋಸ್ ಮಟ್ಟವು ಆರೋಗ್ಯಕರ ಮಿತಿಗಳಿಗಿಂತ ಕಡಿಮೆಯಾದಾಗ ಸಂಭವಿಸುತ್ತದೆ. ಸಾಮಾನ್ಯವಾಗಿ ಮಧುಮೇಹಿಗಳಿಗೆ 70 mg/dL ಗಿಂತ ಕಡಿಮೆ, ಅಥವಾ ಮಧುಮೇಹವಿಲ್ಲದವರಿಗೆ 55 mg/dL ಗಿಂತ ಕಡಿಮೆಯಾದಾಗ ಇದು ಸಂಭವಿಸುತ್ತದೆ. ಗ್ಲೂಕೋಸ್ ಮೆದುಳಿನ ಪ್ರಾಥಮಿಕ ಶಕ್ತಿಯ ಮೂಲವಾಗಿದೆ, ಆದ್ದರಿಂದ ಹಠಾತ್ ಕುಸಿತದಿಂದ ಮಾನಸಿಕ ಕಾರ್ಯವನ್ನು ದುರ್ಬಲಗೊಳಿಸುತ್ತದೆ, ಮೂರ್ಛೆ ಹೋಗಬಹುದು ಮತ್ತು ಒಂದು ವೇಳೆ ಇದಕ್ಕೆ ಚಿಕಿತ್ಸೆ ನೀಡದಿದ್ದರೆ ರೋಗಗ್ರಸ್ತವಾಗಿ ಕಾಡಬಹುದು. ಕೆಲವೊಂದು ಕೋಮಾಕ್ಕೆ ಹೋಗುವ ಸಾಧ್ಯತೆಗಳು ಕೂಡ ಇದೆ.

ಇದನ್ನೂ ಓದಿ
Image
ಕಿವಿಯಲ್ಲಿ ಆಗ್ಗಾಗೆ ಉಂಟಾಗುವ ಅಡಚಣೆ ನಿವಾರಿಸುವುದು ಹೇಗೆ?
Image
ಸುಖ ನಿದ್ರೆಗೆ ಡಾ. ಜನೈನ್ ಬೌರಿಂಗ್ ಹೇಳಿರುವ ಈ ಸಲಹೆ ಪಾಲಿಸಿ
Image
ಯಾವ ಋತುವಿನಲ್ಲಿ ಯಾವ ಪಾತ್ರೆಯಲ್ಲಿ ನೀರು ಕುಡಿದರೆ ಆರೋಗ್ಯಕ್ಕೆ ಒಳ್ಳೆಯದು

ಇದರ ಆರಂಭಿಕ ಲಕ್ಷಣಗಳು:

ಈ ರೀತಿ ಆಗುವ ಮೊದಲು ಕೆಲವೊಂದು ಲಕ್ಷಣಗಳು ಕಂಡು ಬರುತ್ತದೆ. ಹಾಗಾಗಿ ಇದನ್ನು ಪತ್ತೆ ಮಾಡಿ ಎಚ್ಚರ ವಹಿಸಿದರೆ ಜೀವ ಉಳಿಯುತ್ತದೆ.

  • ನಡುಕ ಅಥವಾ ವೇಗದ ಹೃದಯ ಬಡಿತ
  • ಬೆವರುವುದು, ಶೀತ, ಅಥವಾ ಜಿಗುಟಾದ ಚರ್ಮ
  • ತಲೆತಿರುಗುವಿಕೆ
  • ಕಿರಿಕಿರಿ
  • ತುಟಿಗಳು ಅಥವಾ ನಾಲಿಗೆಯಲ್ಲಿ ಜುಮ್ಮೆನಿಸುವಿಕೆ
  • ತಲೆನೋವು ಅಥವಾ ಮಂದ ದೃಷ್ಟಿ

ರಕ್ತದಲ್ಲಿನ ಸಕ್ಕರೆ ಮಟ್ಟ ಮತ್ತಷ್ಟು ಕಡಿಮೆಯಾದರೆ, ಮಾತು ಅಸ್ಪಷ್ಟವಾಗುವುದು, ಮೂರ್ಛೆ ಹೋಗುವುದು, ಸಮನ್ವಯದ ನಷ್ಟ ಮತ್ತು ಪ್ರಜ್ಞೆ ತಪ್ಪುವುದು ಮುಂತಾದ ಗಂಭೀರ ಲಕ್ಷಣಗಳು ಕಾಣಿಸಿಕೊಳ್ಳಬಹುದು.

ಇದು ಯಾರಿಗೆ ಅಪಾಯ:

ಮಧುಮೇಹ ಇರುವವರಲ್ಲಿ, ವಿಶೇಷವಾಗಿ ಇನ್ಸುಲಿನ್ ಅಥವಾ ಸಲ್ಫೋನಿಲ್ಯುರಿಯಾಸ್ ಅಥವಾ ಮೆಗ್ಲಿಟಿನೈಡ್‌ಗಳಂತಹ ಕೆಲವು ಔಷಧಿಗಳನ್ನು ಬಳಸುವವರಲ್ಲಿ ಅಪಾಯ ಹೆಚ್ಚಾಗಿರುತ್ತದೆ.

  • ಊಟ ಬಿಡುವುದು ಅಥವಾ ತುಂಬಾ ಕಡಿಮೆ ತಿನ್ನುವುದು
  • ಸಾಮಾನ್ಯಕ್ಕಿಂತ ಹೆಚ್ಚು ವ್ಯಾಯಾಮ ಮಾಡುವುದು.
  • ಮದ್ಯ ಸೇವನೆ, ವಿಶೇಷವಾಗಿ ಖಾಲಿ ಹೊಟ್ಟೆಯಲ್ಲಿ
  • ಮಕ್ಕಳು ಮತ್ತು ವೃದ್ಧರಲ್ಲಿ
  • ದುರ್ಬಲಗೊಂಡ ಯಕೃತ್ತು ಅಥವಾ ಮೂತ್ರಪಿಂಡದ ಸಮಸ್ಯೆ
  • ಉಪವಾಸ ಅಥವಾ ಸಮಯಕ್ಕೆ ಸರಿಯಾಗಿ ಊಟ ಮಾಡದವರು

ಇದನ್ನೂ ಓದಿ: ಕಿವಿಯಲ್ಲಿ ಆಗ್ಗಾಗೆ ಉಂಟಾಗುವ ಅಡಚಣೆ ನಿವಾರಿಸುವುದು ಹೇಗೆ? ಇದರ ಒಂದು ಹನಿ ಸಾಕು

ಇದರಿಂದ ರಕ್ಷಿಸಿಕೊಳ್ಳುವುದು ಹೇಗೆ?

ಸಮತೋಲಿತ ಊಟಗಳೊಂದಿಗೆ ನಿಯಮಿತವಾಗಿ ತಿನ್ನಿರಿ: ಸಂಕೀರ್ಣ ಕಾರ್ಬೋಹೈಡ್ರೇಟ್‌ಗಳು, ಪ್ರೋಟೀನ್ ಮತ್ತು ಆರೋಗ್ಯಕರ ಕೊಬ್ಬುಗಳನ್ನು ಸಂಯೋಜಿಸುವ ಊಟ ಮತ್ತು ತಿಂಡಿ ತಿನ್ನುವ ಮೂಲಕ ರಕ್ತದಲ್ಲಿನ ಸಕ್ಕರೆಯನ್ನು ಸ್ಥಿರವಾಗಿ ಇರಿಸಿ.

ರಕ್ತದಲ್ಲಿನ ಸಕ್ಕರೆ ಮಟ್ಟ ಕಡಿಮೆಗೆ 15-15 ನಿಯಮ ಬಳಸಿ : ನೀವು ಕಡಿಮೆ (ರಕ್ತದಲ್ಲಿನ ಸಕ್ಕರೆ 70 mg/dL ಗಿಂತ ಕಡಿಮೆ) ಕಂಡು ಬಂದರೆ, 15 ಗ್ರಾಂ ವೇಗವಾಗಿ ಕಾರ್ಯನಿರ್ವಹಿಸುವ ಕಾರ್ಬೋಹೈಡ್ರೇಟ್‌ಗಳನ್ನು ಸೇವಿಸಿ, 15 ನಿಮಿಷ ಕಾಯಿರಿ, ನಂತರ ಮತ್ತೆ ನೋಡಿ. ಇನ್ನೂ ಕಡಿಮೆಯಿದ್ದರೆ ಮತ್ತೆ ಹೀಗೆ ಮಾಡಿ. ಸ್ಥಿರವಾದ ನಂತರ ಅದೇ ಮಟ್ಟವನ್ನು ಕಾಪಾಡಿ.

ನಿಯಮಿತವಾಗಿ  ಮೇಲ್ವಿಚಾರಣೆ ಮಾಡಿ: ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಆಗಾಗ್ಗೆ ಪರೀಕ್ಷಿಸಿಕೊಳ್ಳಿ ಅಥವಾ ನಿರಂತರ ಗ್ಲೂಕೋಸ್ ಮಾನಿಟರ್ (CGM) ಬಳಸಿ. ಇದು ನಿಮ್ಮ ಕಡಿಮೆ ಸೆಕ್ಕರೆ ಮಟ್ಟದಿಂದ ಬಗ್ಗೆ ತಿಳಿಯುತ್ತದೆ. ಹಾಗೆ ಅದನ್ನು ನಿಯಂತ್ರಣದಲ್ಲಿ ಇಡಲು ಎಚ್ಚರಿಸುತ್ತದೆ.

ಈ ವಸ್ತುಗಳು ನಿಮ್ಮ ಬಳಿ ಇಟ್ಟುಕೊಳ್ಳಿ: ಗ್ಲೂಕೋಸ್ ಮಾತ್ರೆಗಳು, ಜ್ಯೂಸ್, ಜೇನುತುಪ್ಪ ಅಥವಾ ಕ್ಯಾಂಡಿ ಇಟ್ಟುಕೊಳ್ಳಿ. ಇದರ ಜತೆಗೆ ಗ್ಲುಕಗನ್ ಕಿಟ್​​​ಗಳನ್ನು ಇಟ್ಟುಕೊಳ್ಳಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ