AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಿವಿಯಲ್ಲಿ ಆಗ್ಗಾಗೆ ಉಂಟಾಗುವ ಅಡಚಣೆ ನಿವಾರಿಸುವುದು ಹೇಗೆ? ಇದರ ಒಂದು ಹನಿ ಸಾಕು

ಕಿವಿಯಲ್ಲಿ ಆಗ್ಗಾಗೆ ಕಾಣಿಸುವ ಸಮಸ್ಯೆಗಳನ್ನು ಪರಿಹಾರ ಮಾಡಲು ಮನೆಯಲ್ಲಿ ಸುಲಭವಾದ ಮನೆಮದ್ದು ಇದೆ. ಈ ಬಗ್ಗೆ ಆಹಾರ ತಜ್ಞೆ ದೀಪ್ಶಿಖಾ ಶರ್ಮಾ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಯಾವೆಲ್ಲ ರೀತಿಯ ಸಮಸ್ಯೆಗಳಿಗೆ ಈ ಪರಿಹಾರ ಸೂಕ್ತ ಎಂಬುದನ್ನು ಇಲ್ಲಿ ಹೇಳಲಾಗಿದೆ. ಜತೆಗೆ ಕೆಲವೊಂದು ಎಚ್ಚರಿಕೆಯನ್ನು ಕೂಡ ನೀಡಲಾಗಿದೆ. ಇಲ್ಲಿದೆ ನೋಡಿ.

ಕಿವಿಯಲ್ಲಿ ಆಗ್ಗಾಗೆ ಉಂಟಾಗುವ ಅಡಚಣೆ ನಿವಾರಿಸುವುದು ಹೇಗೆ? ಇದರ ಒಂದು ಹನಿ ಸಾಕು
ಸಾಂದರ್ಭಿಕ ಚಿತ್ರ
ಮಾಲಾಶ್ರೀ ಅಂಚನ್​
|

Updated on: Sep 10, 2025 | 6:16 PM

Share

ಕಿವಿ (ears) ದೇಹದ ಪ್ರಮುಖ ಭಾಗವಾಗಿದೆ. ಇದರ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅಗತ್ಯ, ಅದರಲ್ಲೂ ಈ ಮಳೆಗಾಲದಲ್ಲಿ ಕಿವಿಯ ಬಗ್ಗೆ ತುಂಬಾ ಕಾಳಜಿಯನ್ನು ಕಾಪಾಡಿಕೊಳ್ಳಬೇಕು. ಕೆಲವೊಂದು ಬಾರಿ ಕಿವಿ ಇಂತಹ ಸಮಸ್ಯೆಗಳು ಉಂಟಾದಾಗ ಏನು ಮಾಡಬೇಕು ಎಂಬುದು ತಿಳಿದಿರುವುದು, ಆಗ್ಗಾಗೆ ಇಂತಹ ಸಮಸ್ಯೆಗಳು ಕಾಡುತ್ತಾ ಇರುತ್ತದೆ. ಆ ಸಮಸ್ಯೆಗಳು ಯಾವುವು? ಇಲ್ಲಿದೆ ನೋಡಿ ಕಿವಿಯಲ್ಲಿ ಕೊಳಕು ಸಂಗ್ರಹವಾಗುವುದು, ಕಿವಿಯಲ್ಲಿ ಆಗ್ಗಾಗೆ ಅಡಚಣೆ (blocked ear) ಉಂಟಾಗುವುದು. ಕಿವಿಯ ನೋವು ಕಾಣಿಸಿಕೊಳ್ಳುವುದು, ಹೀಗೆ ಅನೇಕ ಸಮಸ್ಯೆಗಳು ಒಮ್ಮೆ ಒಮ್ಮೆ ಕಾಡುತ್ತದೆ. ಇದಕ್ಕೆ ಯಾವ ರೀತಿಯ ಪರಿಹಾರವನ್ನು ಕಂಡುಕೊಳ್ಳಬಹುದು ಎಂಬುದನ್ನು ಆಹಾರ ತಜ್ಞೆ ದೀಪ್ಶಿಖಾ ಶರ್ಮಾ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹೇಳಿಕೊಂಡಿದ್ದಾರೆ.

ಆಗ್ಗಾಗೆ ಕಿವಿ ಬಂದ್​ ಆಗುತ್ತದೆ. ಅಂದರೆ ಕಿವಿ ಮುಚ್ಚಿದಂತೆ ಆಗುವ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಸ್ವಲ್ಪ ಸಮಯದ ನಂತರ ತನ್ನಷ್ಟಕ್ಕೆ ಸರಿ ಹೋಗುತ್ತದೆ. ಒಂದು ವೇಳೆ ಇದಕ್ಕೆ ತಕ್ಷಣದ ಪರಿಹಾರವನ್ನು ಬಯಸಿದರೆ ಸಾಸಿವೆ ಎಣ್ಣೆಯನ್ನು ಬಳಸುವುದು ಉತ್ತಮ ಎಂದು ದೀಪ್ಶಿಖಾ ಶರ್ಮಾ ಹೇಳುತ್ತಾರೆ. ಕೇವಲ 2 ಹನಿ ಸಾಸಿವೆ ಎಣ್ಣೆಯನ್ನು ಹಾಕುವ ಮೂಲಕ ಕಿವಿಯ ಅಡಚಣೆಯನ್ನು ಪರಿಹಾರ ಮಾಡಿಕೊಳ್ಳಬಹುದು. ಸಾಸಿವೆ ಎಣ್ಣೆಯು ಬ್ಯಾಕ್ಟೀರಿಯಾ ವಿರೋಧಿ ಮತ್ತು ಶಿಲೀಂಧ್ರನಾಶಕ ಗುಣಗಳಿಂದ ಸಮೃದ್ಧವಾಗಿದೆ, ಇದು ಕಿವಿಯಲ್ಲಿರುವ ಸೋಂಕನ್ನು ಉಂಟುಮಾಡುವ ಸೂಕ್ಷ್ಮಜೀವಿಗಳನ್ನು ಕೊಲ್ಲುತ್ತದೆ. ಈ ಎಣ್ಣೆಯನ್ನು ಹಾಕುವುದರಿಂದ ಕೊಳಕು ಮೃದುವಾಗುತ್ತದೆ ಮತ್ತು ಹೊರಬರುತ್ತದೆ, ಇದು ಕಿವಿಯನ್ನು ಸ್ವಚ್ಛವಾಗಿಡಲು ಸಹಾಯ ಮಾಡುತ್ತದೆ, ಜೊತೆಗೆ ಸೋಂಕಿನ ಅಪಾಯವನ್ನು ಕಡಿಮೆ ಮಾಡುತ್ತದೆ. ಕಿವಿಯ ತುರಿಕೆಯನ್ನು ಕೂಡ ತಕ್ಷಣದಲ್ಲಿ ಕಡಿಮೆ ಮಾಡುತ್ತದೆ.

ಇದನ್ನೂ ಓದಿ
Image
ಸುಖ ನಿದ್ರೆಗೆ ಡಾ. ಜನೈನ್ ಬೌರಿಂಗ್ ಹೇಳಿರುವ ಈ ಸಲಹೆ ಪಾಲಿಸಿ
Image
ಜೋಳದ ರೊಟ್ಟಿ Vs ರಾಗಿ ರೊಟ್ಟಿ: ತೂಕ ಇಳಿಸೋರಿಗೆ ಯಾವುದು ಉತ್ತಮ?
Image
ಯಾವ ಋತುವಿನಲ್ಲಿ ಯಾವ ಪಾತ್ರೆಯಲ್ಲಿ ನೀರು ಕುಡಿದರೆ ಆರೋಗ್ಯಕ್ಕೆ ಒಳ್ಳೆಯದು
Image
ಮಳೆಗಾಲದಲ್ಲಿ ಶಿಲೀಂಧ್ರ ಸೋಂಕು, ಬೆವರು ಗುಳ್ಳೆಗಳು ಕಾಣಿಸಿಕೊಳ್ಳುವುದೇಕೆ?

ಇಲ್ಲಿದೆ ನೋಡಿ ವಿಡಿಯೋ:

ಬಳಸುವುದು ಹೇಗೆ?

  1. ಒಂದು ಚಮಚ ಸಾಸಿವೆ ಎಣ್ಣೆಯನ್ನು ಲಘುವಾಗಿ ಬಿಸಿ ಮಾಡಿ.
  2. ಡ್ರಾಪರ್ ಸಹಾಯದಿಂದ ಕಿವಿಗೆ ಕೇವಲ 2 ಹನಿ ಎಣ್ಣೆಯನ್ನು ಹಾಕಿ, ಎಣ್ಣೆ ತುಂಬಾ ಬಿಸಿಯಾಗಿರಬಾರದು
  3. ಎಣ್ಣೆ ಒಳಗೆ ತಲುಪುವಂತೆ 5 ನಿಮಿಷಗಳ ಕಾಲ ನಿಮ್ಮ ತಲೆಯನ್ನು ಒಂದು ಬದಿಗೆ ಓರೆಯಾಗಿ ಇರಿಸಿ.
  4. ಕಿವಿಯನ್ನು ಸ್ವಚ್ಛವಾದ ಹತ್ತಿಯಿಂದ ಒರೆಸಿ.

ಇದನ್ನೂ ಓದಿ: ಹವಾಮಾನಕ್ಕೆ ಅನುಗುಣವಾಗಿ ಯಾವ ಪಾತ್ರೆಯಲ್ಲಿ ನೀರು ಕುಡಿದರೆ ಆರೋಗ್ಯಕ್ಕೆ ಒಳ್ಳೆಯದು

ಈ ವಿಚಾರ ಮಾತ್ರ ನೆನಪಿನಲ್ಲಿರಲಿ:

  • ಕಿವಿ ಗಾಯ ಅಥವಾ ತೀವ್ರ ಕಿವಿ ನೋವು ಇದ್ದರೆ, ಯಾವುದೇ ಪರಿಹಾರವನ್ನು ಪ್ರಯತ್ನಿಸುವ ಮೊದಲು ವೈದ್ಯರನ್ನು ಸಂಪರ್ಕಿಸಿ.
  • ಈ ಔಷಧಿ ಸೌಮ್ಯವಾದ ಅಡಚಣೆ ಮತ್ತು ತುರಿಕೆಗೆ ಮಾತ್ರ.
  • ಮಕ್ಕಳ ಕಿವಿಗೆ ಯಾವುದೇ ಮನೆಮದ್ದನ್ನು ಬಳಸುವ ಮೊದಲು, ವೈದ್ಯರನ್ನು ಸಂಪರ್ಕಿಸಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ