ಜೋಳದ ರೊಟ್ಟಿ Vs ರಾಗಿ ರೊಟ್ಟಿ: ತೂಕ ಇಳಿಸೋರಿಗೆ ಯಾವುದು ಬೆಸ್ಟ್?
ತೂಕ ಇಳಿಕೆ ಅಷ್ಟು ಸುಲಭದ ಮಾತಲ್ಲ, ಈ ವೇಳೆ ಸೇವಿಸುವ ಆಹಾರದ ಬಗ್ಗೆ ಹೆಚ್ಚು ಗಮನ ಕೊಡಬೇಕಾಗುತ್ತದೆ. ಆಹಾರ ಸೇವನೆಯಲ್ಲಿ ಸ್ವಲ್ಪ ವ್ಯತ್ಯಾಸವಾದ್ರೂ ಡಯಟ್ ಸರಿಯಾಗುವುದಿಲ್ಲ. ಇನ್ನು ತೂಕ ಇಳಿಕೆ ಮಾಡುವವರು ಹೆಚ್ಚಾಗಿ ಚಪಾತಿ ಜೊತೆ ಜೊತೆಗೆ ರಾಗಿ ರೊಟ್ಟಿ ಅಥವಾ ಜೋಳದ ರೊಟ್ಟಿ ಸೇವನೆ ಮಾಡ್ತಾರೆ. ಆದರೆ ಇದನ್ನು ಸೇವನೆ ಮಾಡುವ ಮುನ್ನ ಯಾವುದು ಬೆಸ್ಟ್ ಎಂದು ತಿಳಿದುಕೊಳ್ಳುವುದು ಮುಖ್ಯ.

ಇತ್ತೀಚೆಗಿನ ದಿನಗಳಲ್ಲಿ ಹೆಚ್ಚಿನವರಲ್ಲಿ ತೂಕ ಹೆಚ್ಚಳವು ಬಹುದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಹೀಗಾಗಿ ಹೆಚ್ಚಿನವರು ತೂಕ ಕಡಿಮೆ (weight loss) ಮಾಡಿಕೊಳ್ಳಲು ವ್ಯಾಯಾಮ ಹಾಗೂ ಆರೋಗ್ಯಕರ ಆಹಾರಗಳ ಮೊರೆ ಹೋಗುತ್ತಿದ್ದಾರೆ. ಚಪಾತಿ ಬದಲಾಗಿ ರಾಗಿ ರೊಟ್ಟಿ ಹಾಗೂ ಜೋಳದ ರೊಟ್ಟಿಯನ್ನು ಆಹಾರದ ಭಾಗವಾಗಿ ಸೇರಿಸಿಕೊಳ್ಳುತ್ತಿದ್ದಾರೆ. ಹಾಗಾದ್ರೆ ರಾಗಿ ರೊಟ್ಟಿ ಹಾಗೂ ಜೋಳದ ರೊಟ್ಟಿ (Jowar Roti Vs Ragi Roti) ತೂಕ ಇಳಿಕೆಗೆ ಈ ಎರಡರಲ್ಲಿ ಯಾವುದು ಉತ್ತಮ? ಈ ಕುರಿತಾದ ಇನ್ನಷ್ಟು ಮಾಹಿತಿ ಇಲ್ಲಿದೆ.
ಚಪಾತಿಗೆ ಪರ್ಯಾಯ ಆಯ್ಕೆ ಈ ರೊಟ್ಟಿ
ತೂಕ ಇಳಿಸಿಕೊಳ್ಳಬೇಕೆನ್ನುವವರು ಚಪಾತಿ ಬದಲಾಗಿ ಜೋಳ ಮತ್ತು ರಾಗಿ ರೊಟ್ಟಿ ಆಯ್ಕೆ ಮಾಡಿಕೊಳ್ಳುವುದು ಉತ್ತಮ. ಇದು ಫೈಬರ್, ಪ್ರೋಟೀನ್, ಅಗತ್ಯವಾದ ಜೀವಸತ್ವಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿದ್ದು, ದೀರ್ಘಕಾಲದವರೆಗೆ ಹೊಟ್ಟೆ ತುಂಬಿದಂತಹ ಅನುಭವವಾಗುತ್ತದೆ. ಹಾಗೂ ಆರೋಗ್ಯಕರ ಚಯಾಪಚಯ ಕ್ರಿಯೆಯನ್ನು ಬೆಂಬಲಿಸಲು ಸಹಕಾರಿಯಾಗಿದೆ.
ಜೋಳದ ರೊಟ್ಟಿ ಸೇವನೆಯ ಆರೋಗ್ಯ ಲಾಭಗಳು
ತೂಕ ಇಳಿಸಿಕೊಳ್ಳುವವರು ಜೋಳದ ರೊಟ್ಟಿಯನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ಹಲವಾರು ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ಇದರಲ್ಲಿ ಪ್ರೋಟೀನ್, ಕಬ್ಬಿಣ, ಫೈಬರ್ ಮತ್ತು ಆಂಟಿ-ಆಕ್ಸಿಡೆಂಟ್‌ಗಳು ಸಮೃದ್ಧವಾಗಿದ್ದು, ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಕೂಡ ಸಹಾಯ ಮಾಡುತ್ತವೆ. ಹೆಚ್ಚು ಹೊತ್ತು ತುಂಬಿದಂತೆ ಮಾಡಿ ಹಸಿವು ಆಗುವುದನ್ನು ತಪ್ಪಿಸುತ್ತದೆ. ಅದಲ್ಲದೇ, ಜೀರ್ಣಕ್ರಿಯೆಯನ್ನು ಸುಧಾರಿಸಿ ತೂಕವನ್ನು ಸ್ಥಿಮಿತವಾಗಿಸುತ್ತದೆ.
ರಾಗಿ ರೊಟ್ಟಿಯ ಆರೋಗ್ಯ ಪ್ರಯೋಜನಗಳು
ರಾಗಿಯೂ ಕ್ಯಾಲ್ಸಿಯಂನಿಂದ ಸಮೃದ್ಧವಾಗಿದ್ದು ಮೂಳೆಗಳ ಆರೋಗ್ಯಕ್ಕೆ ಉತ್ತಮ ಆಯ್ಕೆಯಾಗಿದೆ. ಈ ಧಾನ್ಯದಲ್ಲಿರುವ ನಾರಿನ ಅಂಶ, ಕಾರ್ಬೋಹೈಡ್ರೇಟ್‌ಗಳು ತೂಕ ಇಳಿಸಿಕೊಳ್ಳಲು ಅನುಕೂಲಕರವಾಗಿದೆ. ಆರೋಗ್ಯಕರ ಜೀರ್ಣಕ್ರಿಯೆ ಮತ್ತು ಕರುಳಿನ ಕೆಲಸವನ್ನು ಬೆಂಬಲಿಸುತ್ತದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸ್ಥಿರವಾಗಿಡಲು ಸಹಾಯ ಮಾಡುತ್ತದೆ. ಹಸಿವಾಗುವುದನ್ನು ತಪ್ಪಿಸಿ ಹೊಟ್ಟೆ ತುಂಬಿದಂತೆ ಮಾಡುತ್ತದೆ. ಹೀಗಾಗಿ ಊಟದ ನಡುವೆ ಅನಾರೋಗ್ಯಕರವಾದ ಆಹಾರ ತಿನ್ನುವ ಅಭ್ಯಾಸವನ್ನು ಸ್ವಾಭಾವಿಕವಾಗಿ ಕಡಿಮೆ ಮಾಡುತ್ತದೆ.
ಇದನ್ನೂ ಓದಿ:ಅನ್ನ vs ಚಪಾತಿ: ಉತ್ತಮ ನಿದ್ರೆಗಾಗಿ ಈ ಎರಡರಲ್ಲಿ ರಾತ್ರಿ ಊಟಕ್ಕೆ ಯಾವುದು ಬೆಸ್ಟ್? ತಜ್ಞರು ಹೇಳುವುದೇನು?
ತೂಕ ಇಳಿಕೆಗೆ ಯಾವುದು ಉತ್ತಮ?
ತೂಕ ಇಳಿಕೆ ಎಂದಾಗ ರಾಗಿ ರೊಟ್ಟಿ ಹಾಗೂ ಜೋಳದ ರೊಟ್ಟಿ ಇವೆರಡರಲ್ಲಿ ಯಾವುದು ಉತ್ತಮ ಎನ್ನುವ ಪ್ರಶ್ನೆ ಮೂಡುತ್ತದೆ. ಕೆಲವರು ರಾಗಿ ರೊಟ್ಟಿ ಉತ್ತಮ ಆಯ್ಕೆ ಎಂದುಕೊಳ್ಳುತ್ತಾರೆ. ಇದಕ್ಕೆ ಹೋಲಿಸಿದ್ರೆ ಜೋಳದ ರೊಟ್ಟಿ ಬೆಸ್ಟ್ ಎನ್ನಬಹುದು. ಇದರಲ್ಲಿ ಕ್ಯಾಲೋರಿ ಕಡಿಮೆಯಿದ್ದು ಬೇಗನೇ ಜೀರ್ಣವಾಗುತ್ತದೆ. ಹೀಗಾಗಿ ತೂಕ ಇಳಿಕೆ ಮಾಡುವವರು ರಾಗಿ ರೊಟ್ಟಿಗಿಂತ ಜೋಳದ ರೊಟ್ಟಿ ಸೇವನೆ ಮಾಡುವುದು ಹೆಚ್ಚು ಪರಿಣಾಮಕಾರಿಯಾಗಿದೆ.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








