ಅನ್ನ vs ಚಪಾತಿ: ಉತ್ತಮ ನಿದ್ರೆಗಾಗಿ ಈ ಎರಡರಲ್ಲಿ ರಾತ್ರಿ ಊಟಕ್ಕೆ ಯಾವುದು ಬೆಸ್ಟ್? ತಜ್ಞರು ಹೇಳುವುದೇನು?
ರಾತ್ರಿ ಊಟಕ್ಕೆ ಕೆಲವರು ಚಪಾತಿ ತಿಂದರೆ, ಇನ್ನು ಕೆಲವರು ಅನ್ನ ಸೇವಿಸುತ್ತಾರೆ. ಆದರೆ ಕೆಲವರಿಗೆ ರಾತ್ರಿ ಊಟಕ್ಕೆ ಚಪಾತಿ ಸೇವನೆಯೂ ಅಭ್ಯಾಸವಾಗಿರುತ್ತದೆ. ಒಂದು ದಿನವು ಇದನ್ನು ಸೇವಿಸದಿದ್ದರೆ ಸಮಾಧಾನ ಆಗುವುದೇ ಇಲ್ಲ. ಈ ಎರಡರಲ್ಲಿ ಯಾವ ಆಹಾರ ಸೇವಿಸಿದರೆ ಹೆಚ್ಚು ಉತ್ತಮ. ಚೆನ್ನಾಗಿ ನಿದ್ರೆ ಬರಲು ಯಾವ ಆಹಾರವನ್ನು ತಿನ್ನಬೇಕು, ಈ ಬಗ್ಗೆ ತಜ್ಞರು ಏನ್ ಹೇಳ್ತಾರೆ ಗೊತ್ತಾ? ಇಲ್ಲಿದೆ ನೋಡಿ ಮಾಹಿತಿ

ನೀವು ಸೇವಿಸುವ ಆಹಾರವು (food) ನಿಮ್ಮ ನಿದ್ದೆಯ ಮೇಲೆ ಪರಿಣಾಮ ಬೀರುತ್ತದೆ. ಕೆಲವರು ರಾತ್ರಿ ಊಟಕ್ಕೆ ಬಗೆಬಗೆಯ ಆಹಾರವನ್ನು ಸೇವಿಸುತ್ತಾರೆ. ನಾಲಗೇನೋ ರುಚಿ ಸಿಗುತ್ತದೆ, ಎಷ್ಟು ಕಣ್ಣು ಮುಚ್ಚಿದ್ರು ನಿದ್ದೆಯಂತೂ ಬರಲ್ಲ. ನಮ್ಮಲ್ಲಿ ಹೆಚ್ಚಿನವರು ಕೆಲವರು ಮಧ್ಯಾಹ್ನ ಅನ್ನ ಸೇವಿಸಿದರೆ ರಾತ್ರಿ ಊಟಕ್ಕೆ ಚಪಾತಿ ತಿನ್ನುತ್ತಾರೆ. ಇನ್ನು ಈ ಶುಗರ್, ತೂಕ ಇಳಿಕೆ ಮಾಡಿಕೊಳ್ಳುವವರು ಈ ಚಪಾತಿಯನ್ನು(Chapati) ಆಯ್ಕೆ ಮಾಡಿಕೊಳ್ಳುತ್ತಾರೆ. ಆದರೆ ಕಣ್ಣ ತುಂಬಾ ನಿದ್ರೆ ಬರಬೇಕಂದರೆ ನೀವು ಅನ್ನ ಹಾಗೂ ಚಪಾತಿ ಈ ಎರಡರಲ್ಲಿ ಯಾವುದು ಸೇವಿಸಿದರೆ ಬೆಸ್ಟ್ ಎಂದು ತಿಳಿದುಕೊಳ್ಳುವುದು ಒಳ್ಳೆಯದು. ಯಾವ ಆಹಾರವನ್ನು ಸೇವಿಸಿದ್ರೆ ಚೆನ್ನಾಗಿ ನಿದ್ದೆ ಮಾಡಲು ಸಾಧ್ಯ. ಈ ಬಗ್ಗೆ ತಜ್ಞರು ಹೇಳುವುದೇನು? ಈ ಬಗ್ಗೆ ನಿಮಗೆ ತಿಳಿದಿರುವುದು ಮುಖ್ಯ.
ಅನ್ನ ಸೇವನೆ ಎಷ್ಟು ಪ್ರಯೋಜನಕಾರಿ?
ರಾತ್ರಿಯ ಊಟಕ್ಕೆ ಅನ್ನವನ್ನು ತಿಂದರೆ ಇದು ಹೊಟ್ಟೆ ತುಂಬಿದ ಅನುಭವವನ್ನು ಉಂಟು ಮಾಡುತ್ತದೆ. ಇನ್ನು ಅನ್ನವು ಬೇಗನೆ ಜೀರ್ಣವಾಗುತ್ತದೆ. ಹೀಗಾಗಿ ಹೆಚ್ಚಿನವರು ರಾತ್ರಿ ಅನ್ನವನ್ನೇ ಸೇವಿಸಲು ಇಷ್ಟ ಪಡುತ್ತಾರೆ. ಈ ಅನ್ನವು ಹೆಚ್ಚಿನ ಗ್ಲೈಸೆಮಿಕ್ ಆಹಾರವಾಗಿದ್ದು, ಇದು ಮೆದುಳಿನಲ್ಲಿ ಟ್ರಿಪ್ಟೊಫಾನ್ ಅನ್ನು ಬಿಡುಗಡೆ ಮಾಡುವ ಮೂಲಕ ಬಹುಬೇಗನೇ ನಿದ್ರೆಗೆ ಜಾರಲು ಸಹಕಾರಿಯಾಗಿದೆ.
ಚಪಾತಿ ಸೇವನೆಯಿಂದ ಈ ರೀತಿ ಆಗ್ಬಹುದು
ಈ ಚಪಾತಿಗಳಲ್ಲಿ ಫೈಬರ್ ಮತ್ತು ಸಂಕೀರ್ಣ ಕಾರ್ಬೋಹೈಡ್ರೇಟ್‌ಗಳು ಸಮೃದ್ಧವಾಗಿದ್ದು, ಶಕ್ತಿಯನ್ನು ನಿಧಾನವಾಗಿ ಬಿಡುಗಡೆ ಮಾಡುತ್ತವೆ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ. ಹೀಗಾಗಿ ತೂಕ ಇಳಿಸಿಕೊಳ್ಳಲು ಬಯಸುವವರು, ಮಧುಮೇಹ ಇರುವವರು ಚಪಾತಿ ಸೇವಿಸುವುದು ಉತ್ತಮ. ಈ ಚಪಾತಿ ಜೀರ್ಣವಾಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಹೀಗಾಗಿ ರಾತ್ರಿಯ ವೇಳೆ ಚಪಾತಿ ಸೇವನೆಯೂ ಹೊಟ್ಟೆ ಉಬ್ಬರ ಅಥವಾ ಹೊಟ್ಟೆ ಭಾರವಾದಂತಹ ಅನುಭವನ್ನುಂಟು ಮಾಡಬಹುದು.
ಇದನ್ನೂ ಓದಿ: ಇಡ್ಲಿ ಅಥವಾ ಉಪ್ಪಿಟ್ಟು ಯಾವ ಉಪಹಾರ ಆರೋಗ್ಯಕರ? ಬೆಳಿಗ್ಗೆ ಯಾವುದನ್ನು ತಿಂದ್ರೆ ಒಳ್ಳೆಯದು
ಅನ್ನ vs ಚಪಾತಿ: ನಿದ್ರೆಗೆ ಯಾವುದು ಉತ್ತಮ?
ನೀವು ಸೇವಿಸುವ ಆಹಾರ ನಿಮ್ಮ ನಿದ್ರಾ ಚಕ್ರದ ಮೇಲು ಪರಿಣಾಮ ಬೀರುತ್ತದೆ ಎನ್ನುವುದನ್ನು ಮರೆಯದಿರಿ. ರಾತ್ರಿ ಊಟ ಸುಲಭವಾಗಿ ಜೀರ್ಣವಾಗಿ, ದೇಹವು ಎಷ್ಟು ಹೊರೆ ಮಾಡಲು ಬಯಸದಿದ್ದರೆ ಅನ್ನ ತಿನ್ನುವುದು ಒಳ್ಳೆಯದು. ಇದರಿಂದ ಬೇಗನೇ ನಿದ್ದೆ ಬರುತ್ತದೆ. ಚಪಾತಿ ಸೇವನೆಯೂ ಹೊಟ್ಟೆ ಉಬ್ಬಿದ ಹಾಗೂ ಭಾರವಾದ ಅನುಭವ ಉಂಟು ಮಾಡುತ್ತದೆ. ಹೀಗಾಗಿ ರಾತ್ರಿ ಊಟಕ್ಕೆ ಚಪಾತಿಗಿಂತ ಅನ್ನ ಬೆಸ್ಟ್, ಇದರಿಂದ ಚೆನ್ನಾಗಿ ನಿದ್ದೆ ಬರುತ್ತದೆ ಎನ್ನುತ್ತಾರೆ ತಜ್ಞರು.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:40 pm, Sun, 31 August 25








