ನೀವು ಕೂಡ 7 ಗಂಟೆಗಿಂತ ಕಡಿಮೆ ನಿದ್ರೆ ಮಾಡ್ತೀರಾ? ಹಾಗಿದ್ರೆ ಈ ಭಯಾನಕ ಆರೋಗ್ಯ ಸಮಸ್ಯೆಗಳ ಬಗ್ಗೆ ತಿಳಿದುಕೊಳ್ಳಬೇಕು
ಆರೋಗ್ಯವಾಗಿರಲು ಆಹಾರ ಸೇವನೆಯ ಜೊತೆಗೆ ನಿದ್ರೆಯೂ ಅವಶ್ಯಕವಾಗಿರುತ್ತದೆ. ನಿದ್ರೆ ಸರಿಯಾಗಿ ಬರದಿದ್ದರೆ, ಮಾನಸಿಕವಾಗಿ ಕಿರಿಕಿರಿ ಉಂಟಾಗುವುದಲ್ಲದೆ, ಹೃದಯ ಮತ್ತು ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಿಗೆ ಕಾರಣವಾಗುತ್ತವೆ. ನಿದ್ರೆಯಲ್ಲಿನ ಅಡಚಣೆಯು ನಮ್ಮ ಆರೋಗ್ಯದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ ಎಂಬುದು ಅನೇಕ ರೀತಿಯ ಅಧ್ಯಯನಗಳಿಂದ ಸಾಬೀತಾಗಿದೆ. ಹಾಗಾದರೆ ನಿದ್ರೆ ಸರಿಯಾಗಿ ಆಗದಿದ್ದಾಗ ಯಾವ ರೀತಿಯ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ? ನಮ್ಮ ಆರೋಗ್ಯ ಹೇಗೆ ಹಾಳಾಗುತ್ತದೆ? ಯಾವ ಯಾವ ಕಾಯಿಲೆಗಳು ಕಂಡುಬರುತ್ತದೆ ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಒಬ್ಬ ವ್ಯಕ್ತಿ ಆರೋಗ್ಯವಾಗಿರಲು ಆರೋಗ್ಯಕರ ಆಹಾರ ಎಷ್ಟು ಮುಖ್ಯವೋ, ನಿದ್ರೆಯೂ ಅಷ್ಟೇ ಮುಖ್ಯ. ಹೌದು, ಸರಿಯಾಗಿ ನಿದ್ರೆ ಬರದಿದ್ದರೆ, ವಿವಿಧ ಆರೋಗ್ಯ (Health) ಸಮಸ್ಯೆಗಳು ಕೂಡ ಬರಬಹುದು. ಈ ನಿದ್ರೆಯ ಕೊರತೆಯು ಮಾನಸಿಕ ಕಿರಿಕಿರಿಯನ್ನುಂಟುಮಾಡುವುದಲ್ಲದೆ, ಹೃದಯ ಮತ್ತು ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಸಹ ಉಂಟುಮಾಡುತ್ತದೆ. ಮಾತ್ರವಲ್ಲ ನಿದ್ರೆಯಲ್ಲಿನ ಅಡಚಣೆಯು ನಮ್ಮ ಆರೋಗ್ಯದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ ಎಂದು ಅನೇಕ ಅಧ್ಯಯನಗಳಿಂದ ತಿಳಿದು ಬಂದಿದೆ. ಇದು ಕೆಲವು ಲಕ್ಷಣಗಳ ಮೂಲಕ ಸ್ಪಷ್ಟವಾಗಿ ಗೋಚರಿಸುತ್ತವೆ, ಆದರೆ ಅವುಗಳನ್ನು ಸಮಯಕ್ಕೆ ಸರಿಯಾಗಿ ಗುರುತಿಸಲು ವಿಫಲರಾದರೆ ಅವು ತೀವ್ರವಾಗಬಹುದು. ಹಾಗಾಗಿ ನಮ್ಮ ದೇಹವನ್ನು ಆರೋಗ್ಯವಾಗಿಡಲು 7 ರಿಂದ 8 ಗಂಟೆಗಳ ನಿದ್ರೆ (sleep) ಮಾಡುವುದು ಬಹಳ ಅವಶ್ಯಕ. ಹಾಗಾದರೆ ನಿದ್ರೆ ಸರಿಯಾಗಿ ಆಗದಿದ್ದಾಗ ಯಾವ ರೀತಿಯ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ? ನಮ್ಮ ಆರೋಗ್ಯ ಹೇಗೆ ಹಾಳಾಗುತ್ತದೆ? ಯಾವ ಯಾವ ಕಾಯಿಲೆಗಳು ಕಂಡುಬರುತ್ತದೆ ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಮೆದುಳಿಗೆ ಹಾನಿ ಮಾಡುತ್ತೆ
ದಿನಕ್ಕೆ 7 ರಿಂದ 8 ಗಂಟೆಗಳ ಕಾಲ ನಿದ್ರೆ ಮಾಡದವರಿಗೆ ಕ್ಯಾನ್ಸರ್, ಪಾರ್ಶ್ವವಾಯು, ಹೃದ್ರೋಗ ಮತ್ತು ಮಧುಮೇಹ ಸೇರಿದಂತೆ ಇನ್ನಿತರ ಗಂಭೀರ ಕಾಯಿಲೆಗಳು ಕಂಡು ಬರುವ ಅಪಾಯ ಗಮನಾರ್ಹವಾಗಿ ಹೆಚ್ಚಾಗಿರುತ್ತದೆ ಎಂದು ಅನೇಕ ಅಧ್ಯಯನಗಗಳಿಂದ ತಿಳಿದು ಬಂದಿದೆ. ಅದರಲ್ಲಿ ಒಂದು ಅಧ್ಯಯನದ ಪ್ರಕಾರ ಅಸಮರ್ಪಕ ನಿದ್ರೆಯು ನಿಮ್ಮ ಮೆದುಳಿಗೆ ಹಾನಿ ಮಾಡುತ್ತದೆ ಎಂದು ಹೇಳಿದ್ದು ಇದರ ಪರಿಣಾಮ ವಿವಿಧ ಕಾಯಿಲೆಗಳು ಕಂಡು ಬರಬಹುದು ಎಂಬುದು ಬಹಿರಂಗವಾಗಿದೆ.
ಮಲಬದ್ಧತೆಯ ಸಮಸ್ಯೆ
ನಿದ್ರೆಯ ಕೊರತೆಯು ಜೀರ್ಣಾಂಗ ವ್ಯವಸ್ಥೆಯ ಮೇಲೂ ಪರಿಣಾಮ ಬೀರುತ್ತದೆ. ನಿದ್ರಾಹೀನತೆಯಿಂದ ಬಳಲುತ್ತಿರುವವರು ಹೆಚ್ಚಾಗಿ ಮಲಬದ್ಧತೆಯನ್ನು ಅನುಭವಿಸುತ್ತಾರೆ. ಇದಕ್ಕೆ ಸಮಯಕ್ಕೆ ಸರಿಯಾಗಿ ಔಷಧಿ ನೀಡದಿದ್ದರೆ, ಅದು ಕರುಳಿನ ಅಡಚಣೆಯಂತಹ ಗಂಭೀರ ಸ್ಥಿತಿಗೆ ಕಾರಣವಾಗಬಹುದು.
ಸ್ಮರಣಶಕ್ತಿ ದುರ್ಬಲಗೊಳ್ಳುತ್ತದೆ
ದೇಹಕ್ಕೆ ಅಗತ್ಯವಾದ ನಿದ್ರೆಯ ಕೊರತೆಯು ಮೆದುಳಿನ ಕೋಶಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಕ್ರಮೇಣ, ಸ್ಮರಣಶಕ್ತಿ ದುರ್ಬಲಗೊಳ್ಳಲು ಪ್ರಾರಂಭಿಸುತ್ತದೆ. ಯೋಚಿಸುವ ಮತ್ತು ಅರ್ಥಮಾಡಿಕೊಳ್ಳುವ ಸಾಮರ್ಥ್ಯವೂ ಕ್ಷೀಣಿಸಲು ಪ್ರಾರಂಭಿಸುತ್ತದೆ.
ಮಾನಸಿಕ ಆರೋಗ್ಯ ಹದಗೆಡುತ್ತದೆ
ನಿದ್ರೆಯ ಕೊರತೆಯು ದೇಹದಲ್ಲಿ ಶಕ್ತಿ, ಸಾಮರ್ಥ್ಯ ಕುಂಠಿತಗೊಳ್ಳುವುದಕ್ಕೆ ಕಾರಣವಾಗುತ್ತದೆ. ಜೊತೆಗೆ ಯಾವಾಗಲೂ ದಣಿದ ಅನುಭವವಾಗುತ್ತದೆ. ಮಾತ್ರವಲ್ಲ ನಿದ್ರೆಯ ಕೊರತೆಯು ಮಾನಸಿಕ ಆರೋಗ್ಯವನ್ನು ಕೂಡ ಕ್ಷೀಣಿಸುತ್ತದೆ. ಇದು ವ್ಯಕ್ತಿಯಲ್ಲಿ ಕಿರಿಕಿರಿ ಮತ್ತು ಕೋಪವನ್ನು ಹೆಚ್ಚಿಸುತ್ತದೆ. ಇವೆಲ್ಲವೂ ನಿಮ್ಮ ಮಾನಸಿಕ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಸಾಮಾನ್ಯವಾಗಿ ನಿದ್ರೆ ಸರಿಯಾಗಿ ಆಗದಿದ್ದಾಗ ಈ ಲಕ್ಷಣ ಮೊದಲು ಕಂಡುಬರುತ್ತದೆ.
ಇದನ್ನೂ ಓದಿ: ಮಲಗಿದ ತಕ್ಷಣ ನಿದ್ರೆ ಬರ್ಬೇಕು ಅಂದ್ರೆ ಈ ಟಿಪ್ಸ್ ನೀವು ಫಾಲೋ ಮಾಡ್ಲೇ ಬೇಕು
ಕಣ್ಣಿನ ಆರೋಗ್ಯಕ್ಕೂ ಒಳ್ಳೆಯದಲ್ಲ
ಇದಲ್ಲದೆ, ನಿದ್ರೆಯ ಕೊರತೆಯು ಕಣ್ಣುಗಳ ಮೇಲೆ ಕೂಡ ನೇರ ಪರಿಣಾಮ ಬೀರುತ್ತದೆ. ದೇಹದಲ್ಲಿ ಒತ್ತಡದ ಹಾರ್ಮೋನ್ ಆಗಿರುವ ಕಾರ್ಟಿಸೋಲ್ ಮಟ್ಟವು ಹೆಚ್ಚಾಗುತ್ತದೆ. ಚರ್ಮವು ಸೂಕ್ಷ್ಮವಾಗಿರುವ ಪ್ರದೇಶಗಳಲ್ಲಿ ಇದರ ಪರಿಣಾಮ ಹೆಚ್ಚಾಗಿರುತ್ತದೆ. ಪರಿಣಾಮವಾಗಿ, ಕಣ್ಣುಗಳ ಕೆಳಗೆ ಕಪ್ಪು ವೃತ್ತಗಳು ಅಥವಾ ಕಲೆಗಳು ಕಾಣಿಸಿಕೊಳ್ಳುತ್ತವೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








